ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs SL: 'ನಮ್ಮ ಸಂಜು ಸ್ಯಾಮ್ಸನ್ ಎಲ್ಲಿ' ಎಂಬ ಫ್ಯಾನ್ಸ್ ಪ್ರಶ್ನೆಗೆ ಉತ್ತರಿಸಿ ಹೃದಯ ಗೆದ್ದ ಸೂರ್ಯಕುಮಾರ್

IND vs SL: Suryakumar Yadav Wins Heart By Answering Fans Question Where Is Our Sanju Samson?

ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಅತ್ಯಂತ ಭರವಸೆಯ ಬ್ಯಾಟರ್‌ಗಳಲ್ಲಿ ಒಬ್ಬರಾದ ಸಂಜು ಸ್ಯಾಮ್ಸನ್ ಯಾವುದೇ ಸ್ವರೂಪದಲ್ಲಿಯೂ ಭಾರತ ತಂಡದ ಪರ ಸತತವಾಗಿ ಆಡಲು ಸಾಧ್ಯವಾಗಿಲ್ಲ. ಶ್ರೀಲಂಕಾ ವಿರುದ್ಧದ ಟಿ20 ಸರಣಿಗಾಗಿ ಸಂಜು ಸ್ಯಾಮ್ಸನ್ ಭಾರತ ತಂಡದ ಭಾಗವಾಗಿದ್ದರು. ಆದರೆ ಗಾಯದಿಂದಾಗಿ ಅವರನ್ನು ಹೊರಗಿಡಲಾಯಿತು.

ಶ್ರೀಲಂಕಾ ವಿರುದ್ಧದ ಮೂರನೇ ಏಕದಿನ ಪಂದ್ಯ ಕೇರಳದ ತಿರುವನಂತಪುರಂನಲ್ಲಿ ನಡೆಯುತ್ತಿರುವಾಗ ಸಂಜು ಸ್ಯಾಮ್ಸನ್ ಅವರ ತವರು ಅಭಿಮಾನಿಗಳು ಭಾರತದ ಇನ್ನೊಬ್ಬ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಅವರೊಂದಿಗೆ ಸಂವಾದ ನಡೆಸಿದರು.

ಮೂರನೇ ಪಂದ್ಯದ ವೇಳೆ ಅಭಿಮಾಗಳು 'ನಮ್ಮ ಸಂಜು ಸ್ಯಾಮ್ಸನ್ ಎಲ್ಲಿ?' ಎಂದು ಕೇಳಿದರು. ಆಗ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರಿಂದ ಬಂದ ಪ್ರತಿಕ್ರಿಯೆ ಖಂಡಿತವಾಗಿಯೂ ಅಭಿಮಾನಿಗಳ ಹೃದಯವನ್ನು ಗೆದ್ದಿದೆ.

IND vs NZ: ಇದೀಗ ರಿಕಿ ಪಾಂಟಿಂಗ್, ವೀರೇಂದ್ರ ಸೆಹ್ವಾಗ್ ದಾಖಲೆ ಮೇಲೆ ಕಣ್ಣಿಟ್ಟ ವಿರಾಟ್ ಕೊಹ್ಲಿIND vs NZ: ಇದೀಗ ರಿಕಿ ಪಾಂಟಿಂಗ್, ವೀರೇಂದ್ರ ಸೆಹ್ವಾಗ್ ದಾಖಲೆ ಮೇಲೆ ಕಣ್ಣಿಟ್ಟ ವಿರಾಟ್ ಕೊಹ್ಲಿ

ಸೂರ್ಯಕುಮಾರ್ ಯಾದವ್ ಅವರು ಬೌಂಡರಿ ಲೈನ್ ಬಳಿ ಫೀಲ್ಡಿಂಗ್ ಮಾಡುತ್ತಿದ್ದಾಗ, ಅವರೊಂದಿಗೆ ಸಂವಹನ ನಡೆಸಲು ಅಭಿಮಾನಿಗಳು ಅವಕಾಶ ಪಡೆದರು.

'ಹಮಾರಾ ಸಂಜು ಕಿದರ್ ಹೈ (ನಮ್ಮ ಸಂಜು ಎಲ್ಲಿದ್ದಾನೆ)?' ಎಂದು ಅಭಿಮಾನಿಯೊಬ್ಬರು ಕೇಳುವುದು ಕೇಳಿಸಿತು. ಆ ಪ್ರಶ್ನೆಗೆ ಸೂರ್ಯಕುಮಾರ್ ಯಾದವ್ ತನ್ನ ಹೃದಯದ ಕಡೆಗೆ ಬೊಟ್ಟು ಮಾಡಿ, ಹೃದಯದಲ್ಲಿದ್ದಾನೆ ಎನ್ನುವ ಸಂದೇಶ ನೀಡಿದರು. ಅದು ಅಭಿಮಾನಿಗಳ ಮನ ಗೆಲ್ಲುವಂತೆ ಇತ್ತು. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.



ಸಂಜು ಸ್ಯಾಮ್ಸನ್ ಇಡೀ ಸರಣಿಯ ಭಾಗವಾಗಲು ಸಾಧ್ಯವಾಗಲಿಲ್ಲ. ಇನ್ನು ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ನಂತರ ಸೂರ್ಯಕುಮಾರ್ ಯಾದವ್ ಮೂರನೇ ಏಕದಿನ ಪಂದ್ಯದಲ್ಲಿ ಆಡುವ 11ರ ಬಳಗದಲ್ಲಿ ಕಾಣಿಸಿಕೊಂಡರು.

ಆದರೆ, ಆಕ್ರಮಣಕಾರಿ ಬ್ಯಾಟರ್ ಸೂರ್ಯಕುಮಾರ್ ಯಾದವ್ 4 ಎಸೆತಗಳಲ್ಲಿ 4 ರನ್‌ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು. ನಂತರ ಭಾರತ ತಂಡವು ವಿರಾಟ್ ಕೊಹ್ಲಿ ಅಜೇಯ 166 ರನ್ ನೆರವಿನಿಂದ ಸ್ಕೋರ್ ಬೋರ್ಡ್‌ನಲ್ಲಿ 5 ವಿಕೆಟ್‌ಗೆ 390 ರನ್ ಕಲೆಹಾಕಿತು. 46ನೇ ಏಕದಿನ ಶತಕ ಮತ್ತು ಅಂತಾರಾಷ್ಟ್ರೀಯ ಎಲ್ಲಾ ಸ್ವರೂಪಗಳಲ್ಲಿ 74ನೇ ಶತಕವಾಗಿದೆ.

ವಿರಾಟ್ ಕೊಹ್ಲಿ ತಮ್ಮ 46ನೇ ಏಕದಿನ ಶತಕ ಮತ್ತು ಅಂತಾರಾಷ್ಟ್ರೀಯ ಎಲ್ಲಾ ಸ್ವರೂಪಗಳಲ್ಲಿ 74ನೇ ಶತಕವಾಗಿದೆ. ನಂತರ ಬಿಗಿ ಬೌಲಿಂಗ್ ನಡೆಸಿದ ಭಾರತ ತಂಡ ಶ್ರೀಲಂಕಾ ವಿರುದ್ಧ 317 ರನ್‌ಗಳಿಂದ ವಿಶ್ವದಾಖಲೆಯ ಏಕದಿನ ಗೆಲುವು ಸಾಧಿಸಿತು.

Story first published: Tuesday, January 17, 2023, 11:54 [IST]
Other articles published on Jan 17, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X