
ಸೋಲಿನ ಭೀತಿಯಲ್ಲಿದ್ದ ಟೀಂ ಇಂಡಿಯಾ
145 ರನ್‌ಗಳ ಗುರಿಯನ್ನು ಬೆನ್ನತ್ತಿದ ಟೀಂ ಇಂಡಿಯಾ 74 ರನ್ ಗಳಿಸುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಯಲ್ಲಿ ಸಿಲುಕಿತು. ಪ್ರಮುಖ ಬ್ಯಾಟರ್ ಗಳು ಕೈಕೊಟ್ಟ ಕಾರಣ ಭಾರತ ತಂಡ ಗೆಲ್ಲುವುದು ಕಷ್ಟ ಎನ್ನುವಂತಾಗಿತ್ತು.
ಶುಭಮನ್ ಗಿಲ್ (7), ಕೆಎಲ್ ರಾಹುಲ್ (2), ಚೇತೇಶ್ವರ ಪೂಜಾರ (6), ವಿರಾಟ್ ಕೊಹ್ಲಿ (1), ರಿಷಬ್ ಪಂತ್ (9), ಜಯದೇವ್ ಉನಾದ್ಕತ್ (13) ರನ್ ಗಳಿಸಿ ಔಟಾದರು. 34 ರನ್ ಗಳಿಸಿದ್ದ ಅಕ್ಷರ್ ಪಟೇಲ್ ಕೂಡ ಔಟಾಗುವ ಮೂಲಕ ಭಾರತದ ಸೋಲಿನ ಭೀತಿ ಹೆಚ್ಚಾಗಿತ್ತು. ಮೆಹಿದಿ ಹಸನ್ ಮೀರಜ್ 5 ವಿಕೆಟ್ ಪಡೆಯುವ ಮೂಲಕ ಭಾರತದ ಬ್ಯಾಟರ್ ಗಳನ್ನು ಕಾಡಿದರು.
Ind vs Ban 2nd Test: ಬಾಂಗ್ಲಾದೇಶದಲ್ಲಿ ಮುಂದುವರಿದ ಕೆಎಲ್ ರಾಹುಲ್ ಕಳಪೆ ಆಟ

ಅಶ್ವಿನ್-ಅಯ್ಯರ್ ದಾಖಲೆಯ ಜೊತೆಯಾಟ
ಒತ್ತಡದ ನಡುವೆ ಕ್ರೀಸ್‌ಗೆ ಬಂದ ಶ್ರೇಯಸ್ ಅಯ್ಯರ್ ಮತ್ತು ರವಿಚಂದ್ರನ್ ಅಶ್ವಿನ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ರವಿಚಂದ್ರನ್ ಅಶ್ವಿನ್ 62 ಎಸೆತಗಳಲ್ಲಿ ಅಜೇಯ 42 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಮತ್ತು ಒಂದು ಭರ್ಜರಿ ಸಿಕ್ಸರ್ ಸೇರಿತ್ತು.
ಅಶ್ವಿನ್‌ಗೆ ಉತ್ತಮವಾಗಿ ಜೊತೆಯಾದ ಶ್ರೇಯಸ್ ಅಯ್ಯರ್ ಕೂಡ ಜವಾಬ್ದಾರಿಯುತ ಇನ್ನಿಂಗ್ಸ್ ಆಡಿದರು. 46 ಎಸೆತಗಳಲ್ಲಿ 4 ಬೌಂಡರಿ ಸಹಿತ ಅಜೇಯ 29 ರನ್ ಗಳಿಸಿದರು. 8ನೇ ವಿಕೆಟ್‌ಗೆ ಈ ಜೋಡಿ ಅಜೇಯ 71 ರನ್ ಗಳಿಸುವ ಮೂಲಕ ಭಾರತಕ್ಕೆ ಅಮೋಘ ಜಯ ತಂದುಕೊಟ್ಟರು.

ಸರಣಿ ವೈಟ್ ವಾಶ್
ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತ 2-0 ಅಂತರದಲ್ಲಿ ಜಯ ಸಾಧಿಸುವ ಮೂಲಕ ಸರಣಿ ವೈಟ್‌ವಾಶ್ ಮಾಡಿದೆ. ಈ ಗೆಲುವಿನ ಮೂಲಕ ವಿಶ್ವಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಹಾದಿಯನ್ನು ಮತ್ತಷ್ಟು ಸುಲಭವಾಗಿಸಿಕೊಂಡಿದೆ.
2ನೇ ಟೆಸ್ಟ್‌ನಲ್ಲಿ ಒಟ್ಟು 6 ವಿಕೆಟ್ ಪಡೆದು, ಎರಡನೇ ಇನ್ನಿಂಗ್ಸ್‌ನಲ್ಲಿ 42 ರನ್ ಗಳಿಸಿ ಗೆಲುವಿಗೆ ಕಾರಣವಾದ ಆರ್ ಅಶ್ವಿನ್ ಪಂದ್ಯದ ಆಟಗಾರ ಪ್ರಶಸ್ತಿ ಪಡೆದರು. ಸರಣಿಯಲ್ಲಿ ಶತಕ ಗಳಿಸುವ ಮೂಲಕ ಮಿಂಚಿದ್ದ ಚೇತೇಶ್ವರ ಪೂಜಾರ ಸರಣಿ ಆಟಗಾರ ಪ್ರಶಸ್ತಿ ಪಡೆದುಕೊಂಡರು.