ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ICC ODI Team Of 2022: ಐಸಿಸಿ ವರ್ಷದ ಏಕದಿನ ತಂಡಕ್ಕೆ ಅಜಂ ನಾಯಕ; ಇಬ್ಬರು ಭಾರತೀಯರಿಗೆ ಸ್ಥಾನ

ICC ODI Team Of 2022: Mohammed Siraj, Shreyas Iyer Find Spots in Playing XI, Babar Azam Captain

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು 2022ರ ವರ್ಷದ ಐಸಿಸಿ ಏಕದಿನ ತಂಡವನ್ನು ಪ್ರಕಟಿಸಿದ್ದು, ಈ ತಂಡಕ್ಕೆ ಪಾಕಿಸ್ತಾನದ ಬಾಬರ್ ಅಜಂ ಅವರನ್ನು ನಾಯಕರನ್ನಾಗಿ ನೇಮಿಸಲಾಗಿದೆ.

ಐಸಿಸಿ ಏಕದಿನ ತಂಡದಲ್ಲಿ ಕೇವಲ ಇಬ್ಬರು ಭಾರತೀಯ ಆಟಗಾರರು ಸ್ಥಾನ ಪಡೆದಿದ್ದು, ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತಹ ಬ್ಯಾಟಿಂಗ್ ದಿಗ್ಗಜರು ಸ್ಥಾನ ವಂಚಿತರಾಗಿದ್ದಾರೆ.

ಬಾಲಿವುಡ್ ನಟಿಯರನ್ನು ಮದುವೆಯಾದ ಐವರು ಭಾರತೀಯ ಕ್ರಿಕೆಟಿಗರು

ಭಾರತೀಯ ಆಟಗಾರರ ಪೈಕಿ ವೇಗಿ ಮೊಹಮ್ಮದ್ ಸಿರಾಜ್ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಮಾತ್ರ ಐಸಿಸಿ ಏಕದಿನ ತಂಡದಲ್ಲಿ ಸೇರ್ಪಡೆಗೊಂಡಿದ್ದಾರೆ.

2022ರ ವರ್ಷದ ಐಸಿಸಿ ಏಕದಿನ ತಂಡದ ನಾಯಕರಾಗಿ ಬಾಬರ್ ಅಜಂ

2022ರ ವರ್ಷದ ಐಸಿಸಿ ಏಕದಿನ ತಂಡದ ನಾಯಕರಾಗಿ ಬಾಬರ್ ಅಜಂ

ವೈಯಕ್ತಿಕ ಮತ್ತು ಪಾಕಿಸ್ತಾನ ತಂಡದ ಪ್ರದರ್ಶನದ ಬಗ್ಗೆ ಗಮನ ಸೆಳೆದಿರುವ ಬಾಬರ್ ಅಜಂ, ಕಳೆದ ವರ್ಷ ಏಕದಿನ ಕ್ರಿಕೆಟ್‌ನಲ್ಲಿ 84.87ರ ಅದ್ಭುತ ಸರಾಸರಿಯಲ್ಲಿ 679 ರನ್ ಗಳಿಸಿದರು. ಹೀಗಾಗಿ ಬಾಬರ್ ಅಜಂರನ್ನು 2022ರ ವರ್ಷದ ಐಸಿಸಿ ಏಕದಿನ ತಂಡದ ನಾಯಕರಾಗಿ ಹೆಸರಿಸಲ್ಪಟ್ಟರು.

ಇದೇ ವೇಳೆ ಐಸಿಸಿ ಏಕದಿನ ತಂಡದಲ್ಲಿ ಆಸ್ಟ್ರೇಲಿಯದ ಟ್ರಾವಿಸ್ ಹೆಡ್, ವೆಸ್ಟ್ ಇಂಡೀಸ್‌ನ ಶಾಯ್ ಹೋಪ್, ಭಾರತದ ಶ್ರೇಯಸ್ ಅಯ್ಯರ್ ಮತ್ತು ನ್ಯೂಜಿಲೆಂಡ್‌ನ ಟಾಮ್ ಲ್ಯಾಥಮ್ ಅವರಂತಹ ಬಲಿಷ್ಠ ಬ್ಯಾಟ್ಸ್‌ಮನ್‌ಗಳನ್ನು ಹೆಸರಿಸಲಾಗಿದೆ.

ಶ್ರೇಯಸ್ ಅಯ್ಯರ್ ಕಳೆದ ವರ್ಷ 17 ಪಂದ್ಯಗಳಲ್ಲಿ 55.69ರ ಸರಾಸರಿಯಲ್ಲಿ 724 ರನ್ ಗಳಿಸಿ ಭಾರತದ ಪರ ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಆಗಿದ್ದರು.

ಸಿಕಂದರ್ ರಾಝಾ 645 ರನ್‌ ಮತ್ತು ಎಂಟು ವಿಕೆಟ್‌

ಸಿಕಂದರ್ ರಾಝಾ 645 ರನ್‌ ಮತ್ತು ಎಂಟು ವಿಕೆಟ್‌

ಜಿಂಬಾಬ್ವೆಯ ಆಲ್‌ರೌಂಡರ್ ಸಿಕಂದರ್ ರಾಝಾ ಕೂಡ ಸ್ಥಾನ ಪಡೆದಿರುವುದು ಜಿಂಬಾಬ್ವೆ ತಂಡಕ್ಕೆ ಖುಷಿ ದುಪ್ಪಟ್ಟಾಗಿದೆ. ಸಿಕಂದರ್ ರಾಝಾ ಅವರು 49.61ರ ಸರಾಸರಿಯಲ್ಲಿ 645 ರನ್‌ಗಳನ್ನು ಬಾರಿಸಿದರು. ಇದರಲ್ಲಿ ಎರಡು ಅರ್ಧಶತಕ ಮತ್ತು ಮೂರು ಶತಕಗಳನ್ನೊಳಗೊಂಡಿವೆ.

ಸಿಕಂದರ್ ರಾಝಾ ಬೌಲಿಂಗ್‌ನಲ್ಲಿಯೂ ಜಿಂಬಾಬ್ವೆ ತಂಡಕ್ಕೆ ಕೊಡುಗೆ ನೀಡಿದ್ದು, ಪ್ರತಿ ಓವರ್‌ಗೆ 5ರ ಎಕಾನಮಿಯಲ್ಲಿ ರನ್ ನೀಡಿ ಎಂಟು ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಇನ್ನು ಐಸಿಸಿ ಏಕದಿನ ತಂಡದಲ್ಲಿ ಬಾಂಗ್ಲಾದೇಶದ ಮೆಹಿದಿ ಹಸನ್ ಮಿರಾಜ್ ಸ್ಥಾನ ಪಡೆದಿದ್ದು, ಕಳೆದ ವರ್ಷ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ಸ್ಥಿರವಾದ ಪ್ರದರ್ಶನ ನೀಡಿದ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿದ್ದಾರೆ.

ಮೊಹಮ್ಮದ್ ಸಿರಾಜ್ 15 ಏಕದಿನ ಪಂದ್ಯಗಳಿಂದ 24 ವಿಕೆಟ್

ಮೊಹಮ್ಮದ್ ಸಿರಾಜ್ 15 ಏಕದಿನ ಪಂದ್ಯಗಳಿಂದ 24 ವಿಕೆಟ್

ಮೆಹಿದಿ ಹಸನ್ ಮಿರಾಜ್ ಅವರು ಬಾಂಗ್ಲಾದೇಶ ತಂಡದ ಪರ 15 ಏಕದಿನ ಪಂದ್ಯಗಳಲ್ಲಿ ಒಟ್ಟು 24 ವಿಕೆಟ್‌ಗಳನ್ನು 28.20 ಸರಾಸರಿಯಲ್ಲಿ ಪಡೆದಿದ್ದಾರೆ. ಅವರ ಅತ್ಯುತ್ತಮ ಪ್ರದರ್ಶನ 29 ರನ್‌ಗೆ 4 ವಿಕೆಟ್‌ ಪಡೆದರು. ಬ್ಯಾಟ್‌ನೊಂದಿಗೆ, ಮೆಹಿದಿ ಹಸನ್ ಮಿರಾಜ್ ಒಂದು ಶತಕ ಮತ್ತು ಒಂದು ಅರ್ಧಶತಕದೊಂದಿಗೆ 66 ರ ಅದ್ಭುತ ಸರಾಸರಿಯಲ್ಲಿ 330 ರನ್ ಗಳಿಸಿದರು.

ಬೌಲಿಂಗ್ ವಿಭಾಗದಲ್ಲಿ ವೆಸ್ಟ್ ಇಂಡೀಸ್‌ನ ಅಲ್ಜಾರಿ ಜೋಸೆಫ್, ಭಾರತದ ಮೊಹಮ್ಮದ್ ಸಿರಾಜ್, ನ್ಯೂಜಿಲೆಂಡ್‌ನ ಟ್ರೆಂಟ್ ಬೌಲ್ಟ್ ಮತ್ತು ಆಸ್ಟ್ರೇಲಿಯಾದ ಆಡಮ್ ಝಂಪಾ ಐಸಿಸಿ ಏಕದಿನ ತಂಡವನ್ನು ಪೂರ್ಣಗೊಳಿಸಿದ್ದಾರೆ. ಮೊಹಮ್ಮದ್ ಸಿರಾಜ್ 2022ರಲ್ಲಿ ಆಡಿದ 15 ಏಕದಿನ ಪಂದ್ಯಗಳಿಂದ 4.62 ಎಕನಾಮಿಯೊಂದಿಗೆ 24 ವಿಕೆಟ್ ಕಬಳಿಸಿದ್ದಾರೆ.

ಐಸಿಸಿ ವರ್ಷದ ಏಕದಿನ ತಂಡ 2022

ಐಸಿಸಿ ವರ್ಷದ ಏಕದಿನ ತಂಡ 2022

ಬಾಬರ್ ಅಜಂ (ನಾಯಕ), ಟ್ರಾವಿಸ್ ಹೆಡ್, ಶಾಯ್ ಹೋಪ್, ಶ್ರೇಯಸ್ ಅಯ್ಯರ್, ಟಾಮ್ ಲ್ಯಾಥಮ್, ಸಿಕಂದರ್ ರಾಝಾ, ಮೆಹಿದಿ ಹಸನ್ ಮಿರಾಜ್, ಅಲ್ಝಾರಿ ಜೋಸೆಫ್, ಮೊಹಮ್ಮದ್ ಸಿರಾಜ್, ಟ್ರೆಂಟ್ ಬೌಲ್ಟ್, ಆಡಮ್ ಝಂಪಾ.

Story first published: Tuesday, January 24, 2023, 15:12 [IST]
Other articles published on Jan 24, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X