ಭಾರತ-ನ್ಯೂಜಿಲೆಂಡ್ ಮೊದಲ ಟೆಸ್ಟ್‌: ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ 11

ಕಾನ್ಪುರದ ಗ್ರೀನ್‌ ಪಾರ್ಕ್‌ನಲ್ಲಿ ಭಾರತ-ನ್ಯೂಜಿಲೆಂಡ್ ತಂಡಗಳು ಮೊದಲ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಎದುರಾದ ಬಳಿಕ ಎರಡೂ ತಂಡಗಳು ಟೆಸ್ಟ್ ಫಾರ್ಮೆಟ್‌ನಲ್ಲಿ ಸವಾಲನ್ನ ಸ್ವೀಕರಿಸಲಿವೆ.

ಈಗಾಗಲೇ ಟೆಸ್‌ ಡಿಫೆಂಡಿಂಗ್ ಚಾಂಪಿಯನ್ ಆಗಿರುವ ನ್ಯೂಜಿಲೆಂಡ್, ಹಾಗೂ ರನ್ನರ್ ಅಪ್ ಭಾರತ ಈ ಟೆಸ್ಟ್ ಪಂದ್ಯದ ಮೂಲಕ ಹೊಸ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ಹೆಜ್ಜೆಯನ್ನಿಡಲಿವೆ. ಪ್ರತಿಯೊಂದು ಟೆಸ್ಟ್ ಪಂದ್ಯವೂ ಚಾಂಪಿಯನ್‌ಶಿಪ್‌ನಲ್ಲಿ ಉನ್ನತ ಮಟ್ಟಕ್ಕೇರಲು ಸಹಾಯವಾಗಲಿದ್ದು, ಎರಡೂ ತಂಡಗಳು ಶುಭಾರಂಭ ಮಾಡುವ ಕನಸು ಕಟ್ಟಿಕೊಂಡಿವೆ.

ಟಿ-20 ಸರಣಿಯನ್ನ ಭರ್ಜರಿಯಾಗಿ ಗೆದ್ದಿರುವ ಟೀಮ್ ಇಂಡಿಯಾ ಟೆಸ್ಟ್ ಸರಣಿಗೆ ತಯಾರಿ ನಡೆಸಿದೆ. ಅತ್ತ ನ್ಯೂಜಿಲೆಂಡ್ ಕೂಡ ಟಿ20 ಸರಣಿಯಲ್ಲಿ ಅನುಭವಿಸಿದ ಹೀನಾಯ ಸೋಲಿಗೆ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದೆ. ಬಲಿಷ್ಠ ಟೀಂ ಇಂಡಿಯಾವನ್ನ ಅವರದ್ದೇ ನೆಲದಲ್ಲಿ ಮಣಿಸುವುದು ಸಾಮಾನ್ಯ ವಿಚಾರವಾಗಿಲ್ಲ, ಬಹಳ ಪ್ರಬಲವಾದ ರಣತಂತ್ರವನ್ನ ರೂಪಿಸಿಯೇ ಕಣಕ್ಕಿಳಿಯಬೇಕಿದೆ.

ನ್ಯೂಜಿಲೆಂಡ್‌ ಬಲ ಹೆಚ್ಚಿಸಿದ ಕೇನ್ ವಿಲಿಯಮ್ಸನ್

ನ್ಯೂಜಿಲೆಂಡ್‌ ಬಲ ಹೆಚ್ಚಿಸಿದ ಕೇನ್ ವಿಲಿಯಮ್ಸನ್

ನ್ಯೂಜಿಲೆಂಡ್ ಕಠಿಣ ಅಭ್ಯಾಸದಲ್ಲಿ ತೊಡಗಿದ್ದು, ಕಿವೀಸ್‌ನ ಫುಲ್ ಟೈಮ್ ನಾಯಕ ಕೇನ್ ವಿಲಿಯಮ್ಸನ್ ವಾಪಸ್ಸಾತಿ ತಂಡದ ಬಲ ಹೆಚ್ಚಿಸಿದೆ. ಕಾನ್ಪುರದ ಗ್ರೀನ್ ಪಾರ್ಕ್ ಮೈದಾನದಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ವಿಭಿನ್ನ ತಂತ್ರದೊಂದಿಗೆ ತಯಾರಿ ನಡೆಸಿದೆ.

ಈಗಾಗಲೇ ನ್ಯೂಜಿಲೆಂಡ್ ಕೋಚ್ ಗ್ಯಾರಿ ಸ್ಟೆಡ್ ಹೇಳಿರುವಂತೆ ಮೂರು ಸ್ಪಿನ್ನರ್‌ಗಳಿಂದ ಕಣಕ್ಕಿಳಿದರೂ ಆಶ್ಚರ್ಯವಿಲ್ಲ ಎಂದಿದ್ದಾರೆ. ಪರಿಸ್ಥಿತಿಗೆ ಅನುಗುಣವಾಗಿ ನಿರ್ಧರಿಸಲಾಗುತ್ತದೆ ಎಂದಿದ್ದಾರೆ.

ಭಾರತದ ವಿರುದ್ಧ 3 ಸ್ಪಿನ್ನರ್‌ಗಳನ್ನ ಕಣಕ್ಕಿಳಿಸುವ ಸುಳಿವು ನೀಡಿದ ನ್ಯೂಜಿಲೆಂಡ್ ಕೋಚ್

ಅಜಿಂಕ್ಯ ರಹಾನೆಗೆ ಉತ್ತಮ ಅವಕಾಶ

ಅಜಿಂಕ್ಯ ರಹಾನೆಗೆ ಉತ್ತಮ ಅವಕಾಶ

ಇನ್ನು ಭಾರತದ ಪರ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಅಜಿಂಕ್ಯ ರಹಾನೆ ಟೀಂ ಇಂಡಿಯಾವನ್ನ ಮುನ್ನೆಡೆಸಲಿದ್ದಾರೆ. ಕೊಹ್ಲಿ ಮುಂಬೈನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಡಲಿದ್ದಾರೆ.

ರಹಾನೆಗಿದು ಮೊದಲ ಟೆಸ್ಟ್‌ ಪಂದ್ಯದ ನಾಯಕತ್ವ ಏನು ಅಲ್ಲ. ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧ ಸತತ ಎರಡನೇ ಟೆಸ್ಟ್ ಸರಣಿ ಗೆಲುವಿನಲ್ಲಿ ರಹಾನೆ ನಾಯಕತ್ವವು ಪ್ರಮುಖ ಪಾತ್ರವಹಿಸಿತ್ತು. ಅದ್ರಲ್ಲೂ ಟೀಂ ಇಂಡಿಯಾ ಪ್ರಮುಖ ಆಟಗಾರರಿಲ್ಲದೆ ಕಣಕ್ಕಿಳಿಯುತ್ತಿರುವುದು ಕುತೂಹಲಕ ಮೂಡಿಸಿದ್ದು, ಪ್ಲೇಯಿಂಗ್ 11ನಲ್ಲಿ ಯಾರೆಲ್ಲಾ ಆಡಬಹುದು ಎಂಬ ಲೆಕ್ಕಾಚಾರ ಶುರುವಾಗಿದೆ.

ಟೆಸ್ಟ್‌ನಿಂದ ವಿಶ್ರಾಂತಿಗೆಂದು ಹೊರಗುಳಿದ ರೋಹಿತ್ ಮತ್ತು ಕೊಹ್ಲಿ ವಿರುದ್ಧ ಕಿಡಿಕಾರಿದ ಮಾಜಿ ಕ್ರಿಕೆಟಿಗ

ಭಾರತದ ಟೆಸ್ಟ್‌ ಸ್ಕ್ವಾಡ್ ಮತ್ತು ನ್ಯೂಜಿಲೆಂಡ್ ಟೆಸ್ಟ್ ಸ್ಕ್ವಾಡ್ ಜೊತೆಗೆ ಪ್ಲೇಯಿಂಗ್‌ 11ನಲ್ಲಿ ಯಾವೆಲ್ಲಾ ಸಂಭಾವ್ಯ ಆಟಗಾರರು ಸ್ಥಾನ ಪಡೆಯಬಹುದು ಎಂಬುದನ್ನ ಈ ಕೆಳಗೆ ನೀಡಲಾಗಿದೆ.

ಭಾರತ-ನ್ಯೂಜಿಲೆಂಡ್ ಟೆಸ್ಟ್ ಸ್ಕ್ವಾಡ್‌

ಭಾರತ-ನ್ಯೂಜಿಲೆಂಡ್ ಟೆಸ್ಟ್ ಸ್ಕ್ವಾಡ್‌

ಟೀಂ ಇಂಡಿಯಾ ಸ್ಕ್ವಾಡ್‌

ಅಜಿಂಕ್ಯ ರಹಾನೆ (ನಾಯಕ) ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ (ಉಪನಾಯಕ) ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ವೃದ್ದಿಮಾನ್ ಸಾಹಾ, ಕೆ.ಎಸ್ ಭರತ್, ರವೀಂದ್ರ ಜಡೇಜಾ, ಆರ್. ಅಶ್ವಿನ್, ಅಕ್ಷರ್ ಪಟೇಲ್, ಜಯಂತ್ ಯಾದವ್, ಇಶಾಂತ್ ಶರ್ಮಾ, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ ಕೃಷ್ಣ

ನ್ಯೂಜಿಲೆಂಡ್ ಟೆಸ್ಟ್ ಸ್ಕ್ವಾಡ್

ಕೇನ್ ವಿಲಿಯಮ್ಸನ್ (c), ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಡೆವೊನ್ ಕಾನ್ವೇ, ಕೈಲ್ ಜೇಮಿಸನ್, ಟಾಮ್ ಲ್ಯಾಥಮ್, ಹೆನ್ರಿ ನಿಕೋಲ್ಸ್, ಅಜಾಜ್ ಪಟೇಲ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ವಿಲ್ ಸೋಮರ್ವಿಲ್ಲೆ, ಟಿಮ್ ಸೌಥಿ, ರಾಸ್ ಟೇಲರ್, ವಿಲ್ ಯಂಗ್, ನೀಲ್ ವ್ಯಾಗ್ನರ್

ಭಾರತ-ನ್ಯೂಜಿಲೆಂಡ್ ಸಂಭಾವ್ಯ ಆಟಗಾರರು

ಭಾರತ-ನ್ಯೂಜಿಲೆಂಡ್ ಸಂಭಾವ್ಯ ಆಟಗಾರರು

ಭಾರತದ ಸಂಭಾವ್ಯ ಪ್ಲೇಯಿಂಗ್ 11

ಮಯಾಂಕ್ ಅಗರ್ವಾಲ್, ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್, ಚೇತೇಶ್ವರ ಪೂಜಾರ (ಉಪನಾಯಕ), ಅಜಿಂಕ್ಯ ರಹಾನೆ (ನಾಯಕ), ವೃದ್ಧಿಮಾನ್ ಸಹಾ (WK), ರವೀಂದ್ರ ಜಡೇಜಾ, ಆರ್ ಅಶ್ವಿನ್, ಅಕ್ಷರ್ ಪಟೇಲ್, ಇಶಾಂತ್ ಶರ್ಮಾ, ಮೊಹಮ್ಮದ್ ಸಿರಾಜ್

ನ್ಯೂಜಿಲೆಂಡ್ ಸಂಭಾವ್ಯ ಪ್ಲೇಯಿಂಗ್ 11

ಟಾಮ್ ಲ್ಯಾಥಮ್, ಡೇರಿಲ್ ಮಿಚೆಲ್, ಕೇನ್ ವಿಲಿಯಮ್ಸನ್ (ನಾಯಕ), ರಾಸ್ ಟೇಲರ್, ಹೆನ್ರಿ ನಿಕೋಲ್ಸ್, ಟಾಮ್ ಬ್ಲಂಡೆಲ್ (WK), ಕೈಲ್ ಜೇಮಿಸನ್, ಮಿಚೆಲ್ ಸ್ಯಾಂಟ್ನರ್, ಅಜಾಜ್ ಪಟೇಲ್, ಟಿಮ್ ಸೌಥಿ, ನೀಲ್ ವ್ಯಾಗ್ನರ್

IPL ಅಭಿಮಾನಿಗಳಿಗೆ ಗುಡ್ ನ್ಯೂಸ್: ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್ | Oneindia Kannada

For Quick Alerts
ALLOW NOTIFICATIONS
For Daily Alerts
Story first published: Wednesday, November 24, 2021, 10:34 [IST]
Other articles published on Nov 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X