ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ICC T20 Ranking: ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆಲುವಿನ ಬಳಿಕ ಭಾರತವೇ ವಿಶ್ವದ ಅಧಿಪತಿ

ICC T20 Ranking: India Continues At The Top Place After T20 Series Win Against Australia

ತವರಿನ ಪರಿಸ್ಥಿತಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ 2-1 ಅಂತರದಲ್ಲಿ ಟಿ20 ಸರಣಿ ಜಯಗಳಿಸಿದ ನಂತರ ಭಾರತೀಯ ಕ್ರಿಕೆಟ್ ತಂಡವು ಐಸಿಸಿ ಪುರುಷರ ಟಿ20 ರ‍್ಯಾಂಕಿಂಗ್‌ನಲ್ಲಿ ತನ್ನ ಅಗ್ರಸ್ಥಾನವನ್ನು ವಿಸ್ತರಿಸಿದೆ.

IND vs AUS 3rd T20: ಆಸ್ಟ್ರೇಲಿಯ ವಿರುದ್ಧ ಭಾರತಕ್ಕೆ ರೋಚಕ ಜಯ; 3 ದಾಖಲೆಗಳು ಧೂಳಿಪಟIND vs AUS 3rd T20: ಆಸ್ಟ್ರೇಲಿಯ ವಿರುದ್ಧ ಭಾರತಕ್ಕೆ ರೋಚಕ ಜಯ; 3 ದಾಖಲೆಗಳು ಧೂಳಿಪಟ

ಟಿ20 ಸರಣಿ ಗೆಲುವಿನಿಂದ ಭಾರತ ತಂಡವು ತಮ್ಮ ಟಿ20 ತಂಡದ ಶ್ರೇಯಾಂಕವನ್ನು ಒಟ್ಟಾರೆಯಾಗಿ 268 ಅಂಕಗಳಿಗೆ ಒಂದು ಪಾಯಿಂಟ್‌ನಿಂದ ಸುಧಾರಿಸಲು ಸಹಾಯ ಮಾಡಿತು. ಇನ್ನು 261 ಅಂಕಗಳೊಂದಿಗೆ ಇಂಗ್ಲೆಂಡ್‌ ಎರಡನೇ ಸ್ಥಾನದಲ್ಲಿದ್ದು, ಭಾರತವು ತನ್ನ ಹತ್ತಿರದ ಪ್ರತಿಸ್ಪರ್ಧಿಗಿಂತ ಏಳು ಅಂಕಗಳ ಮುನ್ನಡೆಯಲ್ಲಿದೆ.

187 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಭಾರತ

187 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಭಾರತ

ಹೈದರಾಬಾದ್‌ನಲ್ಲಿ ಭಾನುವಾರ ನಡೆದ ಮೂರನೇ ಟಿ20 ಪಂದ್ಯದಲ್ಲಿ ಭಾರತ 187 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿ ಆಸ್ಟ್ರೇಲಿಯಾ ವಿರುದ್ಧ 2-1 ಅಂತರದ ಸರಣಿಯನ್ನು ವಶಪಡಿಸಿಕೊಂಡಿದೆ. ಆರನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾವು ಭಾರತದ ವಿರುದ್ಧದ ಸರಣಿಯ ಸೋಲಿನ ನಂತರ ಒಟ್ಟಾರೆಯಾಗಿ 250 ಪಾಯಿಂಟ್‌ಗಳಿಂದ ಒಂದು ಅಂಕವನ್ನು ಕಳೆದುಕೊಂಡಿತು.

ಪ್ರಸ್ತುತ ಟಿ20 ವಿಶ್ವಕಪ್ ಚಾಂಪಿಯನ್‌ಗಳು ತವರಿನಲ್ಲಿ ತಮ್ಮ ಟ್ರೋಫಿಯನ್ನು ಉಳಿಸಿಕೊಳ್ಳುವ ಅವಕಾಶವನ್ನು ಪಡೆಯುವ ಮೊದಲು, ಇನ್ನೂ ಆರು ಪಂದ್ಯಗಳನ್ನು ಆಡಲು ನಿರ್ಧರಿಸಿದ್ದಾರೆ. ವೆಸ್ಟ್ ಇಂಡೀಸ್, ಇಂಗ್ಲೆಂಡ್ ಮತ್ತು ಭಾರತ ವಿರುದ್ಧ ಅವರು ತವರಿನಲ್ಲಿ ಆಡಲಿದ್ದಾರೆ.

ಟಿ20 ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿ ಇಂಗ್ಲೆಂಡ್

ಟಿ20 ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿ ಇಂಗ್ಲೆಂಡ್

ಮತ್ತೊಂದೆಡೆ, ಪಾಕಿಸ್ತಾನದ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ರೋಚಕ ಸೋಲನ್ನು ಅನುಭವಿಸಿತು. ಇದು ಐಸಿಸಿ ಪುರುಷರ ಟಿ20 ರ‍್ಯಾಂಕಿಂಗ್‌ನಲ್ಲಿ ಭಾರತ ತಂಡದ ನಡುವೆ ಅಂತರ ಹೆಚ್ಚಿಸಲು ಸಹಾಯ ಮಾಡಿತು. ಮ್ಯಾಥ್ಯೂ ಮೋಟ್ ನಾಯಕತ್ವದ ಇಂಗ್ಲೆಂಡ್ ತಂಡವು ಕರಾಚಿಯಲ್ಲಿ ಮೂರು ರನ್‌ಗಳ ಕಡಿಮೆ ಅಂತರದ ಸೋಲಿಗೆ ಕುಸಿಯಿತು.

ಉಳಿದ ಪಂದ್ಯಗಳಲ್ಲಿ ಒಂದನ್ನು ಗೆದ್ದರೆ ಇಂಗ್ಲೆಂಡ್ ಐಸಿಸಿ ಟಿ20 ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನವನ್ನು ಕಾಯ್ದುಕೊಳ್ಳುತ್ತದೆ. ಇನ್ನು ಇದೇ ವೇಳೆ ಬುಧವಾರದಿಂದ ಪ್ರಾರಂಭವಾಗುವ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತವನ್ನು ಎದುರಿಸುವಾಗ ದಕ್ಷಿಣ ಆಫ್ರಿಕಾ ಎರಡನೇ ಸ್ಥಾನಕ್ಕಾಗಿ ಹಕ್ಕು ಸಾಧಿಸುವ ಅವಕಾಶವನ್ನು ಪಡೆಯುತ್ತದೆ.

ಶ್ರೇಯಾಂಕದಲ್ಲಿ ಮೂರನೇ ಸ್ಥಾನದಲ್ಲಿ ಪಾಕಿಸ್ತಾನ- ದಕ್ಷಿಣ ಆಫ್ರಿಕಾ

ಶ್ರೇಯಾಂಕದಲ್ಲಿ ಮೂರನೇ ಸ್ಥಾನದಲ್ಲಿ ಪಾಕಿಸ್ತಾನ- ದಕ್ಷಿಣ ಆಫ್ರಿಕಾ

ಪಾಕಿಸ್ತಾನವು ಪ್ರಸ್ತುತ 258 ಅಂಕಗಳೊಂದಿಗೆ ತಂಡದ ಶ್ರೇಯಾಂಕದಲ್ಲಿ ಮೂರನೇ ಸ್ಥಾನವನ್ನು ದಕ್ಷಿಣ ಆಫ್ರಿಕಾದೊಂದಿಗೆ ಹಂಚಿಕೊಂಡಿದೆ. ಆದರೆ ಇಂಗ್ಲೆಂಡ್ ವಿರುದ್ಧ ಉಳಿದ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಎರಡನೇ ಸ್ಥಾನಕ್ಕೆ ಏರುವ ಅವಕಾಶವಿದೆ.

ನ್ಯೂಜಿಲೆಂಡ್ ಒಟ್ಟು 252 ಅಂಕಗಳೊಂದಿಗೆ ಟಿ20 ತಂಡದ ಶ್ರೇಯಾಂಕದಲ್ಲಿ ಐದನೇ ಸ್ಥಾನದಲ್ಲಿ ಉಳಿದಿದೆ. ಕೇನ್ ವಿಲಿಯಮ್ಸನ್ ನಾಯಕತ್ವದ ಕಿವೀಸ್ ತಂಡವು ಟಿ20 ವಿಶ್ವಕಪ್‌ನ ಆರಂಭದ ಮೊದಲು ಪಾಕಿಸ್ತಾನ ಮತ್ತು ಬಾಂಗ್ಲಾದೇಶವನ್ನು ತವರು ನೆಲದಲ್ಲಿ ತ್ರಿಕೋನ ಸರಣಿಗಾಗಿ ಆತಿಥ್ಯ ವಹಿಸುತ್ತದೆ. ಈ ವೇಳೆ ತಮ್ಮ ತಂಡದ ಪ್ರದರ್ಶನ ಉತ್ತಮಪಡಿಸಿಕೊಂಡು ಐಸಿಸಿ ಟಿ20 ರ‍್ಯಾಂಕಿಂಗ್‌ನಲ್ಲಿ ಮೇಲಿನ ಸ್ಥಾನಕ್ಕೆ ಜಿಗಿಯಲು ಎದುರು ನೋಡುತ್ತದೆ.

ಅತಿ ಹೆಚ್ಚು ಟಿ20 ಗೆಲುವಿನ ಪಾಕಿಸ್ತಾನದ ದಾಖಲೆ ಮುರಿದ ಭಾರತ

ಅತಿ ಹೆಚ್ಚು ಟಿ20 ಗೆಲುವಿನ ಪಾಕಿಸ್ತಾನದ ದಾಖಲೆ ಮುರಿದ ಭಾರತ

ಭಾನುವಾರ ಹೈದರಾಬಾದ್‌ನಲ್ಲಿ ಆರು ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ ಭಾರತವು ಈ ವರ್ಷ ತಮ್ಮ 21ನೇ ಟಿ20 ವಿಜಯವನ್ನು ಗೆದ್ದುಕೊಂಡಿತು. ಇದು ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಯಾವುದೇ ರಾಷ್ಟ್ರದಿಂದ ಅತಿ ಹೆಚ್ಚು ಪಂದ್ಯ ಗೆಲುವು ಸಾಧಿಸಿದೆ.

ಭಾರತ ತಂಡವು ಸರಣಿಯ ವಿಜಯದೊಂದಿಗೆ 2021ರಲ್ಲಿ 20 ಟಿ20ಗಳನ್ನು ಗೆದ್ದು, ಒಂದು ವರ್ಷದಲ್ಲಿ ಅತಿ ಹೆಚ್ಚು ಟಿ20 ಗೆಲುವಿನ ಪಾಕಿಸ್ತಾನದ ದಾಖಲೆಯನ್ನು ಮುರಿದಿದೆ.

ಇಲ್ಲಿಯವರೆಗೆ ಟೀಂ ಇಂಡಿಯಾ 29 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, 21ರಲ್ಲಿ ಗೆದ್ದು ಕೇವಲ ಏಳರಲ್ಲಿ ಸೋತಿದೆ. ಈ ವರ್ಷದ ಆರಂಭದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯವು ಯಾವುದೇ ಫಲಿತಾಂಶವಿಲ್ಲದೆ ಕೊನೆಗೊಂಡಿತು.

Story first published: Monday, September 26, 2022, 16:31 [IST]
Other articles published on Sep 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X