ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚೆನ್ನೈ ತಂಡದಲ್ಲಿ ಮುಂದಿನ ನಾಯಕ ಆಗುವಂತಹ ಪ್ಲೇಯರ್ ಕಾಣಿಸುತ್ತಿಲ್ಲ: ಬ್ರಾಡ್ ಹಾಗ್‌

Brad hogg

ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಇತ್ತೀಚೆಗಷ್ಟೇ ರವೀಂದ್ರ ಜಡೇಜಾ ನಾಯಕತ್ವ ಸಹವಾಸ ಸಾಕಪ್ಪ ಎಂದು ಆಲ್‌ ಟೈಂ ಕ್ಯಾಪ್ಟನ್ ಮಹೇಂದ್ರ ಸಿಂಗ್‌ ಧೋನಿಗೆ ಹಿಂದಿರುಗಿಸಿದ್ದರು. ಧೋನಿ ನಾಯಕನಾಗಿ ಮುನ್ನಡೆಸಿದ ಮೊದಲ ಪಂದ್ಯದಲ್ಲೇ ಸಿಎಸ್‌ಕೆ ಅಬ್ಬರದ ಗೆಲುವು ದಾಖಲಿಸಿತು.

ಬಲಿಷ್ಠ ಎಸ್‌ಆರ್‌ಎಚ್‌ ವಿರುದ್ಧ ಮೇಲುಗೈ ಸಾಧಿಸಿದ ಧೋನಿ ಪಡೆ, ಇನ್ನೂ ಕೂಡ ಪ್ಲೇ ಆಫ್ ಕನಸನ್ನ ಜೀವಂತವಾಗಿರಿಸಿಕೊಂಡಿದೆ. ಇನ್ನುಳಿದ ಐದು ಪಂದ್ಯಗಳ ಗೆಲುವಿನ ಮೇಲೆ ಕಣ್ಣಿಟ್ಟಿದೆ.

RCB vs CSK: ಪಂದ್ಯದಲ್ಲಿ ನಿಮ್ಮ ಡ್ರೀಮ್ ಟೀಮ್ ಗೆಲ್ಲಬೇಕೆಂದರೆ ಈ ಮೂವರನ್ನು ಹೊರಗಿಡಿRCB vs CSK: ಪಂದ್ಯದಲ್ಲಿ ನಿಮ್ಮ ಡ್ರೀಮ್ ಟೀಮ್ ಗೆಲ್ಲಬೇಕೆಂದರೆ ಈ ಮೂವರನ್ನು ಹೊರಗಿಡಿ

ಹೀಗಿರುವಾಗ ಧೋನಿ ನಾಯಕತ್ವದ ಸಿಎಸ್‌ಕೆ ತಂಡದ ಕುರಿತು ಮಾತನಾಡಿರುವ ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್‌, ಸಿಎಸ್‌ಕೆ ತಂಡದಲ್ಲಿ ಧೋನಿ ನಂತರದಲ್ಲಿ ನಾಯಕ ಯಾರು ಎಂಬ ಪ್ರಶ್ನೆಗೆ ಉತ್ತರವಿಲ್ಲ ಎಂದಿದ್ದಾರೆ. ಸಿಎಸ್‌ಕೆ ಇಡೀ ಸ್ಕ್ವಾಡ್‌ನಲ್ಲಿ ಮುಂದಿನ ನಾಯಕ ಆಗಬಹುದು ಎಂದು ಗುರುತಿಸಿಕೊಂಡಿರುವ ಯಾವೊಬ್ಬ ಆಟಗಾರ ಇಲ್ಲ, ಆ ಸಾಮರ್ಥ್ಯದ ಪ್ಲೇಯರ್ ಕಾಣಿಸಿಕೊಂಡಿಲ್ಲ ಎಂದಿದ್ದಾರೆ.

ಸದ್ಯ ಬಹುತೇಕ ನಾಯಕತ್ವ ಸಾಮರ್ಥ್ಯವುಳ್ಳ ಭಾರತೀಯ ಸ್ಟಾರ್ ಆಟಗಾರರು ಐಪಿಎಲ್‌ನಲ್ಲಿ ತಂಡಗಳನ್ನ ಮುನ್ನಡೆಸುತ್ತಿದ್ದಾರೆ. ಹೀಗಾಗಿ ಧೋನಿ ನಂತರದಲ್ಲಿ ಸಿಎಸ್‌ಕೆ ತಂಡವನ್ನ ಮುನ್ನಡೆಸುವ ದೇಶೀಯ ಆಟಗಾರ ಯಾರು ಎಂದು ಹುಡುಕುವುದು ಬಹಳ ಕಷ್ಟಸಾಧ್ಯವಾಗಿದೆ ಎಂದು ಬ್ರಾಡ್ ಹಾಗ್ ಅಭಿಪ್ರಾಯ ಪಟ್ಟಿದ್ದಾರೆ.

"ಈ ಸ್ಥಾನಕ್ಕಾಗಿ ಭಾರತೀಯನನ್ನು ಹುಡುಕುವುದು ಕಷ್ಟಕರವಾಗಿರುತ್ತದೆ. ಏಕೆಂದರೆ ಎಲ್ಲಾ ಅತ್ಯುತ್ತಮ ಭಾರತೀಯ ಟಿ20 ಆಟಗಾರರನ್ನು ಈಗಾಗಲೇ ಇತರ ಫ್ರಾಂಚೈಸಿಗಳಿಗೆ ನಿಯೋಜಿಸಲಾಗಿದೆ" ಎಂದು ಹಾಗ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡುವಾಗ ಹೇಳಿದ್ದಾರೆ.

ಹೀಗಾಗಿ ಸಿಎಸ್‌ಕೆ ಮುಂಬರುವ ಸೀಸನ್‌ನಲ್ಲಿ ಹರಾಜಿನಲ್ಲಿ ನಾಯಕತ್ವ ಸಾಮರ್ಥ್ಯವುಳ್ಳ ವಿದೇಶಿ ಆಟಗಾರನ ಮೊರೆ ಹೋಗಬೇಕಾಗುತ್ತದೆ ಎಂದಿದ್ದಾರೆ. ಆದ್ರೆ ಇದು ಕೂಡ ಮ್ಯಾನೇಜ್‌ಮೆಂಟ್‌ಗೆ ದೊಡ್ಡ ಸವಾಲಾಗಲಿದೆ. ಏಕೆಂದರೆ ಹೊಸ ಆಟಗಾರ ತಂಡಕ್ಕೆ ಹೊಂದಿಕೊಳ್ಳಬೇಕಾಗುತ್ತದೆ. ಜೊತೆಗೆ ಈಗಿನ ಪರಿಸ್ಥಿತಿಯಲ್ಲಿ ಹೊಸ ಆಟಗಾರನ ಹುಡುಕಾಟ ಕಷ್ಟಸಾಧ್ಯವಾಗಿದೆ.

Dhoni ಹಾಗು Faf ನಡುವೆ ಟಾಸ್‌ನಲ್ಲಿ ನಡೆದಿದ್ದೇನು | Oneindia Kannada

ಪ್ರಸಕ್ತ ಐಪಿಎಲ್ ಸೀಸನ್‌ನಲ್ಲಿ ಸಿಎಸ್‌ಕೆ ಕಳಪೆ ಪ್ರದರ್ಶನ ತೋರಿದ್ದು ಪಾಯಿಂಟ್ಸ್ ಟೇಬನಲ್‌ನಲ್ಲಿ 9ನೇ ಸ್ಥಾನದಲ್ಲಿದೆ. ಆಡಿರುವ 9 ಪಂದ್ಯಗಳಲ್ಲಿ ಕೇವಲ 3 ಪಂದ್ಯಗಳನ್ನ ಗೆದ್ದಿದ್ದು, 6 ಪಂದ್ಯಗಳಲ್ಲಿ ಸೋಲನ್ನ ಕಂಡಿದ್ದು 6 ಪಾಯಿಂಟ್ಸ್ ಕಲೆಹಾಕಿದೆ. ಬುಧವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

Story first published: Thursday, May 5, 2022, 10:45 [IST]
Other articles published on May 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X