ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಾಂಗ್ಲಾ ವಿರುದ್ಧದ ಏಕದಿನ ಸರಣಿಯಿಂದ ಹೊರಬಿದ್ದ ನಂತರ ಮೊಹಮ್ಮದ್ ಶಮಿ ಮೊದಲ ಪ್ರತಿಕ್ರಿಯೆ

IND vs BAN: Mohammed Shami First Reaction After Being Ruled Out of the ODI Series Against Bangladesh

ಬಾಂಗ್ಲಾದೇಶ ಪ್ರವಾಸದ ಮೂರು ಪಂದ್ಯಗಳ ಏಕದಿನ ಸರಣಿಯಿಂದ ಹೊರಗುಳಿದ ನಂತರ, ಅನುಭವಿ ಭಾರತೀಯ ವೇಗಿ ಮೊಹಮ್ಮದ್ ಶಮಿ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ.

ಮೊಹಮ್ಮದ್ ಶಮಿ ತಮ್ಮ ಗಾಯದ ಬಗ್ಗೆ ತಮ್ಮ ಅಭಿಮಾನಿಗಳಿಗೆ ಸಾಮಾಜಿಕ ಮಾಧ್ಯಮ ಟ್ವಿಟ್ಟರ್‌ನೊಂದಿಗೆ ಸಂದೇಶ ಹಂಚಿಕೊಂಡರು. ಅವರು ತಮ್ಮ ಗಾಯದಿಂದ ಶೀಘ್ರ ಗುಣಮುಖರಾಗಿ ಇನ್ನೂ ಬಲವಾಗಿ ತಂಡಕ್ಕೆ ಮರಳಲಿದ್ದೇನೆ ಎಂದು ಹೇಳಿದರು.

ಯುಜ್ವೇಂದ್ರ ಚಹಾಲ್ ವೃತ್ತಿಜೀವನದ ಗ್ರಾಫ್ ಏರಲು ಕಾರಣ ಈ ನಾಯಕ; ಮಾಜಿ ಕ್ರಿಕೆಟಿಗಯುಜ್ವೇಂದ್ರ ಚಹಾಲ್ ವೃತ್ತಿಜೀವನದ ಗ್ರಾಫ್ ಏರಲು ಕಾರಣ ಈ ನಾಯಕ; ಮಾಜಿ ಕ್ರಿಕೆಟಿಗ

ಏಷ್ಯಾದ ಎರಡು ಪ್ರಬಲ ತಂಡಗಳ ನಡುವಿನ ಮೊದಲ ಏಕದಿನ ಪಂದ್ಯದ ಮುನ್ನಾದಿನದಂದು ಮೊಹಮ್ಮದ್ ಶಮಿ ಗಾಯದಿಂದಾಗಿ ತಂಡದಿಂದ ಹೊರಗುಳಿಯಬೇಕಾಯಿತು. ಇದು ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೂ ಶಮಿ ಅಲಭ್ಯರಾಗಬಹುದು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಗಾಯಗಳು ಇನ್ನಷ್ಟು ಬಲವಾಗಿ ಹಿಂತಿರುಗುವಂತೆ ಮಾಡುತ್ತವೆ

ಭುಜದ ಗಾಯದಿಂದ ಬಳಲುತ್ತಿರುವ ಮೊಹಮ್ಮದ್ ಶಮಿ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿದ್ದು, "ಸಾಮಾನ್ಯ ಗಾಯವಾಗಿದೆ, ಪ್ರತಿ ಕ್ಷಣವನ್ನು ಆನಂದಿಸಲು ನಿಮಗೆ ತಿಳಿಸುತ್ತೇನೆ. ನನ್ನ ವೃತ್ತಿಜೀವನದುದ್ದಕ್ಕೂ ನಾನು ಗಾಯದೊಂದಿಗೆ ಪಾಲನ್ನು ಹೊಂದಿದ್ದೇನೆ. ಇದು ಹಿತವಾಗಿದೆ ಮತ್ತು ಇದು ಹೊಸ ದೃಷ್ಟಿಕೋನವನ್ನು ನೀಡುತ್ತದೆ. ನಾನು ಎಷ್ಟು ಬಾರಿ ಗಾಯಗೊಂಡಿದ್ದರೂ, ನಾನು ಅದರಿಂದ ಪಾಠ ಕಲಿತಿದ್ದೇನೆ. ಗಾಯಗಳು ಇನ್ನಷ್ಟು ಬಲವಾಗಿ ಹಿಂತಿರುಗುವಂತೆ ಮಾಡುತ್ತವೆ," ಎಂದು ಮೊಹಮ್ಮದ್ ಶಮಿ ಟ್ವೀಟ್ ಮಾಡಿದ್ದಾರೆ.

ಈ ಕುರಿತು ಹೇಳಿಕೆಯನ್ನು ಬಿಡುಗಡೆ ಮಾಡಿರುವ ಬಿಸಿಸಿಐ, ಮೂರು ಪಂದ್ಯಗಳ ಏಕದಿನ ಸರಣಿಯ ಪೂರ್ವ ಸಮಯದಲ್ಲಿ ಮೊಹಮ್ಮದ್ ಶಮಿ ಭುಜದ ಗಾಯಕ್ಕೆ ಒಳಗಾಗಿದ್ದಾರೆ. ಭಾರತೀಯ ಕ್ರಿಕೆಟ್‌ನ ವೈದ್ಯಕೀಯ ಮೇಲ್ವಿಚಾರಣೆಯಲ್ಲಿರಲು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಗೆ ಕಳುಹಿಸಲಾಗಿದೆ ಎಂದು ಬಿಸಿಸಿಐ ಹೇಳಿದೆ.

ಮೊಹಮ್ಮದ್ ಶಮಿ ಬದಲಿಗೆ ಉಮ್ರಾನ್ ಮಲಿಕ್ ಆಡಲಿದ್ದಾರೆ

ಮೊಹಮ್ಮದ್ ಶಮಿ ಬದಲಿಗೆ ಉಮ್ರಾನ್ ಮಲಿಕ್ ಆಡಲಿದ್ದಾರೆ

ಇನ್ನು ಜಮ್ಮು ಮತ್ತು ಕಾಶ್ಮೀರದ ಯುವ ವೇಗಿ ಉಮ್ರಾನ್ ಮಲಿಕ್ ಅವರು ಬಾಂಗ್ಲಾದೇಶ ಪ್ರವಾಸಕ್ಕಾಗಿ ಭಾರತ ಏಕದಿನ ತಂಡದಲ್ಲಿ ಅನುಭವಿ ಮೊಹಮ್ಮದ್ ಶಮಿ ಬದಲಿಗೆ ಆಡಲಿದ್ದಾರೆ. ಅಖಿಲ ಭಾರತ ಹಿರಿಯ ಆಯ್ಕೆ ಸಮಿತಿಯು ಮೊಹಮ್ಮದ್ ಶಮಿ ಬದಲಿಗೆ ಉಮ್ರಾನ್ ಮಲಿಕ್ ಅವರನ್ನು ಹೆಸರಿಸಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶನಿವಾರ ದೃಢಪಡಿಸಿದೆ.

ಇತ್ತೀಚೆಗೆ ಮುಕ್ತಾಯಗೊಂಡ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಉಮ್ರಾನ್ ತಮ್ಮ ಚೊಚ್ಚಲ ಏಕದಿನ ಪಂದ್ಯವನ್ನು ಆಡಿದರು. ಈ ಸರಣಿಯನ್ನು ಭಾರತ ತಂಡ 1-0 ಅಂತರದಲ್ಲಿ ಸೋತಿತು.

ಉಮ್ರಾನ್ ಮಲಿಕ್ ತಮ್ಮ ಚೊಚ್ಚಲ ಪಂದ್ಯದಲ್ಲಿ 2 ವಿಕೆಟ್

ಉಮ್ರಾನ್ ಮಲಿಕ್ ತಮ್ಮ ಚೊಚ್ಚಲ ಪಂದ್ಯದಲ್ಲಿ 2 ವಿಕೆಟ್

ಆಡಿದ ಎರಡು ಪಂದ್ಯಗಳಲ್ಲಿ ಉಮ್ರಾನ್ ಮಲಿಕ್ 32.33ರ ಸರಾಸರಿಯಲ್ಲಿ ಮತ್ತು 6.46ರ ಎಕಾನಮಿಯಲ್ಲಿ ಮೂರು ವಿಕೆಟ್‌ಗಳನ್ನು ಗಳಿಸಿದರು. ಅವರು ತಮ್ಮ ಚೊಚ್ಚಲ ಏಕದಿನ ಪಂದ್ಯದಲ್ಲಿ 66 ರನ್‌ಗೆ 2 ವಿಕೆಟ್ ಪಡೆದರು.

ಇನ್ನು ಬಾಂಗ್ಲಾದೇಶದ ವಿರುದ್ಧ ಮೊದಲ ಏಕದಿನ ಪಂದ್ಯ ಭಾನುವಾರ ಢಾಕಾದಲ್ಲಿ ನಡೆಯಲಿದೆ. ನಂತರ ಎರಡನೇ ಪಂದ್ಯ ಡಿಸೆಂಬರ್ 7ರಂದು ಅದೇ ಸ್ಥಳದಲ್ಲಿ ನಡೆದರೆ, ಅಂತಿಮ ಪಂದ್ಯ ಡಿಸೆಂಬರ್ 10ರಂದು ಚಟ್ಟೋಗ್ರಾಮ್‌ನಲ್ಲಿ ನಡೆಯಲಿದೆ. ನಂತರ, ಎರಡು ಪಂದ್ಯಗಳ ಟೆಸ್ಟ್ ಸರಣಿ ಡಿಸೆಂಬರ್ 14ರಂದು ಆರಂಭವಾಗಲಿದ್ದು, ಎರಡನೇ ಟೆಸ್ಟ್ ಡಿಸೆಂಬರ್ 19ರಂದು ನಡೆಯಲಿದೆ.

ಬಾಂಗ್ಲಾದೇಶ ಏಕದಿನ ಸರಣಿಗೆ ಭಾರತ ತಂಡ

ಬಾಂಗ್ಲಾದೇಶ ಏಕದಿನ ಸರಣಿಗೆ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಶ್ರೇಯಸ್ ಅಯ್ಯರ್, ರಾಹುಲ್ ತ್ರಿಪಾಠಿ, ರಿಷಭ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಶಹಬಾಜ್ ಅಹ್ಮದ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ದೀಪಕ್ ಚಾಹರ್, ಕುಲದೀಪ್ ಸೇನ್, ಉಮ್ರಾನ್ ಮಲಿಕ್.

Story first published: Saturday, December 3, 2022, 16:20 [IST]
Other articles published on Dec 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X