ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Kane Williamson: ನ್ಯೂಜಿಲೆಂಡ್ ಟೆಸ್ಟ್ ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರ ಪ್ರಕಟಿಸಿದ ಕೇನ್ ವಿಲಿಯಮ್ಸನ್

Kane Williamson Has Announced To Step Down From New Zealand Test Captaincy; Tim Southee Next Captain

ನ್ಯೂಜಿಲೆಂಡ್ ಟೆಸ್ಟ್ ಕ್ರಿಕೆಟ್ ನಾಯಕತ್ವದಿಂದ ಕೇನ್ ವಿಲಿಯಮ್ಸನ್ ಕೆಳಗಿಳಿಯಲಿದ್ದು, ಅನುಭವಿ ವೇಗಿ ಟಿಮ್ ಸೌಥಿ ಕಿವೀಸ್ ಟೆಸ್ಟ್ ತಂಡದ ನಾಯಕತ್ವವನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ.

ಟೆಸ್ಟ್ ಕ್ರಿಕೆಟ್ ನಾಯಕತ್ವದಿಂದ ಕೆಳಗಿಳಿದರೂ, ಕೇನ್ ವಿಲಿಯಮ್ಸನ್ ಅವರು ಏಕದಿನ ಮತ್ತು ಟಿ20 ಕ್ರಿಕೆಟ್‌ನಲ್ಲಿ ತಂಡವನ್ನು ಮುನ್ನಡೆಸುವುದನ್ನು ಮುಂದುವರಿಸಲಿದ್ದಾರೆ ಮತ್ತು ಮೂರು ಸ್ವರೂಪಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಡುವ ಬಯಕೆಯನ್ನು ಪುನರುಚ್ಚರಿಸಿದ್ದಾರೆ.

IND vs BAN 1st Test: ಟೆಸ್ಟ್ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಭಾರತದ 8ನೇ ಬ್ಯಾಟರ್ ರಿಷಭ್ ಪಂತ್IND vs BAN 1st Test: ಟೆಸ್ಟ್ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಭಾರತದ 8ನೇ ಬ್ಯಾಟರ್ ರಿಷಭ್ ಪಂತ್

346 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಟಿಮ್ ಸೌಥಿ 22 ಪಂದ್ಯಗಳಲ್ಲಿ ಟಿ20 ತಂಡವನ್ನು ಮುನ್ನಡೆಸಿದ್ದಾರೆ. ಟಿಮ್ ಸೌಥಿ ಈ ತಿಂಗಳ ಪಾಕಿಸ್ತಾನದ ಟೆಸ್ಟ್ ಪ್ರವಾಸದಲ್ಲಿ ಕಿವೀಸ್ ತಂಡವನ್ನು ಮುನ್ನಡೆಸಿದಾಗ ನ್ಯೂಜಿಲೆಂಡ್‌ನ 31ನೇ ಟೆಸ್ಟ್ ನಾಯಕರಾಗುತ್ತಾರೆ.

Kane Williamson Has Announced To Step Down From New Zealand Test Captaincy; Tim Southee Next Captain

ಈ ಹಿಂದೆ ಕೇನ್ ವಿಲಿಯಮ್ಸನ್ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ ನಂತರ ಸ್ಫೋಟಕ ಓಪನಿಂಗ್ ಬ್ಯಾಟರ್ ಟಾಮ್ ಲ್ಯಾಥಮ್ ಅವರನ್ನು ಟೆಸ್ಟ್ ತಂಡದ ಉಪನಾಯಕನನ್ನಾಗಿ ಆಯ್ಕೆ ಮಾಡುವುದು ಖಚಿತವಾಗಿದೆ.

2016ರಲ್ಲಿ ಬ್ರೆಂಡನ್ ಮೆಕಲಮ್ ನಿವೃತ್ತಿಯ ನಂತರ ನಾಯಕತ್ವ ವಹಿಸಿಕೊಂಡ 6 ವರ್ಷಗಳ ನಂತರ ನ್ಯೂಜಿಲೆಂಡ್‌ನ ಟೆಸ್ಟ್ ನಾಯಕರಾಗಿ ಕೇನ್ ವಿಲಿಯಮ್ಸನ್ ಅವರ ಅವಧಿ ಕೊನೆಗೊಳ್ಳಲಿದೆ. 2021ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತ ವಿರುದ್ಧ ದೊಡ್ಡ ಜಯದೊಂದಿಗೆ 38 ಟೆಸ್ಟ್‌ಗಳಲ್ಲಿ 22 ಗೆಲುವಿನಲ್ಲಿ ಕಿವೀಸ್ ತಂಡವನ್ನು ಮುನ್ನಡೆಸಿದರು.

IND vs BAN 1st Test: ವೆಂಗ್‌ಸರ್ಕರ್ ಹಿಂದಿಕ್ಕಿ ಭಾರತ ಪರ 8ನೇ ಸ್ಥಾನಕ್ಕೇರಿದ ಚೇತೇಶ್ವರ ಪೂಜಾರ

ಟೆಸ್ಟ್‌ಗಳಲ್ಲಿ ನ್ಯೂಜಿಲೆಂಡ್ ತಂಡವನ್ನು ಮುನ್ನಡೆಸುವಾಗ ಸ್ಟಾರ್ ಬ್ಯಾಟರ್ ಕೇನ್ ವಿಲಿಯಮ್ಸನ್ ಬ್ಯಾಟ್‌ನೊಂದಿಗೆ ಉತ್ತಮವಾಗಿ ಆಡಿದ್ದಾರೆ. ಅವರು ನಾಯಕನಾಗಿ 57ರ ಸರಾಸರಿ ಹೊಂದಿದ್ದರು ಮತ್ತು ನಾಯಕನಾಗಿ 11 ಶತಕಗಳನ್ನು ಬಾರಿಸಿದ್ದಾರೆ ಮತ್ತು ಅವುಗಳಲ್ಲಿ 8 ಪಂದ್ಯಗಳಲ್ಲಿ ಗೆಲುವಿಗೆ ಸಹಾಯವಾಗಿವೆ.

ಕೇನ್ ವಿಲಿಯಮ್ಸನ್ ಟೆಸ್ಟ್ ನಾಯಕತ್ವ ತ್ಯಜಿಸಲು ಕಾರಣವೇನು?
ನ್ಯೂಜಿಲೆಂಡ್ ತಂಡದ ಟೆಸ್ಟ್ ನಾಯಕತ್ವವನ್ನು ತ್ಯಜಿಸಲು ಕಾರಣ ತಿಳಿಸಿದ ಕೇನ್ ವಿಲಿಯಮ್ಸನ್, ವೈಟ್-ಬಾಲ್ ಕ್ರಿಕೆಟ್‌ನಲ್ಲಿ ತಂಡವನ್ನು ಅಗ್ರಸ್ಥಾನದಲ್ಲಿ ಕೊಂಡೊಯ್ಯುವ ನಿರ್ಧಾರದಿಂದಾಗಿ ಮತ್ತು ಹೆಚ್ಚುತ್ತಿರುವ ಕೆಲಸದ ಹೊರೆಯಿಂದ ನಾಯಕತ್ವ ತ್ಯಜಿಸುವ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಹೇಳಿದರು.

ಹಿಂದೆ ಸರಿಯುವ ಸಮಯ ಬಂದಿದೆ ಎಂದ ಅವರು, "ಟೆಸ್ಟ್ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ತಂಡದ ನಾಯಕತ್ವವು ನಂಬಲಾಗದಷ್ಟು ವಿಶೇಷ ಗೌರವವಾಗಿದೆ" ಎಂದು ಕೇನ್ ವಿಲಿಯಮ್ಸನ್ ತಿಳಿಸಿದರು.

"ನನಗೆ ಟೆಸ್ಟ್ ಕ್ರಿಕೆಟ್ ಸ್ವರೂಪದಲ್ಲಿ ತಂಡವನ್ನು ಮುನ್ನಡೆಸುವ ಸವಾಲುಗಳನ್ನು ನಾನು ಆನಂದಿಸಿದ್ದೇನೆ. ನಾಯಕತ್ವದಿಂದ ಮೈದಾನದ ಒಳಗೆ ಮತ್ತು ಹೊರಗೆ ಹೆಚ್ಚಿದ ಕೆಲಸದ ಹೊರೆಯಾಗಿ ಪರಿಣಮಿಸಿದೆ. ನನ್ನ ಕ್ರಿಕೆಟ್ ವೃತ್ತಿಜೀವನದ ಈ ಹಂತದಲ್ಲಿ ಟೆಸ್ಟ್ ನಾಯಕತ್ವದಿಂದ ಹಿಂದೆ ಸರಿಯುವ ನಿರ್ಧಾರಕ್ಕೆ ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ," ಎಂದರು.

"ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯೊಂದಿಗಿನ ಚರ್ಚೆಯ ನಂತರ, ಮುಂದಿನ ಎರಡು ವರ್ಷಗಳಲ್ಲಿ ಎರಡು ವಿಶ್ವಕಪ್‌ಗಳಲ್ಲಿ ವೈಟ್-ಬಾಲ್ ಸ್ವರೂಪಗಳ ನಾಯಕತ್ವವನ್ನು ಮುಂದುವರಿಸುವುದು ಉತ್ತಮ ಎಂದು ನಾವು ಭಾವಿಸಿದ್ದೇನೆ," ಎಂದು ವಿವರಿಸಿದರು.

Story first published: Thursday, December 15, 2022, 9:41 [IST]
Other articles published on Dec 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X