IND vs BAN: ಭಾರತ ಏಕದಿನ ತಂಡದಿಂದ ರಿಷಭ್ ಪಂತ್ ಕೊನೆಗೂ ಬಿಡುಗಡೆ; ಬದಲಿ ಆಟಗಾರನ ಹೆಸರಿಲ್ಲ

ಭಾನುವಾರ ಢಾಕಾದ ಷೇರ್ ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಏಕದಿನ ಪಂದ್ಯದ ಟಾಸ್ ನಂತರ, ಭಾರತೀಯ ಕ್ರಿಕೆಟ್ ಅಭಿಮಾನಿಗಳು ಅಚ್ಚರಿ ಸುದ್ದಿಯೊಂದನ್ನು ಪಡೆದರು.

ರೋಹಿತ್ ಶರ್ಮಾ ಟಾಸ್ ಸೋತರೂ, ಬಾಂಗ್ಲಾದೇಶದ ನಾಯಕ ಲಿಟನ್ ದಾಸ್ ಭಾರತ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಈ ವೇಳೆ ಕೆಎಲ್ ರಾಹುಲ್ ವಿಕೆಟ್ ಕೀಪಿಂಗ್ ಮಾಡಲಿದ್ದಾರೆ ಎಂದು ರೋಹಿತ್ ಶರ್ಮಾ ಮಾಹಿತಿ ನೀಡಿದರು. ಅಂದರೆ ರಿಷಭ್ ಪಂತ್ ಆಡುವುದಿಲ್ಲ ಎಂಬಂತಿತ್ತು.

IND vs BAN: ಮೊದಲ ಏಕದಿನ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ & ಲೈವ್ ಸ್ಕೋರ್IND vs BAN: ಮೊದಲ ಏಕದಿನ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ & ಲೈವ್ ಸ್ಕೋರ್

ರಿಷಭ್ ಪಂತ್ ಏಕೆ ಆಡುವುದಿಲ್ಲ ಎಂಬುದಕ್ಕೆ ರೋಹಿತ್ ಶರ್ಮಾ ಯಾವುದೇ ವಿವರಣೆ ನೀಡಲಿಲ್ಲ. ಕೆಲವೇ ಕ್ಷಣಗಳ ನಂತರ ವೈದ್ಯಕೀಯ ತಂಡದೊಂದಿಗೆ ಸಮಾಲೋಚಿಸಿದ ನಂತರ ರಿಷಭ್ ಪಂತ್ ಅವರನ್ನು ಏಕದಿನ ತಂಡದಿಂದ ಬಿಡುಗಡೆ ಮಾಡಲಾಗಿದೆ ಎಂದು ಬಿಸಿಸಿಐ ಟ್ವೀಟ್ ಮಾಡಿತು. ಇನ್ನು ಆಲ್‌ರೌಂಡರ್ ಅಕ್ಷರ್ ಪಟೇಲ್ ಮೊದಲ ಪಂದ್ಯದಲ್ಲಿ ಅಲಭ್ಯರಾಗಿದ್ದಾರೆ ಎಂಬ ಮಾಹಿತಿ ನೀಡಿದರು.ಟ್ವಿಟ್ಟರ್‌ನಲ್ಲಿ ಹೇಳಿಕೆ ನೀಡಿರುವ ಭಾರತೀಯ ಕ್ರಿಕೆಟ್ ಆಡಳಿತ ಮಂಡಳಿ, ರಿಷಭ್ ಪಂತ್ ಅವರನ್ನು ಏಕದಿನ ತಂಡದಿಂದ ಬಿಡುಗಡೆ ಮಾಡಲಾಗಿದ್ದು, ಟೆಸ್ಟ್ ಸರಣಿಗೂ ಮುನ್ನ ತಂಡವನ್ನು ಮತ್ತೆ ಸೇರಿಕೊಳ್ಳಲಿದ್ದಾರೆ ಎಂದು ತಿಳಿಸಿದೆ. 25 ವರ್ಷ ವಯಸ್ಸಿನ ರಿಷಭ್ ಪಂತ್ ಬದಲಿಗೆ ಯಾವುದೇ ಆಟಗಾರನನ್ನು ಹೆಸರಿಸಲಾಗಿಲ್ಲ.

ರಿಷಭ್ ಪಂತ್ ಇತ್ತೀಚೆಗೆ ಬ್ಯಾಟಿಂಗ್‌ನಲ್ಲಿ ಕಷ್ಟಪಡುತ್ತಿದ್ದಾರೆ. ಅವರು ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದರು ಮತ್ತು ನಂತರ ನ್ಯೂಜಿಲೆಂಡ್ ವಿರುದ್ಧ ಟಿ20 ಮತ್ತು ಏಕದಿನ ಸರಣಿಗಳಲ್ಲಿ ಕಳಪೆ ಫಾರ್ಮ್ ಮುಂದುವರೆಸಿದರು.

IND vs BAN: ಕ್ರಿಕೆಟ್ ವಿಪರೀತವಾಗಿದೆ; ಆಟಗಾರರಿಗೆ ವಿಶ್ರಾಂತಿಯ ಪ್ರಾಮುಖ್ಯತೆ ವಿವರಿಸಿದ ರೋಹಿತ್ ಶರ್ಮಾIND vs BAN: ಕ್ರಿಕೆಟ್ ವಿಪರೀತವಾಗಿದೆ; ಆಟಗಾರರಿಗೆ ವಿಶ್ರಾಂತಿಯ ಪ್ರಾಮುಖ್ಯತೆ ವಿವರಿಸಿದ ರೋಹಿತ್ ಶರ್ಮಾ

ಪ್ರೈಮ್ ವಿಡಿಯೋಗೆ ನೀಡಿದ ಸಂದರ್ಶನದಲ್ಲಿ ರಿಷಭ್ ಪಂತ್, ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ತಾನು ರನ್ ಗಳಿಸುತ್ತಿಲ್ಲ ಎಂದು ಭಾವಿಸುತ್ತೇನೆ ಮತ್ತು ಅವಕಾಶಗಳನ್ನು ಬಾಚಿಕೊಳ್ಳಲು ತನಗೆ ಇನ್ನೂ ವಯಸ್ಸಿದೆ ಎಂದು ಹೇಳಿದ್ದರು. ಆಡುವ 11ರಲ್ಲಿ ಸಂಜು ಸ್ಯಾಮ್ಸನ್ ಸ್ಥಾನಕ್ಕಾಗಿ ರಿಷಭ್ ಪಂತ್ ನಿರಂತರವಾಗಿ ಟ್ರೋಲ್‌ಗೆ ಒಳಗಾಗಿದ್ದಾರೆ.

ಬಾಂಗ್ಲಾದೇಶ ಮತ್ತು ಭಾರತ ತಂಡಗಳ ಆಡುವ 11ರ ಬಳಗ
ಭಾರತ: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಮೊಹಮ್ಮದ್ ಸಿರಾಜ್, ಕುಲದೀಪ್ ಸೇನ್ (ಪದಾರ್ಪಣೆ).

ಬಾಂಗ್ಲಾದೇಶ: ಲಿಟನ್ ದಾಸ್ (ನಾಯಕ), ಅನಾಮುಲ್ ಹಕ್, ನಜ್ಮುಲ್ ಹೊಸೈನ್ ಶಾಂಟೊ, ಶಕೀಬ್ ಅಲ್ ಹಸನ್, ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಮಹಮ್ಮದುಲ್ಲಾ, ಅಫೀಫ್ ಹೊಸೈನ್, ಮೆಹಿದಿ ಹಸನ್, ಹಸನ್ ಮಹಮ್ಮದ್, ಮುಸ್ತಾಫಿಜುರ್ ರೆಹಮಾನ್, ಎಬಾಡೋತ್ ಹೊಸೈನ್.

For Quick Alerts
ALLOW NOTIFICATIONS
For Daily Alerts
Story first published: Sunday, December 4, 2022, 12:27 [IST]
Other articles published on Dec 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X