ಬಾಲಿವುಡ್ ನಟಿಯರನ್ನು ಮದುವೆಯಾದ ಐವರು ಭಾರತೀಯ ಕ್ರಿಕೆಟಿಗರು

ಆಧುನಿಕ ಯುಗದಲ್ಲಿ ಭಾರತೀಯ ಕ್ರಿಕೆಟಿಗರು ಸೆಲೆಬ್ರಿಟಿಗಳಾಗಿದ್ದಾರೆ. ಪ್ರಸ್ತುತ ಆಟಗಾರರು ಪ್ರಪಂಚದಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಉತ್ಪನ್ನಗಳನ್ನು ಪ್ರಚಾರ ಮಾಡಲು ಮತ್ತು ಅನೇಕ ಬ್ರ್ಯಾಂಡ್‌ಗಳನ್ನು ಅನುಮೋದಿಸಲು ಅವರು ಜಾಹೀರಾತುಗಳಲ್ಲಿ ಸಹ ಕಾಣಿಸಿಕೊಳ್ಳುತ್ತಾರೆ.

ಇಂದಿನ ಆಧುನಿಕ ಜಗತ್ತಿನಲ್ಲಿ ಭಾರತೀಯ ಕ್ರಿಕೆಟಿಗರು ಪ್ರಮುಖ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರೆ, ರಾತ್ರಿ ಕಳೆದು ಬೆಳಗಾಗುವುದರೊಳಗೆ ಪ್ರಸಿದ್ಧ ವ್ಯಕ್ತಿಗಳಾಗುತ್ತಾರೆ. ಅಷ್ಟೇ ಅಲ್ಲದೆ, ಕೆಲವು ಸ್ಟಾರ್ ಆಟಗಾರರು ವಿಶ್ವದಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದುತ್ತಾರೆ ಮತ್ತು ಅನೇಕ ಉತ್ಪನ್ನಗಳನ್ನು ಪ್ರಚಾರ ಮಾಡಲು ಜಾಹೀರಾತುಗಳಲ್ಲಿ ಸಹ ಕಾಣಿಸಿಕೊಳ್ಳುತ್ತಾರೆ.

ಎಂತಹ ಬಡತನದಲ್ಲಿಯೇ ಹುಟ್ಟಿದ್ದರೂ, ಒಂದು ಉತ್ತಮ ಪ್ರದರ್ಶನದ ಮೂಲಕ ಜಗತ್ತಿನ ಆಕರ್ಷಣೆಯ ಕೇಂದ್ರ ಬಿಂದುವಾಗುತ್ತಾರೆ. ಅದೇ ಆ ಆಟಗಾರ ನಿರಂತರವಾಗಿ ಭಾರತ ತಂಡದಲ್ಲಿ ಕಾಣಿಸಿಕೊಳ್ಳುತ್ತಾ, ಪಂದ್ಯ ಗೆಲ್ಲಿಸುವ ತಾಕತ್ತು ಹೊಂದಿದ್ದರೆ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಸ್ಟಾರ್ ಆಗಿ ಸೆಲೆಬ್ರಿಟಿಯಾಗಿಬಿಡುತ್ತಾರೆ.

ಟಿ20 ಕ್ರಿಕೆಟ್‌ನಿಂದ ಕೊಹ್ಲಿ, ರೋಹಿತ್‌ಗೆ ವಿಶ್ರಾಂತಿ; ಸ್ಪಷ್ಟನೆ ನೀಡಿದ ಕೋಚ್ ರಾಹುಲ್ ದ್ರಾವಿಡ್ಟಿ20 ಕ್ರಿಕೆಟ್‌ನಿಂದ ಕೊಹ್ಲಿ, ರೋಹಿತ್‌ಗೆ ವಿಶ್ರಾಂತಿ; ಸ್ಪಷ್ಟನೆ ನೀಡಿದ ಕೋಚ್ ರಾಹುಲ್ ದ್ರಾವಿಡ್

ಕೆಲವು ಭಾರತೀಯ ಕ್ರಿಕೆಟಿಗರು ಬಾಲಿವುಡ್ ತಾರೆಯರಂತೆಯೇ ಜನಪ್ರಿಯತೆ ಗಳಿಸಿದ್ದರೆ, ಅವರಲ್ಲಿ ಕೆಲವರು ಹೆಚ್ಚು ಅಭಿಮಾನಿಗಳನ್ನು ಬೆಳೆಸಿಕೊಂಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಕ್ರಿಕೆಟಿಗರು ಮತ್ತು ಬಾಲಿವುಡ್ ನಟಿಯರ ನಡುವೆ ಪ್ರೀತಿಯ ಬೆಸುಗೆ ಬೆಸೆಯುತ್ತಿದೆ.

ಕೆಲವು ಸ್ಟಾರ್ ಕ್ರಿಕೆಟಿಗರು ಬಾಲಿವುಡ್‌ನ ನಟಿಯರ ಜೊತೆ ಸ್ನೇಹ ಮತ್ತು ಪ್ರೀತಿಯ ಸಂಬಂಧ ಹೊಂದಿದ್ದಾರೆ. ಎಲ್ಲಾ ಕ್ರಿಕೆಟ್ ಮತ್ತು ಬಾಲಿವುಡ್ ಜೋಡಿಗಳು ಮದುವೆಯಾಗಿಲ್ಲ. ಆದರೆ ಮದುವೆಯಾದ ಐದು ಜೋಡಿಗಳ ಪಟ್ಟಿ ಇಲ್ಲಿದೆ.

ಕೆಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ

ಕೆಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ

ಭಾರತೀಯ ಕ್ರಿಕೆಟಿಗರು ಬಾಲಿವುಟ್ ನಟಿಯರನ್ನು ಮದುವೆಯಾದ ಜೋಡಿಗಳಲ್ಲಿ ಕೆಎಲ್ ರಾಹುಲ್- ಅಥಿಯಾ ಶೆಟ್ಟಿ ಕೂಡ ಇದ್ದಾರೆ. ಮೂಲತಃ ಕರ್ನಾಟಕದವರೇ ಆದ ಭಾರತೀಯ ಕ್ರಿಕೆಟಿಗ ಮತ್ತು ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಸೋಮವಾರ, ಜನವರಿ 23ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಈ ಇಬ್ಬರು ತಾರೆಯರು ಕೆಲವು ವರ್ಷಗಳಿಂದ ಪ್ರೀತಿಯಲ್ಲಿ ಬಿದ್ದಿದ್ದರು ಮತ್ತು ಆಗಾಗ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿದ್ದರು. ಕೆಎಲ್ ರಾಹುಲ್ ಭಾರತ ತಂಡದ ಜೊತೆ ಬೇರೆ ದೇಶಗಳಿಗೆ ಪ್ರವಾಸ ಹೋದಾಗಲೆಲ್ಲ ಅಥಿಯಾ ಶೆಟ್ಟಿ ಜೊತೆಗೆ ಹೋಗುತ್ತಿದ್ದರು. ಐಪಿಎಲ್ 2022ರಲ್ಲಿ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಬೆಂಬಲಿಸಿದ್ದರು.

ಖ್ಯಾತ ಬಾಲಿವುಡ್ ನಟ ಸುನೀಲ್ ಶೆಟ್ಟಿ ಪುತ್ರಿಯಾಗಿರುವ ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಮುಂಬೈನ ಖಂಡಾಲಾದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ವಿವಾಹವಾದರು. ಕೇವಲ ಆಪ್ತರಿಗಷ್ಟೇ ಆಹ್ವಾನವಿತ್ತು.

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ

ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ಬಾಲಿವುಡ್‌ನ ಹೆಸರಾಂತ ನಟಿ ಅನುಷ್ಕಾ ಶರ್ಮಾರನ್ನು ನಾಲ್ಕು ವರ್ಷಗಳ ಹಿಂದೆ ಅಂದರೆ, ಡಿಸೆಂಬರ್ 11, 2017ರಂದು ಮದುವೆಯಾಗಿದ್ದಾರೆ.

ಏಷ್ಯಾದಲ್ಲಿಯೇ ಅತಿಹೆಚ್ಚು ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಹೊಂದಿರುವ ವಿರಾಟ್ ಕೊಹ್ಲಿ ಅವರು ಅನುಷ್ಕಾ ಶರ್ಮಾರೊಂದಿಗೆ ಖಾಸಗಿಯಾಗಿ ವಿವಾಹ ಆಯೋಜಿಸಲು ನಿರ್ಧರಿಸಿದ್ದರು. ಕೇವಲ ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರನ್ನು ಮಾತ್ರ ಆಹ್ವಾನಿಸಲಾಗಿತ್ತು.

ಶಾಂಪೂ ಜಾಹೀರಾತಿನ ಚಿತ್ರೀಕರಣದ ವೇಳೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಭೇಟಿಯಾದ ನಂತರ, ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಐದು ವರ್ಷಗಳ ನಂತರ ಇಟಲಿಯಲ್ಲಿ ವಿವಾಹವಾಗಿದ್ದರು. ಇದೀಗ ಈ ಸ್ಟಾರ್ ದಂಪತಿಗೆ ವಾಮಿಕಾ ಎಂಬ ಮಗಳಿದ್ದಾಳೆ.

ಹರ್ಭಜನ್ ಸಿಂಗ್ ಮತ್ತು ಗೀತಾ ಬಸ್ರಾ

ಹರ್ಭಜನ್ ಸಿಂಗ್ ಮತ್ತು ಗೀತಾ ಬಸ್ರಾ

ಟಿ20 ವಿಶ್ವಕಪ್ 2007 ಮತ್ತು 2011ರ ಐಸಿಸಿ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯ ಹರ್ಭಜನ್ ಸಿಂಗ್ 2015ರಲ್ಲಿ ಬ್ರಿಟಿಷ್ ಬಾಲಿವುಡ್ ನಟಿ ಗೀತಾ ಬಾಸ್ರಾ ಅವರನ್ನು ವಿವಾಹವಾದರು.

ಗೀತಾ ಬಸ್ರಾ ಇಂಗ್ಲೆಂಡ್‌ನಲ್ಲಿ ಜನಿಸಿದವರು. ಆದರೆ ಅವರು ಬಾಲಿವುಡ್ ಚಲನಚಿತ್ರಗಳಾದ ಜಿಲಾ ಗಾಜಿಯಾಬಾದ್, ಮಿ. ಜೋ ಬಿ ಕರ್ವಾಲೋ, ದಿ ಟ್ರೈನ್ ಮತ್ತು ದಿಲ್ ದಿಯಾ ಹೈ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಹರ್ಭಜನ್ ಸಿಂಗ್ ಮತ್ತು ಗಿತಾ ಬಸ್ರಾ ಜೋಡಿಗೆ ಒಬ್ಬ ಪುತ್ರ ಹಾಗೂ ಒಬ್ಬ ಪುತ್ರಿಯನ್ನು ಹೊಂದಿದ್ದಾರೆ. ಮಗಳ ಹೆಸರು ಹಿನಾಯಾ ಹೀರ್ ಪ್ಲಾಹಾ ಮತ್ತು ಮಗನ ಹೆಸರು ಜೋವನ್ ವೀರ್ ಸಿಂಗ್ ಪ್ಲಾಹಾ ಎಂದಿದೆ.

ಯುವರಾಜ್ ಸಿಂಗ್ ಮತ್ತು ಹೆಝಲ್ ಕೀಚ್

ಯುವರಾಜ್ ಸಿಂಗ್ ಮತ್ತು ಹೆಝಲ್ ಕೀಚ್

ಟಿ20 ವಿಶ್ವಕಪ್ 2007 ಮತ್ತು 2011ರ ಐಸಿಸಿ ವಿಶ್ವಕಪ್ ವಿಜೇತ ಭಾರತ ತಂಡದ ಮತ್ತೊಬ್ಬ ಸದಸ್ಯ ಯುವರಾಜ್ ಸಿಂಗ್. ಭಾರತದ ಈ ಮಾಜಿ ಆಲ್‌ರೌಂಡರ್ ಬ್ರಿಟನ್ ಮೂಲದ ಬಾಲಿವುಡ್ ನಟಿ ಹೇಝಲ್ ಕೀಚ್ ಅವರನ್ನು ವಿವಾಹವಾಗಿದ್ದಾರೆ.

ಬಾಡಿಗಾರ್ಡ್, ಮ್ಯಾಕ್ಸಿಮಮ್, ಧರಮ್ ಸಂಕಟ್ ಮೇನ್ ಮತ್ತು ಬ್ಯಾಂಕಿ ಕಿ ಕ್ರೇಜಿ ಬಾರಾತ್ ಮುಂತಾದ ಬಾಲಿವುಡ್ ಚಿತ್ರಗಳಲ್ಲಿ ಹೆಝಲ್ ನಟಿಸಿದ್ದಾರೆ. ನವೆಂಬರ್ 30, 2016ರಂದು ಯುವರಾಜ್ ಸಿಂಗ್ ಮತ್ತು ಹೇಝಲ್ ಕೀಚ್ ವಿವಾಹವಾಗಿದ್ದು, ದಂಪತಿಗೆ ಒಬ್ಬ ಪುತ್ರನಿದ್ದಾನೆ.

ಮೊಹಮ್ಮದ್ ಅಜರುದ್ದೀನ್ ಮತ್ತು ಸಂಗೀತಾ ಬಿಜ್ಲಾನಿ

ಮೊಹಮ್ಮದ್ ಅಜರುದ್ದೀನ್ ಮತ್ತು ಸಂಗೀತಾ ಬಿಜ್ಲಾನಿ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅವರು ಬಾಲಿವುಡ್ ನಟಿ ಸಂಗೀತಾ ಬಿಜ್ಲಾನಿಯನ್ನು 1996ರಲ್ಲಿ ಮದುವೆಯಾಗಿದ್ದಾರೆ. ಈ ಜೋಡಿ 90ರ ದಶಕದಲ್ಲಿ ದೇಶದಾದ್ಯಂತ ದೊಡ್ಡ ಸುದ್ದಿಯಾಗಿದ್ದರು.

ಮೊಹಮ್ಮದ್ ಅಜರುದ್ದೀನ್ ಮೊದಲ ಬಾರಿಗೆ ನೌರೀನ್ ಎಂಬುವವರನ್ನು 1987ರಲ್ಲಿ ವಿವಾಹವಾಗಿದ್ದರು. ಏಳು ವರ್ಷಗಳ ನಂತರ ನೌರೀನ್‌ಗೆ ವಿಚ್ಛೇದನ ನೀಡಿ, ಬಾಲಿವುಡ್ ನಟಿ ಸಂಗೀತಾ ಬಿಜ್ಲಾನಿಯೊಂದಿಗೆ ಮದುವೆಯಾಗಿತ್ತು. ಆದರೆ ಅವರ ಮದುವೆ ಕೂಡ ವಿಚ್ಛೇದನದಲ್ಲಿ ಕೊನೆಗೊಂಡಿತು.

For Quick Alerts
ALLOW NOTIFICATIONS
For Daily Alerts
Story first published: Tuesday, January 24, 2023, 13:33 [IST]
Other articles published on Jan 24, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X