ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸರಣಿ ಸೋತರು ಒಂದು ವಿಚಾರದಲ್ಲಿ ಲಾಭವಾಗಿದೆ ಎಂದ ಡೆವೋನ್ ಕಾನ್ವೆ

Ind vs NZ: Devon Conway said Learned how to attack spin in subcontinent

ಭಾರತದ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿ ಟೀಮ್ ಇಂಡಿಯಾದ ಬೌಲಿಂಗ್ ದಾಳಿಯನ್ನು ದಿಟ್ಟವಾಗಿ ಎದುರಿಸಿದ ಆಟಗಾರ ಡೆವೋನ್ ಕಾನ್ವೆ. ಭಾರತದ ಬೃಹತ್ ಮೊತ್ತದ ಗುರಿ ನೀಡಿದ್ದರೂ ಕಾನ್ವೆ ಕ್ರೀಸ್‌ನಲ್ಲಿರುವವರೆಗೂ ಟೀಮ್ ಇಂಡಿಯಾಗೆ ಕಠಿಣ ಸವಾಲು ಎದುರಾಗಿತ್ತು ಎಂಬುದು ಸ್ಪಷ್ಟ. ಆದರೆ ಅಂತಿಮವಾಗಿ ಕಾನ್ವೆ ವಿಕೆಟ್ ಪಡೆಯಲು ಯಶಸ್ವಿಯಾದ ಭಾರತ ಪಂದ್ಯವನ್ನು 90 ರನ್‌ಗಳ ಅಂತರದಿಂದ ತನ್ನ ವಶಕ್ಕೆ ಪಡೆದುಕೊಂಡಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಭಾರತ 3-0 ಅಂತರದಿಂದ ತೆಕ್ಕೆಗೆ ಹಾಕಿಕೊಂಡಿದೆ.

ಆದರೆ ಈ ಸರಣಿಯಲ್ಲಿ ಸೋಲು ಅನುಭವಿಸಿದರೂ ಇದರಿಂದಾಗಿ ತಾನು ಒಂದು ವಿಚಾರವನ್ನು ಕಲಿತುಕೊಂಡಿದ್ದೇನೆ ಎಂದು ನ್ಯೂಜಿಲೆಂಡ್‌ನ ಆಟಗಾರ ಡೆವೋನ್ ಕಾನ್ವೆ ಆತ್ಮವಿಶ್ವಾಸದಿಂದ ಹೇಳಿಕೊಂಡಿದ್ದಾರೆ. ವಿಶ್ವಕಪ್‌ನ ದೃಷ್ಟಿಕೋನದಿಂದ ನಾನು ಉಪಖಂಡದಲ್ಲಿ ಸ್ಪಿನ್ ಬೌಲಿಂಗ್ ಎದುರಿಸುವುದು ಹೇಗೆ ಎಂಬುದನ್ನು ಅರಿತುಕೊಂಡಿದ್ದೇನೆ ಎಂದಿದ್ದಾರೆ ನ್ಯೂಜಿಲೆಂಡ್ ತಂಡದ ಆರಂಬಿಕ ಆಟಗಾರ ಡೆವೋನ್ ಕಾನ್ವೆ.

ಶತಕ ಬಾರಿಸಿದರೂ ಅಪ್ಪನಿಗೆ ಪೂರ್ತಿ ಖುಷಿಯಾಗಿಲ್ಲ: ಆಸಕ್ತಿಕರ ವಿಚಾರ ಹಂಚಿಕೊಂಡ ಶುಭಮನ್ ಗಿಲ್ಶತಕ ಬಾರಿಸಿದರೂ ಅಪ್ಪನಿಗೆ ಪೂರ್ತಿ ಖುಷಿಯಾಗಿಲ್ಲ: ಆಸಕ್ತಿಕರ ವಿಚಾರ ಹಂಚಿಕೊಂಡ ಶುಭಮನ್ ಗಿಲ್

ಭಾರತದ ವಿರುದ್ಧದ ಪಂದ್ಯ ಮುಕ್ತಾಯದ ಬಳಿಕ ಮಾತನಾಡಿರುವ ಕಾನ್ವೆ "ಕಳೆದ ಒಂದು ಒಂದೂವರೆ ತಿಂಗಳಿನಿಂದ ವೈಯಕ್ತಿಕವಾಗು ಎಲ್ಲವೂ ಯಓಜನೆಯಂತೆಯೇ ನಡೆಯುತ್ತಿರುವುದಕ್ಕೆ ಸಂತಸಗೊಂಡಿದ್ದೇನೆ" ಎಂದು ಪಂದ್ಯದ ಮುಕ್ತಾಯದ ಬಳಿಕ ಮಾಧ್ಯಮದ ಜೊತೆಗೆ ಮಾತನಾಡುತ್ತಾ ಹೇಳಿಕೆ ನೀಡಿದ್ದಾರೆ.

"ಉಪಖಂಡದಲ್ಲಿ ಸ್ಪಿನ್ ಬೌಲಿಂಗ್ ಎದುರಿಸುವುದು ಹೇಗೆ ಎಂಬ ಬಗ್ಗೆ ನಾನು ಸಾಕಷ್ಟು ವಿಚಾರಗಳನ್ನು ಕಲಿಯುವುದಿತ್ತು. ಸ್ವೀಪ್ ಮಾಡುವುದು, ರಿವರ್ಸ್ ಸ್ವೀಪ್ ಮಾಡುವುದು ಮತ್ತು ಬೌಲರ್‌ಗಳನ್ನು ಸಾಧ್ಯವಾದಷ್ಟು ಒತ್ತಡಕ್ಕೆ ಒಳಪಡಿಸುವುದು ಹೇಗೆ ಎಂಬುದನ್ನು ಕಲಿಯಬೇಕಾಗಿತ್ತು. ಈ ಪ್ರವಾಸದಲ್ಲಿ ಅದು ಸಾಧ್ಯವಾಗಿದೆ" ಎಂದಿದ್ದಾರೆ ಡೆವೋನ್ ಕಾನ್ವೆ.

ಇನ್ನು ಟೀಮ್ ಇಂಡಿಯಾ ನೀಡಿದ ಬೃಹತ್ ಗುರಿ ಬೆನ್ನಟ್ಟಲು ಕಣಕ್ಕಿಳಿದ ನ್ಯೂಜಿಲೆಂಡ್ ತಂಡ ಇನ್ನಿಂಗ್ಸ್‌ನ ಎರಡನೇ ಎಸೆತದಲ್ಲಿಯೇ ಆರಂಭಿಕ ಆಟಗಾರ ಫಿನ್ ಅಲೆನ್ ವಿಕೆಟ್ ಕಳೆದುಕೊಳ್ಳುವ ಮೂಲಕ ಆಘಾತಕ್ಕೆ ಒಳಗಾಯಿತು. ಆದರೆ 2ನೇ ವಿಕೆಟ್‌ಗೆ ಹೆನ್ರಿ ನಿಕೋಲ್ಸ್ ಹಾಗೂ ಡೆವೋನ್ ಕಾನ್ವೆ 106 ರನ್‌ಗಳ ಭರ್ಜರಿ ಜೊತೆಯಾಟ ನೀಡುವ ಮೂಲಕ ಚೇತರಿಕೆ ನೀಡಿದರು. ಬಳಿಕ ಡೆರೆಲ್ ಮಿಚೆಲ್ ಜೊತೆಗೆ ಕೂಡ ಕಾನ್ವೆ 78 ರನ್‌ಗಳ ಜೊತೆಯಾಟ ನೀಡಿದಾಗ ಟೀಮ್ ಇಂಡಿಯಾಗೆ ಈ ಪಂದ್ಯ ಕಠಿಣವಾಗಲಿದೆ ಎಂಬುದು ಸ್ಪಷ್ಟವಾಗಿತ್ತು. ಆದರೆ ಬಳಿಕ ನ್ಯೂಜಿಲೆಂಡ್ ತಂಡದ ಒಂದೊಂದೇ ವಿಕೆಟ್‌ಗಳು ಉರುಳಲು ಆರಂಭವಾಯಿತು.

IND vs NZ T20 Series: ಟಿ20 ಸರಣಿಯಿಂದ ಹೊರಬಿದ್ದ ಟೀಂ ಇಂಡಿಯಾ ಆರಂಭಿಕ ಬ್ಯಾಟರ್IND vs NZ T20 Series: ಟಿ20 ಸರಣಿಯಿಂದ ಹೊರಬಿದ್ದ ಟೀಂ ಇಂಡಿಯಾ ಆರಂಭಿಕ ಬ್ಯಾಟರ್

ಕಾನ್ವೆ ಕ್ರೀಸ್‌ನಲ್ಲಿ ಇದ್ದಷ್ಟು ಕಾಲ ಭಾರತ ತಂಡಕ್ಕೆ ಸವಾಲೊಡ್ಡುವಲ್ಲಿ ಯಶಸ್ವಿಯಾದರು. ಆದರೆ ಮತ್ತೊಂದು ತುದಿಯಲ್ಲಿ ಇತರ ಬ್ಯಾಟರ್‌ಗಳು ಕ್ರೀಸ್‌ನಲ್ಲಿ ನೆಲೆಯೂರಲು ವಿಫಲವಾದ ಕಾರಣ ಟೀಮ್ ಇಂಡಿಯಾ ಮೇಲುಗೈ ಸಾಧಿಸುತ್ತಾ ಸಾಗಿತ್ತು. ಕಾನ್ವೆ ಭರ್ಜರಿ 138 ರನ್ ಗಳಿಸಿ ವಿಕೆಟ್ ಕಳೆದುಕೊಳ್ಳುವ ಮೂಲಕ ನ್ಯೂಜಿಲೆಂಡ್ ತಂಡ ಹೋರಾಟವನ್ನು ಕೈಚೆಲ್ಲಿತು. ಅಂತಿಮವಾಗಿ ನ್ಯೂಜಿಲೆಂಡ್ 295 ರನ್‌ಗಳಿಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು ಶರಣಾಗಿದೆ.

ಇತ್ತಂಡಗಳ ಆಡುವ ಬಳಗ
ಭಾರತ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಉಮ್ರಾನ್ ಮಲಿಕ್

ನ್ಯೂಜಿಲೆಂಡ್: ಫಿನ್ ಅಲೆನ್, ಡೆವೊನ್ ಕಾನ್ವೇ, ಹೆನ್ರಿ ನಿಕೋಲ್ಸ್, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ (ವಿಕೆಟ್ ಕೀಪರ್/ನಾಯಕ), ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್, ಲಾಕಿ ಫರ್ಗುಸನ್, ಜಾಕೋಬ್ ಡಫ್ಫಿ, ಬ್ಲೇರ್ ಟಿಕ್ನರ್

Story first published: Wednesday, January 25, 2023, 15:10 [IST]
Other articles published on Jan 25, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X