ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ICC T20 Ranking: ಹಾರ್ದಿಕ್ ಪಾಂಡ್ಯ, ಅರ್ಶ್‌ದೀಪ್ ರ್‍ಯಾಂಕಿಂಗ್‌ನಲ್ಲಿ ಭಾರಿ ಏರಿಕೆ

IND vs NZ: Hardik Pandya And Arshdeep Singh Spot Rise In Latest ICC T20 Rankings

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ನಾಯಕನಾಗಿರುವ ಹಾರ್ದಿಕ್ ಪಾಂಡ್ಯ ಅವರು ಐಸಿಸಿ ಟಿ20 ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ ದೊಡ್ಡ ಏರಿಕೆ ಕಂಡಿದ್ದಾರೆ. ಇತ್ತೀಚಿನ ಐಸಿಸಿ ಪರಿಷ್ಕರಣೆಯಲ್ಲಿ 29 ವರ್ಷದ ಆಲ್‌ರೌಂಡರ್ 15 ಸ್ಥಾನ ಏರಿಕೆ ಕಂಡು 71ನೇ ಸ್ಥಾನದಿಂದ 56ನೇ ಸ್ಥಾನಕ್ಕೆ ಜಿಗಿದಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಮುಕ್ತಾಯಗೊಂಡ ಟಿ20 ವಿಶ್ವಕಪ್ 2022ರಲ್ಲಿ ಹಾರ್ದಿಕ್ ಪಾಂಡ್ಯ ಉತ್ತಮ ಪ್ರದರ್ಶನದೊಂದಿಗೆ ಪಂದ್ಯಾವಳಿ ಮುಗಿಸಿದರು. ಸೆಮಿಫೈನಲ್‌ನಲ್ಲಿ ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಸೋತು ಹೊರಬಿತ್ತು. ಇನ್ನು ಹಾರ್ದಿಕ್ ಪಾಂಡ್ಯ ಸಹ ಆಟಗಾರ ಅರ್ಶ್‌ದೀಪ್ ಸಿಂಗ್ ಕೂಡ ಐಸಿಸಿ ಟಿ20 ಬೌಲರ್‌ಗಳ ರ್‍ಯಾಂಕಿಂಗ್‌ನಲ್ಲಿ ಭಾರಿ ಏರಿಕೆ ಕಂಡಿದ್ದಾರೆ.

ಸೂರ್ಯ or ಕೊಹ್ಲಿ: ಟಿ20 ವಿಶ್ವಕಪ್‌ನಲ್ಲಿ ಅತ್ಯುತ್ತಮ ಬ್ಯಾಟರ್ ಯಾರು?; ಮಾಜಿ ಕ್ರಿಕೆಟಿಗರಿಂದ ಭಿನ್ನ ಅಭಿಪ್ರಾಯಸೂರ್ಯ or ಕೊಹ್ಲಿ: ಟಿ20 ವಿಶ್ವಕಪ್‌ನಲ್ಲಿ ಅತ್ಯುತ್ತಮ ಬ್ಯಾಟರ್ ಯಾರು?; ಮಾಜಿ ಕ್ರಿಕೆಟಿಗರಿಂದ ಭಿನ್ನ ಅಭಿಪ್ರಾಯ

ಅರ್ಶ್‌ದೀಪ್ ಸಿಂಗ್ 32 ಸ್ಥಾನ ಏರಿಕೆ ಕಂಡು 54ನೇ ಸ್ಥಾನದಿಂದ 22ನೆ ರ್‍ಯಾಂಕಿಂಗ್‌ಗೆ ಜಿಗಿದಿದ್ದಾರೆ. 2022ರ ಟಿ20 ವಿಶ್ವಕಪ್‌ನಲ್ಲಿ ಆಡಿದ 6 ಪಂದ್ಯಗಳಿಂದ ಒಟ್ಟು 10 ವಿಕೆಟ್ ಪಡೆದು ಮಿಂಚಿದರು. ಇದು ರ್‍ಯಾಂಕಿಂಗ್‌ನಲ್ಲಿ ಏರಿಕೆಗೆ ಸಹಾಯ ಮಾಡಿದೆ.

ಸ್ಯಾಮ್ ಕುರ್ರಾನ್ ಪ್ಲೇಯರ್ ಆಫ್ ದಿ ಟೂರ್ನಮೆಂಟ್

ಸ್ಯಾಮ್ ಕುರ್ರಾನ್ ಪ್ಲೇಯರ್ ಆಫ್ ದಿ ಟೂರ್ನಮೆಂಟ್

ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ಪಡೆದ ಇಂಗ್ಲೆಂಡ್‌ನ ಆಲ್‌ರೌಂಡರ್ ಸ್ಯಾಮ್ ಕುರ್ರಾನ್ ಅವರು ಬೌಲಿಂಗ್‌ನಲ್ಲಿ 13 ವಿಕೆಟ್‌ಗಳೊಂದಿಗೆ ಟಿ20 ಬೌಲರ್‌ಗಳ ಪಟ್ಟಿಯಲ್ಲಿ 11 ಸ್ಥಾನಗಳ ಜಿಗಿತ ಕಂಡಿದ್ದಾರೆ.

ಅಫ್ಘಾನಿಸ್ತಾನದ ವೇಗಿ ಫಜಲ್ಹಾಕ್ ಫಾರೂಕಿ 16 ಸ್ಥಾನಗಳ ಏರಿಕೆ ಕಂಡು 36ನೇ ಸ್ಥಾನದಿಂದ 20ನೇ ಸ್ಥಾನಕ್ಕೆ ಏರಿದ್ದಾರೆ. ಪಾಕಿಸ್ತಾನದ ವೇಗಿ ಶಾಹೀನ್ ಶಾ ಅಫ್ರಿದಿ ಅವರು ಟಿ20 ವಿಶ್ವಕಪ್ ಪಂದ್ಯಾವಳಿಯ ಸಮಯದಲ್ಲಿ ಟಿ20 ಬೌಲರ್ ರ್‍ಯಾಂಕಿಂಗ್‌ನಲ್ಲಿ 39ರಿಂದ 18ನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ. ಇದೇ ವೇಳೆ ಪಾಕಿಸ್ತಾನ ತಂಡದ ಯುವ ಬೌಲರ್ ನಸೀಮ್ ಶಾ 70 ಸ್ಥಾನಗಳನ್ನು ಮೇಲಕ್ಕೇರಿ ಒಟ್ಟಾರೆ 30ನೇ ಸ್ಥಾನ ತಲುಪಿದ್ದಾರೆ.

100 ಸ್ಥಾನಗಳ ಜಿಗಿತವನ್ನು ಕಂಡ ಅಲೆಕ್ಸ್ ಹೇಲ್ಸ್

100 ಸ್ಥಾನಗಳ ಜಿಗಿತವನ್ನು ಕಂಡ ಅಲೆಕ್ಸ್ ಹೇಲ್ಸ್

ಇನ್ನು ಇಂಗ್ಲೆಂಡ್‌ನ ಆರಂಭಿಕ ಬ್ಯಾಟರ್ ಅಲೆಕ್ಸ್ ಹೇಲ್ಸ್ ಟಾಪ್ 10 ರ್‍ಯಾಂಕಿಂಗ್‌ ಪ್ರವೇಶಿಸಲು ಬರೋಬ್ಬರಿ 100 ಸ್ಥಾನಗಳ ಜಿಗಿತವನ್ನು ಕಂಡರು. ಇದೀಗ ಐಸಿಸಿ ಟಿ20 ಬ್ಯಾಟಿಂಗ್‌ನಲ್ಲಿ 10ನೇ ಸ್ಥಾನದಲ್ಲಿದ್ದಾರೆ. ಈ ಬಾರಿಯ ವಿಶ್ವಕಪ್‌ನಲ್ಲಿ ಅಲೆಕ್ಸ್ ಹೇಲ್ಸ್ 147 ಸ್ಟ್ರೈಕ್‌ರೇಟ್‌ನಲ್ಲಿ 212 ರನ್ ಗಳಿಸಿದರು.

ಇದೇ ವೇಳೆ ದಕ್ಷಿಣ ಆಫ್ರಿಕಾ ಸ್ಫೋಟಕ ಬ್ಯಾಟ್ಸ್‌ಮನ್ ರಿಲೀ ರೊಸ್ಸೌ 21ನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಜಿಗಿತ ಕಂಡರು ಮತ್ತು ನ್ಯೂಜಿಲೆಂಡ್‌ನ ಫಿನ್ ಅಲೆನ್ 30ನೇ ಸ್ಥಾನದಿಂದ 11ನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ.

ಸೂರ್ಯಕುಮಾರ್ ಬ್ಯಾಟಿಂಗ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನ

ಸೂರ್ಯಕುಮಾರ್ ಬ್ಯಾಟಿಂಗ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನ

ಪಾಕಿಸ್ತಾನದ ಬ್ಯಾಟಿಂಗ್ ಜೋಡಿ ಇಫ್ತಿಕರ್ ಅಹ್ಮದ್ 74ನೇ ಸ್ಥಾನದಿಂದ 53ನೇ ರ್‍ಯಾಂಕಿಂಗ್‌ಗೆ ಏರಿದ್ದಾರೆ ಮತ್ತು ಶಾನ್ ಮಸೂದ್ 100ನೇ ಸ್ಥಾನದಿಂದ 59ನೇ ಸ್ಥಾನಕ್ಕೆ ಜಿಗಿದಿದ್ದಾರೆ.

ಭಾರತದ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಶ್ರೀಲಂಕಾದ ವನಿಂದು ಹಸರಂಗ ಟಿ20 ಕ್ರಿಕೆಟ್‌ನಲ್ಲಿ ವಿಶ್ವದ ನಂ.1 ಬೌಲರ್ ಆಗಿದ್ದಾರೆ.

Story first published: Friday, November 18, 2022, 12:35 [IST]
Other articles published on Nov 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X