ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ICC T20 Ranking: ಅಗ್ರ ಸ್ಥಾನಕ್ಕಾಗಿ ಇಬ್ಬರು ಪಾಕ್, ಒಬ್ಬ ಭಾರತೀಯನಿಂದ ನಿಕಟ ಪೈಪೋಟಿ!

ICC T20 Ranking: Suryakumar Yadav, Babar Azam And Mohammad Rizwan Battle For Top Spot

ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯಲಿರುವ ಏಷ್ಯಾ ಕಪ್‌ನ ಸೂಪರ್ 4 ಗೆಲ್ಲಲೇಬೇಕಾದ ಪಂದ್ಯದಲ್ಲಿ ಭಾರತವು ಶ್ರೀಲಂಕಾವನ್ನು ಎದುರಿಸಲಿದೆ. ಏಷ್ಯಾ ಕಪ್ ಈ ಪ್ರಮುಖ ಮುಖಾಮುಖಿಯಲ್ಲಿನ ಗೆಲುವು ರೋಹಿತ್ ಶರ್ಮಾ ಬಳಗವನ್ನು ಫೈನಲ್ ಸ್ಪರ್ಧೆಯಲ್ಲಿ ಜೀವಂತವಾಗಿರಿಸುತ್ತದೆ. ಒಂದು ವೇಳೆ ಸೋತರೆ ಹೆಚ್ಚು ಕಡಿಮೆ ತಂಡವನ್ನು ಸ್ಪರ್ಧೆಯಿಂದ ಹೊರಹೋದಂತಾಗುತ್ತದೆ.

Ind vs SL Asia Cup 2022 : ಶ್ರೀಲಂಕಾ ವಿರುದ್ಧ ಭಾರತದ ಆಡುವ 11ರ ಬಳಗ; ಏನೆಲ್ಲಾ ಬದಲಾವಣೆ?Ind vs SL Asia Cup 2022 : ಶ್ರೀಲಂಕಾ ವಿರುದ್ಧ ಭಾರತದ ಆಡುವ 11ರ ಬಳಗ; ಏನೆಲ್ಲಾ ಬದಲಾವಣೆ?

ಇದೇ ವೇಳೆ ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್, ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಮತ್ತು ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ ಬುಧವಾರ (ಸೆಪ್ಟೆಂಬರ್ 7) ಬಿಡುಗಡೆಯಾಗಲಿರುವ ಐಸಿಸಿ ಟಿ20 ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕಾಗಿ ಪೈಪೋಟಿ ಮಾಡುತ್ತಿದ್ದಾರೆ.

ಶ್ರೇಷ್ಠ ಬ್ಯಾಟರ್‌ಗಳು ಅಗ್ರಸ್ಥಾನಕ್ಕಾಗಿ ಪೈಪೋಟಿ

ಶ್ರೇಷ್ಠ ಬ್ಯಾಟರ್‌ಗಳು ಅಗ್ರಸ್ಥಾನಕ್ಕಾಗಿ ಪೈಪೋಟಿ

ಯುಎಇಯಲ್ಲಿ ನಡೆಯುತ್ತಿರುವ ಏಷ್ಯಾ ಕಪ್ 2022ರಲ್ಲಿ ಏಷ್ಯಾದ ಈ ಶ್ರೇಷ್ಠ ಬ್ಯಾಟರ್‌ಗಳು ಅಗ್ರಸ್ಥಾನಕ್ಕಾಗಿ ಹೋರಾಡುತ್ತಿದ್ದಾರೆ. ಬ್ಯಾಟಿಂಗ್ ಶ್ರೇಯಾಂಕದಲ್ಲಿ ಬಾಬರ್ ಅಜಂ, ಸೂರ್ಯಕುಮಾರ್ ಮತ್ತು ಮೊಹಮ್ಮದ್ ರಿಜ್ವಾನ್ ಅವರೊಂದಿಗೆ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕಾಗಿ ನಿಕಟ ಹೋರಾಟದಲ್ಲಿ ಮತ್ತೊಂದು ಕಾದಾಟ ನಡೆಯುತ್ತಿದೆ.

ಸದ್ಯ ಏಷ್ಯಾ ಕಪ್ 2022ರಲ್ಲಿ ದೊಡ್ಡ ರನ್ ಗಳಿಸದಿದ್ದರೂ ಸಹ ಪಾಕಿಸ್ತಾನ ನಾಯಕ ಬಾಬರ್ ಅಜಂ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಆದರೆ ಬಾಬರ್‌ನಿಂದ ಕಡಿಮೆ ಸ್ಕೋರ್‌ಗಳು ಮತ್ತು ಕಳೆದ ವಾರದಲ್ಲಿ ಮೊಹಮ್ಮದ್ ರಿಜ್ವಾನ್ ಮತ್ತು ಸೂರ್ಯಕುಮಾರ್ ಯಾದವ್ ಅವರ ಅರ್ಧ ಶತಕಗಳು ರ‍್ಯಾಂಕಿಂಗ್‌ನ ಅಗ್ರಸ್ಥಾನದಲ್ಲಿ ಬದಲಾವಣೆಗಳನ್ನು ಕಾಣಬಹುದು, ಐಸಿಸಿ ಬುಧವಾರ ಆಟಗಾರರ ರ‍್ಯಾಂಕಿಂಗ್‌ಗಳನ್ನು ಬಿಡುಗಡೆ ಮಾಡಲಿದೆ.

ಹಾಂಕಾಂಗ್ ವಿರುದ್ಧ ಸೂರ್ಯಕುಮಾರ್ 26 ಎಸೆತಗಳಲ್ಲಿ ಅಜೇಯ 68 ರನ್

ಹಾಂಕಾಂಗ್ ವಿರುದ್ಧ ಸೂರ್ಯಕುಮಾರ್ 26 ಎಸೆತಗಳಲ್ಲಿ ಅಜೇಯ 68 ರನ್

ಮೂರು ಪಂದ್ಯಗಳಲ್ಲಿ ಎರಡು ಅರ್ಧಶತಕಗಳೊಂದಿಗೆ ಮೊಹಮ್ಮದ್ ರಿಜ್ವಾನ್ 192 ರನ್‌ಗಳನ್ನು ಗಳಿಸಿ ಏಷ್ಯಾ ಕಪ್‌ನಲ್ಲಿ ಇದುವರೆಗೆ ಅಗ್ರ ಸ್ಕೋರರ್ ಆಗಿದ್ದಾರೆ. ಮತ್ತೊಂದೆಡೆ, ಸೂರ್ಯಕುಮಾರ್ ಯಾದವ್ ಹಾಂಕಾಂಗ್ ವಿರುದ್ಧ 26 ಎಸೆತಗಳಲ್ಲಿ ಅಜೇಯ 68 ರನ್ ಗಳಿಸಿದರು. ಬಾಬರ್ ಅಜಂ ಇದುವರೆಗಿನ ಮೂರು ಪಂದ್ಯಗಳಲ್ಲಿ 10, 9 ಮತ್ತು 14 ಸ್ಕೋರ್‌ಗಳೊಂದಿಗೆ ಪಂದ್ಯಾವಳಿಯಲ್ಲಿ ಉತ್ತಮ ರನ್ ಗಳಿಸಲು ವಿಫಲರಾಗಿದ್ದಾರೆ.

ಪ್ರಸ್ತುತ, ಬಾಬರ್ ಅಜಂ 810 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಮೊಹಮ್ಮದ್ ರಿಜ್ವಾನ್ 796 ಅಂಕಗಳೊಂದಿಗೆ ಎರಡನೇ ಸ್ಥಾನ ಮತ್ತು ಸೂರ್ಯಕುಮಾರ್ ಯಾದವ್ 792 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

ಐಸಿಸಿ ಟಿ20 ಶ್ರೇಯಾಂಕ

ಐಸಿಸಿ ಟಿ20 ಶ್ರೇಯಾಂಕ

1. ಬಾಬರ್ ಅಜಮ್ (ಪಾಕಿಸ್ತಾನ) - 810

2. ಮೊಹಮ್ಮದ್ ರಿಜ್ವಾನ್ (ಪಾಕಿಸ್ತಾನ) - 796

3. ಸೂರ್ಯಕುಮಾರ್ ಯಾದವ್ (ಭಾರತ) - 792

4. ಐಡೆನ್ ಮಾರ್ಕ್ರಾಮ್ (ದಕ್ಷಿಣ ಆಫ್ರಿಕಾ) - 792

5. ಡೇವಿಡ್ ಮಲಾನ್ (ಇಂಗ್ಲೆಂಡ್) - 731

ಏಷ್ಯಾ ಕಪ್‌ನಲ್ಲಿ 192 ರನ್ ಗಳಿಸಿರುವ ಮೊಹಮ್ಮದ್ ರಿಜ್ವಾನ್

ಏಷ್ಯಾ ಕಪ್‌ನಲ್ಲಿ 192 ರನ್ ಗಳಿಸಿರುವ ಮೊಹಮ್ಮದ್ ರಿಜ್ವಾನ್

ಮೂರು ಪಂದ್ಯಗಳಲ್ಲಿ ಎರಡು ಅರ್ಧಶತಕಗಳು ಸೇರಿದಂತೆ 192 ರನ್ ಗಳಿಸುವ ಮೂಲಕ ಮೊಹಮ್ಮದ್ ರಿಜ್ವಾನ್ ಏಷ್ಯಾ ಕಪ್‌ನಲ್ಲಿ ಇದುವರೆಗೆ ಗರಿಷ್ಠ ರನ್ ಸ್ಕೋರರ್ ಆಗಿದ್ದಾರೆ. ಪಾಕಿಸ್ತಾನದ ಆರಂಭಿಕ ಆಟಗಾರ ಹಾಂಗ್‌ಕಾಂಗ್ ಮತ್ತು ಭಾರತದ ವಿರುದ್ಧ ಅರ್ಧಶತಕಗಳನ್ನು ಬಾರಿಸಿದರು ಮತ್ತು ಪಂದ್ಯಾವಳಿಯಲ್ಲಿ ಭಾರತದ ವಿರುದ್ಧದ ಮೊದಲ ಪಂದ್ಯದಲ್ಲಿ 43 ರನ್ ಗಳಿಸಿದರು.

ವೆಸ್ಟ್ ಇಂಡೀಸ್ ವಿರುದ್ಧದ ಭಾರತ ಏಕದಿನ ಪಂದ್ಯದ ವೇಳೆ ಸೂರ್ಯಕುಮಾರ್ ಯಾದವ್ ಅಗ್ರಸ್ಥಾನ ಪಡೆಯುವ ಸಮೀಪಕ್ಕೆ ಬಂದಿದ್ದರು. ಅವರು 135 ರನ್‌ಗಳೊಂದಿಗೆ ಸರಣಿಯಲ್ಲಿ ಪ್ರಮುಖ ರನ್-ಸ್ಕೋರರ್ ಆಗಿದ್ದರು. ಆದರೆ ಅಂತಿಮ ಪಂದ್ಯದಲ್ಲಿ ಅವರಿಗೆ ವಿಶ್ರಾಂತಿ ನೀಡುವ ನಿರ್ಧಾರವು ಬಾಬರ್ ಅಜಂ ಅವರನ್ನು ಹಿಂದಿಕ್ಕುವ ಅವಕಾಶವನ್ನು ಕಳೆದುಕೊಂಡರು.

Story first published: Tuesday, September 6, 2022, 16:10 [IST]
Other articles published on Sep 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X