
ಟೀಂ ಇಂಡಿಯಾ ಓಪನರ್ಸ್ ಯಾರು?
ಟಿ20 ವಿಶ್ವಕಪ್‌ನಲ್ಲಿ ಭಾರತದ ಓಪನರ್ಸ್ ವೇಗವಾಗಿ ರನ್ ಕಲೆಹಾಕಲು ತಡಬಡಾಯಿಸಿದರು. ಇಡೀ ಟೂರ್ನಮೆಂಟ್‌ನಲ್ಲಿ ಪವರ್‌ಪ್ಲೇ ಓವರ್‌ಗಳಲ್ಲಿ ಭಾರತದ ರನ್‌ರೇಟ್ ಉಳಿದೆಲ್ಲಾ ತಂಡಗಳಿಗಿಂತ ಕಡಿಮೆಯಿದೆ. ಹೀಗಾಗಿ ಸಾಕಷ್ಟು ಟೀಕೆಗೆ ಒಳಗಾಗಿದ್ದ ನಾಯಕ ರೋಹಿತ್ ಶರ್ಮಾ ಮತ್ತು ಕೆ.ಎಲ್ ರಾಹುಲ್ ಈ ಸರಣಿಯಿಂದ ಹೊರಗುಳಿದಿದ್ದಾರೆ.
ಹಿರಿಯ ಆಟಗಾರರ ಅಲಭ್ಯತೆ ಹಿನ್ನಲೆಯಲ್ಲಿ ನ್ಯೂಜಿಲೆಂಡ್ ವಿರುದ್ಧ ಯಾರು ಇನ್ನಿಂಗ್ಸ್ ಆರಂಭಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. 6 ಆಟಗಾರರು ಓಪನಿಂಗ್ ಬ್ಯಾಟಿಂಗ್ ಮಾಡಲು ರೇಸ್‌ನಲ್ಲಿದ್ದಾರೆ. ರಿಷಭ್ ಪಂತ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ ಪ್ರಮುಖ ಸ್ಪರ್ಧಿಗಳಾಗಿದ್ದಾರೆ. ಸಂಜು ಸ್ಯಾಮ್ಸನ್‌ಗೆ ಮತ್ತೊಂದು ಅವಕಾಶ ನೀಡಿದ್ದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲು ಹಾತೊರೆಯುತ್ತಿದ್ದಾರೆ.
Ind vs Nz 2nd T20I: 2ನೇ ಟಿ20 ಪಂದ್ಯಕ್ಕೂ ಮಳೆ ಭೀತಿ, ಪಂದ್ಯದ ಸಮಯ ಬದಲಾವಣೆ ಸಾಧ್ಯತೆ

ಯುಜವೇಂದ್ರ ಚಹಾಲ್‌ಗೆ ಈಗಲಾದ್ರೂ ಅವಕಾಶ ಸಿಗುತ್ತಾ?
ಆಸ್ಟ್ರೇಲಿಯಾದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಟೂರ್ನಿಯುದ್ದಕ್ಕೂ ಬರೀ ಬೆಂಚ್‌ನಲ್ಲೇ ಕಳೆದಂತಹ ಲೆಗ್ ಸ್ಪಿನ್ನರ್ ಯುಜವೇಂದ್ರ ಚಹಾಲ್ ಕಿವೀಸ್ ವಿರುದ್ಧ ಎರಡನೇ ಟಿ20 ಪಂದ್ಯದಲ್ಲಿ ಭಾರತದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ಪಡೆಯಲು ಎದುರು ನೋಡುತ್ತಿದ್ದಾರೆ.
ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 69 ಪಂದ್ಯಗಳನ್ನು ಆಡಿರುವ ಚಹಾಲ್ 85 ವಿಕೆಟ್‌ಗಳನ್ನ ಕಬಳಿಸಿದ್ದಾರೆ. 8.12 ಎಕಾನಮಿ, 24.65ರ ಸರಾಸರಿಯಲ್ಲಿ ಬೌಲಿಂಗ್ ಮಾಡಿರುವ ಚಹಾಲ್ ಬೆಸ್ಟ್ ಬೌಲಿಂಗ್ 6/25 ಆಗಿದೆ.
ಟಿ20 ವಿಶ್ವಕಪ್‌ನಲ್ಲಿ ಭಾರತ ಸೆಮಿಫೈನಲ್ ತಲುಪಿರುವುದು ಕೂಡ ದೊಡ್ಡ ಸಾಧನೆ ಎಂದ ಕ್ರಿಕೆಟಿಗ

ಟೀಂ ಇಂಡಿಯಾಗೆ ಉಮ್ರಾನ್ ಮಲಿಕ್ ಕಂಬ್ಯಾಕ್
ಭಾರತದ ಅತ್ಯಂತ ವೇಗದ ಬೌಲರ್ ಎಂದೇ ಗುರುತಿಸಿಕೊಂಡಿರುವ ಜಮ್ಮು & ಕಾಶ್ಮೀರದ ಎಕ್ಸ್‌ಪ್ರೆಸ್ ಉಮ್ರಾನ್ ಮಲಿಕ್ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸದ ಬಳಿಕ ಭಾರತ ತಂಡದಲ್ಲಿ ಸ್ಥಾನವನ್ನು ಪಡೆದಿದ್ದಾರೆ. ಐರ್ಲೆಂಡ್ ವಿರುದ್ಧದ ಚೊಚ್ಚಲ ಟಿ20 ಸರಣಿಯಲ್ಲಿ ಉಮ್ರಾನ್ ತನ್ನ ಅತ್ಯುತ್ತಮ ಪ್ರದರ್ಶನ ತೋರಲು ಸಾಧ್ಯವಾಗಲಿಲ್ಲ. ಆದ್ರೆ ಇಂದು ಉಮ್ರಾನ್ ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ಪಡೆಯುವ ಸಾಧ್ಯತೆಯಿದೆ. ಹಾಗೇನಾದ್ರೂ ಆದಲ್ಲಿ ಭುವನೇಶ್ವರ್ ಕುಮಾರ್ ಅಥವಾ ಮೊಹಮ್ಮದ್ ಸಿರಾಜ್ ಪ್ಲೇಯಿಂಗ್ ಇಲೆವೆನ್‌ನಿಂದ ಹೊರಗುಳಿಯಲಿದ್ದಾರೆ.

ಭಾರತ vs ನ್ಯೂಜಿಲೆಂಡ್ ಸಂಭಾವ್ಯ ಪ್ಲೇಯಿಂಗ್ 11
ಟೀಂ ಇಂಡಿಯಾ ಪ್ಲೇಯಿಂಗ್ 11: ಶುಭಮನ್ ಗಿಲ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್, ಯುಜವೇಂದ್ರ ಚಹಾಲ್, ಅರ್ಷ್‌ದೀಪ್ ಸಿಂಗ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್
ನ್ಯೂಜಿಲೆಂಡ್ ಪ್ಲೇಯಿಂಗ್ 11: ಫಿನ್ ಅಲೆನ್, ಡೆವೊನ್ ಕಾನ್ವೆ (ವಿಕೆಟ್ ಕೀಪರ್), ಕೇನ್ ವಿಲಿಯಮ್ಸನ್ (ನಾಯಕ), ಗ್ಲೆನ್ ಫಿಲಿಪ್ಸ್, ಡೆರಿಲ್ ಮಿಚೆಲ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಲ್ಯೂಕಿ ಫರ್ಗುಸನ್, ಟಿಮ್ ಸೌಥಿ, ಇಶ್ ಸೋದಿ, ಆ್ಯಡಂ ಮಿಲ್ನೆ