ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮತ್ತೆ ಅಬ್ಬರಿಸಿದ ಮಯಂಕ್: ಇಂಗ್ಲೆಂಡ್ ಲಯನ್ಸ್ ವಿರುದ್ಧ ಗೆಲುವು

India A beat england lions in their third odi in tri series

ಲೀಸೆಸ್ಟರ್, ಜೂನ್ 27: ಕರ್ನಾಟಕದ ಮಯಂಕ್ ಅಗರ್ವಾಲ್ ಅವರ ಸತತ ಎರಡನೆಯ ಶತಕದ ನೆರವಿನಿಂದ ಭಾರತ ಎ ತಂಡವು ತ್ರಿಕೋನ ಸರಣಿಯ ತನ್ನ ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ ಲಯನ್ಸ್ ತಂಡದ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದೆ.

ಆರಂಭಿಕ ಪಂದ್ಯದಲ್ಲಿ ಲಯನ್ಸ್‌ಗೆ ಶರಣಾಗಿದ್ದ 'ಎ' ತಂಡದ ಆಟಗಾರರು 102 ರನ್‌ಗಳ ಭಾರಿ ಅಂತರದ ಗೆಲುವು ಸಾಧಿಸುವ ಮೂಲಕ ಸೇಡು ತೀರಿಸಿಕೊಂಡರು.

ಐರಿಶ್ ನೆಲದಲ್ಲಿ ಭಾರತಕ್ಕೆ ಚುಟುಕು ಕ್ರಿಕೆಟ್ ಸವಾಲು: ಮೊದಲ ಪಂದ್ಯ ಇಂದು ಐರಿಶ್ ನೆಲದಲ್ಲಿ ಭಾರತಕ್ಕೆ ಚುಟುಕು ಕ್ರಿಕೆಟ್ ಸವಾಲು: ಮೊದಲ ಪಂದ್ಯ ಇಂದು

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಶ್ರೇಯಸ್ ಅಯ್ಯರ್ ನಿರ್ಧಾರವನ್ನು ಆರಂಭಿಕರಾದ ಮಯಂಕ್ ಅಗರ್ವಾಲ್ ಮತ್ತು ಶುಭ್‌ಮನ್‌ ಗಿಲ್ ಸಮರ್ಥಿಸಿಕೊಂಡರು.

ಮೊದಲ ವಿಕೆಟ್‌ಗೆ ಇವರಿಬ್ಬರೂ 28.2 ಓವರ್‌ಗಳಲ್ಲಿ 165 ರನ್ ಕಲೆಹಾಕಿದರು. ಪೃಥ್ವಿ ಶಾ ಅನುಪಸ್ಥಿತಿಯಲ್ಲಿ ಇನ್ನಿಂಗ್ಸ್ ಆರಂಭಿಸಿದ ಶುಭ್‌ಮನ್‌ ಗಿಲ್, ಮಯಂಕ್‌ಗೆ ಉತ್ತಮ ಸಾಥ್ ನೀಡಿದರು. ಬಳಿಕ ಹನುಮ ವಿಹಾರಿ ಕೂಡ ಅರ್ಧ ಶತಕ ಗಳಿಸುವ ಮೂಲಕ ತಂಡದ ಮೊತ್ತವನ್ನು ಹೆಚ್ಚಿಸಿದರು.

ನವೆಂಬರ್ 11ಕ್ಕೆ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ಸಮರ ನವೆಂಬರ್ 11ಕ್ಕೆ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ಸಮರ

ಇನ್ನೊಂದೆಡೆ ತಮ್ಮ ವೇಗದ ಶೈಲಿಗೆ ಆದ್ಯತೆ ನೀಡಿದ ಮಯಂಕ್ ಅಗರ್ವಾಲ್ 104 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 10 ಬೌಂಡರಿ ಸಹಿತ 112 ರನ್ ಬಾರಿಸಿದರು.

India A beat england lions in their third odi in tri series

ಮಯಂಕ್ ಔಟಾದ ಬಳಿಕ ವಿಕೆಟ್ ಕೀಪರ್ ರಿಷಬ್ ಪಂತ್ ಮತ್ತು ನಾಯಕ ಶ್ರೇಯಸ್ ಅಯ್ಯರ್ ಒಬ್ಬರ ಹಿಂದೊಬ್ಬರು ವಿಕೆಟ್ ಒಪ್ಪಿಸಿದ್ದರಿಂದ ರನ್ ಗತಿಗೆ ಕಡಿವಾಣ ಬಿದ್ದಿತು. ಕೊನೆಯಲ್ಲಿ ದೀಪಕ್ ಹೂಡಾ 300ರ ಗಡಿ ದಾಟಿಸಿದರು.

ಮಯಂಕ್ ಅಗರ್ವಾಲ್ ಔಟಾಗುವಾಗ ತಂಡದ ಮೊತ್ತ 34.4 ಓವರ್‌ಗಳಲ್ಲಿ 207 ಆಗಿತ್ತು. ಆದರೆ ಕೊನೆಯ 15.2 ಓವರ್‌ಗಳಲ್ಲಿ 102 ರನ್ ಮಾತ್ರ ಕಲೆಹಾಕಲು ಸಾಧ್ಯವಾಯಿತು.

ಸವಾಲಿನ ಗುರಿ ಬೆನ್ನತ್ತಿದ ಇಂಗ್ಲೆಂಡ್ ಲಯನ್ಸ್ ತಂಡಕ್ಕೆ ಶಾರ್ದೂಲ್ ಠಾಕೂರ್ ಮತ್ತು ಪ್ರಸಿದ್ಧ್ ಕೃಷ್ಣ ಆರಂಭದಲ್ಲೇ ಆಘಾತ ನೀಡಿದರು.

ಮಯಂಕ್ ಅಗರ್ವಾಲ್ ಶತಕಕ್ಕೆ ತಲೆಬಾಗಿದ ವೆಸ್ಟ್ ಇಂಡೀಸ್ 'ಎ'ಮಯಂಕ್ ಅಗರ್ವಾಲ್ ಶತಕಕ್ಕೆ ತಲೆಬಾಗಿದ ವೆಸ್ಟ್ ಇಂಡೀಸ್ 'ಎ'

ಮೊದಲ ಪಂದ್ಯದಲ್ಲಿ ಭಾರತದ ವಿರುದ್ಧ ಶತಕ ಗಳಿಸಿದ್ದ ನಿಕ್ ಗುಬ್ಬಿನ್ಸ್ ಉತ್ತಮ ಆರಂಭ ಪಡೆದರೂ, ಠಾಕೂರ್ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರು. ಅದರ ಬೆನ್ನಲ್ಲೇ ಟಾಮ್ ಕೊಹ್ಲೆರ್ ಕಾಡ್ಮೋರ್ ಹಾಗೂ ಸ್ಯಾಮ್ ಹೈನ್ ವಿಕೆಟ್ ಒಪ್ಪಿಸಿದರು.

ಬೆನ್ ಫೋಕ್ಸ್, ಸ್ಟೀವ್ ಮುಲ್ಲಾನೆ, ಲಿಯಾಮ್ ಡಾಸನ್ ಮತ್ತು ಎಡ್ ಬರ್ನಾರ್ಡ್ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸುವಲ್ಲಷ್ಟೇ ಯಶಸ್ವಿಯಾದರು.

ಸಂಕ್ಷಿಪ್ತ ಸ್ಕೋರ್
ಭಾರತ ಎ: 309/6 (50 ಓವರ್): ಮಯಂಕ್ ಅಗರ್ವಾಲ್ 112, ಶುಭ್‌ಮನ್ ಗಿಲ್ 72, ಹನುಮ ವಿಹಾರಿ 69, ದೀಪಕ್ ಹೂಡಾ 33. ಮ್ಯಾಥ್ಯೂ ಫಿಶರ್ 58/2, ಎಡ್ ಬರ್ನಾರ್ಡ್ 51/2.

ಇಂಗ್ಲೆಂಡ್ ಲಯನ್ಸ್: 207/10 (41.3 ಓವರ್): ಲಿಯಾಮ್ ಡಾಸನ್ 38, ಬೆನ್ ಫೋಕ್ಸ್ 32, ಎಸ್ ಬರ್ನಾರ್ಡ್ 31, ಸ್ಟೀವನ್ ಮುಲ್ಲಾನಿ 23. ಶಾರ್ದೂಲ್ ಠಾಕೂರ್ 53/3, ಖಲೀಲ್ ಅಹ್ಮದ್ 30/2, ದೀಪಕ್ ಹೂಡಾ 10/1.

Story first published: Wednesday, June 27, 2018, 13:11 [IST]
Other articles published on Jun 27, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X