ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ICC Ranking ಬಿಡುಗಡೆ: ಟಿ20 ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಈಗಲೂ ನಂಬರ್‌ 1, ಟೆಸ್ಟ್, ಒಡಿಐನಲ್ಲಿ ಯಾರು?

Team india

ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಬುಧವಾರ ಬಿಡುಗಡೆ ಮಾಡಿರುವ ತಂಡಗಳ ರ್ಯಾಂಕಿಂಗ್‌ನಲ್ಲಿ ಟೀಂ ಇಂಡಿಯಾ ಟಿ20 ಫಾರ್ಮೆಟ್‌ನಲ್ಲಿ ನಂಬರ್ 1 ತಂಡವಾಗಿಯೇ ಉಳಿದುಕೊಂಡಿದೆ.

ಟೀಂ ಇಂಡಿಯಾ ಸದ್ಯ ಮೂರು ಫಾರ್ಮೆಟ್‌ನಲ್ಲಿ ಹೊಸ ನಾಯಕ ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುನ್ನಡೆಯುತ್ತಿದ್ದು, 2021ರ ಟಿ20 ವಿಶ್ವಕಪ್‌ ಬಳಿಕ ಎಲ್ಲಾ ಫಾರ್ಮೆಟ್‌ಗೆ ಭಾರತ ತಂಡ ನಾಯಕರಾಗಿ ಆಯ್ಕೆಯಾಗಿದ್ದಾರೆ.

ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ಹಾಗೂ ಶ್ರೀಲಂಕಾ ತಂಡವನ್ನ ವೈಟ್‌ವಾಶ್ ಮಾಡಿದ ಸಾಧನೆಯನ್ನ ಮಾಡಿದೆ.

'' ಹೊಸ ಟಿ20 ರ್ಯಾಂಕಿಂಗ್‌ ಮೇ 2019ರ ನಂತರದಲ್ಲಿ ನಡೆದ ಎಲ್ಲಾ ಟಿ20 ಅಂತರಾಷ್ಟ್ರೀಯ ಸರಣಿಗಳಿಗೆ ಅನುಗುಣವಾಗಿದೆ'' ಎಂದು ಐಸಿಸಿ ಹೇಳಿದೆ.

ಟೀಂ ಇಂಡಿಯಾಗೆ 270 ಪಾಯಿಂಟ್ಸ್‌

ಟೀಂ ಇಂಡಿಯಾಗೆ 270 ಪಾಯಿಂಟ್ಸ್‌

ಇದರ ನಡುವೆ ಪುರುಷರ ಟಿ20 ತಂಡಗಳ ರ್ಯಾಂಕಿಂಗ್‌ನಲ್ಲಿ ಟೀಮ ಇಂಡಿಯಾ 270 ಪಾಯಿಂಟ್ಸ್‌ ಪಡೆದಿದ್ದು, ನಂತರದ ಸ್ಥಾನದಲ್ಲಿ ಇಂಗ್ಲೆಂಡ್ (265), ಪಾಕಿಸ್ತಾನ (261), ದಕ್ಷಿಣ ಆಫ್ರಿಕಾ (253), ಆಸ್ಟ್ರೇಲಿಯಾ (251) ಮೊದಲ ಐದು ಸ್ಥಾನ ಪಡೆದಿದೆ.

ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲೆಂಡ್ 260 ಪಾಯಿಂಟ್ಸ್‌ನೊಂದಿಗೆ ಆರನೇ ಸ್ಥಾನದಲ್ಲಿದ್ದು, ವೆಸ್ಟ್ ಇಂಡೀಸ್ 240 ಪಾಯಿಂಟ್ಸ್‌ನೊಂದಿಗೆ 7ನೇ ಸ್ಥಾನ ಅಲಂಕರಿಸಿದೆ. 8, 9, 10ನೇ ಸ್ಥಾನವನ್ನ ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ಪಡೆದಿವೆ.

ಚೆನ್ನೈ ತಂಡದಲ್ಲಿ ಮುಂದಿನ ನಾಯಕ ಆಗುವಂತಹ ಪ್ಲೇಯರ್ ಕಾಣಿಸುತ್ತಿಲ್ಲ: ಬ್ರಾಡ್ ಹಾಗ್‌

ಆಸ್ಟ್ರೇಲಿಯಾ ನಂಬರ್ 1 ಟೆಸ್ಟ್ ತಂಡ

ಆಸ್ಟ್ರೇಲಿಯಾ ನಂಬರ್ 1 ಟೆಸ್ಟ್ ತಂಡ

ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಐಸಿಸಿ ಪುರುಷರ ಟೆಸ್ಟ್‌ ತಂಡದ ರ್ಯಾಂಕಿಂಗ್‌ನಲ್ಲಿ ನಂಬರ್ 1 ಸ್ಥಾನದಲ್ಲಿದೆ. ಪ್ಯಾಟ್‌ ಕಮಿನ್ಸ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು, ಪ್ರಸ್ತುತ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಗೆಲುವಿನ ಮುನ್ನಡೆ ಸಾಧಿಸಿದೆ.

ಜೋ ರೂಟ್ ನಾಯಕತ್ವದ ಇಂಗ್ಲೆಂಡ್ ತಂಡವು ಆ್ಯಶಸ್ ಸರಣಿಯಲ್ಲಿ ಮುಗ್ಗರಿಸಿದ್ದು, ಪ್ಯಾಟ್ ಕಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ತುಂಬಾನೆ ಉತ್ತಮ ಪ್ರದರ್ಶನ ನೀಡಿತ್ತು. ಇನ್ನು ಪಾಕಿಸ್ತಾನ ಪ್ರವಾಸದಲ್ಲೂ ಪ್ಯಾಟ್‌ ಕಮಿನ್ಸ್ ಪಡೆ ಭರ್ಜರಿ ಆಟವಾಡಿದ್ದು, ಸರಣಿಯನ್ನ ಜಯಿಸಿತ್ತು.

ಆಸ್ಟ್ರೇಲಿಯಾ 128 ಪಾಯಿಂಟ್ಸ್‌ನೊಂದಿಗೆ ಮೊದಲ ಸ್ಥಾನದಲ್ಲಿದ್ದು, ನಂತರದಲ್ಲಿ ಭಾರತ (119), ನ್ಯೂಜಿಲೆಂಡ್ (111), ದಕ್ಷಿಣ ಆಫ್ರಿಕಾ (110), ಪಾಕಿಸ್ತಾನ (93) ಅಗ್ರ ಐದು ಸ್ಥಾನದಲ್ಲಿವೆ.

IPL 2022: ಹಾರ್ದಿಕ್ ಪಾಂಡ್ಯ ವಿಕೆಟ್ ಪಡೆದು, ಫ್ಲೈಯಿಂಗ್ ಕಿಸ್ ಕೊಟ್ಟ ರಿಷಿ ಧವನ್

Virat Kohli ಇಷ್ಟೊಂದು Aggressive ಆಗಿದ್ದೇಕೆ | Oneindia Kannada
ಏಕದಿನ ಫಾರ್ಮೆಟ್‌ನಲ್ಲಿ ನ್ಯೂಜಿಲೆಂಡ್ ನಂಬರ್ 1

ಏಕದಿನ ಫಾರ್ಮೆಟ್‌ನಲ್ಲಿ ನ್ಯೂಜಿಲೆಂಡ್ ನಂಬರ್ 1

ಏಕದಿನ ಕ್ರಿಕೆಟ್ ವಿಚಾರಕ್ಕೆ ಬಂದ್ರೆ, ನ್ಯೂಜಿಲೆಂಡ್ ತಂಡದ ಕೇನ್‌ ವಿಲಿಯಮ್ಸನ್‌ ಪಡೆ ಐಸಿಸಿ ಏಕದಿನ ತಂಡಗಳ ರ್ಯಾಂಕಿಂಗ್‌ನಲ್ಲಿ 125 ಪಾಯಿಂಟ್ಸ್‌ನೊಂದಿಗೆ ಅಗ್ರಸ್ಥಾನದಲ್ಲಿದೆ. ಇಂಗ್ಲೆಂಡ್ 124 ಪಾಯಿಂಟ್ಸ್‌ನೊಂದಿಗೆ ಎರಡನೇ ಸ್ಥಾನದಲ್ಲಿದೆ.

ಇದರ ನಂತರದಲ್ಲಿ ಆಸ್ಟ್ರೇಲಿಯಾ (107), ಭಾರತ (105), ಪಾಕಿಸ್ತಾನ (102) ಮೂರು ಮತ್ತು ನಾಲ್ಕನೇ ಹಾಗೂ ಐದನೇ ಸ್ಥಾನ ಅಲಂಕರಿಸಿವೆ.

Story first published: Thursday, May 5, 2022, 10:45 [IST]
Other articles published on May 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X