2023 ರ ಐಪಿಎಲ್ ಮಿನಿ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡ ಆಸ್ಟ್ರೇಲಿಯಾದ ಆಲ್‌ರೌಂಡರ್ ಕ್ಯಾಮೆರೂನ್ ಗ್ರೀನ್‌ರನ್ನು 17.50 ಕೋಟಿ ರುಪಾಯಿ ನೀಡಿ ಖರೀದ ಮಾಡುವ ಮೂಲಕ ತಂಡದ ಶಕ್ತಿಯನ್ನು ಹೆಚ್ಚಿಸಿಕೊಂಡಿದೆ.
ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್ ವಿಭಾಗ ಸಾಕಷ್ಟು ಶಕ್ತಿಯುತವಾಗಿದೆ. ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಟ್ರಿಸ್ಟನ್ ಸ್ಟಬ್ಸ್, ಇಶಾನ್ ಕಿಶನ್, ಟಿಮ್ ಡೇವಿಡ್, ಕ್ಯಾಮೆರೂನ್ ಗ್ರೀನ್ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ.
IPL Auction 2023: ಕೆಲಸ ಹುಡುಕಲು ಕೆನಡಾಗೆ ಹೊರಟಿದ್ದ ಅವಿನಾಶ್ ಸಿಂಗ್ ಆರ್ಸಿಬಿ ಸೇರಿದ್ದು ಹೇಗೆ?
ಬ್ಯಾಟಿಂಗ್ ವಿಭಾಗ ಉತ್ತಮವಾಗಿದ್ದರು ಕೂಡ ಮುಂಬೈ ಇಂಡಿಯನ್ಸ್ ಬೌಲಿಂಗ್ ವಿಭಾಗ ದುರ್ಬಲವಾಗಿದೆ ಎಂದು ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಹೇಳಿದ್ದಾರೆ. 2023ರ ಆವೃತ್ತಿಯಲ್ಲಿ ತಂಡದ ಬೌಲಿಂಗ್ ವಿಭಾಗ ರೋಹಿತ್ ಶರ್ಮಾ ಆತಂಕಕ್ಕೆ ಕಾರಣವಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
2022ರ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ 14 ಪಂದ್ಯಗಳಲ್ಲಿ ಕೇವಲ 4 ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಅಲಂಕರಿಸಿತು. ಕಳೆದ ಆವೃತ್ತಿಯಲ್ಲಿ ಬೌಲಿಂಗ್ ತಂಡದ ಪ್ರಮುಖ ಸಮಸ್ಯೆಯಾಗಿತ್ತು. ಬುಮ್ರಾ ಹೊರತಾಗಿ ಇತರ ಯಾವುದೇ ಬೌಲರ್ ಕೂಡ ಉತ್ತಮ ಪ್ರದರ್ಶನ ನೀಡಿರಲಿಲ್ಲ.
ಇದನ್ನು ಗಮನದಲ್ಲಿಟ್ಟುಕೊಂಡ ಮುಂಬೈ ಇಂಡಿಯನ್ಸ್ ಮಿನಿ ಹರಾಜಿನಲ್ಲಿ ಒಟ್ಟು 8 ಆಟಗಾರರನ್ನು ಖರೀದಿ ಮಾಡಿದ್ದಾರೆ. 2023ರ ಸೀಸನ್‌ಗಾಗಿ ಮುಂಬೈ ಇಂಡಿಯನ್ಸ್ ಒಟ್ಟು 24 ಆಟಗಾರರ ಉತ್ತಮ ತಂಡವನ್ನು ಹೊಂದಿದೆ.
ಬೌಲಿಂಗ್ ವಿಭಾಗ ಸಮಸ್ಯೆಯಾಗುವ ಸಾಧ್ಯತೆ
ಮುಂಬೈ ಇಂಡಿಯನ್ಸ್ ಐಪಿಎಲ್ 2022 ರಲ್ಲಿ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಅವರನ್ನು 8 ಕೋಟಿ ರುಪಾಯಿಗೆ ಖರೀದಿಸಿದೆ. ಗಾಯದ ಕಾರಣ ಕಳೆದ ವರ್ಷ ಸಂಪೂರ್ಣ ಆವೃತ್ತಿಯನ್ನು ಕಳೆದುಕೊಂಡಿದ್ದರೂ ಫ್ರಾಂಚೈಸಿ ಅವರನ್ನು ಉಳಿಸಿಕೊಂಡಿದೆ.
ಬುಮ್ರಾ, ಆರ್ಚರ್ ತಂಡದಲ್ಲಿದ್ದರೂ ಕೂಡ ಬೌಲಿಂಗ್ ಅವರ ಸಮಸ್ಯೆಯಾಗಬಹುದು. ಬುಮ್ರಾ ಬೆನ್ನಿನ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಗಾಯದಿಂದ ಮರಳಿದ ನಂತರ ಬುಮ್ರಾ ಮತ್ತು ಆರ್ಚರ್ ಎಷ್ಟು ಪರಿಣಾಮಕಾರಿಯಾಗಿರುತ್ತಾರೆ ಎನ್ನುವ ಖಾತ್ರಿಯಿಲ್ಲ. ಇದೇ ಕಾರಣಕ್ಕಾಗಿ 2023 ರ ಮುಂದಿನ ಆವೃತ್ತಿಯಲ್ಲಿ ಅವರ ಬೌಲಿಂಗ್ ದುರ್ಬಲವಾಗಿದೆ ಎನ್ನಿಸುತ್ತದೆ ಎಂದು ವಾಸಿಂ ಜಾಫರ್ ಹೇಳಿದ್ದಾರೆ.
"ವೇಗದ ಬೌಲರ್‌ಗಳ ಫಿಟ್‌ನೆಸ್ ಬಗ್ಗೆ ಪ್ರಶ್ನಾರ್ಥಕ ಚಿಹ್ನೆ ಇದೆ. ಜೋಫ್ರಾ ಆರ್ಚರ್ ಬಹಳ ಸಮಯದ ನಂತರ ಕ್ರಿಕೆಟ್‌ಗೆ ಮರಳಲಿದ್ದಾರೆರೆ, ಬುಮ್ರಾ ಕೂಡ ಹಲವು ತಿಂಗಳ ನಂತರ ಬೌಲಿಂಗ್ ಮಾಡಲಿದ್ದಾರೆ. ಇವರಿಬ್ಬರೂ ತಮ್ಮ ಲಯ ಕಂಡುಕೊಂಡರೂ ಮುಂಬೈ ಇಂಡಿಯನ್ಸ್ ತಂಡಕ್ಕೆ ಸ್ಪಿನ್ ಬೌಲರ್ ಯಾರಿದ್ದಾರೆ" ಎಂದು ಪ್ರಶ್ನೆ ಮಾಡಿದರು.
ಬ್ಯಾಟಿಂಗ್ ಮೇಲೆ ಹೆಚ್ಚಿನ ಅವಲಂಬನೆ
"ಮತ್ತೊಮ್ಮೆ ರೋಹಿತ್ ಶರ್ಮಾ ಬೌಲಿಂಗ್ ಬಗ್ಗೆ ಚಿಂತೆ ಮಾಡಬೇಕಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಬೌಲಿಂಗ್ ಸ್ವಲ್ಪ ದುರ್ಬಲವಾಗಿ ಕಾಣುತ್ತದೆ ಆದರೆ ಅದನ್ನು ಹೊರತುಪಡಿಸಿ, ಅವರು ತಮ್ಮ ಬ್ಯಾಟಿಂಗ್ ಮೇಲೆ ಹೆಚ್ಚು ಅವಲಂಬಿತರಾಗುತ್ತಾರೆ" ಎಂದು ಜಾಫರ್ ಹೇಳಿದ್ದಾರೆ.