ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ದಾಖಲೆ: ತವರಿನಲ್ಲಿ 100ನೇ ಏಕದಿನ ಪಂದ್ಯವನ್ನಾಡಿದ ಭಾರತದ 5ನೇ ಕ್ರಿಕೆಟಿಗ ಕೊಹ್ಲಿ

Virat kohli

ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ಭಾರತ-ವೆಸ್ಟ್ ಇಂಡೀಸ್ ದ್ವಿತೀಯ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ದಾಖಲೆ ನಿರ್ಮಿಸಿದ್ದು, ತವರಿನಲ್ಲಿ 100ನೇ ಏಕದಿನ ಪಂದ್ಯವನ್ನಾಡುತ್ತಿರುವ ಐದನೇ ಭಾರತೀಯ ಕ್ರಿಕೆಟಿಗ ಎಂಬ ಸಾಧನೆ ಮಾಡಿದ್ದಾರೆ.

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಏಕದಿನ ಪಂದ್ಯದಲ್ಲಿ ದಾಖಲೆಯ ಪಂದ್ಯವನ್ನಾಡುತ್ತಿರುವ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್, ಸಚಿನ್ ತೆಂಡೂಲ್ಕರ್, ಮೊಹಮ್ಮದ್ ಅಜರುದ್ದೀನ್, ಎಂಎಸ್ ಧೋನಿ ಮತ್ತು ಯುವರಾಜ್ ಸಿಂಗ್ ನಂತರ ತವರಿನಲ್ಲಿ 100 ಏಕದಿನ ಪಂದ್ಯಗಳನ್ನು ಆಡಿದ 5 ನೇ ಭಾರತದ ಕ್ರಿಕೆಟಿಗನಾಗಲಿದ್ದಾರೆ. ಕೊಹ್ಲಿ ಒಟ್ಟು 258 ಏಕದಿನ ಪಂದ್ಯಗಳನ್ನು ಆಡಿದ್ದು, 12,200ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.

99 ಏಕದಿನ ಪಂದ್ಯವನ್ನಾಡಿದ್ದ ವಿರಾಟ್

99 ಏಕದಿನ ಪಂದ್ಯವನ್ನಾಡಿದ್ದ ವಿರಾಟ್

ವಿರಾಟ್ ಕೊಹ್ಲಿ ಇದುವರೆಗೂ 99 ಏಕದಿನ ಪಂದ್ಯಗಳನ್ನು ಆಡಿದ್ದಾರೆ ಮತ್ತು 5002 ರನ್ ಗಳಿಸಿದ್ದಾರೆ. ತವರಿನ ಪಿಚ್‌ಗಳಲ್ಲಿ 19 ಶತಕಗಳನ್ನು ಬಾರಿಸಿರುವ ವಿರಾಟ್ , ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ನಂತರದಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಮುಂಬೈ ದಿಗ್ಗಜ ಸಚಿನ್ ತೆಂಡೂಲ್ಕರ್ ತವರಿನಲ್ಲಿ 164 ಏಕದಿನ ಪಂದ್ಯಗಳಲ್ಲಿ 6,976 ರನ್ ಗಳಿಸಿದ್ದಾರೆ.

ತವರಿನಲ್ಲಿ 100ಕ್ಕೂ ಹೆಚ್ಚು ಓಡಿಐ ಪಂದ್ಯವನ್ನಾಡಿದ ಭಾರತೀಯರು

ತವರಿನಲ್ಲಿ 100ಕ್ಕೂ ಹೆಚ್ಚು ಓಡಿಐ ಪಂದ್ಯವನ್ನಾಡಿದ ಭಾರತೀಯರು

ಸಚಿನ್ ತೆಂಡೂಲ್ಕರ್ 164 ಪಂದ್ಯ: 6976 ರನ್, 19 ಶತಕ
ಎಂ.ಎಸ್ ಧೋನಿ 127 ಪಂದ್ಯ: 4351 ರನ್, 7 ಶತಕ
ಮೊಹಮ್ಮದ್ ಅಜರುದ್ದೀನ್ 113 ಪಂದ್ಯ: 3163 ರನ್, 3 ಶತಕ
ಯುವರಾಜ್ ಸಿಂಗ್ 108 ಪಂದ್ಯ: 3415 ರನ್, 7 ಶತಕ
ವಿರಾಟ್‌ ಕೊಹ್ಲಿ 99 ಪಂದ್ಯ: 5002 ರನ್, 19 ಶತಕ
ರಾಹುಲ್ ದ್ರಾವಿಡ್ 97 ಪಂದ್ಯ: 3406 ರನ್, 6 ಶತಕ

Rohit Sharma ಅವರ ಹೊಸ ಪ್ರಯೋಗ ವರ್ಕೌಟ್ ಆಗುತ್ತಾ? | Oneindia Kannada
ತವರಿನಲ್ಲಿ ವೇಗವಾಗಿ 5000 ರನ್ ಪೂರೈಸಿದ ಮೊದಲ ಬ್ಯಾಟ್ಸ್‌ಮನ್ ಕೊಹ್ಲಿ

ತವರಿನಲ್ಲಿ ವೇಗವಾಗಿ 5000 ರನ್ ಪೂರೈಸಿದ ಮೊದಲ ಬ್ಯಾಟ್ಸ್‌ಮನ್ ಕೊಹ್ಲಿ

ವಿರಾಟ್‌ ಕೊಹ್ಲಿ ಇತ್ತೀಚೆಗಷ್ಟೇ ತವರಿನ ಅಂಗಳದಲ್ಲಿ ವಿಶ್ವದಲ್ಲೇ ಅತ್ಯಂತ ವೇಗವಾಗಿ 5000ರನ್ ಪೂರೈಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 12,000ಕ್ಕೂ ಅಧಿಕ ಏಕದಿನ ರನ್‌ಗಳ ಒಡೆಯ ವಿರಾಟ್‌ ತವರಿನಲ್ಲಿ ಕೇವಲ 96 ಇನ್ನಿಂಗ್ಸ್‌ನಲ್ಲಿ 5000ರನ್ ಕಲೆಹಾಕಿದ್ದಾರೆ.

ಆದ್ರೆ ಇದೇ ಮೈಲಿಗಲ್ಲು ತಲುಪಲು ಸಚಿನ್ ತೆಂಡೂಲ್ಕರ್ 121 ಇನ್ನಿಂಗ್ಸ್, ದಕ್ಷಿಣ ಆಫ್ರಿಕಾದ ಜಾಕ್ವೆಸ್ ಕಾಲಿಸ್ 130 ಇನ್ನಿಂಗ್ಸ್‌, ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ 138ನೇ ಇನ್ನಿಂಗ್ಸ್‌ನಲ್ಲಿ 5000 ರನ್ ಸಿಡಿಸಿದ್ದಾರೆ.

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಸಚಿನ್ 48.11ರ ಸರಾಸರಿಯಲ್ಲಿ 6,976 ರನ್ ಗಳಿಸಿದ್ದಾರೆ. ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) 39.71 ಸರಾಸರಿಯಲ್ಲಿ 5521 ರನ್‌ಗಳೊಂದಿಗೆ ಮತ್ತು ಕಾಲಿಸ್ (ದಕ್ಷಿಣ ಆಫ್ರಿಕಾ) 45.89 ರೊಂದಿಗೆ 5186 ಕ್ಕೆ ಕಲೆಹಾಕಿದ್ದಾರೆ.

ಆದ್ರೆ ಬ್ಯಾಟಿಂಗ್ ಸರಾಸರಿ ವಿಚಾರದಲ್ಲಿ ವಿರಾಟ್ ಕೊಹ್ಲಿ (60.17) ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ತವರು ನೆಲದಲ್ಲಿ ಅತಿವೇಗವಾಗಿ 5,000 ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ. ವಿರಾಟ್ ಕೊಹ್ಲಿ ತವರು ನೆಲದಲ್ಲಿ 99 ಪಂದ್ಯಗಳಲ್ಲಿ 5002 ರನ್ ಗಳಿಸಿದ್ದಾರೆ. ಇದರಲ್ಲಿ 19 ಶತಕ ಮತ್ತು 25 ಅರ್ಧಶತಕಗಳು ಸೇರಿವೆ.

Story first published: Wednesday, February 9, 2022, 14:57 [IST]
Other articles published on Feb 9, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X