ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind Vs Aus T20I: 5ನೇ ಓವರ್‌ನಲ್ಲಿ ಔಟ್ ಆಗಿದ್ದ ಗ್ರೀನ್, ಧೋನಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದ ರವಿಶಾಸ್ತ್ರಿ

ಟಿ20 ವಿಶ್ವಕಪ್‌ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ನೀಡುತ್ತಿರುವ ಪ್ರದರ್ಶನ ನೀರಸವಾಗಿದೆ. ಮೊಹಾಲಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲನೇ ಟಿ20 ಪಂದ್ಯದಲ್ಲಿ 208 ರನ್ ಗಳಿಸಿಯೂ ಸೋತಿದ್ದು ಮಾತ್ರ ಭಾರತದಂತಹ ಬಲಿಷ್ಠ ತಂಡಕ್ಕೆ ಅರಗಿಸಿಕೊಳ್ಳಲಾಗುತ್ತಿಲ್ಲ.

ಭಾರತ ತಂಡದ ಸೋಲಿಗೆ ಕಾರಣಗಳನ್ನು ವಿಶ್ಲೇಷಣೆ ಮಾಡುತ್ತಲೇ ಇದ್ದು, ಹಲವರು ಮಾಜಿ ಕ್ರಿಕೆಟಿಗರು ತಮ್ಮದೇ ಆದ ಅಭಿಪ್ರಾಯಗಳನ್ನು ನೀಡುತ್ತಲೇ ಇದ್ದಾರೆ. ಬೌಲಿಂಗ್‌, ಫೀಲ್ಡಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡದೇ ಇದ್ದಿದ್ದೇ ಸೋಲಿಗೆ ಕಾರಣ ಎನ್ನುತ್ತಿದ್ದರೂ, ರವಿಶಾಸ್ತ್ರಿ ಮಾತ್ರ ಟೀಂ ಇಂಡಿಯಾ ಎಂಎಸ್‌ ಧೋನಿಯನ್ನು ಮಿಸ್ ಮಾಡಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.

IND vs AUS: 'ಭಾರತದ ಕೆಲವು ಆಟಗಾರರು ಅಧಿಕ ತೂಕ ಹೊಂದಿದ್ದಾರೆ'; ಪಾಕ್ ಮಾಜಿ ನಾಯಕ ಟೀಕೆIND vs AUS: 'ಭಾರತದ ಕೆಲವು ಆಟಗಾರರು ಅಧಿಕ ತೂಕ ಹೊಂದಿದ್ದಾರೆ'; ಪಾಕ್ ಮಾಜಿ ನಾಯಕ ಟೀಕೆ

ಡಿಆರ್ ಎಸ್‌ ಎಂದರೆ ಧೋನಿ ರಿವ್ಯೂ ಸಿಸ್ಟಂ ಅನ್ನುವ ಮಟ್ಟಿಗೆ ಹೆಸರಾಗಿತ್ತು. ವಿಕೆಟ್‌ ಹಿಂದೆ ನಿಂತು ಧೋನಿ ರಿವ್ಯೂ ತೆಗೆದುಕೊಂಡರೆ ಆತನ ಔಟ್ ಆಗಿದ್ದಾನೇ ಎನ್ನುವಷ್ಟು ನಂಬಿಕೆ ತಂಡದ ಆಟಗಾರರು, ವೀಕ್ಷಕರದ್ದಾಗಿರುತ್ತಿತ್ತು, ಬಹುತೇಕ ಬಾರಿ ಇದು ನಿಜವೂ ಹೌದು.

ಎಲ್‌ಬಿಡಬ್ಲ್ಯೂ, ಕ್ಯಾಚ್, ಸ್ಟಂಪಿಂಗ್ ವಿಚಾರದಲ್ಲಿ ಧೋನಿ ನಿರ್ಣಯ ಬಹುತೇಕ ಯಶಸ್ವಿಯಾಗಿವೆ. ಧೋನಿ ನಂತರ ಭಾರತ ತಂಡದ ವಿಕೆಟ್ ಕೀಪರ್ ಗಳು ಸರಿಯಾದ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲರಾಗುತ್ತಿರುವುದು ಸತ್ಯ. ಇದನ್ನೇ ಈಗ ರವಿಶಾಸ್ತ್ರಿ ನೆನಪಿಸಿಕೊಂಡಿದ್ದಾರೆ.

ಚಹಾಲ್ ಬೌಲಿಂಗ್‌ನಲ್ಲೇ ಔಟ್ ಆಗಿದ್ದ ಗ್ರೀನ್

ಚಹಾಲ್ ಬೌಲಿಂಗ್‌ನಲ್ಲೇ ಔಟ್ ಆಗಿದ್ದ ಗ್ರೀನ್

ಭಾರತ-ಆಸ್ಟ್ರೇಲಿಯಾ ನಡುವಿನ ಮೊದಲನೇ ಟಿ20 ಪಂದ್ಯದಲ್ಲಿ 209 ರನ್‌ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ಸ್ಫೋಟಕ ಆರಂಭ ಪಡೆಯಿತು. ಕ್ಯಾಮರೂನ್ ಗ್ರೀನ್ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದರೆ, ಫಿಂಚ್ ಕೂಡ ಉತ್ತಮ ಸಾಥ್ ನೀಡಿದರು.

ವಿಕೆಟ್ ಪಡೆಯುವ ದೃಷ್ಟಿಯಿಂದ ನಾಯಕ ರೋಹಿತ್ ಶರ್ಮಾ 5ನೇ ಓವರ್ ಅನ್ನು ಯುಜ್ವೇಂದ್ರ ಚಹಾಲ್‌ಗೆ ನೀಡಿದರು. ಚಹಾಲ್ ಎಸೆತವು ಕ್ಯಾಮರೂನ್ ಗ್ರೀನ್ ಪ್ಯಾಟ್‌ಗೆ ಹೊಡೆದಿತ್ತು, ಆದರೆ ಟೀಂ ಇಂಡಿಯಾ ಆಟಗಾರರು ಎಲ್‌ಬಿಡಬ್ಲ್ಯೂ ಔಟ್‌ಗಾಗಿ ಮನವಿ ಮಾಡಲಿಲ್ಲ. ಒಂದು ವೇಳೆ ಟೀಂ ಇಂಡಿಯಾ ಆಟಗಾರರು ಮನವಿ ಸಲ್ಲಿಸಿದ್ದರೆ ಗ್ರೀನ್ 5ನೇ ಓವರ್ ನಲ್ಲೇ ಔಟ್ ಆಗಿರುತ್ತಿದ್ದರು, ಪಂದ್ಯದ ಫಲಿತಾಂಶವೇ ಬದಲಾಗುವ ಸಾಧ್ಯತೆ ಇತ್ತು.

ಈ ಭಾರತೀಯ ಕ್ರಿಕೆಟಿಗನ ಬೆಳವಣಿಗೆ ಅಮೋಘ: ಆಸಿಸ್ ದಿಗ್ಗಜ ಹೊಗಳಿದ್ದು ಯಾರನ್ನು ಗೊತ್ತಾ?

ರಿವ್ಯೂ ತೆಗೆದುಕೊಳ್ಳದ ಟೀಂ ಇಂಡಿಯಾ

ರಿವ್ಯೂ ತೆಗೆದುಕೊಳ್ಳದ ಟೀಂ ಇಂಡಿಯಾ

ಚಹಾಲ್ ಬೌಲಿಂಗ್‌ನಲ್ಲಿ ಕ್ಯಾಮರೂನ್ ಗ್ರೀನ್ ಸ್ವೀಪ್ ಮಾಡಲು ಬಯಸಿದ್ದರು, ಆದರೆ ಬ್ಯಾಟ್‌ನಿಂದ ತಪ್ಪಿಸಕೊಂಡ ಚೆಂಡು ನೇರವಾಗಿ ಪ್ಯಾಡ್‌ಗೆ ಬಡಿಯಿತು. ನಾಯಕ ರೋಹಿತ್ ಶರ್ಮಾ, ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್, ಬೌಲರ್ ಯುಜ್ವೇಂದ್ರ ಚಹಾಲ್ ಬಲವಾಗಿ ಅಂಪೈರ್ ಬಳಿ ಮನವಿ ಮಾಡಲಿಲ್ಲ.

ಆದರೆ, ಬಾಲ್‌ ಟ್ಯ್ರಾಕಿಂಗ್‌ನಲ್ಲಿ ಗ್ರೀನ್ ಎಲ್‌ಬಿಡಬ್ಲ್ಯೂ ಔಟಾಗಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು. ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡದ ವಿರುದ್ಧ ಆಡುವಾಗ ಈ ರೀತಿಯ ಅವಕಾಶಗಳನ್ನು ಕಳೆದುಕೊಳ್ಳುವುದು ಪಂದ್ಯವನ್ನು ಕಳೆದುಕೊಳ್ಳಲು ಕಾರಣವಾಗುತ್ತದೆ. ರಿವ್ಯೂ ತೆಗೆದುಕೊಂಡಿದ್ದರೆ ಭಾರತಕ್ಕೆ ಗೆಲುವು ಸಾಧಿಸುವ ಅವಕಾಶ ಹೆಚ್ಚಿತ್ತು. ಜೀವದಾನ ಪಡೆದ ಗ್ರೀನ್ 30 ಎಸೆತಗಳಲ್ಲಿ 61 ರನ್ ಗಳಿಸಿ ಆಸ್ಟ್ರೇಲಿಯಾ ಗೆಲುವಿಗೆ ಮಹತ್ವದ ಕೊಡುಗೆ ನೀಡಿದರು.

ಅಚ್ಚರಿ ವ್ಯಕ್ತಪಡಿಸಿದ ರವಿಶಾಸ್ತ್ರಿ, ಗವಾಸ್ಕರ್

ಅಚ್ಚರಿ ವ್ಯಕ್ತಪಡಿಸಿದ ರವಿಶಾಸ್ತ್ರಿ, ಗವಾಸ್ಕರ್

ಪಂದ್ಯದ ಕಾಮೆಂಟರಿ ಮಾಡುತ್ತಿದ್ದ ಭಾರತದ ಮಾಜಿ ಕ್ರಿಕೆಟಿಗರಾದ ರವಿಶಾಸ್ತ್ರಿ, ಗವಾಸ್ಕರ್ ಈ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರು. "ಹಿಂದಿನ ಓವರ್, ನೇರ ಎಸೆತದಲ್ಲಿ ನಡೆದದ್ದು ಇದೇ, ಗ್ರೀನ್ ಸ್ವೀಪ್ ಮಾಡಲು ಹೋದರು. ಭಾರತ ರಿವ್ಯೂ ಮಾಡಲಿಲ್ಲ. ಚೆಂಡು ಸ್ಟಂಪ್‌ಗೆ ಹೊಡೆಯುತ್ತಿತ್ತು," ಸುನಿಲ್ ಗವಾಸ್ಕರ್ ಹೇಳಿದರು.

ನಂತರ, ರವಿಶಾಸ್ತ್ರಿ ಉತ್ತರಿಸಿ, "ಮತ್ತು ಹಿಟ್ ಮಾಡುವುದು ಚೆನ್ನಾಗಿ ಮತ್ತು ಕ್ಲೀನ್ ಆಗಿದೆ. ಅಡ್ಡಲಾಗಿ ಹೊಡೆದಿರುವುದು ಆಶ್ಚರ್ಯಕರವಾಗಿದೆ. ಇದು ಎತ್ತರವಾಗಿದೆಯೇ ಅಥವಾ ರೇಖೆಯ ಹೊರಗೆ ಹೊಡೆದಿದೆಯೇ ಎಂದು ಆಶ್ಚರ್ಯ ಪಡುತ್ತೇನೆ."

ನಂತರ ಮತ್ತೊಬ್ಬ ಮಾಜಿ ಆಟಗಾರ ಮುರಳಿ ಕಾರ್ತಿಕ್ ಕೂಡ ಈ ಬಗ್ಗೆ ಕಮೆಂಟ್ ಮಾಡಿದರು. "ದಿನೇಶ್ ಕಾರ್ತಿಕ್ ವಿಕೆಟ್ ಕೀಪರ್, ಚಹಾಲ್ ಮತ್ತು ರೋಹಿತ್ ಶರ್ಮಾ ಎಲ್ಲರೂ ಒಬ್ಬರನ್ನೊಬ್ಬರು ನೋಡುತ್ತಿದ್ದರು. ಆದರೆ ಒಬ್ಬರೂ ಕೂಡ ಮೇಲ್ಮನವಿ ಸಲ್ಲಿಸಲಿಲ್ಲ" ಎಂದು ಅವರು ಹೇಳಿದರು. ನಾವು ತಕ್ಷಣ ಮಾಡಬಹುದೆಂದು ನಾನು ಬಯಸುತ್ತೇನೆ," ಅವರು ಹೇಳಿದರು.

ಈ ಸಮಯದಲ್ಲಿ ಧೋನಿ ಇರಬೇಕಿತ್ತು

ಈ ಸಮಯದಲ್ಲಿ ಧೋನಿ ಇರಬೇಕಿತ್ತು

ನಂತರ ಮಾತು ಮುಂದುವರೆಸಿದ ರವಿಶಾಸ್ತ್ರಿ ಈ ರೀತಿಯ ಸಂದರ್ಭಗಳಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್‌ ಧೋನಿ ಅವರನ್ನು ಮಿಸ್ ಮಾಡಿಕೊಳ್ಳುತ್ತದೆ ಎಂದು ಹೇಳಿದರು. ಇಂತಹ ಸಂದರ್ಭಗಳಲ್ಲಿ ವಿಕೆಟ್ ಕೀಪರ್ ಪಾತ್ರ ತುಂಬಾ ಮುಖ್ಯವಾಗುತ್ತದೆ, ಈ ಪರಿಸ್ಥಿತಿಯಲ್ಲಿ ಆತ ಅತ್ಯುತ್ತಮ ಕೀಪರ್ ಆಗಿದ್ದ ಎಂದು ರವಿಶಾಸ್ತ್ರಿ ಹೇಳಿದ್ದಾರೆ.

ಈ ಪರಿಸ್ಥಿತಿಯಲ್ಲಿ ಧೋನಿ ಇದ್ದಿದ್ದರೆ ಖಂಡಿತವಾಗಿಯೂ ರಿವ್ಯೂ ತೆಗೆದುಕೊಳ್ಳುತ್ತಿದ್ದರು ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ. ಆಸ್ಟ್ರೇಲಿಯಾ-ಭಾರತ ನಡುವಣ ಸರಣಿಯ ಎರಡನೇ ಟಿ20 ಪಂದ್ಯ ನಾಗ್ಪುರದಲ್ಲಿ ನಡೆಯಲಿದೆ.

Story first published: Thursday, September 22, 2022, 21:29 [IST]
Other articles published on Sep 22, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X