ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಂಗ್ಲರ ನೆಲದಲ್ಲಿ ಭಾರತಕ್ಕೆ ಗೆಲುವು: ಟ್ವಿಟರ್ ಪ್ರತಿಕ್ರಿಯೆಗಳು

India vs England T20 series: twitter reactions

ಬೆಂಗಳೂರು, ಜುಲೈ 9: ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯನ್ನು 2-1ರಲ್ಲಿ ಗೆಲ್ಲುವ ಮೂಲಕ ಭಾರತ ದಾಖಲೆಯ ಸತತ ಆರನೇ ದ್ವಿಪಕ್ಷೀಯ ಸರಣಿ ಗೆದ್ದುಕೊಂಡಿದೆ.

ಆಂಗ್ಲರ ನಾಡಲ್ಲಿ ಭಾರತದ ವಿಜಯ ಪತಾಕೆ ಹಾರುವುದು ರೋಚಕ ಅನುಭವ. ಲಾರ್ಡ್ಸ್ ಮೈದಾನದಲ್ಲಿ ನಾಟ್‌ವೆಸ್ಟ್ ಏಕದಿನ ಸರಣಿ ಗೆದ್ದಾಗ ನಾಯಕ ಸೌರವ್ ಗಂಗೂಲಿ ಅಂಗಿ ತೆಗೆದು ಕುಣಿದಿದ್ದು, ಕ್ರಿಕೆಟ್ ಪ್ರಿಯರಲ್ಲಿ ಇಂದಿಗೂ ರೋಮಾಂಚನ ಮೂಡಿಸುವ ಘಟನೆ.

 ಟಿ20 ಸರಣಿ ಗೆದ್ದ ಬಳಿಕ ಭಾರತ, ರೋಹಿತ್, ಧೋನಿ ಬರೆದ ದಾಖಲೆಗಳು! ಟಿ20 ಸರಣಿ ಗೆದ್ದ ಬಳಿಕ ಭಾರತ, ರೋಹಿತ್, ಧೋನಿ ಬರೆದ ದಾಖಲೆಗಳು!

ಇಂಗ್ಲೆಂಡ್‌ನಲ್ಲಿನ ಚೆಂಡು ಪುಟಿಯುವ ಪಿಚ್‌ಗಳಲ್ಲಿ ಭಾರತ ಹೇಗೆ ಆಡಲಿದೆ ಎನ್ನುವುದು ಎಲ್ಲರ ಕುತೂಹಲವಾಗಿತ್ತು. ಅದಕ್ಕೆ ಆರಂಭದ ಹೆಜ್ಜೆಯಲ್ಲಿ ಭಾರತ ಸಕಾರಾತ್ಮಕ ಉತ್ತರ ನೀಡಿದೆ.

ಆದರೆ, ಇದು ಆರಂಭವಷ್ಟೇ. ಭಾರತ ಇನ್ನೂ ಮೂರು ಏಕದಿನ ಪಂದ್ಯಗಳ ಸರಣಿ ಹಾಗೂ ಐದು ಟೆಸ್ಟ್ ಪಂದ್ಯಗಳ ಸರಣಿ ಆಡಬೇಕಿದೆ.

ಏಕದಿನ ಹಾಗೂ ಟೆಸ್ಟ್ ಸರಣಿಗಳೆರಡೂ ಭಾರತದ ಸಾಮರ್ಥ್ಯವನ್ನು ಒರೆಗೆ ಹಚ್ಚಲಿವೆ. ಈ ಸವಾಲಿನ ಮುಂಚೆ ಚುಟುಕು ಕ್ರಿಕೆಟ್‌ನ ಚುಟುಕು ಸಾಧನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ರೋಹಿತ್ ಭರ್ಜರಿ ಶತಕ, ಆಂಗ್ಲರ ವಿರುದ್ಧ ಟಿ20 ಸರಣಿ ಕೈವಶರೋಹಿತ್ ಭರ್ಜರಿ ಶತಕ, ಆಂಗ್ಲರ ವಿರುದ್ಧ ಟಿ20 ಸರಣಿ ಕೈವಶ

ಟ್ವಿಟ್ಟರ್‌ನಲ್ಲಿ ಹಂಚಿಕೆಯಾದ ಅಭಿಪ್ರಾಯಗಳು, ಶುಭಾಶಯಗಳ ಮಹಾಪೂರಗಳಲ್ಲಿ ಕೆಲವು ಟ್ವೀಟ್‌ಗಳು ಇಲ್ಲಿವೆ.

ಟರ್ಬೊನೇಟರ್ ಟ್ವೀಟ್

ಭಾರತ ತಂಡಕ್ಕೆ ಅಭಿನಂದನೆ ಸಲ್ಲಿಸಿರುವ ಟರ್ಬೊನೇಟರ್ ಹರ್ಭಜನ್ ಸಿಂಗ್, ರೋಹಿತ್ ಶರ್ಮಾ ಬ್ಯಾಟಿಂಗ್‌ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜತೆಗೆ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲಿಯೂ ಮಿಂಚಿದ ಹಾರ್ದಿಕ್ ಪಾಂಡ್ಯ ಅವರ ಕೊಡುಗೆಯನ್ನು ಶ್ಲಾಘಿಸಿದ್ದಾರೆ.

ಅದ್ಭುತ ಗೆಲುವು

ಭಾರತದ ಅದ್ಭುತ ಗೆಲುವು. ಈ ಪಿಚ್‌ನಲ್ಲಿ 200ಕ್ಕಿಂತ ಕಡಿಮೆ ಮೊತ್ತಕ್ಕೆ ನಿಯಂತ್ರಿಸುವಲ್ಲಿ ಬೌಲರ್‌ಗಳು ಉತ್ತಮ ಸಾಧನೆ ತೋರಿದರು. ರೋಹಿತ್ ಶರ್ಮಾ ಆಡುವುದು ಸುಲಭವಾಗಿರುವಂತೆ ತೋರಿಸಿದರು. ಎಂದಿನಂತೆ ಮತ್ತೊಂದು ಕಷ್ಟವಿಲ್ಲದ ಶತಕ ಎಂದು ಮೊಹಮ್ಮದ್ ಕೈಫ್ ಹೇಳಿದ್ದಾರೆ.

ವಿಶೇಷ ಸಾಧನೆ: ಕಾಂಗ್ರೆಸ್

ಇಂಗ್ಲೆಂಡ್‌ನಲ್ಲಿ ಭಾರತ ಟಿ20 ಸರಣಿ ಗೆಲ್ಲುವುದರ ಮೂಲಕ ರೋಚಕ ಸರಣಿ ಅಂತ್ಯಗೊಂಡಿದೆ. ಅತ್ಯುತ್ತಮ ಫಾರ್ಮ್‌ನಲ್ಲಿರುವ ಇಂಗ್ಲೆಂಡ್ ತಂಡವನ್ನು ಸೋಲಿಸುವುದು ನಿಜಕ್ಕೂ ವಿಶೇಷ ಸಾಧನೆ. ಏಕದಿನ ಮತ್ತು ಟೆಸ್ಟ್ ಸರಣಿಯನ್ನು ಮಿಸ್ ಮಾಡುವಂತಿಲ್ಲ ಎಂದು ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

ದಾಖಲೆಯ ಶತಕ

ರೋಹಿತ್ ಶರ್ಮಾ ಅವರಿಂದ ದಾಖಲೆ ಸರಿಗಟ್ಟಿದ ಶತಕ. ಪಂದ್ಯ ಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಗಳೆರಡಕ್ಕೂ ಅವರು ಆಯ್ಕೆಯಾದರು ಎಂದು ಐಸಿಸಿ ಟ್ವೀಟ್ ಮಾಡಿದೆ.

Story first published: Monday, July 9, 2018, 14:31 [IST]
Other articles published on Jul 9, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X