ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ICC T20 Ranking: ಪಾಕ್ ನಾಯಕ ಬಾಬರ್ ಅಜಂ ಹಿಂದಿಕ್ಕಿದ ಸೂರ್ಯಕುಮಾರ್ ಯಾದವ್

ICC T20 Ranking: Indias Suryakumar Yadav Overtakes Pakistans Babar Azam And Takes No.3 Spot

ಪಾಕಿಸ್ತಾನದ ನಾಯಕ ಬಾಬರ್ ಅಜಂ ಅವರನ್ನು ಮೀರಿಸಿರುವ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಐಸಿಸಿ ಪುರುಷರ ಟಿ20 ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ಏರಿಕೆಯಾಗಿದ್ದಾರೆ. ಬುಧವಾರ ಬಿಡುಗಡೆಯಾಗಿರುವ ಪರಿಷ್ಕೃತ ರ‍್ಯಾಂಕಿಂಗ್‌ನಲ್ಲಿ ಸೂರ್ಯಕುಮಾರ್ ಯಾದವ್ ಅಗ್ರ ಮೂರರಲ್ಲಿ ಕಾಣಿಸಿಕೊಂಡಿದ್ದಾರೆ.

ಮಹಿಳಾ ಏಷ್ಯಾ ಕಪ್ 2022: ಹರ್ಮನ್‌ಪ್ರೀತ್ ನಾಯಕತ್ವದ ಬಲಿಷ್ಠ ಭಾರತ ತಂಡ ಪ್ರಕಟಿಸಿದ ಬಿಸಿಸಿಐಮಹಿಳಾ ಏಷ್ಯಾ ಕಪ್ 2022: ಹರ್ಮನ್‌ಪ್ರೀತ್ ನಾಯಕತ್ವದ ಬಲಿಷ್ಠ ಭಾರತ ತಂಡ ಪ್ರಕಟಿಸಿದ ಬಿಸಿಸಿಐ

ಸೂರ್ಯಕುಮಾರ್ ಯಾದವ್ ಈಗ 780 ಅಂಕಗಳೊಂದಿಗೆ ಐಸಿಸಿ ಪುರುಷರ ಟಿ20 ಬ್ಯಾಟಿಂಗ್ ಚಾರ್ಟ್‌ನಲ್ಲಿ ನಂ. 3 ಆಗಿದ್ದಾರೆ ಮತ್ತು ಈ ವರ್ಷದ ಆರಂಭದವರೆಗೆ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿದ್ದ ಬಾಬರ್‌ ಅಜಂಗಿಂತ 9 ಅಂಕ ಹೆಚ್ಚು ಪಡೆದಿದ್ದಾರೆ.

ಟಿ20 ರ‍್ಯಾಂಕಿಂಗ್‌ನಲ್ಲಿ ಮೊಹಮ್ಮದ್ ರಿಜ್ವಾನ್ ನಂ.1

ಟಿ20 ರ‍್ಯಾಂಕಿಂಗ್‌ನಲ್ಲಿ ಮೊಹಮ್ಮದ್ ರಿಜ್ವಾನ್ ನಂ.1

ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ ಟಿ20 ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ನಂ.1 ಸ್ಥಾನವನ್ನು ಮುಂದುವರೆಸಿದ್ದಾರೆ ಮತ್ತು ದಕ್ಷಿಣ ಆಫ್ರಿಕಾದ ಏಡೆನ್ ಮಾರ್ಕ್ರಾಮ್ ಎರಡನೇ ಸ್ಥಾನದಲ್ಲಿದ್ದಾರೆ. ಗಮನಾರ್ಹವಾಗಿ, ಮೊಹಮ್ಮದ್ ರಿಜ್ವಾನ್ ಅವರು ತಮ್ಮ ವೃತ್ತಿಜೀವನದ ಗರಿಷ್ಠ 825 ಅಂಕಗಳನ್ನು ತೆಗೆದುಕೊಂಡ ನಂತರ ಅಗ್ರಸ್ಥಾನದಲ್ಲಿ ದೀರ್ಘಕಾಲ ಉಳಿಯಲು ಸಜ್ಜಾಗಿದ್ದಾರೆ.

ಮೊಹಾಲಿಯಲ್ಲಿ ಮಂಗಳವಾರ ನಡೆದ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 25 ಎಸೆತಗಳಲ್ಲಿ 46 ರನ್ ಗಳಿಸಿದ ನಂತರ ಸೂರ್ಯಕುಮಾರ್ ಯಾದವ್ ಒಂದು ಸ್ಥಾನ ಜಿಗಿತ ಕಂಡಿದ್ದಾರೆ. ಬುಧವಾರ ನವೀಕರಿಸಿದ ಶ್ರೇಯಾಂಕಗಳ ಪ್ರಕಾರ, ಭಾರತದ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರು ಮೊಹಮ್ಮದ್ ರಿಜ್ವಾನ್‌ಗಿಂತ 45 ಪಾಯಿಂಟ್‌ಗಳ ಹಿಂದೆ ಮತ್ತು ಮಾರ್ಕ್ರಾಮ್‌ಗಿಂತ 12 ಪಾಯಿಂಟ್‌ಗಳಷ್ಟು ಹಿಂದಿದ್ದಾರೆ.

ವಿರಾಟ್ ಕೊಹ್ಲಿ 16ನೇ ಸ್ಥಾನವನ್ನು ಕಳೆದುಕೊಂಡರು

ವಿರಾಟ್ ಕೊಹ್ಲಿ 16ನೇ ಸ್ಥಾನವನ್ನು ಕಳೆದುಕೊಂಡರು

ಪಾಕಿಸ್ತಾನದ ನಾಯಕ ಬಾಬರ್ ಅಜಂ ಟಿ20 ಪಂದ್ಯಗಳಲ್ಲಿ ಕಡಿಮೆ ಸ್ಕೋರ್‌ಗಳ ನಂತರ ಬ್ಯಾಟಿಂಗ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ. ಏಷ್ಯಾ ಕಪ್‌ನಲ್ಲಿ ಬಾಬರ್ ಅಜಂ 6 ಪಂದ್ಯಗಳಲ್ಲಿ ಕೇವಲ 68 ರನ್ ಗಳಿಸಿದ್ದರು. ಮಂಗಳವಾರ ನಡೆದ ಐತಿಹಾಸಿಕ 7 ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನದ ಸೋಲಿನಲ್ಲಿ ಅವರು 24 ಎಸೆತಗಳಲ್ಲಿ 31 ರನ್ ಗಳಿಸಿದರು. ಇನ್ನ ಮೊಹಮ್ಮದ್ ರಿಜ್ವಾನ್ 46 ಎಸೆತಗಳಲ್ಲಿ 68 ರನ್ ಗಳಿಸಿದರು. ಆದರೂ ಕರಾಚಿಯಲ್ಲಿ ನಡೆದ ಸರಣಿಯ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಸೋಲುಂಟಾಯಿತು. ಇಂಗ್ಲೆಂಡ್‌ನ ಡೇವಿಡ್ ಮಲಾನ್ (725) ಮತ್ತು ಆಸ್ಟ್ರೇಲಿಯದ ನಾಯಕ ಆರೋನ್ ಫಿಂಚ್ (715) ಅಗ್ರ 6 ಸ್ಥಾನಗಳನ್ನು ಪೂರ್ಣಗೊಳಿಸಿದ್ದಾರೆ.

ಗಮನಾರ್ಹವಾಗಿ, ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯ ಆರಂಭಿಕ ಪಂದ್ಯದಲ್ಲಿ ವಿಫಲವಾದ ನಂತರ ವಿರಾಟ್ ಕೊಹ್ಲಿ 16ನೇ ಸ್ಥಾನವನ್ನು ಕಳೆದುಕೊಂಡರು. ಲೆಗ್ ಸ್ಪಿನ್ನರ್ ಆಡಮ್ ಝಂಪಾ ವಿರುದ್ಧ ಹೋರಾಡಲು ವಿರಾಟ್ ಕೊಹ್ಲಿ ಹೆಣಗಾಡಿದರು ಮತ್ತು ಅಂತಿಮವಾಗಿ 7 ಎಸೆತಗಳಲ್ಲಿ 2 ರನ್ ಗಳಿಸಿ ಔಟಾದರು. ಏಷ್ಯಾಕಪ್‌ನಲ್ಲಿ ಸೆಪ್ಟೆಂಬರ್‌ನಲ್ಲಿ ತಮ್ಮ ಚೊಚ್ಚಲ ಟಿ20 ಶತಕವನ್ನು ಬಾರಿಸಿದ್ದ ಕೊಹ್ಲಿಯಿಂದ ಇದು ನಿರಾಶಾದಾಯಕ ಪ್ರದರ್ಶನವಾಗಿತ್ತು.

ಕೆಎಲ್ ರಾಹುಲ್ ಮತ್ತೆ ಟಾಪ್ 20ರಲ್ಲಿ

ಕೆಎಲ್ ರಾಹುಲ್ ಮತ್ತೆ ಟಾಪ್ 20ರಲ್ಲಿ

ಈ ಮಧ್ಯೆ ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಮೊದಲ ಟಿ20 ಪಂದ್ಯದಲ್ಲಿ 55 ರನ್ ಗಳಿಸಿದ ನಂತರ ಇತ್ತೀಚಿನ ಬ್ಯಾಟಿಂಗ್ ಪಟ್ಟಿಯಲ್ಲಿ 5 ಸ್ಥಾನಗಳನ್ನು ಮೇಲಕ್ಕೇರಿ 18ನೇ ಸ್ಥಾನಕ್ಕೆ ತಲುಪಿದ್ದಾರೆ. ಏಷ್ಯಾ ಕಪ್‌ನಲ್ಲಿ ವೇಗವನ್ನು ಹೆಚ್ಚಿಸಲು ಹೆಣಗಾಡಿದ ನಂತರ ಕೆಎಲ್ ರಾಹುಲ್ ಅಗ್ರಸ್ಥಾನದಲ್ಲಿ ತಮ್ಮ ಸ್ಟ್ರೈಕ್ ರೇಟ್‌ನ ಸುತ್ತ ಟೀಕಾಕಾರರ ಬಾಯಿ ಮುಚ್ಚಿಸಿದರು.

30 ಎಸೆತಗಳಲ್ಲಿ 71 ರನ್ ಬಾರಿಸಿದ ಹಾರ್ದಿಕ್ ಪಾಂಡ್ಯ

30 ಎಸೆತಗಳಲ್ಲಿ 71 ರನ್ ಬಾರಿಸಿದ ಹಾರ್ದಿಕ್ ಪಾಂಡ್ಯ

ಮೊಹಾಲಿಯಲ್ಲಿ ಮಂಗಳವಾರ ಕೆಎಲ್ ರಾಹುಲ್ 3 ಸಿಕ್ಸರ್ ಮತ್ತು 4 ಬೌಂಡರಿಗಳನ್ನು ಬಾರಿಸುವ ಮೂಲಕ ಅಗ್ರಸ್ಥಾನದಲ್ಲಿ ಹೆಚ್ಚು ಪ್ರಭಾವಿಯಾಗಿ ಕಾಣಿಸಿಕೊಂಡರು. ಭಾರತವು ಸ್ಕೋರ್ ಬೋರ್ಡ್‌ನಲ್ಲಿ 208 ರನ್ ಪೋಸ್ಟ್ ಮಾಡಿತು. ಆಸ್ಟ್ರೇಲಿಯಾ ವಿರುದ್ಧ ಟಿ20 ಪಂದ್ಯಗಳಲ್ಲಿ ಭಾರತದ ಗರಿಷ್ಠ ಮೊತ್ತ ದಾಖಲಿಸಿದರೂ, ರಕ್ಷಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಇದೇ ವೇಳೆ ಹಾರ್ದಿಕ್ ಪಾಂಡ್ಯ ಟಿ20 ಕ್ರಿಕೆಟ್‌ನಲ್ಲಿ ಆಲ್‌ರೌಂಡರ್ ಶ್ರೇಯಾಂಕದ ಅಗ್ರ 5ರೊಳಗೆ ಪ್ರವೇಶಿಸಿದರು. ಗುಜರಾತ್ ಟೈಟನ್ಸ್ ನಾಯಕ ಮೊಹಾಲಿಯಲ್ಲಿ ಅಪ್ರತಿಮ ಫಾರ್ಮ್‌ನಲ್ಲಿದ್ದರು, ಕೇವಲ 30 ಎಸೆತಗಳಲ್ಲಿ 71 ರನ್ ಬಾರಿಸಿದರು ಮತ್ತು ಚೆಂಡಿನೊಂದಿಗೆ ಒಂದು ವಿಕೆಟ್ ಪಡೆದರು.

ಟಿ20ಯಲ್ಲಿ ಐಸಿಸಿ ಬ್ಯಾಟಿಂಗ್ ರ‍್ಯಾಂಕಿಂಗ್

ಟಿ20ಯಲ್ಲಿ ಐಸಿಸಿ ಬ್ಯಾಟಿಂಗ್ ರ‍್ಯಾಂಕಿಂಗ್

1. ಮೊಹಮ್ಮದ್ ರಿಜ್ವಾನ್ - 825 ರೇಟಿಂಗ್ ಅಂಕಗಳು

2. ಐಡೆನ್ ಮಾರ್ಕ್ರಾಮ್ - 792 ರೇಟಿಂಗ್ ಅಂಕಗಳು

3. ಸೂರ್ಯಕುಮಾರ್ ಯಾದವ್ - 780 ರೇಟಿಂಗ್ ಅಂಕಗಳು

4. ಬಾಬರ್ ಅಜಂ - 771 ರೇಟಿಂಗ್ ಅಂಕಗಳು

5. ಡೇವಿಡ್ ಮಲನ್ - 725 ರೇಟಿಂಗ್ ಅಂಕಗಳು

6. ಆರೋನ್ ಫಿಂಚ್ - 715 ರೇಟಿಂಗ್ ಅಂಕಗಳು

14. ರೋಹಿತ್ ಶರ್ಮಾ - 602 ರೇಟಿಂಗ್ ಅಂಕಗಳು

16. ವಿರಾಟ್ ಕೊಹ್ಲಿ - 591 ರೇಟಿಂಗ್ ಅಂಕಗಳು

18. ಕೆಎಲ್ ರಾಹುಲ್ - 587 ರೇಟಿಂಗ್ ಅಂಕಗಳು

Story first published: Wednesday, September 21, 2022, 16:38 [IST]
Other articles published on Sep 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X