ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐತಿಹಾಸಿಕ ಸಾಧನೆ ಮಾಡುವ ಅವಕಾಶ ತಾನಾಗಿಯೇ ಕೈಚೆಲ್ಲಿದ ಭಾರತ: ಸರಣಿ ಸೋಲಿಗೆ ಕಾರಣವಾದ ಅಂಶಗಳಿದು!

Ind vs SA: 4 Reasons for Indias test series defeat against South Africa

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯನ್ನು ಟೀಮ್ ಇಂಡಿಯಾ 1-2 ಅಂತರದಿಂದ ಸೋತು ಟ್ರೋಫಿಯನ್ನು ಎದುರಾಳಿಗೆ ಬಿಟ್ಟುಕೊಟ್ಟಿದೆ. ಈ ಮೂಲಕ ದಕ್ಷಿಣ ಆಫ್ರಿಕಾ ನೆಲದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆಲ್ಲುವ ಕನಸು ಮತ್ತೊಮ್ಮೆ ಕನಸಾಗಿಯೇ ಉಳಿದುಕೊಂಡಿದೆ. ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದು ಮುನ್ನಡೆ ಸಾಧಿಸಿದ್ದರೂ ನಂತರದ ಎರಡು ಪಂದ್ಯಗಳಲ್ಲಿಯೂ ಎದುರಾಳಿಗೆ ಶರಣಾಗುವ ಮೂಲಕ ಉತ್ತಮ ಅವಕಾಶವನ್ನು ಭಾರತ ತಂಡ ಕಳೆದುಕೊಂಡಿದೆ.

ಸತತವಾಗಿ ವಿದೇಶಿ ನೆಲದಲ್ಲಿ ಸರಣಿ ಗೆಲ್ಲುತ್ತಾ ಆತ್ಮವಿಶ್ವಾಸದಿಂದಿದ್ದ ಟೀಮ್ ಇಂಡಿಯಾ ಈ ಬಾರಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳುವಾಗ ಸರಣಿ ಗೆಲ್ಲುವ ಫೇವರೀಟ್ ತಂಡವಾಗಿಯೇ ಕಣಕ್ಕಿಳಿದಿತ್ತು. ದಕ್ಷಿಣ ಆಪ್ರಿಕಾ ನೆಲದಲ್ಇ ಈವರೆಗೆ ಭಾರತ ಸರಣಿ ಗೆದ್ದಿಲ್ಲದಿದ್ದರೂ ಭಾರತ ತಂಡದ ಸದ್ಯದ ಫಾರ್ಮ್ ಹಾಗೂ ಆಟಗಾರರ ಸಾಮರ್ಥ್ಯದಿಮದಾಗಿ ಭಾರತ ಈ ಬಾರಿ ಸರಣಿ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂದೇ ಎಲ್ಲರೂ ಭಾವಿಸಿದ್ದರು. ಅದಕ್ಕೆ ಪೂರಕವಾಗಿ ಟೀಮ್ ಇಂಡಿಯಾ ಮೊದಲ ಪಂದ್ಯದಲ್ಲಿ ಅಮೋಘ ಗೆಲುವು ಸಾಧಿಸಿ ಮಿಂಚಿತ್ತು. ಆದರೆ ನಂತರದ ಎರಡು ಪಂದ್ಯಗಳು ಕೂಡ ಭಾರತದ ಪಾಲಿಗೆ ಕಹಿಯಾಗಿತ್ತು. ಎರಡು ಪಂದ್ಯದಲ್ಲಿಯೂ ಭಾರತ ಸೋಲು ಕಂಡಿದ್ದು ನಿರಾಸೆ ಅನುಭವಿಸಿದೆ.

ಐಪಿಎಲ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿಯುವತ್ತ ಈ ಕನ್ನಡಿಗನ ಚಿತ್ತಐಪಿಎಲ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿಯುವತ್ತ ಈ ಕನ್ನಡಿಗನ ಚಿತ್ತ

ಹಾಗಾದರೆ ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಸೋಲು ಅನುಭವಿಸಲು ಕಾರಣಗಳೇನು? ಇಲ್ಲಿದೆ ವಿವರ

ಬ್ಯಾಟರ್‌ಗಳ ವೈಫಲ್ಯ

ಬ್ಯಾಟರ್‌ಗಳ ವೈಫಲ್ಯ

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಸೋಲು ಅನುಭವಿಸಲು ಪ್ರಮುಖ ಕಾರಣ ಬ್ಯಾಟರ್‌ಗಳ ವೈಫಲ್ಯ. ದಕ್ಷಿಣ ಆಫ್ರಿಕಾ ತಂಡದ ಬೌಲರ್‌ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಲು ಪ್ರಮುಖ ಬ್ಯಾಟರ್‌ಗಳೆಲ್ಲಾ ವಿಫಲವಾದರು. ಬೌಲರ್‌ಗಳ ಅಮೋಘ ಪ್ರದರ್ಶನದ ಹೊರತಾಗಿಯೂ ಕಡಿಮೆ ಗುರಿ ಎದುರಾಳಿಗೆ ನಿಗದಿಯಾಗಿದ್ದ ಕಾರಣ ಸ್ಕೋರ್ ರಕ್ಷಿಸಲು ಅಸಾಧ್ಯವಾಯಿತು. ಅಂತಿಮ ಎರಡು ಪಂದ್ಯದಲ್ಲಿಯೂ ಭಾರತ ತಂಡದ ಬ್ಯಾಟರ್‌ಗಳು ಮೊದಲ ಇನ್ನಿಂಗ್ಸ್‌ನಲ್ಲಿ ಮಾಡಿದ ತಪ್ಪನ್ನು ಎರಡನೇ ಇನ್ನಿಂಗ್ಸ್‌ನಲ್ಲಿಯೂ ಮಾಡಿದ್ದರು. ಹೀಗಾಗಿ ಸವಾಲಿನ ಗುರಿ ನಿಗದಿಪಡಿಸಲು ಭಾರತಕ್ಕೆ ಸಾಧ್ಯವಾಗಲಿಲ್ಲ.

ಫಾರ್ಮ್‌ನಲ್ಲಿಲ್ಲದ ಆಟಗಾರರಿಗೆ ಮತ್ತೆ ಮತ್ತೆ ಅವಕಾಶ ನೀಡಿದ ಮ್ಯಾನೇಜ್‌ಮೆಂಟ್

ಫಾರ್ಮ್‌ನಲ್ಲಿಲ್ಲದ ಆಟಗಾರರಿಗೆ ಮತ್ತೆ ಮತ್ತೆ ಅವಕಾಶ ನೀಡಿದ ಮ್ಯಾನೇಜ್‌ಮೆಂಟ್

ಇನ್ನು ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ಅನುಭವಿ ಆಟಗಾರರಾದ ಅಜಿಂಕ್ಯಾ ರಹಾನೆ ಹಾಗೂ ಚೇತೇಶ್ವರ್ ಪೂಜಾರ ಸತತವಾಗಿ ವೈಫಲ್ಯವನ್ನು ಅನುಭವಿಸಿದರೂ ಮತ್ತೆ ಮತ್ತೆ ಅವಕಾಶವನ್ನು ನೀಡಿತು. ಈ ಇಬ್ಬರು ಆಟಗಾರರು ಈ ಸರಣಿಯಲ್ಲಿ ಕೂಡ ಪರಿಣಾಮಕಾರಿ ಇನ್ನಿಂಗ್ಸ್ ನೀಡುವಲ್ಲಿ ವಿಫಲವಾದರು. ಈ ಇಬ್ಬರು ಅನುಭವಿ ಆಟಗಾರರ ವೈಫಲ್ಯ ತಂಡದ ಒತ್ತಡವನ್ನು ಮತ್ತಷ್ಟು ಹೆಚ್ಚಿಸಿತು.

ಭಾರತದ ಈ ‌ಅಟಗಾರನಿಗೆ ಮರ್ಯಾದೆ ಕೊಡಿ ಎಂದು ಬಿಸಿಸಿಐಗೆ ಬುದ್ಧಿ ಹೇಳಿದ ದ.ಆಫ್ರಿಕಾದ ಪೊಲಾಕ್!

ಫಾರ್ಮ್‌ನಲ್ಲಿದ್ದ ಆಟಗಾರರಿಗೆ ದೊರೆಯದ ಸೂಕ್ತ ಅವಕಾಶ

ಫಾರ್ಮ್‌ನಲ್ಲಿದ್ದ ಆಟಗಾರರಿಗೆ ದೊರೆಯದ ಸೂಕ್ತ ಅವಕಾಶ

ಒಂದೆಡೆ ಫಾರ್ಮ್‌ನಲ್ಲಿದ್ದ ಆಟಗಾರರ ಬೆಂಬಲಕ್ಕೆ ಮ್ಯಾನೇಜ್‌ಮೆಂಟ್ ಪದೇ ಪದೆ ನಿಂತರೆ ಮತ್ತೊಂದೆಡೆ ಫಾರ್ಮ್‌ನಲ್ಲಿದ್ದ ಆಟಗಾರರಾದ ಶ್ರೇಯಸ್ ಐಯ್ಯರ್, ಹನುಮ ವಿಹಾರಿಯಂತಾ ಆಟಗಾರರಿಗೆ ಸೂಕ್ತ ಅವಕಾಶವೇ ದೊರೆಯಲಿಲ್ಲ. ಹನುಮ ವಿಹಾರಿ ಆಡುವ ಅವಕಾಶ ಪಡೆದರೂ ಅದು ಒಂದೇ ಪಂದ್ಯಕ್ಕೆ ಸೀಮಿತವಾಯಿತು. ದಕ್ಷಿಣ ಆಫ್ರಿಕಾ ಎ ತಂಡದ ವಿರುದ್ಧ ಭಾರತ ಎ ತಮಡದ ಪರವಾಗಿ ಆಡಿದ್ದ ಹನುಮ ವಿಹಾರಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದ ಅರಿವಿದ್ದರೂ ಆ ಫಾರ್ಮ್‌ಅನ್ನು ಸೂಕ್ತವಾಗಿ ಬಳಸಿಕೊಳ್ಳಲು ತಂಡ ವಿಫಲವಾಯಿತು. ಮತ್ತೊಂದೆಡೆ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಶತಕ ಹಾಗೂ ಅರ್ಧ ಶತಕ ಸಿಡಿಸಿ ಮಿಂಚಿದ್ದ ಶ್ರೇಯಸ್ ಐಯ್ಯರ್ ದಕ್ಷಿಣ ಆಫ್ರಿಕಾ ವಿರುದ್ಧದ ಇಡೀ ಸರಣಿಯಲ್ಲಿ ಅವಕಾಶವನ್ನೇ ಪಡೆಯಲಿಲ್ಲ. ಆಟಗಾರರ ಫಾರ್ಮ್ ಗಮನಿಸಿ ಅವಕಾಶ ನೀಡಲು ಯೋಜನೆ ರೂಪಿಸದಿರುವುದು ಕೂಡ ಸರಣಿ ಸೋಲಿಗೆ ಕಾರಣವಾಯಿತು. ಹೀಗಾಗಿ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ನೆಲದಲ್ಲಿ ಸರಣಿ ಗೆಲ್ಲುವ ಅತ್ಯುತ್ತಮ ಅವಕಾಶವಿದ್ದರೂ ಅದನ್ನು ಬಳಸಿಕೊಳ್ಳಲು ವಿಫಲವಾಯಿತು.

ಬ್ಯಾಟರ್‌ಗಳಿಂದ ಬರಲಿಲ್ಲ ಸಾಂಘಿಕ ಪ್ರದರ್ಶನ

ಬ್ಯಾಟರ್‌ಗಳಿಂದ ಬರಲಿಲ್ಲ ಸಾಂಘಿಕ ಪ್ರದರ್ಶನ

ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿನಲ್ಲಿ ಟೀಮ್ ಇಂಡಿಯಾದ ಬ್ಯಾಟಿಂಗ್ ವಿಭಾಗದ ವೈಫಲ್ಯವೇ ಪ್ರಮುಖ ಕಾರಣವಾಗಿದೆ. ಬೌಲರ್‌ಗಳು ಸರಣಿಯ ಮೂರು ಪಂದ್ಯದಲ್ಲಿಯೂ ಉತ್ತಮ ಪ್ರದರ್ಶನ ನೀಡಿದ್ದರು ಬ್ಯಾಟರ್‌ಗಳು ಸಾಂಘಿಕ ಪ್ರದರ್ಶನ ನಿಡುವಲ್ಲಿ ವಿಫಲವಾಗಿದ್ದು ದುಬಾರಿಯಾಯಿತು. ದೊಡ್ಡ ಜೊತೆಯಾಟವನ್ನು ನೀಡುವಲ್ಲಿ ಭಾರತೀಯ ದಾಂಡಿಗರು ವಿಫಲವಾದರು. ಕುಸಿತವನ್ನು ತಡೆಯಲು ಆಟಗಾರರು ವಿಫಲವಾದರು. ಓರ್ವ ಆಟಗಾರ ಕ್ರೀಸ್ ಕಚ್ಚಿ ನಿಂತರೂ ಆತನಿಗೆ ಮತ್ತೊಂದು ತುದಿಯಲ್ಲಿ ಸೂಕ್ತ ಬೆಂಬಲವೇ ದೊರೆಯಲಿಲ್ಲ. ಹೀಗಾಗಿ ಸವಾಲಿನ ಗುರಿ ನೀಡಲು ಭಾರತ ವಿಫಲವಾಯಿತು. ಕೊನೆಯ ಎರಡು ಪಂದ್ಯದಲ್ಲಿಯೂ ಇದೇ ಕಾರಣದಿಮದಾಗಿ ಸೋಲು ಕಂಡಿತ್ತು.

Story first published: Saturday, January 15, 2022, 10:14 [IST]
Other articles published on Jan 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X