'ಮುಂದಿನ ಐಪಿಎಲ್‌ನಲ್ಲಿ ಎಂಎಸ್ ಧೋನಿ ಆಡದಿದ್ದರೆ ನಾನೂ ಆಡಲ್ಲ': ರೈನಾ

ರೈನಾ, ಧೋನಿ ಗೆಳೆತನ ಎಷ್ಟು ಗಟ್ಟಿಯಾಗಿದೆ ಅನ್ನೋದು ರೈನಾ ಮಾತಿಂದ ಗೊತ್ತಾಗುತ್ತೆ | Oneindia Kannada

ನವದೆಹಲಿ: ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಒಂದು ವೇಳೆ ಮುಂದಿನ ಇಂಡಿಯನ್ ಪ್ರೀಮಿಯರ್ ಲೀಗ್‌(ಐಪಿಎಲ್‌)ನಲ್ಲಿ ಆಡದಿದ್ದರೆ ನಾನೂ ಮುಂದಿನ ಐಪಿಎಲ್ ಸೀಸನ್‌ನಲ್ಲಿ ಆಡಲಾರೆ ಎಂದು ಭಾರತದ ಮಾಜಿ ಆಲ್ ರೌಂಡರ್ ಸುರೇಶ್ ರೈನಾ ಹೇಳಿದ್ದಾರೆ.

ಟೀಮ್ ಇಂಡಿಯಾದ ಈ 3 ಅನುಭವಿ ಆಟಗಾರರಿಗೆ ಶ್ರೀಲಂಕಾ ಪ್ರವಾಸವೇ ಕೊನೆಯ ಅವಕಾಶವಾಗುತ್ತಾ?ಟೀಮ್ ಇಂಡಿಯಾದ ಈ 3 ಅನುಭವಿ ಆಟಗಾರರಿಗೆ ಶ್ರೀಲಂಕಾ ಪ್ರವಾಸವೇ ಕೊನೆಯ ಅವಕಾಶವಾಗುತ್ತಾ?

ಎಂಎಸ್ ಧೋನಿ ನಾಯಕರಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸುರೇಶ್ ರೈನಾ ಕೂಡ ಆಡುತ್ತಿದ್ದಾರೆ. ಇಬ್ಬರೂ 2020ರಂದು ಅಚಾನಕ್ ಆಗಿ ಅಂತಾರಾಷ್ಟ್ರೀಯ ನಿವೃತ್ತಿ ಘೋಷಿಸಿದ್ದರು. ಆ ಮೂಲಕ ಇಬ್ಬರ ಸ್ನೇಹ ಎಷ್ಟರ ಮಟ್ಟಿಗೆ ಗಾಢ ಅನ್ನೋದನ್ನು ಸಾರಿ ಹೇಳಿದ್ದರು.

"ಕ್ರಿಕೆಟ್‌ನಲ್ಲಿ ಮುಂದುವರೆಯಲು ಇನ್ನಲ್ಲಿನ್ನು ನಾಲ್ಕೈದು ವರ್ಷಗಳು ಉಳಿದಿವೆ. ಈ ವರ್ಷ ನಾವು ಐಪಿಎಲ್ ಆಡುತ್ತಿದ್ದೇವೆ. ಮುಂದಿನ ವರ್ಷ ಇನ್ನೆರಡು ತಂಡಗಳು ಸೇರ್ಪಡೆಯಾಗಬಹುದು. ಆದರೆ ನಾನು ಆಡುವಷ್ಟು ಕಾಲ ಚೆನ್ನೈ ಸೂಪರ್ ಕಿಂಗ್ಸ್‌ಗೆ ಮಾತ್ರ ಆಡ್ತೇನೆ. ಈ ವರ್ಷ ಚೆನ್ನಾಗಿ ಆಡ್ತೀವಿ ಅಂತ ನನಗನ್ನಿಸ್ತಿದೆ," ಎಂದು ನ್ಯೂಸ್ 24 ಸ್ಪೋರ್ಟ್ಸ್‌ಗೆ ರೈನಾ ಹೇಳಿದ್ದಾರೆ.

ಭಾರತ vs ಶ್ರೀಲಂಕಾ: 3 ಪಂದ್ಯಗಳ ಏಕದಿನ ಸರಣಿಯ ವೇಳಾಪಟ್ಟಿ ಬದಲು!ಭಾರತ vs ಶ್ರೀಲಂಕಾ: 3 ಪಂದ್ಯಗಳ ಏಕದಿನ ಸರಣಿಯ ವೇಳಾಪಟ್ಟಿ ಬದಲು!

"ಒಂದು ವೇಳೆ ಧೋನಿ ಭಾಯ್ ಮುಂದಿನ ಐಪಿಎಲ್‌ನಲ್ಲಿ ಆಡದಿದ್ದರೆ ನಾನೂ ಮುಂದಿನ ಸೀಸನ್‌ನಲ್ಲಿ ಆಡಲಾರೆ. ನಾವಿಬ್ಬರೂ 2008ರಿಂದಲೂ ಸಿಎಸ್‌ಕೆಗೆ ಆಡುತ್ತಿದ್ದೇವೆ. ಈ ವರ್ಷ ನಾವು ಐಪಿಎಲ್‌ನಲ್ಲಿ ಗೆದ್ದರೆ ಮುಂದಿನ ವರ್ಷವೂ ಆಡಲು ನಾನು ಧೋನಿಯನ್ನು ಮನವೊಲಿಸುತ್ತೇನೆ," ಎಂದು ರೈನಾ ತಿಳಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Friday, July 9, 2021, 23:59 [IST]
Other articles published on Jul 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X