ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20: ಉಮೇದಿನಲ್ಲಿ ಬ್ಲೂ ಬಾಯ್ಸ್, ಪ್ರತಿಷ್ಠೆಗಾಗಿಯಾದ್ರೂ ಗೆಲ್ಲುತ್ತಾ ವಿಂಡೀಸ್?

India vs West Indies, 3rd T20I: Preview, possible team

ಚೆನ್ನೈ, ನವೆಂಬರ್ 10: ಭಾರತ ಪ್ರವಾಸದಲ್ಲಿರುವ ವೆಸ್ಟ್ ಇಂಡೀಸ್ ತಂಡ ಭಾರತದ ವಿರುದ್ಧ ಮೂರನೇ ಮತ್ತು ಕೊನೆಯ ಟಿ20 ಪಂದ್ಯದ ಸವಾಲನ್ನು ಸ್ವೀಕರಿಸಲಿದೆ. ಭಾನುವಾರ (ನವೆಂಬರ್ 11) ಚೆನ್ನೈಯ ಎಂಎ ಚಿದಂಬರಂ ಕ್ರಿಕೆಟ್ ಸ್ಟೇಡಿಯಂ ಇತ್ತಂಡಗಳ ಅಂತಿಮ ಕಾದಾಟಕ್ಕೆ ಸಾಕ್ಷಿಯಾಗಲಿದೆ.

ಹೊಟ್ಟೆನೋವಿನ ಸಿಟ್ಟನ್ನು ಸಿಕ್ಸ್ ಚಚ್ಚಿ ತೀರಿಸಿಕೊಂಡ ಹರ್ಮನ್‌ಪ್ರೀತ್ ಕೌರ್ಹೊಟ್ಟೆನೋವಿನ ಸಿಟ್ಟನ್ನು ಸಿಕ್ಸ್ ಚಚ್ಚಿ ತೀರಿಸಿಕೊಂಡ ಹರ್ಮನ್‌ಪ್ರೀತ್ ಕೌರ್

ಹಾಗೆ ನೋಡಿದರೆ ಈ ಪಂದ್ಯ ಭಾರತ ಮತ್ತು ವೆಸ್ಟ್ ಇಂಡೀಸ್‌ಗೆ ಔಪಚಾರಿಕವಷ್ಟೇ. ಮೂರು ಪಂದ್ಯಗಳ ಟಿ20 ಸರಣಿಯನ್ನು ಭಾರತ ಈಗಾಗಲೇ 2-0ಯಿಂದ ಗೆದ್ದಿದ್ದಾಗಿದೆ. ಆದರೆ ವೆಸ್ಟ್ ಇಂಡೀಸ್ ಪ್ರತಿಷ್ಠಗಾಗಿಯಾದರೂ ಕೊನೆಯ ಪಂದ್ಯದಲ್ಲಿ ಗೆಲ್ಲುತ್ತಾ ಕಾದುನೋಡಬೇಕಿದೆ.

ನಿಷೇಧದ ಬಳಿಕ ಮೊದಲ ಬಾರಿಗೆ ಮುಖಾಮುಖಿಯಾದ ಸ್ಮಿತ್-ವಾರ್ನರ್!ನಿಷೇಧದ ಬಳಿಕ ಮೊದಲ ಬಾರಿಗೆ ಮುಖಾಮುಖಿಯಾದ ಸ್ಮಿತ್-ವಾರ್ನರ್!

ಪ್ರವಾಸಿ ಕೆರಿಬಿಯನ್ನರನ್ನು ಬ್ಲೂಬಾಯ್ಸ್ ಟೀಮ್, ಟೆಸ್ಟ್ ನಲ್ಲಿ 2-0ಯಿಂದ, ಏಕದಿನದಲ್ಲಿ 3-1ರಿಂದ, ಟಿ20ಯಲ್ಲಿ 2-0ಯಿಂದ ಸರಣಿ ಜಯಿಸಿಕೊಂಡಿದ್ದಾಗಿದೆ. ಹೀಗಾಗಿ ಕೊನೆಯ ಚುಕುಟು ಕ್ರಿಕೆಟ್ ಪಂದ್ಯದಲ್ಲೂ ಗೆಲ್ಲುವ ವಿಶ್ವಾಸದಲ್ಲಿ ರೋಹಿತ್ ಶರ್ಮಾ ಬಳಗವಿದೆ.

ಚುಟುಕು ಪಿಚ್ ರಿಪೋರ್ಟ್

ಚುಟುಕು ಪಿಚ್ ರಿಪೋರ್ಟ್

ಚೆನ್ನೈ ಪಿಚ್ ಬಗ್ಗೆ ಹೇಳೋದಾದ್ರೆ, ಇದು ನಾಳಿನ ಪಂದ್ಯದಲ್ಲಿ ಬ್ಯಾಟ್ಸ್ಮನ್ ಗಳಿಗೆ ಹೆಚ್ಚು ನೆರವು ನೀಡುವ ಸಂಭವವಿದೆ. ಬ್ಯಾಟ್ ಬೀಸಿ ಹೆಚ್ಚು ರನ್ ಕದಿಯುವ ತಂಡ ಗೆಲುವಿನತ್ತ ವಾಲಬಲ್ಲದು. ಊಹಿತ ಹವಾಮಾನದ ಪ್ರಕಾರ ನಾಳೆ (ನ. 11) ಚೆನ್ನೈಯಲ್ಲಿ 31 ಡಿಗ್ರಿ ಸೆ. ತಾಪಮಾನವಿರಲಿದೆ. ಹಾಗಂತ ಮಳೆಯ ಸಾಧ್ಯತೆಯೂ ಇಲ್ಲದಿಲ್ಲ.

'ಮೈಖೇಲ್ ಕನ್ನಡ'ದಲ್ಲಿ ಲೈವ್‌ ಸ್ಕೋರ್

'ಮೈಖೇಲ್ ಕನ್ನಡ'ದಲ್ಲಿ ಲೈವ್‌ ಸ್ಕೋರ್

ಭಾನುವಾರ (ನವೆಂಬರ್ 11) 7 pmಗೆ ಪಂದ್ಯ ಆರಂಭಗೊಳ್ಳಲಿದೆ. ಸ್ಟಾರ್ ಸ್ಪೋರ್ಟ್ಸ್ ಚಾನೆಲ್ ನಲ್ಲಿ ಪಂದ್ಯ ನೇರ ಪ್ರಸಾರಗೊಳ್ಳಲಿದೆ. ಹಾಟ್ ಸ್ಟಾರ್ ನಲ್ಲಿ ಜಾಲತಾಣಿಗರು ಲೈವ್ ಪಂದ್ಯ ವೀಕ್ಷಿಸಬಹುದು. 'ಮೈಖೇಲ್ ಕನ್ನಡ' ಕೂಡ ಪಂದ್ಯದ Live Score ಅನ್ನು ಕ್ರಿಕೆಟ್ ಅಭಿಮಾನಿಗಳ ಮುಂದಿಡಲಿದೆ. ಇದೇ ದಿನ ಮಹಿಳಾ ವಿಶ್ವಕಪ್ ಟಿ20 ಟೂರ್ನಿಯಲ್ಲಿ ಪಾಕಿಸ್ತಾನ-ಭಾರತ ಮುಖಾಮುಖಿಯ Live Score ಕೂಡ ಮೈಖೇಲ್‌ನಲ್ಲಿ ವೀಕ್ಷಿಸಬಹುದು.

ಭಾರತದ ಸಂಭಾವ್ಯ ತಂಡ

ಭಾರತದ ಸಂಭಾವ್ಯ ತಂಡ

ರೋಹಿತ್ ಶರ್ಮಾ (ಸಿ), ಶಿಖರ್ ಧವನ್, ರಿಷಬ್ ಪಂತ್, ಲೋಕೇಶ್ ರಾಹುಲ್, ಮನೀಶ್ ಪಾಂಡೆ, ದಿನೇಶ್ ಕಾರ್ತಿಕ್ (ಡಬ್ಲ್ಯೂ), ಕ್ರುಣಾಲ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಭುವನೇಶ್ವರ ಕುಮಾರ್, ಕೆ ಖಲೀಲ್ ಅಹಮದ್, ಯುಜುವೇಂದ್ರ ಚಾಹಲ್, ಶ್ರೀಯಸ್ ಅಯ್ಯರ್, ಸಿದ್ಧಾರ್ಥ ಕೌಲ್ , ಶಾಬಾಜ್ ನದೀಮ್.

ವಿಂಡೀಸ್ ಸಂಭಾವ್ಯ ತಂಡ

ವಿಂಡೀಸ್ ಸಂಭಾವ್ಯ ತಂಡ

ಶೈ ಹೋಪ್, ಶಿಮ್ರಾನ್ ಹೆಟ್ಮರ್, ಡ್ಯಾರೆನ್ ಬ್ರಾವೋ, ಡೆನೆಶ್ ರಾಮ್ಡಿನ್ (W), ನಿಕೋಲಸ್ ಪೂರ್ನ್, ಕೀರನ್ ಪೊಲಾರ್ಡ್, ಕಾರ್ಲೋಸ್ ಬ್ರಾಥ್ವೈಟ್ (ಸಿ), ಫ್ಯಾಬಿಯನ್ ಅಲೆನ್, ಕೀಮೊ ಪಾಲ್, ಖೇರಿ ಪಿಯರೆ, ಒಶೇನ್ ಥಾಮಸ್, ಒಬೇಡ್ ಮೆಕಾಯ್, ರೋವ್ಮನ್ ಪೊವೆಲ್, ಶೆರ್ಫೇನ್ ರುದರ್ಫೋರ್ಡ್.

Story first published: Saturday, November 10, 2018, 23:32 [IST]
Other articles published on Nov 10, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X