ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವನಿತಾ ಟಿ20: ಪಾಕ್ ವಿರುದ್ಧ ಭಾರತಕ್ಕೆ 7 ವಿಕೆಟ್ ಭರ್ಜರಿ ಜಯ

ಪಾಕ್ ವಿರುದ್ಧ ಭಾರತಕ್ಕೆ 7 ವಿಕೆಟ್ ಗಳ ಭರ್ಜರಿ ಜಯ | Oneindia kannada
India beat Pakistan by 7 wickets to reach Women’s Asia Cup final

ಕೌಲಾಲಂಪುರ, ಜೂ. 9: ಶನಿವಾರ ನಡೆದ ವನಿತಾ ಏಷ್ಯಾ ಕಪ್ ಟಿ20 ಚಾಂಪಿಯನ್ ಶಿಪ್ ನಲ್ಲಿ ಭಾರತ ತಂಡ ಪಾಕಿಸ್ತಾನವನ್ನು 7 ವಿಕೆಟ್ ನಿಂದ ಮಣಿಸಿ ಫೈನಲ್ ಗೆ ಲಗ್ಗೆಯಿಟ್ಟಿದೆ. ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ಭಾರತ, ಪಾಕಿಸ್ತಾನ ನೀಡಿದ್ದ 73 ರನ್ ಗುರಿ ತಲುಪಿ ವಿಜಯದ ನಗು ಬೀರಿತು.

ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ಪಾಕಿಸ್ತಾನ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಕೇವಲ 72 ರನ್ ಪೇರಿಸಿ ಭಾರತಕ್ಕೆ 73 ರನ್ ಗುರಿ ನೀಡಿತ್ತು. ಚೇಸಿಂಗ್ ಗಿಳಿದ ಭಾರತ 16.1 ಓವರ್ ಗಳಲ್ಲಿ 75 ರನ್ ಪೇರಿಸಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಸುಲಭ ಜಯ ದಾಖಲಿಸಿತು.

ಪಾಕಿಸ್ತಾನ ತಂಡದ ಪರ ಆಟಗಾರ್ತಿಯರು ಉತ್ತಮ ಬ್ಯಾಟಿಂಗ್ ತೋರಲಿಲ್ಲ. ಪಾಕಿಸ್ತಾನ ಇನ್ನಿಂಗ್ಸ್ ವೇಳೆ ಭಾರತವೂ ಬಿಗಿ ಬೌಲಿಂಗ್ ಪ್ರದರ್ಶಿಸಿ ಎದುರಾಳಿಯನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿತು. ಪಾಕಿಸ್ತಾನದಿಂದ ನಹಿದಾ ಖಾನ್ 18 (27) ರನ್, ಸನಾ ಮಿರ್ 20 (38) ರನ್ ಬಿಟ್ಟರೆ ಇನ್ಯಾರದ್ದೂ 10 ರನ್ ಗೆರೆ ದಾಟಲಿಲ್ಲ. ಇತ್ತ ಭಾರತೀಯ ಬೌಲರ್ ಎಕ್ತಾ ಬಿಶ್ತ್ ಕೂಡ 14 ರನ್ನಿಗೆ 3 ವಿಕೆಟ್ ಕಬಳಿಸಿ ಪಾಕಿಸ್ತಾನವನ್ನು ಕಾಡಿದರು.

ಭಾರತದ ಇನ್ನಿಂಗ್ಸ್ ವೇಳೆ ಮಿಥಾಲಿ ರಾಜ್ (0) ಹಾಗೂ ದೀಪ್ತಿ ಶರ್ಮಾ (0) ವಿಕೆಟುಗಳು ನಷ್ಟವಾದರೂ ಸ್ಮೃತಿ ಮಂಧಾನಾ (38) ಮತ್ತು ನಾಯಕಿ ಹರ್ಮನನ್ ಪ್ರೀತ್ ಕೌರ್ ( ಅಜೇಯ 34) ಸಮಯೋಚಿತ ಆಟದಿಂದ ಭಾರತ ಸುಲಭ ಜಯ ಸಾಧಿಸಿತು.

ಟೂರ್ನಿಯಲ್ಲಿ ಆಡಿರುವ ಒಟ್ಟು 5 ಪಂದ್ಯಗಳಲ್ಲಿ 4 ಗೆಲುವು ಮತ್ತು 1 ಸೋಲನ್ನು ಕಂಡಿರುವ ಭಾರತ ಒಟ್ಟು 8 ಅಂಕಗಳನ್ನು ಗಳಿಸುವುದರೊಂದಿಗೆ ಫೈನಲ್ ಗೆ ಪ್ರವೇಶಿಸಿದೆ. ಬಾಂಗ್ಲಾ ಮತ್ತು ಮಲೇಷ್ಯಾ ವನಿತೆಯರ ನಡುವೆ ಪಂದ್ಯ ನಡೆಯಲಿದ್ದು, ಇದರಲ್ಲಿನ ವಿಜೇತರು ಭಾರತದ ವಿರುದ್ಧ ಪಂದ್ಯವನ್ನಾಡಲಿದ್ದಾರೆ.

Story first published: Thursday, August 30, 2018, 15:43 [IST]
Other articles published on Aug 30, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X