ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind vs SL 3rd T20I: ಶ್ರೀಲಂಕಾ ವಿರುದ್ಧ ಭರ್ಜರಿ ಶತಕ ಸಿಡಿಸಿ ಮೂರು ದಾಖಲೆಗಳನ್ನು ಮುರಿದ ಸೂರ್ಯ!

Ind vs SL 3rd T20I: Suryakumar Yadav Broke Three Records With His 3rd T20I Century

ಸೂರ್ಯಕುಮಾರ್ ಯಾದವ್ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ. ಭಾರತ ತಂಡಕ್ಕೆ ಪದಾರ್ಪಣೆ ಮಾಡಿದಾಗಿನಿಂದ ಅವರು ಹಲವು ದಾಖಲೆಗಳನ್ನು ಮುರಿಯುತ್ತಿದ್ದಾರೆ. ಹೊಸ ದಾಖಲೆಗಳನ್ನು ಬರೆಯುತ್ತಿದ್ದಾರೆ.

ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅಮೋಶ ಶತಕ ಸಿಡಿಸುವ ಮೂಲಕ ಮತ್ತೊಮ್ಮೆ ಕ್ರಿಕೆಟ್‌ ಲೋಕದಲ್ಲಿ ಸಂಚಲನ ಮೂಡಿಸಿದ್ದಾರೆ. ಹಲವು ಮಾಜಿ ಮತ್ತು ಹಾಲಿ ಕ್ರಿಕೆಟಿಗರು ಸೂರ್ಯ ಆಟಕ್ಕೆ ಮನಸೋತಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Ind vs SL 3rd T20I: ಮ್ಯಾಕ್ಸ್‌ವೆಲ್ ದಾಖಲೆ ಸರಿಗಟ್ಟಿದ ಸೂರ್ಯ, ರೋಹಿತ್ ದಾಖಲೆ ಕೂಡ ಅಪಾಯದಲ್ಲಿ!Ind vs SL 3rd T20I: ಮ್ಯಾಕ್ಸ್‌ವೆಲ್ ದಾಖಲೆ ಸರಿಗಟ್ಟಿದ ಸೂರ್ಯ, ರೋಹಿತ್ ದಾಖಲೆ ಕೂಡ ಅಪಾಯದಲ್ಲಿ!

ರಾಜ್‌ಕೋಟ್‌ನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಸೂರ್ಯಕುಮಾರ್ ಮೈದಾನದ ಮೂಲೆ ಮೂಲೆಗೆ ಚೆಂಡುಗಳನ್ನು ಕಳಿಸಿದರು. 51 ಎಸೆತಗಳಲ್ಲಿ ಅಜೇಯ 112 ರನ್ ಗಳಿಸಿ ಭಾರತ ತಂಡ 228 ರನ್‌ ಕಲೆಹಾಕಲು ಕಾರಣವಾದರು.

ಈ ಬೃಹತ್ ಮೊತ್ತವನ್ನು ಶ್ರೀಲಂಕಾ 137 ರನ್‌ಗಳಿಗೆ ಆಲೌಟ್ ಆಗುವ ಮೂಲಕ 91 ರನ್‌ಗಳ ಸೋಲುನುಭವಿಸಿತು. ಭಾರತ ತಂಡ 2023ರ ಮೊದಲ ಸರಣಿಯನ್ನು ಗೆದ್ದು ಸಂಭ್ರಮಿಸಿತು.

ಸೂರ್ಯಕುಮಾರ್ ಅಜೇಯ 112 ರನ್ ಗಳಿಸುವ ಮೂಲಕ ಹಲವು ದಾಖಲೆಗಳನ್ನು ಮುರಿದರು. ಅವರ 3ನೇ ಶತಕದ ಮೂಲಕ ಮುರಿದ ಪ್ರಮುಖ ಮೂರು ದಾಖಲೆಗಳಿವು.

 ವೇಗವಾಗಿ 1500 ರನ್ ಗಳಿಸಿದ ಸೂರ್ಯ

ವೇಗವಾಗಿ 1500 ರನ್ ಗಳಿಸಿದ ಸೂರ್ಯ

ಫೆಬ್ರವರಿ 2021ರಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಸೂರ್ಯಕುಮಾರ್ ಯಾದವ್ ಹಲವು ದಾಖಲೆಗಳನ್ನು ಬರೆದಿದ್ದಾರೆ. ಅಕ್ಬೋಬರ್ 2022ರಲ್ಲಿ ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 1000 ರನ್‌ಗಳನ್ನು ಪೂರೈಸಿದ್ದ ಸೂರ್ಯ, ಈಗ 1500 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. 42 ಇನ್ನಿಂಗ್ಸ್‌ಗಳಲ್ಲಿ ಅವರು 1500 ರನ್ ಗಳಿಸುವ ಮೂಲಕ ಕಡಿಮೆ ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ ಮೂರನೇ ಅತಿ ವೇಗದ ಭಾರತೀಯ ಎನಿಸಿಕೊಂಡರು.

ಎದುರಿಸಿದ ಬಾಲ್‌ಗಳನ್ನು ಗಣನೆಗೆ ತೆಗೆದುಕೊಂಡರೆ, ಅತಿ ಕಡಿಮೆ ಎಸೆತಗಳಲ್ಲಿ 1500 ರನ್ ಗಳಿಸಿದವರ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾ ಸ್ಫೋಟಕ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ 940 ಎಸೆತಗಳಲ್ಲಿ 1500 ರನ್ ಗಳಿಸಿದರೆ, ಸೂರ್ಯಕುಮಾರ್ 843 ಎಸೆತಗಳಲ್ಲಿ 1500 ರನ್ ಗಳಿಸಿ ಮ್ಯಾಕ್ಸ್‌ವೆಲ್ ದಾಖಲೆ ಮುರಿದಿದ್ದಾರೆ.

Ind vs SL 3rd T20I: ಬೆಂಕಿ ನೀನು! ಸೂರ್ಯಕುಮಾರ್ ಆಟಕ್ಕೆ ಕಿಂಗ್ ಕೊಹ್ಲಿ ಪ್ರತಿಕ್ರಿಯೆ ವೈರಲ್

ಟಿ20 ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್

ಟಿ20 ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್

51 ಎಸೆತಗಳಲ್ಲಿ ಅಜೇಯ 112 ರನ್ ಗಳಿಸಿದ ಸೂರ್ಯಕುಮಾರ್ ಯಾದವ್ ತಮ್ಮ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಮತ್ತು 9 ಭರ್ಜರಿ ಸಿಕ್ಸರ್ ಸಿಡಿಸಿದ್ದರು. ಆರಂಭಿಕರನ್ನು ಹೊರತುಪಡಿಸಿ ಮಧ್ಯಮ ಕ್ರಮಾಂಕದ ಬ್ಯಾಟರ್ ಇನ್ನಿಂಗ್ಸ್‌ ಒಂದರಲ್ಲಿ ಅತಿ ಹೆಚ್ಚು ಸಿಕ್ಸ್ ಬಾರಿಸಿದ ಭಾರತೀಯ ಬ್ಯಾಟರ್ ಎನ್ನುವ ದಾಖಲೆ ನಿರ್ಮಿಸಿದರು.

ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್ ಸೇರಿದಂತೆ ಹಲವರು ಈವರೆಗೆ 7 ಸಿಕ್ಸರ್ ದಾಖಲಿಸಿದ್ದು ಗರಿಷ್ಠವಾಗಿತ್ತು, ಈ ದಾಖಲೆಯನ್ನು ಸೂರ್ಯಕುಮಾರ್ ಯಾದವ್ ಮುರಿದರು. ರಾಜ್‌ಕೋಟ್‌ನಲ್ಲಿ 219.61 ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸುವ ಮೂಲಕ 2022ರಲ್ಲಿ ನ್ಯೂಜಿಲೆಂಡ್‌ನಲ್ಲಿ ಅಜೇಯ 111 ರನ್ ಗಳಿಸುವಾಗ ದಾಖಲಿಸಿದ್ದ 217.64 ಸ್ಟ್ರೈಕ್‌ರೇಟ್‌ ದಾಖಲೆಯನ್ನು ಮುರಿದರು.

ಮೂರು ಖಂಡಗಳಲ್ಲಿ ಟಿ20 ಶತಕ

ಮೂರು ಖಂಡಗಳಲ್ಲಿ ಟಿ20 ಶತಕ

ವಿಶ್ವದ ಯಾವುದೇ ಕ್ರೀಡಾಂಗಣದಲ್ಲಿ ಆದರೂ ಸರಿ ನಾನು ಹೀಗೆಯೇ ಆಡುತ್ತೇನೆ ಎಂದು ಸೂರ್ಯಕುಮಾರ್ ಯಾದವ್ ಸಾಬೀತು ಮಾಡಿದ್ದಾರೆ. ಮೂರು ವಿಭಿನ್ನ ಖಂಡಗಳಲ್ಲಿ ಟಿ20 ಶತಕ ಗಳಿಸಿದ ಮೊದಲ ಬ್ಯಾಟರ್ ಎನ್ನುವ ದಾಖಲೆ ನಿರ್ಮಿಸಿದ್ದಾರೆ.

2022ರ ಜುಲೈನಲ್ಲಿ ಇಂಗ್ಲೆಂಡ್‌ ವಿರುದ್ಧ ಚೊಚ್ಚಲ ಅಂತಾರಾಷ್ಟ್ರೀಯ ಟಿ20 ಶತಕ ದಾಖಲಿಸಿದ್ದರು. 2022ರ ನವೆಂಬರ್‍‌ ನಲ್ಲಿ ನ್ಯೂಜಿಲೆಂಡ್ ವಿರುದ್ಧ ಎರಡನೇ ಶತಕ ದಾಖಲಿಸಿದ್ದ ಸೂರ್ಯಕುಮಾರ್ ಯಾದವ್ 3ನೇ ಶತಕವನ್ನು ತವರು ನೆಲದಲ್ಲಿ ಸಿಡಿಸಿದ್ದಾರೆ.

Story first published: Sunday, January 8, 2023, 11:26 [IST]
Other articles published on Jan 8, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X