ಭಾರತ-ನ್ಯೂಜಿಲೆಂಡ್ ಅಂತಿಮ ಟಿ20 ಪಂದ್ಯ: ಸಂಭಾವ್ಯ ಪ್ಲೇಯಿಂಗ್ 11, ಹವಾಮಾನ, ಪಿಚ್‌ ರಿಪೋರ್ಟ್

ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯನ್ನು ಈಗಾಗಲೇ 2-0ಯಿಂದ ವಶಪಡಿಸಿಕೊಂಡಿರುವ ಟೀಂ ಇಂಡಿಯಾ ಮೂರನೇ ಹಾಗೂ ಅಂತಿಮ ಟಿ20 ಪಂದ್ಯವನ್ನ ಕೊಲ್ಕತ್ತಾದಲ್ಲಿ ಆಡಲಿದೆ. ಈಗಾಗಲೇ ಸರಣಿ ಕೈ ವಶ ಮಾಡಿಕೊಂಡಿರುವ ರೋಹಿತ್‌ ಪಡೆ ಅಂತಿಮ ಚುಟುಕು ಪಂದ್ಯವನ್ನೂ ಗೆದ್ದು ಕಿವೀಸ್‌ ಪಡೆಯನ್ನ ವೈಟ್ ವಾಶ್ ಮಾಡುವ ಗುರಿ ಹೊಂದಿದೆ.

ಕೊಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಭಾನುವಾರ (ನ. 21) ನಡೆಯಲಿರುವ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಹೇಗಾದರೂ ಮಾಡಿ ಭಾರತವನ್ನ ಮಣಿಸಲೇ ಬೇಕು ಎಂದು ನ್ಯೂಜಿಲೆಂಡ್ ಪಣತೊಟ್ಟಿದೆ.

ಬೆಂಚ್‌ ತಾಕತ್ತು ಪರೀಕ್ಷಿಸಲಿದ್ಯಾ ಭಾರತ?

ಬೆಂಚ್‌ ತಾಕತ್ತು ಪರೀಕ್ಷಿಸಲಿದ್ಯಾ ಭಾರತ?

ಈಗಾಗಲೇ ಟಿ20 ಸರಣಿಯನ್ನ ತನ್ನ ವಶಕ್ಕೆ ತೆಗೆದುಕೊಂಡಿರುವ ಭಾರತವು ತನ್ನ ಬೆಂಚ್ ಸ್ಟ್ರೆಂಥ್ ಬಗ್ಗೆ ತಿಳಿದುಕೊಳ್ಳುವ ಸಾಧ್ಯತೆಯು ಇದ್ದು, ರುತುರಾಜ್ ಗಾಯಕ್ವಾಡ್, ಅವೇಶ್ ಖಾನ್‌ರಂತಹ ಯುವ ಆಟಗಾರರಿಗೆ ಪ್ಲೇಯಿಂಗ್ 11ನಲ್ಲಿ ಅವಕಾಶ ನೀಡಬಹುದು.

ಆದರೆ ಮೊದಲೆರಡು ಪಂದ್ಯದಲ್ಲಿ ಸೋಲನ್ನ ಅನುಭವಿಸಿರುವ ನ್ಯೂಜಿಲೆಂಡ್‌ ಅಂತಿಮ ಪಂದ್ಯವನ್ನಾದ್ರು ಗೆದ್ದು ತನ್ನ ಪ್ರತಿಷ್ಠೆಯನ್ನ ಉಳಿಸಿಕೊಳ್ಳುತ್ತಾ ಕಾದುನೋಡಬೇಕು.

ಕೊಲ್ಕತ್ತಾದ ಪಿಚ್ ಹೇಗಿದೆ?

ಕೊಲ್ಕತ್ತಾದ ಪಿಚ್ ಹೇಗಿದೆ?

ಐತಿಹಾಸಿಕ ಈಡನ್ ಗಾರ್ಡನ್ ಮೈದಾನದಲ್ಲಿ ಸಾಮನ್ಯವಾಗಿ ಕಡಿಮೆ ಟೋಟಲ್‌ಗಳನ್ನ ಕಾಣಬಹುದು. ಈ ಮೈದಾನದಲ್ಲಿ ಸರಾಸರಿ ಸ್ಕೋರ್ 142ರಷ್ಟಿದ್ದು, ಹೆಚ್ಚಿನ ರನ್ ಹರಿದು ಬರುವ ಸಾಧ್ಯತೆ ಕಡಿಮೆಯಿದೆ. ಹ್ಯುಮಿಡಿಟಿ ಹೆಚ್ಚಿನ ಭಾಗದಲ್ಲಿದ್ದು, ಆಟದ ಅರ್ಧಭಾಗದ ನಂತರ ಇಬ್ಬನಿಯು ಪ್ರಮುಖ ಪಾತ್ರವಹಿಸುವುದು. ಹೀಗಾಗಿ ಟಾಸ್‌ ಗೆದ್ದ ತಂಡವು ನೇರವಾಗಿ ಬೌಲಿಂಗ್ ಮಾಡುವ ಆಯ್ಕೆ ಸಾಮಾನ್ಯವಾಗಿದೆ.

ಕೊಲ್ಕತ್ತಾದಲ್ಲಿ ಮಳೆ ಬರುವ ಸಾಧ್ಯತೆಯಿದೆಯೇ?

ಕೊಲ್ಕತ್ತಾದಲ್ಲಿ ಮಳೆ ಬರುವ ಸಾಧ್ಯತೆಯಿದೆಯೇ?

ಕೋಲ್ಕತ್ತಾದಲ್ಲಿ ಭಾನುವಾರ ಮಳೆಯ ಮುನ್ಸೂಚನೆ ಇಲ್ಲ. ನಗರದಲ್ಲಿ ತಾಪಮಾನವು 22 ರಿಂದ 30 ಡಿಗ್ರಿ ಸೆಲ್ಸಿಯಸ್ ನಡುವೆ ಇರಬಹುದು ಮತ್ತು ಪಂದ್ಯದ ದಿನದಂದು ಹ್ಯುಮಿಡಿಟಿ ಗರಿಷ್ಠ 63 ಪ್ರತಿಶತದಷ್ಟು ಇರಬಹುದು.

ಪಂದ್ಯವು ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಪ್ರಾರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ಗಳಲ್ಲಿ ಮತ್ತು ಲೈವ್ ಸ್ಟ್ರೀಮಿಂಗ್ ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಬರಲಿದೆ.

SMAT 2021: ಫೈನಲ್‌ಗೆ ಲಗ್ಗೆಯಿಟ್ಟ ಕರ್ನಾಟಕ, ತಮಿಳುನಾಡು ವಿರುದ್ಧ ಅಂತಿಮ ಫೈಟ್

ಕೊಲ್ಕತ್ತಾದ ಟಿ20 ರೆಕಾರ್ಡ್ಸ್‌

ಕೊಲ್ಕತ್ತಾದ ಟಿ20 ರೆಕಾರ್ಡ್ಸ್‌

7 ಅಂತರರಾಷ್ಟ್ರೀಯ ಟಿ20 ಪಂದ್ಯಗಳ ಫಲಿತಾಂಶ

ಮೊದಲು ಬ್ಯಾಟಿಂಗ್ ಮಾಡಿದ ತಂಡವು ಈ ಮೈದಾನದಲ್ಲಿ ಎರಡು ಪಂದ್ಯಗಳನ್ನ ಗೆದ್ದಿದೆ. ಎರಡನೇ ಬ್ಯಾಟಿಂಗ್ ಮಾಡಿದ ತಂಡವು ಐದು ಪಂದ್ಯಗಳನ್ನ ಗೆದ್ದುಕೊಂಡಿದೆ. ಈ ಪಿಚ್‌ನಲ್ಲಿ ಸರಾಸರಿ ಸ್ಕೋರ್ 142ರನ್ ಆಗಿದ್ದು, ಗರಿಷ್ಠ ಸ್ಕೋರ್ 201/5 (ಪಾಕಿಸ್ತಾನ), ಕಡಿಮೆ ಸ್ಕೋರ್ 70 ರನ್‌ (ಬಾಂಗ್ಲಾದೇಶ).

ಇನ್ನು ಐಪಿಎಲ್‌ ಸೇರಿದಂತೆ ಇತರೆ 77 ಟಿ20 ಪಂದ್ಯಗಳು ಇಲ್ಲಿ ನಡೆದಿವೆ. ಮೊದಲು ಬ್ಯಾಟಿಂಗ್ ಮಾಡಿದ ತಂಡವು 31 ಪಂದ್ಯಗಳನ್ನ ಗೆದ್ದುಕೊಂಡಿದೆ. ಎರಡನೇ ಬ್ಯಾಟಿಂಗ್ ಮಾಡಿದ ತಂಡವು 46 ಪಂದ್ಯ ಗೆದ್ದುಕೊಂಡಿದೆ. ಇಲ್ಲಿ ಸರಾಸರಿ ಸ್ಕೋರ್ 160 ಆಗಿದ್ದು, ಗರಿಷ್ಠ ಸ್ಕೋರ್ 232/2 (ಕೆಕೆಆರ್), ಕನಿಷ್ಠ ಸ್ಕೋರ್ 49/10 (ಆರ್‌ಸಿಬಿ)

ಭಾರತದ ಸಂಭಾವ್ಯ ಪ್ಲೇಯಿಂಗ್ 11

ಭಾರತದ ಸಂಭಾವ್ಯ ಪ್ಲೇಯಿಂಗ್ 11

ರೋಹಿತ್ ಶರ್ಮಾ, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ವೆಂಕಟೇಶ್ ಅಯ್ಯರ್ / ರುತುರಾಜ್ ಗಾಯಕ್ವಾಡ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್ / ಅವೇಶ್ ಖಾನ್, ಆರ್ ಅಶ್ವಿನ್ / ಯುಜ್ವೇಂದ್ರ ಚಹಾಲ್, ಹರ್ಷಲ್ ಪಟೇಲ್, ದೀಪಕ್ ಚಹಾರ್.

ನ್ಯೂಜಿಲೆಂಡ್‌ನ ಸಂಭಾವ್ಯ ಪ್ಲೇಯಿಂಗ್ 11

ನ್ಯೂಜಿಲೆಂಡ್‌ನ ಸಂಭಾವ್ಯ ಪ್ಲೇಯಿಂಗ್ 11

ಮಾರ್ಟಿನ್ ಗಪ್ಟಿಲ್, ಡೇರಿಲ್ ಮಿಚೆಲ್, ಮಾರ್ಕ್ ಚಾಪ್ಮನ್, ಗ್ಲೆನ್ ಫಿಲಿಪ್ಸ್, ಟಿಮ್ ಸೀಫರ್ಟ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಆಡಮ್ ಮಿಲ್ನೆ, ಇಶ್ ಸೋಧಿ, ಟ್ರೆಂಟ್ ಬೌಲ್ಟ್/ಲ್ಯುಕಿ ಫರ್ಗುಸನ್.

For Quick Alerts
ALLOW NOTIFICATIONS
For Daily Alerts
Story first published: Saturday, November 20, 2021, 18:07 [IST]
Other articles published on Nov 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X