ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind vs Nz 2nd T20I: 2ನೇ ಟಿ20 ಪಂದ್ಯಕ್ಕೂ ಮಳೆ ಭೀತಿ, ಪಂದ್ಯದ ಸಮಯ ಬದಲಾವಣೆ ಸಾಧ್ಯತೆ

India vs New zealand 2nd T20I

ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಇಂದು (ನವೆಂಬರ್ 20) ಎರಡನೇ ಟಿ20 ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದೆ. ಮೌಂಟ್ ಮೌಂಗನ್ಯುಯಿಯ ಬೇ ಓವಲ್ ಮೈದಾನವು ಚುಟುಕು ಪಂದ್ಯಕ್ಕೆ ಸಾಕ್ಷಿಯಾಗಲಿದ್ದು, ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಹೆಚ್ಚಿದೆ.

ವೆಲ್ಲಿಂಗ್ಟನ್‌ನಲ್ಲಿ ನಡೆಯಬೇಕಿದ್ದ ಮೊದಲ ಟಿ20 ಪಂದ್ಯವು ಒಂದು ಎಸೆತವನ್ನೂ ಕಾಣದೆ ಮಳೆಯಿಂದಾಗಿ ರದ್ದಾಯಿತು. ಇದು ಎರಡನೇ ಟಿ20 ಪಂದ್ಯವೂ ಸಹ ಇದ್ರಿಂದ ಹೊರತಾಗಿಲ್ಲ. ಮೌಂಟ್ ಮೌಂಗನ್ಯುಯಿಯಲ್ಲಿ ಮಳೆಯ ಭೀತಿ ಎದುರಾಗಿದ್ದು, ಪಂದ್ಯವು ನಿಧಾನವಾಗಿ ಆರಂಭವಾಗುವ ಸಾಧ್ಯತೆಯಿದೆ.

ಹವಾಮಾನ ವರದಿ

ಹವಾಮಾನ ವರದಿ

ಮೊದಲ ಟಿ20 ಪಂದ್ಯವು ಮಳೆಯಲ್ಲಿ ಕೊಚ್ಚಿ ಹೋದ ಬಳಿಕ ಮೌಂಟ್ ಮೌಂಗನ್ಯುಯಿಯಲ್ಲಿ ನಡೆಯಬೇಕಿರುವ ಎರಡನೇ ಟಿ20 ಪಂದ್ಯಕ್ಕೂ ಮಳೆ ಭೀತಿ ಎದುರಾಗಿದೆ. ಈಗಾಗಲೇ ಬೇ ಓವಲ್ ಮೈದಾನ ತಲುಪಿರುವ ಉಭಯ ತಂಡಗಳಿಗೆ ಪಂದ್ಯ ಪೂರ್ವ ಅಭ್ಯಾಸಕ್ಕೆ ಮಳೆ ಅಡ್ಡಿಪಡಿಸಿದೆ.

ಭಾನುವಾರ ನಡೆಯಲಿರುವ ಪಂದ್ಯಕ್ಕೂ ಹವಾಮಾನ ವರದಿ ಪ್ರಕಾರ ಮಳೆ ಅಡ್ಡಿಪಡಿಸುವ ಸಾಧ್ಯತೆಯಿದೆ. ಪಂದ್ಯದ ವೇಳೆಯಲ್ಲಿ ಶೇಕಡಾ 64ರಷ್ಟು ಮಳೆ ಬರುವ ಸಾಧ್ಯತೆಯಿದ್ದು, ಇಲ್ಲಿನ ವಾತಾವರಣವು 14 ಡಿಗ್ರಿ ಸೆಲ್ಸಿಯಸ್‌ನಷ್ಟು ಇರಲಿದೆ ಎನ್ನಲಾಗಿದೆ. ಇನ್ನು ಶೇಕಡಾ 83ರಷ್ಟು ಹ್ಯುಮಿಡಿಟಿ ಇರಲಿದ್ದು, ಗಂಟೆಗೆ 13/km ವೇಗದಲ್ಲಿ ಗಾಳಿ ಬೀಸಲಿದೆ.

ಸುದೀರ್ಘ 128 ವರ್ಷಗಳ ಬಳಿಕ ಒಲಿಂಪಿಕ್ಸ್‌ಗೆ ಕ್ರಿಕೆಟ್?: 6 ತಂಡಗಳ ಟೂರ್ನಿಗೆ ಐಸಿಸಿ ಪ್ರಸ್ತಾಪ

ಭಾರತ vs ನ್ಯೂಜಿಲೆಂಡ್ ಪಂದ್ಯದ ನೇರಪ್ರಸಾರ ಸಮಯ

ಭಾರತ vs ನ್ಯೂಜಿಲೆಂಡ್ ಪಂದ್ಯದ ನೇರಪ್ರಸಾರ ಸಮಯ

ಭಾರತ ಮತ್ತು ನ್ಯೂಜಿಲೆಂಡ್ ಟಿ20 ಸರಣಿಯು ಅಮೆಜಾನ್ ಪ್ರೈಮ್ ವೀಡಿಯೋ ನೇರ ಪ್ರಸಾರದ ಹಕ್ಕು ಪಡೆದುಕೊಂಡಿದ್ದು, ಪ್ರೈಮ್ ಆ್ಯಪ್ ಮೂಲಕ ಪಂದ್ಯವನ್ನು ವೀಕ್ಷಿಸಬಹುದು. ಇದೇ ಮೊದಲ ಬಾರಿಗೆ ಭಾರತದ ಕ್ರಿಕೆಟ್‌ ಸರಣಿಯನ್ನು ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ ನೇರ ಪ್ರಸಾರ ಮಾಡಲಾಗುತ್ತಿದೆ. ಎರಡನೇ ಟಿ20 ಪಂದ್ಯವನ್ನು ವೀಕ್ಷಿಸಲು ಚಂದಾದಾರಿಕೆಯ ಅಗತ್ಯವಿದೆ.

ಇನ್ನು ಭಾರತ ವರ್ಸಸ್ ನ್ಯೂಜಿಲೆಂಡ್ ಎರಡನೇ ಟಿ20 ಪಂದ್ಯವನ್ನು ಕೇವಲ ಒಂದು ಟಿವಿ ಚಾನೆಲ್‌ನಲ್ಲಿ ಪ್ರಸಾರ ಮಾಡಲಾಗುವುದು. ದೂರದರ್ಶನ್ ಸ್ಪೋರ್ಟ್ಸ್ ಭಾರತೀಯ ಅಭಿಮಾನಿಗಳಿಗೆ ಪಂದ್ಯದ ನೇರ ಪ್ರಸಾರ ಒದಗಿಸಲಿದೆ. ನ್ಯೂಜಿಲೆಂಡ್ ಸೇರಿದಂತೆ, ವೆಸ್ಟ್ ಇಂಡೀಸ್ ಹಾಗೂ ಇತರೆ ವಿದೇಶಿ ಸರಣಿಗಳನ್ನು ಭಾರತೀಯ ಅಭಿಮಾನಿಗಳು ಡಿಡಿ ಸ್ಪೋರ್ಟ್ಸ್ ಮೂಲಕ ಪಂದ್ಯದ ನೇರ ಪ್ರಸಾರ ವೀಕ್ಷಿಸಬಹುದು. ಪಂದ್ಯವು ಭಾರತೀಯ ಕಾಲಮಾನ ಮಧ್ಯಾಹ್ನ 12 ಗಂಟೆಗೆ ನಿಗದಿಯಾಗಿದ್ದು, ಸಮಯ ಮುಂದೂಡಿಕೆಯಾಗುವ ಸಾಧ್ಯತೆಯಿದೆ.

Ind vs Nz 2nd T20: ಪಿಚ್ ರಿಪೋರ್ಟ್, ಹೆಡ್ ಟು ಹೆಡ್ ರೆಕಾರ್ಡ್, ಸಂಭಾವ್ಯ ಪ್ಲೇಯಿಂಗ್ 11

ಭಾರತ vs ನ್ಯೂಜಿಲೆಂಡ್ ಸಂಭಾವ್ಯ ಪ್ಲೇಯಿಂಗ್ 11

ಭಾರತ vs ನ್ಯೂಜಿಲೆಂಡ್ ಸಂಭಾವ್ಯ ಪ್ಲೇಯಿಂಗ್ 11

ಟೀಂ ಇಂಡಿಯಾ ಪ್ಲೇಯಿಂಗ್ 11: ಶುಭಮನ್ ಗಿಲ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್, ಯುಜವೇಂದ್ರ ಚಹಾಲ್, ಅರ್ಷ್‌ದೀಪ್ ಸಿಂಗ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್

ನ್ಯೂಜಿಲೆಂಡ್ ಪ್ಲೇಯಿಂಗ್ 11: ಫಿನ್ ಅಲೆನ್, ಡೆವೊನ್ ಕಾನ್ವೆ (ವಿಕೆಟ್ ಕೀಪರ್), ಕೇನ್ ವಿಲಿಯಮ್ಸನ್ (ನಾಯಕ), ಗ್ಲೆನ್ ಫಿಲಿಪ್ಸ್‌, ಡೆರಿಲ್ ಮಿಚೆಲ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಲ್ಯೂಕಿ ಫರ್ಗುಸನ್, ಟಿಮ್ ಸೌಥಿ, ಇಶ್ ಸೋದಿ, ಆ್ಯಡಂ ಮಿಲ್ನೆ

Story first published: Sunday, November 20, 2022, 6:57 [IST]
Other articles published on Nov 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X