ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಸಿಸಿ ಕ್ರಿಕೆಟ್ ವಿಶ್ವಕಪ್ 2019: ಅಪರೂಪದ ದಾಖಲೆ ನಿರ್ಮಿಸಿದ ಪಾಕಿಸ್ತಾನ

ICC World Cup 2019: Pakistan achieve impressive record against England

ನಾಟಿಂಗ್ಹ್ಯಾಮ್, ಜೂನ್ 4: ನಾಟಿಂಗ್ಹ್ಯಾಮ್ ಟ್ರೆಂಟ್ ಬ್ರಿಡ್ಜ್‌ನಲ್ಲಿ ಸೋಮವಾರ (ಜೂನ್ 3) ನಡೆದ ವಿಶ್ವಕಪ್ 6ನೇ ಪಂದ್ಯದಲ್ಲಿ ಪಾಕಿಸ್ತಾನ ಬ್ಯಾಟ್ಸ್ಮನ್ ಮೊಹಮ್ಮದ್ ಹಫೀಝ್ ಈ ವಿಶ್ವಕಪ್‌ನ ಚೊಚ್ಚಲ ಶತಕದ ಅವಕಾಶವನ್ನು ಕಳದುಕೊಂಡರಾದರೂ ಪಾಕಿಸ್ತಾನ ಕ್ರಿಕೆಟ್ ತಂಡ ಅಪೂರ್ವ ದಾಖಲೆಗೆ ಕಾರಣವಾಗಿದೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು ಮೈಖೇಲ್ ಕನ್ನಡದ 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಬಾಬರ್ ಅಝಾಮ್ (63 ರನ್), ಮೊಹಮ್ಮದ್ ಹಫೀಝ್ (84 ರನ್) ಮತ್ತು ನಾಯಕ ಸರ್ಫರಾಝ್ ಅಹ್ಮದ್ (55 ರನ್) ಆಕರ್ಷಕ ಶತಕದ ನೆರವಿನಿಂದ ಪಾಕ್ ತಂಡ ಆತಿಥೇಯ ಇಂಗ್ಲೆಂಡ್‌ಗೆ 14 ರನ್ ಸೋಲುಣಿಸಿತ್ತು. ಜೊತೆಗೆ ವಿಶ್ವಕಪ್‌ನಲ್ಲಿ ತಂಡವೊಂದು ಪೇರಿಸಿದ ಅತ್ಯಧಿಕ ರನ್‌ಗಾಗಿಯೂ ಪಾಕ್ ಗುರುತಿಸಿಕೊಂಡಿದೆ.

ವಿಶ್ವಕಪ್-ಭಾರತ vs ಪಾಕ್ ಕದನ: ಭಾರತದ ಮೇಲೆಯೇ ಹೆಚ್ಚಿನ ಒತ್ತಡ!ವಿಶ್ವಕಪ್-ಭಾರತ vs ಪಾಕ್ ಕದನ: ಭಾರತದ ಮೇಲೆಯೇ ಹೆಚ್ಚಿನ ಒತ್ತಡ!

ಇಂಗ್ಲೆಂಡ್ vs ಪಾಕ್ ಹಣಾಹಣಿ ಮತ್ತು ಆದ ದಾಖಲೆಗಳಿಗೆ ಸಂಬಂಧಿಸಿ ಇಲ್ಲೊಂದಿಷ್ಟು ಸಂಕ್ಷಿಪ್ತ ಮಾಹಿತಿಯಿದೆ.

ಅಪರೂಪದ ದಾಖಲೆ

ಅಪರೂಪದ ದಾಖಲೆ

ವಿಶ್ವಕಪ್ ಕ್ರಿಕೆಟ್‌ನಲ್ಲಿ ಒಬ್ಬನೇ ಆಟಗಾರನೂ ಶತಕ ಬಾರಿಸದೆ ತಂಡವೊಂದು ಪೇರಿಸಿದ ಅತ್ಯಧಿಕ ಮೊತ್ತವಾಗಿ ಪಾಕ್ ತಂಡದ ರನ್ ಗುರುತಿಸಿಕೊಂಡಿದೆ. ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಾಕ್ 50 ಓವರ್‌ಗೆ 8 ವಿಕೆಟ್ ನಷ್ಟದಲ್ಲಿ 348 ರನ್ ಬಾರಿಸಿತ್ತು. ಆದರೆ ಇಂಗ್ಲೆಂಡ್ 50 ಓವರ್‌ಗೆ 9 ವಿಕೆಟ್ ಕಳೆದು 334 ರನ್ ಬಾರಿಸಿ ಶರಣಾಯ್ತು.

4 ವರ್ಷಗಳ ರೆಕಾರ್ಡ್ ಬ್ರೇಕ್

4 ವರ್ಷಗಳ ರೆಕಾರ್ಡ್ ಬ್ರೇಕ್

ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಪಾಕ್ ತೋರಿಸಿದ ಸಾಧನೆ 4 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದಿದೆ. 2015ರಲ್ಲಿ ವೆಲ್ಲಿಂಗ್ಟನ್‌ನಲ್ಲಿ ನಡೆದಿದ್ದ ವಿಶ್ವಕಪ್ ಪಂದ್ಯದಲ್ಲಿ ದಕ್ಷಿಣ ಅಫ್ರಿಕಾ ತಂಡ ಯುಎಇ ವಿರುದ್ಧ ಒಬ್ಬನೇ ಬ್ಯಾಟ್ಸ್ಮನ್ ಶತಕ ಬಾರಿಸದೆಯೂ 6 ವಿಕೆಟ್ ಕಳೆದು 341 ರನ್ ಬಾರಿಸಿ ದಾಖಲೆ ನಿರ್ಮಿಸಿತ್ತು.

ಪಾಕ್ ಹೆಸರಲ್ಲೇ ಹೆಚ್ಚಿನ ದಾಖಲೆ

ಪಾಕ್ ಹೆಸರಲ್ಲೇ ಹೆಚ್ಚಿನ ದಾಖಲೆ

ಒಬ್ಬನೇ ಒಬ್ಬ ಬ್ಯಾಟ್ಸ್ಮನ್ ಶತಕ ಬಾರಿಸಿದೆಯೂ ವಿಶ್ವಕಪ್‌ನಲ್ಲಿ ತಂಡವೊಂದು ಬಾರಿಸಿದ ದೊಡ್ಡ ರನ್‌ಗಾಗಿ ಪಾಕಿಸ್ತಾನವೇ ಈ ಮೊದಲು ಗುರುತಿಸಿಕೊಂಡಿತ್ತು. 2015ರಲ್ಲಿ ನೇಪಿಯರ್ ನಲ್ಲಿ ನಡೆದಿದ್ದ ಪಂದ್ಯದಲ್ಲಿ ಯುಎಇ ವಿರುದ್ಧ ಪಾಕ್ 6 ವಿಕೆಟ್ ನಷ್ಟಕ್ಕೆ 339 ರನ್ ಮಾಡಿತ್ತು. ಅಲ್ಲದೆ 1983ರಲ್ಲೂ ಸ್ವಾನ್ಸೀಯಲ್ಲಿ ನಡೆದಿದ್ದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 5 ವಿಕೆಟ್ ಕಳೆದು 338 ರನ್ ಬಾರಿಸಿತ್ತು.

ಐರ್ಲೆಂಡ್ ಹೆಸರಲ್ಲಿ ದಾಖಲೆ

ಐರ್ಲೆಂಡ್ ಹೆಸರಲ್ಲಿ ದಾಖಲೆ

ವಿಶ್ವಕಪ್‌ನಲ್ಲಿ ಚೇಸಿಂಗ್ ಅತ್ಯಧಿಕ ರನ್ ದಾಖಲೆಯನ್ನು ಐರ್ಲೆಂಡ್ ಈಗಲೂ ಉಳಿಸಿಕೊಂಡಿದೆ. 2011ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಪಂದ್ಯದಲ್ಲಿ ಐರ್ಲೆಂಡ್ ತಂಡ ಇಂಗ್ಲೆಂಡ್ ನೀಡಿದ್ದ 329 ರನ್ ಗುರಿಯನ್ನು 7 ವಿಕೆಟ್ ನಷ್ಟದಲ್ಲಿ ತಲುಪಿ ಜಯ ದಾಖಲಿಸಿತ್ತು. ಸದ್ಯದ ಮಟ್ಟಿಗೆ ವಿಶ್ವಕಪ್‌ನಲ್ಲಿ ಇದೇ ಅತ್ಯಧಿಕ ರನ್ ಚೇಸಿಂಗ್ ದಾಖಲೆ.

Story first published: Tuesday, June 4, 2019, 10:14 [IST]
Other articles published on Jun 4, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X