ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್: ಧೋನಿ ಬಗ್ಗೆ ಕಾಮೆಂಟ್ ಮಾಡಿದ ಸ್ಪಿನ್ನರ್ ಯುಜುವೇಂದ್ರ ಚಾಹಲ್

World Cup 2019: ಎಂ ಎಸ್ ಧೋನಿ ಬಗ್ಗೆ ಯುಜುವೇಂದ್ರ ಚಾಹಲ್ ಹೇಳಿದ್ದೇನು?
ICC World Cup: ‘You need Mahi bhai, we still obey him’ - Chahal

ನವದೆಹಲಿ, ಮೇ 21: ವಿಶ್ವಕಪ್ 2019ಕ್ಕೆ ವಿರಾಟ್ ಕೊಹ್ಲಿ ಬಳಗದಲ್ಲಿ ಇಬ್ಬರು ಪ್ರಮುಖ ಸ್ಪಿನ್ನರ್‌ಗಳಿದ್ದಾರೆ. ಆ ಇಬ್ಬರೆಂದರೆ ಯುಜುವೇಂದ್ರ ಚಾಹಲ್ ಮತ್ತು ಕುಲದೀಪ್ ಯಾದವ್. ವಿಶ್ವಕಪ್‌ನಲ್ಲಿ ವಿಕೆಟ್ ಪಡೆಯಬಲ್ಲ ಭಾರತದ ಬೌಲರ್‌ಗಳ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಯುಜುವೇಂದ್ರ ಚಾಹಲ್ ಎಂಎಸ್ ಧೋನಿ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಟೀಮ್ ಇಂಡಿಯಾದ 2019ರ ವಿಶ್ವಕಪ್ ಭವಿಷ್ಯ ನುಡಿದ ಬ್ರಿಯಾನ್ ಲಾರಾಟೀಮ್ ಇಂಡಿಯಾದ 2019ರ ವಿಶ್ವಕಪ್ ಭವಿಷ್ಯ ನುಡಿದ ಬ್ರಿಯಾನ್ ಲಾರಾ

ವೃತ್ತಿ ಜೀವನದಲ್ಲಿ ಮಾಜಿ ನಾಯಕ ಧೋನಿ ಪ್ರಭಾವದ ಬಗ್ಗೆ ಲೆಗ್ ಸ್ಪಿನ್ನರ್ ಚಾಹಲ್ ಮಾತನಾಡಿ, ಏನೇ ಆದರೂ ನಿಮಗಲ್ಲಿ ಧೋನಿಯ ಉಪಸ್ಥಿತಿ ಬೇಕಿರತ್ತೆ. ನಾವು ತಪ್ಪಿದಾಗ ಧೋನಿ ಮಧ್ಯಸ್ಥಿಕೆ ವಹಿಸುತ್ತಾರೆ. ನಾವು ನಮ್ಮಷ್ಟಕ್ಕೇ ಯೋಜನೆ ಹಾಕಿಕೊಳ್ಳುವ ಮೊದಲು ಅದರ ಬಗ್ಗೆ ಧೋನಿಯಲ್ಲಿ ಮಾತನಾಡಬೇಕಾದ ಅಗತ್ಯತೆ ಇರುತ್ತೆ' ಎಂದಿದ್ದಾರೆ.

ವಿಶ್ವಕಪ್ ಮತ್ತು ಕುಲದೀಪ್ ಬಗ್ಗೆಯೂ ಅಭಿಪ್ರಾಯ ಹಂಚಿಕೊಂಡ ಚಾಹಲ್, 'ನಾವು ಪರಸ್ಪರ ಒಬ್ಬರಿಗೊಬ್ಬರು ಆತ್ಮವಿಶ್ವಾಸ ತುಂಬಿಕೊಳ್ಳುತ್ತಿದ್ದೇವೆ. ಎಲ್ಲಾ ತಾಣ/ಪರಿಸ್ಥಿತಿಗಳಲ್ಲೂ ನಾವು ಉತ್ತಮ ಆಟ ಪ್ರದರ್ಶಿಸಿದ್ದೇವೆ. ಹೀಗಾಗಿ ಪರಿಸ್ಥಿತಿಗೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಬೇಕಾಗಿಯೇನಿಲ್ಲ' ಎಂದು ಹೇಳಿದರು.

ಕ್ರಿಕೆಟ್‌ನಿಂದ ನಿವೃತ್ತಿ ಬಳಿಕ ಧೋನಿ ಏನ್ಮಾಡ್ತಾರೆ ಗೊತ್ತಾ?ಕ್ರಿಕೆಟ್‌ನಿಂದ ನಿವೃತ್ತಿ ಬಳಿಕ ಧೋನಿ ಏನ್ಮಾಡ್ತಾರೆ ಗೊತ್ತಾ?

'ಆತ (ಕುಲದೀಪ್) ನನಗೆ ತಮ್ಮನಿದ್ದಂತೆ. ನೀವು ಕೆಟ್ಟ ಪ್ರದರ್ಶನ ನೀಡಿದಾಗ ನಿಮಗೆ ಒಂದಿಷ್ಟು ತಿಳಿಹೇಳುವವ ಅವಶ್ಯವಿರುತ್ತದೆ. ನಾನೂ ಇಂಥ ಸಂದರ್ಭಗಳನ್ನು ಎದುರುಗೊಳ್ಳುವಾಗ ಕುಲದೀಪ್ ನನನ್ನೊಂದಿಗೆ ಮಾತನಾಡುತ್ತಾರೆ. ಒಬ್ಬರಿಗೊಬ್ಬರು ಸಂವಹನ ನಡೆಸಿಕೊಳ್ಳೋದು ಮುಖ್ಯ ಅನ್ನೋದು ನನ್ನನಿಸಿಕೆ' ಎಂದು ಚಾಹಲ್ ವಿವರಿಸಿದರು.

Story first published: Tuesday, May 21, 2019, 13:13 [IST]
Other articles published on May 21, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X