ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs BAN 1st Test: ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು; ಸರಣಿಯಲ್ಲಿ ಮುನ್ನಡೆ

IND vs BAN 1st Test: India Defeat Bangladesh by 188 Runs In 1st Test Match To Take 1-0 Lead

ಚಟ್ಟೋಗ್ರಾಮ್‌ನಲ್ಲಿ ಭಾನುವಾರ ನಡೆದ 2 ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯದ ಐದನೇ ದಿನದಂದು ಬಾಂಗ್ಲಾದೇಶ ತಂಡವನ್ನು 188 ರನ್‌ಗಳಿಂದ ಸೋಲಿಸಿದ ಕೆಎಲ್ ರಾಹುಲ್ ನಾಯಕತ್ವದ ಭಾರತ ತಂಡ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.

ಎಡಗೈ ಲೆಗ್ ಸ್ಪಿನ್ನರ್ ಕುಲದೀಪ್ ಯಾದವ್ ಮೊದಲ ಇನಿಂಗ್ಸ್‌ನಲ್ಲಿ ಐದು ವಿಕೆಟ್ ಸೇರಿದಂತೆ 8 ವಿಕೆಟ್, ಚೇತೇಶ್ವರ್ ಪೂಜಾರ ಅವರ 90 ಮತ್ತು ಅಜೇಯ 102 ರನ್ ಮತ್ತು ಶುಭಮನ್ ಗಿಲ್ ಅವರ 110 ರನ್‌ಗಳ ಸಹಾಯದಿಂದ ಭಾರತ ತಂಡ ಆತಿಥೇಯ ಬಾಂಗ್ಲಾದೇಶ ತಂಡದ ನಾಯಕ ಶಕೀಬ್ ಅಲ್ ಹಸನ್ ಅವರ ಪ್ರತಿದಾಳಿಯ ಹೊರತಾಗಿಯೂ 188 ರನ್‌ಗಳಿಂದ ಮಣಿಸಿತು.

IND vs BAN 1st Test: ಪದಾರ್ಪಣೆ ಮಾಡಿ 2 ವರ್ಷಗಳ ನಂತರ ಚೊಚ್ಚಲ ಟೆಸ್ಟ್ ಶತಕ ಬಾರಿಸಿದ ಶುಭಮನ್ ಗಿಲ್IND vs BAN 1st Test: ಪದಾರ್ಪಣೆ ಮಾಡಿ 2 ವರ್ಷಗಳ ನಂತರ ಚೊಚ್ಚಲ ಟೆಸ್ಟ್ ಶತಕ ಬಾರಿಸಿದ ಶುಭಮನ್ ಗಿಲ್

6 ವಿಕೆಟ್‌ಗೆ 272 ರನ್‌ಗಳಿಂದ ಐದನೇ ದಿನ ಆರಂಭಿಸಿದ ಬಾಂಗ್ಲಾದೇಶ ತಂಡ ಬೆಳಗಿನ ಅವಧಿಯಲ್ಲಿ ಕೇವಲ 52 ರನ್‌ಗಳಿಗೆ ತನ್ನ ಕೊನೆಯ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು 324 ರನ್‌ಗಳಿಗೆ ಆಲೌಟ್ ಆಯಿತು.

ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ

ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ

ಭಾರತ ತಂಡ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿಲ್ಲದೆ, ಹೆಚ್ಚು ಮುಖ್ಯವಾಗಿ ಮೌಲ್ಯಯುತವಾದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಗಳನ್ನು ಗಳಿಸಿದೆ. ಇದು 2023ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಸ್ಥಾನಕ್ಕಾಗಿ ಭಾರತವನ್ನು ಸ್ಪರ್ಧೆಯಲ್ಲಿ ಇರಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಕೆಎಲ್ ರಾಹುಲ್ ನಾಯಕತ್ವದ ಭಾರತ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಆತಿಥೇಯ ತಂಡದ ವಿರುದ್ಧ 404 ರನ್ ಗಳಿಸಿದ್ದರು.

ಕುಲದೀಪ್ ಯಾದವ್ 40 ರನ್‌ಗಳಿಗೆ 5 ವಿಕೆಟ್‌

ಕುಲದೀಪ್ ಯಾದವ್ 40 ರನ್‌ಗಳಿಗೆ 5 ವಿಕೆಟ್‌

ನಂತರ ಭಾರತ ತಂಡದ ಅತ್ಯುತ್ತಮ ಬೌಲಿಂಗ್‌ನಿಂದಾಗಿ ಬಾಂಗ್ಲಾದೇಶ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 150 ರನ್‌ಗಳಿಗೆ ಆಲೌಟ್ ಆಯಿತು. ಈ ವೇಳೆ ಕುಲದೀಪ್ ಯಾದವ್ 40 ರನ್‌ಗಳಿಗೆ 5 ವಿಕೆಟ್‌ ಪಡೆದು ಮಿಂಚಿದರು.

ಮೊದಲ ಇನ್ನಿಂಗ್ಸ್‌ನಲ್ಲಿ 254 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿದ ನಂತರ, ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡ 2 ವಿಕೆಟ್ ನಷ್ಟಕ್ಕೆ 258 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡು, ಆತಿಥೇಯ ಬಾಂಗ್ಲಾದೇಶ ತಂಡಕ್ಕೆ 513 ರನ್‌ಗಳ ಗುರಿ ನೀಡಿತು.

324 ರನ್‌ಗಳಿಗೆ ಅಲೌಟ್ ಆದ ಭಾರತ

324 ರನ್‌ಗಳಿಗೆ ಅಲೌಟ್ ಆದ ಭಾರತ

ಎರಡನೇ ಇನ್ನಿಂಗ್ಸ್‌ನಲ್ಲಿ ಶಕೀಬ್ ಅಲ್ ಹಸನ್ ಅವರ 84 ರನ್‌ಗಳ ಬ್ಯಾಟಿಂಗ್ ಪ್ರದರ್ಶನ ನೀಡಿದರೂ, ಅವರಿಗೆ ಮತ್ತೊಂದು ಕಡೆ ಉತ್ತಮ ಸಾಥ್ ನೀಡದ ಕಾರಣ ಭಾರತದ ಅತ್ಯುತ್ತಮ ಬೌಲಿಂಗ್ ಪ್ರದರ್ಶನದ ವಿರುದ್ಧ 324 ರನ್‌ಗಳಿಗೆ ಅಲೌಟ್ ಆಯಿತು.

ಭಾರತದ ಪರ ಬೌಲಿಂಗ್‌ನಲ್ಲಿ ಅಕ್ಷರ್ ಪಟೇಲ್ ಅಂತಿಮ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದೇಶದ ನಾಲ್ಕು ವಿಕೆಟ್‌ ಪಡೆದರೆ, ಕುಲದೀಪ್ ಯಾದವ್ ಮೂರು ವಿಕೆಟ್ ಪಡೆದು ಮಿಂಚಿದರು. ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯ ಡಿಸೆಂಬರ್ 22ರಂದು ಮೀರ್‌ಪುರದಲ್ಲಿ ನಡೆಯಲಿದೆ.

Story first published: Sunday, December 18, 2022, 10:25 [IST]
Other articles published on Dec 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X