ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ICC T20 Ranking: ಟಿ20 ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಸೂರ್ಯಕುಮಾರ್

ICC T20 Ranking: Suryakumar Yadav Is The First Indian To Achieve 900 Rating Points In T20 Cricket

ಭಾರತದ ಸ್ಫೋಟಕ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಅವರು ಬುಧವಾರ ಬಿಡುಗಡೆಯಾದ ಐಸಿಸಿ ಟಿ20 ರ್‍ಯಾಂಕಿಂಗ್‌ನಲ್ಲಿ ವಿಶ್ವದ ನಂ.1 ಬ್ಯಾಟರ್ ಆಗಿ ಮುಂದುವರೆದಿದ್ದಾರೆ.

ಕಳೆದ ಶನಿವಾರ (ಜನವರಿ 7) ಸೂರ್ಯಕುಮಾರ್ ಯಾದವ್ ಅವರು ರಾಜ್‌ಕೋಟ್‌ನಲ್ಲಿ ನಡೆದ ಶ್ರೀಲಂಕಾ ವಿರುದ್ಧ ಕೊನೆಯ ಟಿ20 ಪಂದ್ಯದಲ್ಲಿ ಕೇವಲ 45 ಎಸೆತಗಳಲ್ಲಿ ತಮ್ಮ ಮೂರನೇ ಟಿ20 ಅಂತಾರಾಷ್ಟ್ರೀಯ ಶತಕವನ್ನು ಗಳಿಸಿದರು. ಹೀಗಾಗಿ ನಂ.1 ಸ್ಥಾನ ಭದ್ರವಾಗುವುದರ ಜೊತೆಗೆ ಟಿ20 ರ್‍ಯಾಂಕಿಂಗ್ ಅಂಕಗಳು ಏರಿಕೆ ಕಂಡವು.

ಸೂರ್ಯಕುಮಾರ್ ಯಾದವ್ ತಮ್ಮ ಟಿ20 ವೃತ್ತಿಜೀವನದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿದರು. ಅಂತಾರಾಷ್ಟ್ರೀಯ ಬ್ಯಾಟರ್‌ಗಳ ಐಸಿಸಿ ಟಿ20 ರ್‍ಯಾಂಕಿಂಗ್‌ನಲ್ಲಿ 900 ರೇಟಿಂಗ್ ಪಾಯಿಂಟ್‌ಗಳನ್ನು ತಲುಪಿದ ಭಾರತದ ಮೊದಲ ಆಟಗಾರ ಎನಿಸಿದರು.

ICC ODI Ranking: ಅದ್ಭುತ ಬ್ಯಾಟಿಂಗ್ ನಂತರ ಏಕದಿನ ರ್‍ಯಾಂಕಿಂಗ್‌ನಲ್ಲಿ ಏರಿಕೆ ಕಂಡ ಕೊಹ್ಲಿ, ರೋಹಿತ್ICC ODI Ranking: ಅದ್ಭುತ ಬ್ಯಾಟಿಂಗ್ ನಂತರ ಏಕದಿನ ರ್‍ಯಾಂಕಿಂಗ್‌ನಲ್ಲಿ ಏರಿಕೆ ಕಂಡ ಕೊಹ್ಲಿ, ರೋಹಿತ್

ಶ್ರೀಲಂಕಾ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ20ಯಲ್ಲಿ ಸೂರ್ಯಕುಮಾರ್ ಯಾದವ್ ಅಮೋಘ ಶತಕ ಸಿಡಿಸಿದ್ದರು. ಅಲ್ಪಾವಧಿಯಲ್ಲಿಯೇ ಮೂರು ಶತಕ ದಾಖಲಿಸಿದ್ದಾರೆ. ಕ್ರಿಕೆಟ್‌ನ ಕಡಿಮೆ ಮಾದರಿ ಟಿ20 ನಲ್ಲಿ ಮಧ್ಯಮ ಕ್ರಮಾಂಕದ ಸ್ಫೋಟಕ ಬ್ಯಾಟ್ಸ್‌ಮನ್ ಮೊದಲ ಸ್ಥಾನದಲ್ಲಿದೆ.

ICC T20 Ranking: Suryakumar Yadav Is The First Indian To Achieve 900 Rating Points In T20 Cricket

32 ವರ್ಷದ ಸೂರ್ಯಕುಮಾರ್ ಯಾದವ್ ಒಟ್ಟು 900 ಅಂಕಗಳನ್ನು ಗಳಿಸಿದ ವಿಶ್ವದ ಮೂರನೇ ಬ್ಯಾಟರ್ ಎನಿಸಿದರು. ಇತರ ಇಬ್ಬರು ಕ್ರಿಕೆಟಿಗರಾದ ಆಸ್ಟ್ರೇಲಿಯಾ ಮಾಜಿ ಬ್ಯಾಟರ್ ಆರೋನ್ ಫಿಂಚ್ (900) ಮತ್ತು ಇಂಗ್ಲೆಂಡ್‌ನ ಡೇವಿಡ್ ಮಲಾನ್ (915) ಅಂಕ ಗಳಿಸಿದ್ದರು. ಸೂರ್ಯಕುಮಾರ್ ಯಾದವ್ ಪ್ರಸ್ತುತ 908 ರೇಟಿಂಗ್ ಅಂಕಗಳನ್ನು ಹೊಂದಿದ್ದು, ಇದು ಚುಟುಕು ಕ್ರಿಕೆಟ್ ಸ್ವರೂಪದಲ್ಲಿ ಸಾರ್ವಕಾಲಿಕ ಎರಡನೇ ಸ್ಥಾನದಲ್ಲಿದೆ.

ಟಿ20 ಕ್ರಿಕೆಟ್‌ನಲ್ಲಿ ಹೆಚ್ಚಿನ ರೇಟಿಂಗ್ ಅಂಕಗಳನ್ನು ಗಳಿಸಿದ ಆಟಗಾರರು
1. ಡೇವಿಡ್ ಮಲಾನ್ - 915

2. ಸೂರ್ಯಕುಮಾರ್ ಯಾದವ್ - 908

3. ಆರೋನ್ ಫಿಂಚ್ - 900

4. ವಿರಾಟ್ ಕೊಹ್ಲಿ - 897

5. ಬಾಬರ್ ಅಜಂ - 896

ಶ್ರೀಲಂಕಾ ವಿರುದ್ಧದ ಸರಣಿಯ ಮೂರನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ತಮ್ಮ ಅಜೇಯ ಮೂರನೇ ಟಿ20 ಶತಕದೊಂದಿಗೆ ಸರಣಿ ದಾಖಲೆಗಳನ್ನು ಬರೆದರು. ಎದುರಿಸಿದ ಬಾಲ್‌ಗಳ ಪ್ರಕಾರ, ಟಿ20 ಸ್ವರೂಪದಲ್ಲಿ 1,500 ರನ್‌ಗಳನ್ನು ತಲುಪಿದ ವೇಗದ ಆಟಗಾರರಾದರು.

Ranji Trophy: ರಣಜಿ ಟ್ರೋಫಿ ಇತಿಹಾಸದಲ್ಲಿ 2ನೇ ಅತಿ ಹೆಚ್ಚು ರನ್ ದಾಖಲಿಸಿದ ಪೃಥ್ವಿ ಶಾRanji Trophy: ರಣಜಿ ಟ್ರೋಫಿ ಇತಿಹಾಸದಲ್ಲಿ 2ನೇ ಅತಿ ಹೆಚ್ಚು ರನ್ ದಾಖಲಿಸಿದ ಪೃಥ್ವಿ ಶಾ

ಟಿ20 ಕ್ರಿಕೆಟ್‌ನಲ್ಲಿ ಈ ಹೆಗ್ಗುರುತನ್ನು ತಲುಪಲು ಸೂರ್ಯಕುಮಾರ್ ಯಾದವ್ ಕೇವಲ 843 ಎಸೆತಗಳನ್ನು ತೆಗೆದುಕೊಂಡರು ಮತ್ತು ಇದು ಎಲ್ಲಾ ಆಟಗಾರರಿಗಿಂತ ವೇಗವಾಗಿ ಬಾರಿಸಿದ್ದಾರೆ. ಇನ್ನಿಂಗ್ಸ್‌ಗೆ ಸಂಬಂಧಿಸಿದಂತೆ ಟಿ20 ಪಂದ್ಯಗಳಲ್ಲಿ 1,500 ರನ್‌ಗಳ ಗಡಿಯನ್ನು ತಲುಪಿದ ಮೂರನೇ ಅತಿ ವೇಗದ ಆಟಗಾರರಾಗಿದ್ದಾರೆ.

ಈ ಮೈಲುಗಲ್ಲನ್ನು ತಲುಪಿದ ವೇಗದ ಬ್ಯಾಟರ್‌ಗಳೆಂದರೆ ಭಾರತೀಯ ಬ್ಯಾಟರ್‌ಗಳಾದ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಆಸ್ಟ್ರೇಲಿಯಾದ ಅನುಭವಿ ಆರೋನ್ ಫಿಂಚ್ ಮತ್ತು ಪಾಕಿಸ್ತಾನದ ನಾಯಕ ಬಾಬರ್ ಅಜಂ ಅವರು ಟಿ20 ಪಂದ್ಯಗಳಲ್ಲಿ 1,500 ರನ್ ಗಳಿಸಲು 39 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದಾರೆ.

Story first published: Wednesday, January 11, 2023, 18:18 [IST]
Other articles published on Jan 11, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X