IND-W vs AUS-W: ಮಹಿಳಾ ಟಿ20 ಇತಿಹಾಸದಲ್ಲಿ ದೊಡ್ಡ ಹೆಗ್ಗಳಿಕೆಗೆ ಪಾತ್ರರಾದ ಹರ್ಮನ್‌ಪ್ರೀತ್ ಕೌರ್

ಬುಧವಾರ, ಡಿಸೆಂಬರ್ 14ರಂದು ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದ ಭಾರತ ಮಹಿಳಾ ತಂಡದ ವಿರುದ್ಧದ 5 ಪಂದ್ಯಗಳ ಸರಣಿಯ 3ನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡವು ಭರ್ಜರಿ ಗೆಲುವು ಸಾಧಿಸಿತು.

ಎಲ್ಲಿಸ್ ಪೆರ್ರಿ ಮತ್ತು ಗ್ರೇಸ್ ಹ್ಯಾರಿಸ್ ಅವರ ಉತ್ತಮ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ಆಸ್ಟ್ರೇಲಿಯ 3ನೇ ಟಿ20 ಪಂದ್ಯದಲ್ಲಿ 21 ರನ್‌ಗಳ ಜಯ ಸಾಧಿಸಿ ಸರಣಿಯಲ್ಲಿ 2-1 ಮುನ್ನಡೆ ಪಡೆದುಕೊಂಡರು. ಭಾರತ ತಂಡಕ್ಕೆ ಮುಂದಿನ ಎರಡು ಪಂದ್ಯಗಳು ನಿರ್ಣಾಯಕವಾಗಿವೆ.

Kane Williamson: ನ್ಯೂಜಿಲೆಂಡ್ ಟೆಸ್ಟ್ ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರ ಪ್ರಕಟಿಸಿದ ಕೇನ್ ವಿಲಿಯಮ್ಸನ್

ಇದೇ ವೇಳೆ ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮಹಿಳಾ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಹರ್ಮನ್‌ಪ್ರೀತ್ ಕೌರ್ ತಮ್ಮ 140ನೇ ಟಿ20 ಪಂದ್ಯ ಆಡಿದರು

ಹರ್ಮನ್‌ಪ್ರೀತ್ ಕೌರ್ ತಮ್ಮ 140ನೇ ಟಿ20 ಪಂದ್ಯ ಆಡಿದರು

ಬುಧವಾರ ಮುಂಬೈನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ ತಮ್ಮ 140ನೇ ಟಿ20 ಪಂದ್ಯವನ್ನು ಆಡುವ ಮೂಲಕ ಈ ಸಾಧನೆ ಮಾಡಿದರು.

ಹರ್ಮನ್‌ಪ್ರೀತ್ ಕೌರ್ 140 ಪಂದ್ಯಗಳ 125 ಇನ್ನಿಂಗ್ಸ್‌ಗಳಲ್ಲಿ 27.36 ಸರಾಸರಿಯಲ್ಲಿ 2,736 ರನ್ ಗಳಿಸಿದ್ದಾರೆ ಮತ್ತು ಅವರು 103 ರನ್ ಅತ್ಯುತ್ತಮ ಸ್ಕೋರ್‌ನೊಂದಿಗೆ ಒಂದು ಶತಕ ಮತ್ತು ಎಂಟು ಅರ್ಧ ಶತಕಗಳನ್ನು ಗಳಿಸಿದ್ದಾರೆ.

ಇತರ ಆಟಗಾರ್ತಿಯರು ಭಾರತದ ಹರ್ಮನ್‌ಪ್ರೀತ್ ಕೌರ್‌ಗಿಂತ ಹಿಂದೆ

ಇತರ ಆಟಗಾರ್ತಿಯರು ಭಾರತದ ಹರ್ಮನ್‌ಪ್ರೀತ್ ಕೌರ್‌ಗಿಂತ ಹಿಂದೆ

ಅತಿ ಹೆಚ್ಚು ಟಿ20 ಪಂದ್ಯಗಳನ್ನಾಡಿದವರ ಪಟ್ಟಿಯಲ್ಲಿ ನ್ಯೂಜಿಲೆಂಡ್‌ನ ಸುಜಿ ಬೇಟ್ಸ್ 139 ಟಿ20 ಪಂದ್ಯ, ಇಂಗ್ಲೆಂಡ್‌ನ ಡ್ಯಾನಿ ವ್ಯಾಟ್ 136 ಟಿ20 ಪಂದ್ಯ, ಆಸ್ಟ್ರೇಲಿಯಾದ ಅಲಿಸ್ಸಾ ಹೀಲಿ 135 ಟಿ20 ಪಂದ್ಯಗಳು, ಆಸ್ಟ್ರೇಲಿಯಾದ ಎಲ್ಲಿಸ್ ಪೆರ್ರಿ 129 ಟಿ20 ಪಂದ್ಯಗಳು ಮತ್ತು ಇತರ ಆಟಗಾರ್ತಿಯರು ಭಾರತದ ಹರ್ಮನ್‌ಪ್ರೀತ್ ಕೌರ್‌ಗಿಂತ ಹಿಂದೆ ಇದ್ದಾರೆ.

ಮೂರನೆ ಟಿ20 ಪಂದ್ಯದ ಕುರಿತಾಗಿ, ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 172 ರನ್ ಗಳಿಸಿತು. ಆರಂಭದಲ್ಲಿ ಪ್ರವಾಸಿ ತಂಡವನ್ನು 5 ರನ್‌ಗೆ 2 ವಿಕೆಟ್ ಪಡೆದು ನಿಯಂತ್ರಿಸಿದ್ದ ಭಾರತೀಯ ಬೌಲರ್‌ಗಳನ್ನು ಎಲ್ಲಿಸ್ ಪೆರ್ರಿ 47 ಎಸೆತಗಳಲ್ಲಿ 75 ರನ್‌ಗಳ ಸ್ಫೋಟಕ ಆಟದೊಂದಿಗೆ ದಂಡಿಸಿದರು.

ರೇಣುಕಾ ಸಿಂಗ್ ಎರಡು ವಿಕೆಟ್ ಪಡೆದು ಮಿಂಚಿದರು

ರೇಣುಕಾ ಸಿಂಗ್ ಎರಡು ವಿಕೆಟ್ ಪಡೆದು ಮಿಂಚಿದರು

ಅಲ್ಲದೆ ಬೆತ್ ಮೂನಿ (30 ರನ್) ಅವರೊಂದಿಗೆ ಮೂರನೇ ವಿಕೆಟ್‌ಗೆ 54 ರನ್‌ಗಳ ಜೊತೆಯಾಟ ನೀಡಿ ತಂಡದ ಮೊತ್ತ ಹೆಚ್ಚಿಸಿದರು. ಆಸ್ಟ್ರೇಲಿಯಾದ ಬ್ಯಾಟಿಂಗ್ ಇನ್ನಿಂಗ್ಸ್‌ನಲ್ಲಿ ಗ್ರೇಸ್ ಹ್ಯಾರಿಸ್ ಕೂಡ 18 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ 41 ರನ್ ಗಳಿಸಿ ಬೃಹತ್ ಮೊತ್ತ ಗಳಿಸುವಲ್ಲಿ ನೆರವಾದರು.

ಭಾರತದ ಪರ ಬೌಲಿಂಗ್‌ನಲ್ಲಿ ರೇಣುಕಾ ಸಿಂಗ್, ಅಂಜಲಿ ಸಾವರ್ಣಿ, ದೇವಿಕಾ ವೈದ್ಯ ಮತ್ತು ದೀಪ್ತಿ ಶರ್ಮಾ ತಲಾ ಎರಡು ವಿಕೆಟ್ ಪಡೆದು ಮಿಂಚಿದರು.

ಸ್ಮೃತಿ ಮಂಧಾನ 3ನೇ ಓವರ್‌ನಲ್ಲಿ ಔಟ್

ಸ್ಮೃತಿ ಮಂಧಾನ 3ನೇ ಓವರ್‌ನಲ್ಲಿ ಔಟ್

173 ರನ್‌ಗಳ ಗುರಿ ಬೆನ್ನತ್ತಿದ ಭಾರತ ತಂಡ, ಸ್ಟಾರ್ ಬ್ಯಾಟರ್ ಮತ್ತು ಉಪನಾಯಕಿ ಸ್ಮೃತಿ ಮಂಧಾನ 3ನೇ ಓವರ್‌ನಲ್ಲಿ ವಿಕೆಟ್ ನೀಡಿದ್ದು ಭಾರತಕ್ಕೆ ದೊಡ್ಡ ಹೊಡೆತ ಅನುಭವಿಸಿತು. ಸ್ಮೃತಿ ಮಂಧಾನ 10 ಎಸೆತಗಳನ್ನು ಎದುರಿಸಿ ಕೇವಲ 1 ರನ್ ಗಳಿಸಿದರು. ಇದು ಭಾರತದ ಚೇಸಿಂಗ್ ವೇಗಕ್ಕೆ ಕಡಿವಾಣ ಹಾಕಿದಂತಾಯಿತು.

ಆದರೆ ಯುವ ಬ್ಯಾಟರ್ ಶಫಾಲಿ ವರ್ಮಾ 41 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 6 ಬೌಂಡರಿಗಳ ನೆರವಿನಿಂದ 52 ರನ್ ಬಾರಿಸಿದರು. ಇನ್ನು ನಾಯಕಿ ಹರ್ಮನ್‌ಪ್ರೀತ್ ಕೌರ್ 27 ಎಸೆತಗಳಲ್ಲಿ 37 ರನ್ ಗಳಿಸಿದರು.

ಮಧ್ಯಮ ಕ್ರಮಾಂಕದ ಉಳಿದ ಆಟಗಾರ್ತಿಯರು ಆಸೀಸ್ ಬೌಲರ್‌ಗಳನ್ನು ಎದುರಿಸುವಲ್ಲಿ ವಿಫಲರಾದರು. ಜೆಮಿಮಾ ರೋಡ್ರಿಗಸ್ 16 ರನ್ ಗಳಿಸಿ ನಔಟಾದರೆ, 2ನೇ ಟಿ20 ಪಂದ್ಯದ ಗೆಲುವಿಗೆ ಕಾರಣವಾಗಿದ್ದ ರಿಚಾ ಘೋಷ್ ಕೇವಲ 1 ರನ್ ಗಳಿಸಿ ದೊಡ್ಡ ಹೊಡೆತ ಬಾರಿಸಲು ಹೋಗಿ ಕ್ಯಾಚ್ ನೀಡಿದರು.

ದೀಪ್ತಿ ಶರ್ಮಾ 17 ಎಸೆತಗಳಲ್ಲಿ ಔಟಾಗದೆ 25 ರನ್

ದೀಪ್ತಿ ಶರ್ಮಾ 17 ಎಸೆತಗಳಲ್ಲಿ ಔಟಾಗದೆ 25 ರನ್

ನಂತರ ಬಂದ ದೀಪ್ತಿ ಶರ್ಮಾ 17 ಎಸೆತಗಳಲ್ಲಿ ಔಟಾಗದೆ 25 ರನ್ ಗಳಿಸಿದರು. ದೇವಿಕಾ ವೈದ್ಯ ಬಂದಷ್ಟೆ ವೇಗವಾಗಿ ಪೆವಿಲಿಯನ್ ಸೇರಿದರು. ಆಲ್‌ರೌಂಡರ್ ದೀಪ್ತಿ ಶರ್ಮಾ ಪ್ರಯತ್ನದ ಹೊರತಾಗಿಯೂ ಭಾರತಕ್ಕೆ ಗೆಲುವಿನ ಗುರಿ ತಲುಪಲು ಸಾಧ್ಯವಾಗಲಿಲ್ಲ.

ಬೌಲಿಂಗ್‌ನಲ್ಲಿ ಆಸ್ಟ್ರೇಲಿಯಾ ಪರ ಡಾರ್ಸಿ ಬ್ರೌನ್ 19 ರನ್‌ಗೆ 2 ವಿಕೆಟ್ ಮತ್ತು ಆಶ್ ಗಾರ್ಡ್ನರ್ 21 ರನ್‌ಗೆ 2 ವಿಕೆಟ್ ಪಡೆದು ಮಿಂಚಿದರು.

ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಶನಿವಾರ (ಡಿಸೆಂಬರ್ 17) ನಡೆಯಲಿರುವ 4ನೇ ಟಿ20 ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿದ್ದರೆ, ಸರಣಿ ಅಂತಿಮ ಪಂದ್ಯ ಮಂಗಳವಾರ (ಡಿಸೆಂಬರ್ 20) ನಡೆಯಲಿದೆ.

For Quick Alerts
ALLOW NOTIFICATIONS
For Daily Alerts
Story first published: Thursday, December 15, 2022, 11:23 [IST]
Other articles published on Dec 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X