ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಿಂದ ಹೊರಬಿದ್ದ ಕೆ.ಎಲ್ ರಾಹುಲ್, ಅಕ್ಷರ್ ಪಟೇಲ್

KL RAHUL AND AXAR PATEL

ಟೀಂ ಇಂಡಿಯಾ ನಿಗದಿತ ಓವರ್ ಕ್ರಿಕೆಟ್ ಫಾರ್ಮೆಟ್‌ನ ಉಪನಾಯಕ ಕೆ.ಎಲ್ ರಾಹುಲ್ ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿದಿದ್ದಾರೆ. ಕೆ.ಎಲ್. ರಾಹುಲ್ ಅಷ್ಟೇ ಅಲ್ಲದೆ ಆಲ್‌ರೌಂಡರ್ ಅಕ್ಷರ್ ಪಟೇಲ್ ಕೂಡ ವಿಂಡೀಸ್ ವಿರುದ್ಧದ ಟಿ20 ಸರಣಿಗೆ ಅಲಭ್ಯರಾಗಿದ್ದಾರೆ.

ಐಪಿಎಲ್ ಹರಾಜಿಗೂ ಮುನ್ನ ಆಸ್ಪತ್ರೆಗೆ ದಾಖಲಾದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಐಪಿಎಲ್ ಹರಾಜಿಗೂ ಮುನ್ನ ಆಸ್ಪತ್ರೆಗೆ ದಾಖಲಾದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

ಕೆ.ಎಲ್ ರಾಹುಲ್ ವಿಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಹ್ಯಾಮ್‌ಸ್ಟ್ರಿಂಗ್‌ನಿಂದ ಬಳಲಿದ್ರು. ಅವರ ಎರಡೂ ಮಣಿಕಟ್ಟುಗಳಿಗೆ ಬ್ಯಾಂಡ್ ಧರಿಸಿ ಫೀಲ್ಡಿಂಗ್ ಮಾಡಿದ್ರು. ಆದ್ರೆ ಕೆಲ ಸಮಯದ ಬಳಿಕ ಅವರು ಮೈದಾನದಿಂದ ಹೊರನಡೆದು ಪೆವಿಲಿಯನ್ ಸೇರಿಕೊಂಡರು. ಹೀಗಾಗಿ ಇದರಿಂದ ಚೇತರಿಸಿಕೊಳ್ಳಲು ಸಮಯದ ಅವಶ್ಯಕತೆ ಇರುವ ಹಿನ್ನಲೆಯಲ್ಲಿ ಕೆ.ಎಲ್ ರಾಹುಲ್ ವಿಂಡೀಸ್ ವಿರುದ್ಧದ ಟಿ20 ಸರಣಿಯಿಂದ ಹೊರಬಿದ್ದಿದ್ದಾರೆ.

ಇನ್ನು ಈಗಾಗಲೇ ಗಾಯಗೊಂಡು ದಕ್ಷಿಣ ಆಫ್ರಿಕಾ ಪ್ರವಾಸ, ವಿಂಡೀಸ್ ವಿರುದ್ಧ ಏಕದಿನ ಸರಣಿ ಮಿಸ್ ಮಾಡಿಕೊಂಡಿದ್ದ ಅಕ್ಷರ್ ಪಟೇಲ್ ಶಿನ್ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಇದ್ರಿಂದಲೇ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕಳೆದುಕೊಳ್ಳಬೇಕಾಯಿತು. ಸ್ಪಿನ್ನರ್ ಇತ್ತೀಚೆಗೆ ಕೋವಿಡ್‌ ಪಾಸಿಟಿವ್ ಕೂಡ ಆಗಿದ್ದರು.

ಕೆ.ಎಲ್ ರಾಹುಲ್ ಅಲಭ್ಯತೆಯಿಂದಾಗಿ ಫೆಬ್ರವರಿ 16 ರಂದು ನಡೆಯಲಿರುವ ಟಿ20 ಸರಣಿಗೆ ರುತುರಾಜ್ ಗಾಯಕ್ವಾಡ್ ಮತ್ತು ದೀಪಕ್ ಹೂಡಾ ಅವರ ಬದಲಿಗೆ ತಂಡದಲ್ಲಿದ್ದಾರೆ.

"2022 ರ ಫೆಬ್ರವರಿ 9 ರಂದು 2 ನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ರಾಹುಲ್ ಮೇಲಿನ ಎಡ ಮಂಡಿರಜ್ಜು ಒತ್ತಡವನ್ನು ಅನುಭವಿಸಿದರು. ಆದರೆ ಇತ್ತೀಚೆಗೆ ಕೋವಿಡ್ -19 ನಿಂದ ಚೇತರಿಸಿಕೊಂಡ ನಂತರ ಅಕ್ಷರ್ ಅವರು ಪುನರ್ವಸತಿಯ ಅಂತಿಮ ಹಂತವನ್ನು ಪುನರಾರಂಭಿಸಿದ್ದಾರೆ. ಇದೀಗ ಅವರು ತಮ್ಮ ಗಾಯದ ಹೆಚ್ಚಿನ ನಿರ್ವಹಣೆಗಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಹೋಗಲಿದ್ದಾರೆ ಎಂದು ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಿದೆ.

"ಅಖಿಲ ಭಾರತ ಹಿರಿಯ ಆಯ್ಕೆ ಸಮಿತಿಯು ರುತುರಾಜ್ ಗಾಯಕ್ವಾಡ್ ಮತ್ತು ದೀಪಕ್ ಹೂಡಾ ಅವರನ್ನು ಬದಲಿಯಾಗಿ ಹೆಸರಿಸಿದೆ" ಎಂದು ಅದು ಸೇರಿಸಿದೆ. ಏಕದಿನ ಸರಣಿಯಲ್ಲಿ ಈ ಇಬ್ಬರು ಆಟಗಾರರು ವಿಂಡೀಸ್ ವಿರುದ್ಧದ ಟೀಂ ಇಂಡಿಯಾ ಸ್ಕ್ವಾಡ್‌ನಲ್ಲಿದ್ದರು. ಹೂಡಾಗೆ ಎರಡು ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕರೆ, ಗಾಯಕ್ವಾಡ್‌ಗೆ ಇನ್ನೂ ಚೊಚ್ಚಲ ಪಂದ್ಯ ಆಡುವುದನ್ನ ಎದುರು ನೋಡುತ್ತಿದ್ದಾರೆ.

ಟೀಂ ಇಂಡಿಯಾ ಟಿ20 ಸ್ಕ್ವಾಡ್‌
ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯ ಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ವೆಂಕಟೇಶ್ ಅಯ್ಯರ್, ದೀಪಕ್ ಚಾಹರ್, ಶಾರ್ದೂಲ್ ಠಾಕೂರ್, ರವಿ ಬಿಷ್ಣೋಯ್, ಯುಜವೇಂದ್ರ ಚಾಹಲ್, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ಭುವನೇಶ್ವರ್, ಅವೇಶ್ ಖಾನ್, ಹರ್ಷಲ್ ಪಟೇಲ್ , ರುತುರಾಜ್ ಗಾಯಕ್ವಾಡ್ , ದೀಪಕ್ ಹೂಡಾ

ವೆಸ್ಟ್ ಇಂಡಿಸ್ ವಿರುದ್ಧ ಟಿ20 ಸರಣಿಯ ವೇಳಾಪಟ್ಟಿ

ಟಿ20 ಸರಣಿಯ ವೇಳಾಪಟ್ಟಿ:
1 ನೇ T20, ಫೆಬ್ರವರಿ 16 , ಬುಧವಾರ, ಕೋಲ್ಕತ್ತಾ (7PM)
2 ನೇ T20, ಫೆಬ್ರವರಿ 18 , ಶುಕ್ರವಾರ, ಕೋಲ್ಕತ್ತಾ (7PM)
3ನೇ T20, ಫೆಬ್ರವರಿ 20 , ಭಾನುವಾರ, ಕೋಲ್ಕತ್ತಾ (7PM)

Story first published: Friday, February 11, 2022, 23:48 [IST]
Other articles published on Feb 11, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X