ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಶ್ರೀಲಂಕಾ: ತಂಡಕ್ಕೆ ಮರಳಿದ ರವೀಂದ್ರ ಜಡೇಜಾ; ಈ ಮೂವರಲ್ಲಿ ಯಾರನ್ನು ಹೊರಹಾಕ್ತಾರೆ ರೋಹಿತ್?

India vs Sri Lanka: One of these 3 players should make way for Ravindra Jadeja in first T20

ಇತ್ತೀಚೆಗಷ್ಟೇ ಭಾರತ ಪ್ರವಾಸವನ್ನು ಕೈಗೊಂಡಿದ್ದ ವೆಸ್ಟ್ ಇಂಡೀಸ್ ವಿರುದ್ಧ 3 ಪಂದ್ಯಗಳ ಏಕದಿನ ಸರಣಿ ಹಾಗೂ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಎಲ್ಲಾ ಪಂದ್ಯಗಳನ್ನು ಗೆಲ್ಲುವುದರ ಮೂಲಕ ಟೀಮ್ ಇಂಡಿಯಾ ವೈಟ್ ವಾಷ್ ಸಾಧನೆಯನ್ನು ಮಾಡಿತ್ತು. ಹೀಗೆ ತವರಿನಲ್ಲಿ ಕೆರಿಬಿಯನ್ನರಿಗೆ ಯಾವುದೇ ಗೆಲುವನ್ನು ಸಾಧಿಸಲು ಬಿಡದ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಇದೀಗ ಭಾರತ ಪ್ರವಾಸವನ್ನು ಕೈಗೊಂಡಿರುವ ಶ್ರೀಲಂಕಾ ವಿರುದ್ಧ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಹಾಗೂ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸೆಣಸಾಟವನ್ನು ನಡೆಸಲಿದೆ.

ಪುಟ್ಟ ಬಾಲಕನ ಜೀವ ಉಳಿಸಲು ಕೆಎಲ್ ರಾಹುಲ್ ಮಾಡಿದ ಧನ ಸಹಾಯ ಕಂಡ ನೆಟ್ಟಿಗರು ಫಿದಾಪುಟ್ಟ ಬಾಲಕನ ಜೀವ ಉಳಿಸಲು ಕೆಎಲ್ ರಾಹುಲ್ ಮಾಡಿದ ಧನ ಸಹಾಯ ಕಂಡ ನೆಟ್ಟಿಗರು ಫಿದಾ

ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ಮೊದಲಿಗೆ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಆರಂಭವಾಗಲಿದ್ದು ಈಗಾಗಲೇ ಟಿ ಟ್ವೆಂಟಿ ಹಾಗೂ ಟೆಸ್ಟ್ ಸರಣಿಗಳಿಗೆ 2 ಪ್ರತ್ಯೇಕ ತಂಡಗಳನ್ನು ಬಿಸಿಸಿಐ ಪ್ರಕಟಿಸಿದೆ. ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವಿನ ಟಿ ಟ್ವೆಂಟಿ ಸರಣಿಗೆ ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಅಲಭ್ಯರಾಗಿದ್ದು, ಗಾಯದ ಸಮಸ್ಯೆಗೊಳಗಾಗಿರುವ ಸೂರ್ಯಕುಮಾರ್ ಯಾದವ್ ಮತ್ತು ದೀಪಕ್ ಚಾಹರ್ ಕೂಡ ಚಿಕಿತ್ಸೆಗೆಂದು ತಂಡದಿಂದ ಹೊರಗುಳಿದಿದ್ದಾರೆ. ಹೀಗಾಗಿ ತಂಡದಲ್ಲಿ ಸ್ಥಾನ ಪಡೆದುಕೊಂಡಿರುವ ಯುವ ಕ್ರಿಕೆಟಿಗರಿಗೆ ಈ ಆಟಗಾರರ ಬದಲಾಗಿ ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಳ್ಳುವ ಅವಕಾಶಗಳು ಹೆಚ್ಚಿವೆ. ಇನ್ನು ಶ್ರೀಲಂಕಾ ವಿರುದ್ಧದ ಈ ಸರಣಿಯ ಮೂಲಕ 2 ತಿಂಗಳುಗಳ ಬಳಿಕ ತಂಡ ಸೇರಿಕೊಳ್ಳುತ್ತಿರುವ ರವೀಂದ್ರ ಜಡೇಜಾ ಕಳೆದ ಬಾರಿಯ ಟ್ವೆಂಟಿ ವಿಶ್ವಕಪ್ ಟೂರ್ನಿಯ ಬಳಿಕ ಟಿ ಟ್ವೆಂಟಿ ಪಂದ್ಯದಲ್ಲಿ ಭಾರತ ತಂಡದ ಪರ ಕಣಕ್ಕಿಳಿಯಲಿದ್ದಾರೆ.

PKL 2022: ಸೆಮಿಫೈನಲ್‌ನಲ್ಲಿ ದಬಾಂಗ್ ಡೆಲ್ಲಿ ಸೋಲಿಸಿ ಹಳೇ ಸೇಡು ತೀರಿಸಿಕೊಳ್ಳುತ್ತಾ ಬೆಂಗಳೂರು ಬುಲ್ಸ್?PKL 2022: ಸೆಮಿಫೈನಲ್‌ನಲ್ಲಿ ದಬಾಂಗ್ ಡೆಲ್ಲಿ ಸೋಲಿಸಿ ಹಳೇ ಸೇಡು ತೀರಿಸಿಕೊಳ್ಳುತ್ತಾ ಬೆಂಗಳೂರು ಬುಲ್ಸ್?

ಹೀಗೆ ಹಲವಾರು ತಿಂಗಳುಗಳ ನಂತರ ಟಿ ಟ್ವೆಂಟಿ ಪಂದ್ಯದಲ್ಲಿ ಕಣಕ್ಕಿಳಿಯಲಿರುವ ರವೀಂದ್ರ ಜಡೇಜಾಗೆ ಯಾವ ಆಟಗಾರ ಸ್ಥಾನ ಬಿಟ್ಟುಕೊಡಲಿದ್ದಾರೆ ಎಂಬುದು ಇದೀಗ ಕುತೂಹಲಕಾರಿ ಅಂಶವಾಗಿದೆ. ಹೌದು, ರವೀಂದ್ರ ಜಡೇಜಾ ಮತ್ತೆ ತಂಡಕ್ಕೆ ಆಗಮಿಸಿರುವುದರಿಂದ ತಂಡದಲ್ಲಿರುವ ಯಾರಾದರೊಬ್ಬ ಆಟಗಾರ ಸ್ಥಾನ ಬಿಟ್ಟುಕೊಡಲೇಬೇಕಾದ ಅನಿವಾರ್ಯತೆ ಇದೆ. ಹೀಗೆ ರವೀಂದ್ರ ಜಡೇಜಾಗಾಗಿ ತಂಡದಲ್ಲಿರುವ ಈ ಕೆಳಕಂಡ ಮೂವರು ಆಟಗಾರರಲ್ಲಿ ಯಾವ ಆಟಗಾರನನ್ನು ರೋಹಿತ್ ಶರ್ಮಾ ಹೊರಗಿಡಲಿದ್ದಾರೆ ಎಂಬುದು ಇದೀಗ ಕುತೂಹಲಕಾರಿ ಪ್ರಶ್ನೆಯಾಗಿದೆ.

ವೆಂಕಟೇಶ್ ಅಯ್ಯರ್ ಮತ್ತು ಹರ್ಷಲ್ ಪಟೇಲ್?

ವೆಂಕಟೇಶ್ ಅಯ್ಯರ್ ಮತ್ತು ಹರ್ಷಲ್ ಪಟೇಲ್?

ರವೀಂದ್ರ ಜಡೇಜಾ ಭಾರತ ಟಿ ಟ್ವೆಂಟಿ ತಂಡಕ್ಕೆ ಮರಳುತ್ತಿರುವುದರಿಂದ ವೆಂಕಟೇಶ್ ಅಯ್ಯರ್ ಅಥವಾ ಹರ್ಷಲ್ ಪಟೇಲ್ ಸ್ಥಾನ ಬಿಟ್ಟುಕೊಡಲಿದ್ದಾರಾ ಎಂಬ ಅನುಮಾನ ಮೂಡಿದೆ. ಆದರೆ ವೆಂಕಟೇಶ್ ಅಯ್ಯರ್ ಎಲ್ಲಿಯೂ ನೆಲಕಚ್ಚದೇ ಸತತವಾಗಿ ಜವಾಬ್ದಾರಿಯುತ ಪ್ರದರ್ಶನವನ್ನು ನೀಡುತ್ತಿರುವ ಕಾರಣ ಆತನ ಹಾದಿಗೆ ಅಡ್ಡಿಪಡಿಸುವ ಕಾರ್ಯಕ್ಕೆ ಯಾರೂ ಕೈ ಹಾಕುವುದಿಲ್ಲ ಎನ್ನಬಹುದು. ಅದರಲ್ಲಿಯೂ ಸೂರ್ಯಕುಮಾರ್ ಯಾದವ್ ತಂಡದಲ್ಲಿ ಇಲ್ಲದೇ ಇರುವುದರಿಂದ ವೆಂಕಟೇಶ್ ಅಯ್ಯರ್ ತಂಡದಲ್ಲಿ ಮುಂದುವರಿಯುವುದು ಖಚಿತ ಎನ್ನಬಹುದು.


ಇನ್ನು ರವೀಂದ್ರ ಜಡೇಜಾಗೆ ಸ್ಥಾನ ಬಿಟ್ಟುಕೊಡಬೇಕಾದ ಆಟಗಾರರಲ್ಲಿ ಎರಡನೇ ಆಯ್ಕೆಯಾಗಿರುವ ಹರ್ಷಲ್ ಪಟೇಲ್ ಕೂಡ ತಂಡದಲ್ಲೇ ಮುಂದುವರಿಯುವ ಸಾಧ್ಯತೆಗಳು ಹೆಚ್ಚಾಗಿವೆ. ವಿಕೆಟ್ ಕಬಳಿಸುತ್ತಾ ತಂಡಕ್ಕೆ ಅನಿವಾರ್ಯ ಸಂದರ್ಭಗಳಲ್ಲಿ ಆಸರೆಯಾಗುತ್ತಿರುವ ಹರ್ಷಲ್ ಪಟೇಲ್ ಅವರನ್ನು ರವೀಂದ್ರ ಜಡೇಜಾಗಾಗಿ ತಂಡದಿಂದ ಹೊರಗಿಡುವುದು ತೀರಾ ಅನುಮಾನ ಎನ್ನಲಾಗುತ್ತಿದೆ.

ರವಿ ಬಿಷ್ಣೋಯಿ

ರವಿ ಬಿಷ್ಣೋಯಿ

ಹೀಗೆ ಯುವ ಆಟಗಾರರಾದ ವೆಂಕಟೇಶ್ ಅಯ್ಯರ್ ಮತ್ತು ಹರ್ಷಲ್ ಪಟೇಲ್ ಅವರ ಅಗತ್ಯತೆ ತಂಡಕ್ಕೆ ಹೆಚ್ಚಿರುವ ಕಾರಣದಿಂದಾಗಿ ರವೀಂದ್ರ ಜಡೇಜಾಗಾಗಿ ತಂಡದ ಮತ್ತೋರ್ವ ಯುವ ಆಟಗಾರನಾದ ರವಿ ಬಿಷ್ಣೋಯಿ ಸ್ಥಾನ ಬಿಟ್ಟು ಕೊಡಬೇಕಾದ ಅನಿವಾರ್ಯತೆ ಇದೆ. ಮತ್ತೊಂದೆಡೆ ಯುಜುವೇಂದ್ರ ಚಾಹಲ್ ಕೂಡ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲಿದ್ದು ರವಿ ಬಿಷ್ಣೋಯಿ ತಂಡದಿಂದ ಹೊರಗುಳಿದು ರವೀಂದ್ರ ಜಡೇಜಾಗೆ ಸ್ಥಾನ ಬಿಟ್ಟುಕೊಡಲೇಬೇಕಾಗಿದೆ.

ಶ್ರೀಲಂಕಾ ವಿರುದ್ಧದ ಟಿ ಟ್ವೆಂಟಿ ಸರಣಿಗೆ ಪ್ರಕಟಿಸಲಾಗಿರುವ ಭಾರತ ತಂಡ

ಶ್ರೀಲಂಕಾ ವಿರುದ್ಧದ ಟಿ ಟ್ವೆಂಟಿ ಸರಣಿಗೆ ಪ್ರಕಟಿಸಲಾಗಿರುವ ಭಾರತ ತಂಡ

ಫೆಬ್ರವರಿ 24ರಿಂದ ಫೆಬ್ರವರಿ 27ರವರೆಗೆ ನಡೆಯಲಿರುವ ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವಿನ 3ಪಂದ್ಯಗಳ ಟಿ ಟ್ವೆಂಟಿ ಸರಣಿಗೆ ಪ್ರಕಟವಾಗಿರುವ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡಿರುವ ಆಟಗಾರರ ಪಟ್ಟಿ ಇಲ್ಲಿದೆ: ರೋಹಿತ್ ಶರ್ಮಾ (ನಾಯಕ), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಸೂರ್ಯ ಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ದೀಪಕ್ ಚಾಹರ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಸಂಜು ಸ್ಯಾಮ್ಸನ್, ರವಿ ಜಡೇಜಾ, ಯುಜುವೇಂದ್ರ ಚಾಹಲ್, ಆರ್ ಬಿಷ್ಣೋಯ್, ಕುಲದೀಪ್, ಅವೇಶ್ ಖಾನ್

ಆಸ್ಟ್ರೇಲಿಯಾ ಲೀಗ್ ಆಡೋಕೆ ನಾವ್ ರೆಡಿ ! ರೈನಾ ಭಾವುಕ ವೀಡಿಯೋ ವೈರಲ್ !! | Oneindia Kannada

Story first published: Wednesday, February 23, 2022, 17:30 [IST]
Other articles published on Feb 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X