ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs NZ: ಸಿರಾಜ್ ನಾನು ಬಯಸಿದ್ದನ್ನು ನಿಖರವಾಗಿ ಮಾಡಿದ; ಆರ್‌ಸಿಬಿ ಬೌಲರ್‌ಗೆ ಪಾಂಡ್ಯ ಶ್ಲಾಘನೆ

IND vs NZ: Team India Captain Hardik Pandya Praises Mohammed Siraj For His Bowling Performance

ಮಂಗಳವಾರ (ನವೆಂಬರ್ 22) ನೇಪಿಯರ್‌ನ ಮೆಕ್ಲೀನ್ ಪಾರ್ಕ್‌ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯ ಮಳೆಯಿಂದಾಗಿ ಡಿಎಲ್‌ಎಸ್ ನಿಯಮದ ಪ್ರಕಾರ ಟೈನಲ್ಲಿ ಅಂತ್ಯಗೊಂಡಿತು.

ಇನ್ನು ಈ ಪಂದ್ಯದಲ್ಲಿ ತಮ್ಮ 4 ಓವರ್‌ಗಳ ಕೋಟಾದಲ್ಲಿ ಕೇವಲ 17 ರನ್ ನೀಡಿ ಪ್ರಮುಖ 4 ವಿಕೆಟ್ ಪಡೆದ ಭಾರತದ ವೇಗಿ ಮೊಹಮ್ಮದ್ ಸಿರಾಜ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಸಿರಾಜ್ ಅವರ ಅದ್ಭುತ ಬೌಲಿಂಗ್ ಪ್ರದರ್ಶನಕ್ಕಾಗಿ ನಾಯಕ ಹಾರ್ದಿಕ್ ಪಾಂಡ್ಯ ಸಂತೋಷಗೊಂಡಿದ್ದಾರೆ.

ಕೇಂದ್ರ ಒಪ್ಪಂದದಿಂದ ಸ್ಟಾರ್ ಬ್ಯಾಟರ್‌ನನ್ನು ಕೈಬಿಟ್ಟ ನ್ಯೂಜಿಲೆಂಡ್; ಐಪಿಎಲ್ ಆಡುವ ಸಾಧ್ಯತೆ!ಕೇಂದ್ರ ಒಪ್ಪಂದದಿಂದ ಸ್ಟಾರ್ ಬ್ಯಾಟರ್‌ನನ್ನು ಕೈಬಿಟ್ಟ ನ್ಯೂಜಿಲೆಂಡ್; ಐಪಿಎಲ್ ಆಡುವ ಸಾಧ್ಯತೆ!

ಮೊಹಮ್ಮದ್ ಸಿರಾಜ್ ಅವರ ಬಿಗಿ ಬೌಲಿಂಗ್ ನೆರವಿನಿಂದ ಅಂತಿಮ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 19.4 ಓವರ್‌ಗಳಲ್ಲಿ 160 ರನ್‌ಗಳಿಗೆ ನಿಯಂತ್ರಿಸಲು ಸಾಧ್ಯವಾಯಿತು. ಪಂದ್ಯದ ನಂತರ ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದ ಮೊಹಮ್ಮದ್ ಸಿರಾಜ್‌ರನ್ನು ನಾಯಕ ಹಾರ್ದಿಕ್ ಪಾಂಡ್ಯ ಹೊಗಳಿದರು.

ಅರ್ಶ್‌ದೀಪ್ 4 ಓವರ್‌ಗಳಲ್ಲಿ 37 ರನ್‌ ನೀಡಿ 4 ವಿಕೆಟ್

ಅರ್ಶ್‌ದೀಪ್ 4 ಓವರ್‌ಗಳಲ್ಲಿ 37 ರನ್‌ ನೀಡಿ 4 ವಿಕೆಟ್

ಮತ್ತೊಬ್ಬ ವೇಗಿ ಅರ್ಶ್‌ದೀಪ್ ಸಿಂಗ್ ಕೂಡ ನಾಲ್ಕು ವಿಕೆಟ್‌ ಕಿತ್ತರು, ಆದರೆ ಅವರ ನಾಲ್ಕು ಓವರ್‌ಗಳ ಕೋಟಾದಲ್ಲಿ 37 ರನ್‌ಗಳನ್ನು ಬಿಟ್ಟುಕೊಟ್ಟು ದುಬಾರಿ ಎನಿಸಿದರು. ಮೊಹಮ್ಮದ್ ಸಿರಾಜ್ ಮತ್ತು ಅರ್ಶ್‌ದೀಪ್ ಸಿಂಗ್ ಉತ್ತಮ ಬೌಲಿಂಗ್ ಮಾಡಿದ್ದರಿಂದ, ನ್ಯೂಜಿಲೆಂಡ್ ತಂಡ ಕೇವಲ ಮೂರು ರನ್‌ಗಳ ಅಂತರದಲ್ಲಿ ಆರು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದರು.

"ಈ ಪಂದ್ಯದಲ್ಲಿ ನಾನು ಬಯಸಿದ್ದನ್ನು ಮೊಹಮ್ಮದ್ ಸಿರಾಜ್ ನಿಖರವಾಗಿ ಮಾಡಿದರು. ಟಿ20 ಕ್ರಿಕೆಟ್‌ನಲ್ಲಿ ರಕ್ಷಣಾತ್ಮಕ ಬೌಲಿಂಗ್ ಮೊರೆ ಹೋದರೆ, ಖಂಡಿತವಾಗಿ ಬೌಲರ್‌ಗಳು ದಂಡಿಸಿಕೊಳ್ಳುತ್ತಾರೆ. ಆ ದಿನ ನಮ್ಮದಾಗಿಲ್ಲವಾದರೆ, ಒಂದು ದಿನ ಅದು ನಮಗೆ ಕಾಡುತ್ತದೆ. ಹಾಗಾಗಿ ನನಗೆ ಮತ್ತು ನನ್ನ ಬೌಲಿಂಗ್ ಘಟಕದ ಯೋಜನೆ ಸರಳವಾಗಿತ್ತು. ನಾವು ಆಕ್ರಮಣಕಾರಿಯಾಗಿರೋಣ. ಅಬ್ಬಬ್ಬಾ ಎಂದರೆ ನಾವು ಪಂದ್ಯವನ್ನು ಸೋಲುತ್ತೇವೆ," ಎಂದು ನಾಯಕ ಹಾರ್ದಿಕ್ ಪಾಂಡ್ಯ ಪಂದ್ಯದ ನಂತರ ತಿಳಿಸಿದರು.

ಮೂರು ಪಂದ್ಯಗಳ ಟಿ20 ಸರಣಿ ಗೆದ್ದ ಭಾರತ

ಮೂರು ಪಂದ್ಯಗಳ ಟಿ20 ಸರಣಿ ಗೆದ್ದ ಭಾರತ

ಮಂಗಳವಾರ ನಡೆದ ಮೂರನೇ ಪಂದ್ಯ ಟೈನಲ್ಲಿ ಅಂತ್ಯಗೊಂಡರೂ, ಭಾರತ ತಂಡ ಮೂರು ಪಂದ್ಯಗಳ ಟಿ20 ಸರಣಿಯನ್ನು ತನ್ನದಾಗಿಸಿಕೊಂಡಿತು. ಮೂರನೇ ಪಂದ್ಯದ ಎರಡನೇ ಇನ್ನಿಂಗ್ಸ್ ವೇಳೆ ಆಟಕ್ಕೆ ಮಳೆ ಅಡ್ಡಿಪಡಿಸಿದಾಗ ಭಾರತ ನಾಲ್ಕು ವಿಕೆಟ್ ಕಳೆದುಕೊಂಡು 75 ರನ್ ಗಳಿಸಿತ್ತು. ಆಗ ಪ್ರವಾಸಿ ತಂಡ ಭಾರತವು ಡಕ್‌ವರ್ತ್ ಲೂಯಿಸ್ ಪ್ರಕಾರ ಸಮಾನ ಸ್ಕೋರ್‌ ಹೊಂದಿತ್ತು, ನಂತರ ಪಂದ್ಯ ಆರಂಭವಾಗದ ಕಾರಣ ಟೈ ಎಂದು ಘೋಷಿಸಲಾಯಿತು.

ಬೆದರಿಸುವ ಬೌಲರ್‌ಗಳನ್ನು ಭಾರತದ ಆಯ್ಕೆ

ಬೆದರಿಸುವ ಬೌಲರ್‌ಗಳನ್ನು ಭಾರತದ ಆಯ್ಕೆ

ಭಾರತ ತಂಡದ ಹಂಗಾಮಿ ನಾಯಕ ಹಾರ್ದಿಕ್ ಪಾಂಡ್ಯ ಮಾತು ಮುಂದುವರೆಸಿ, ಎದುರಾಳಿ ಬ್ಯಾಟರ್‌ಗಳನ್ನು ಬೆದರಿಸುವ ಬೌಲರ್‌ಗಳನ್ನು ಭಾರತ ಆಯ್ಕೆ ಮಾಡುತ್ತದೆ ಎಂದು ಸ್ಪಷ್ಟಪಡಿಸಿದರು.

ಟಿ20 ಸರಣಿ ಗೆದ್ದ ನಂತರ ಭಾರತ ತಂಡವು ಕಿವೀಸ್ ಪಡೆಯ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದೆ. ತದನಂತರ ಭಾರತ ತಂಡ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ.

Story first published: Wednesday, November 23, 2022, 11:54 [IST]
Other articles published on Nov 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X