ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶ್ರೀಲಂಕಾ ಸರಣಿಗೂ ಮುನ್ನ 3 ಇಂಟ್ರಾ ಸ್ಕ್ವಾಡ್ ಪಂದ್ಯಗಳನ್ನಾಡಲಿದೆ ಭಾರತ

Indian team will play 3 Intra-Squad matches ahead of the Sri Lanka series in July

ನವದೆಹಲಿ: ಜುಲೈನಲ್ಲಿ ಭಾರತ ಮತ್ತು ಶ್ರೀಲಂಕಾ ಮಧ್ಯೆ ಸೀಮಿತ ಓವರ್‌ಗಳ ಕ್ರಿಕೆಟ್ ಸರಣಿಗಳು ಆರಂಭಗೊಳ್ಳಲಿವೆ. ಲಂಕಾಕ್ಕೆ ಪ್ರವಾಸ ಕೈಗೊಳ್ಳಲಿರುವ ಟೀಮ್ ಇಂಡಿಯಾ ಅಲ್ಲಿ ಮೂರು ಏಕದಿನ ಪಂದ್ಯಗಳು ಮತ್ತು ಮೂರು ಟಿ20ಐ ಪಂದ್ಯಗಳನ್ನಾಡಲಿದೆ. ಇದಕ್ಕೂ ಮುನ್ನ ಭಾರತ 3 ಇಂಟ್ರಾ ಸ್ಕ್ವಾಡ್‌ ಪಂದ್ಯಗಳನ್ನಾಡಲಿದೆ. ಐಪಿಎಲ್ ಬಳಿಕ ಭಾರತೀಯ ತಂಡ ಪಾಲ್ಗೊಳ್ಳುತ್ತಿರುವ ಮೊದಲ ಸೀಮಿತ ಓವರ್‌ಗಳ ಅಂತಾರಾಷ್ಟ್ರೀಯ ಸರಣಿ ಇದಾಗಿರುವುದರಿಂದ ಬ್ಲೂ ಬಾಯ್ಸ್ ಬಳಗ ತಯಾರಿಯೊಂದಿಗೆ ಸರಣಿ ಆಡಲು ಯೋಚಿಸಿದೆ.

ತನ್ನ ಎಲ್ಲೆ ಮೀರಿದ ವರ್ತನೆಗೆ ಕ್ಷಮೆಯಾಚಿಸಿದ ಶಕೀಬ್ ಅಲ್ ಹಸನ್ತನ್ನ ಎಲ್ಲೆ ಮೀರಿದ ವರ್ತನೆಗೆ ಕ್ಷಮೆಯಾಚಿಸಿದ ಶಕೀಬ್ ಅಲ್ ಹಸನ್

ಜುಲೈ 13ರಿಂದ ಜುಲೈ 25ರ ವರೆಗೆ ಭಾರತ vs ಶ್ರೀಲಂಕಾ ಸರಣಿಗಳು ಆರಂಭಗೊಳ್ಳಲಿವೆ. ಇದಕ್ಕೂ ಮುನ್ನ ಶಿಖರ್ ಧವನ್ ಪಡೆ 1 ಟಿ20ಐ ಪಂದ್ಯ ಮತ್ತು 2 ಏಕದಿನ ಪಂದ್ಯಗಳನ್ನಾಡಲಿದೆ ಎಂದು ಎಎನ್‌ಐ ಮೂಲ ಮಾಹಿತಿ ನೀಡಿದೆ. ಜುಲೈ 13ರಂದು ಏಕದಿನ ಸರಣಿಯೊಂದಿಗೆ ಭಾರತ-ಶ್ರೀಲಂಕಾ ಕದನ ಶುರುವಾಗಲಿದೆ.

ಕೊಲಂಬೋದಲ್ಲಿ ಎಲ್ಲಾ ಪಂದ್ಯಗಳು

ಕೊಲಂಬೋದಲ್ಲಿ ಎಲ್ಲಾ ಪಂದ್ಯಗಳು

ಪ್ರವಾಸ ಸರಣಿಯ ಎಲ್ಲಾ ಪಂದ್ಯಗಳು ಕೊಲಂಬೋದಲ್ಲಿರುವ ಆರ್‌ ಪ್ರೇಮದಾಸ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿವೆ. ಗ್ರೇಟ್ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಅವರು ಶ್ರೀಲಂಕಾ ಪ್ರವಾಸದ ಭಾರತ ತಂಡಕ್ಕೆ ಮುಖ್ಯ ಕೋಚ್ ಆಗಿ ಜೊತೆಗಿರಲಿದ್ದಾರೆ.

6 ಅನ್‌ಕ್ಯಾಪ್ಡ್‌ ಆಟಗಾರರಿಗೆ ಸ್ಥಾನ

6 ಅನ್‌ಕ್ಯಾಪ್ಡ್‌ ಆಟಗಾರರಿಗೆ ಸ್ಥಾನ

ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡದಲ್ಲಿ 6 ಅನ್‌ಕ್ಯಾಪ್ಡ್ ಆಟಗಾರರಿಗೆ ಅವಕಾಶ ನೀಡಲಾಗಿದೆ. ಆ ಆರು ಅನ್‌ಕ್ಯಾಪ್ಡ್‌ ಆಟಗಾರರೆಂದರೆ ದೇವದತ್ ಪಡಿಕ್ಕಲ್, ಚೇತನ್ ಸಕರಿಯಾ, ನಿತೀಶ್ ರಾಣಾ, ಕೃಷ್ಣಪ್ಪ ಗೌತಮ್, ಋತುರಾಜ್ ಗಾಯಕ್ವಾಡ್ ಮತ್ತು ವರುಣ್ ಚಕ್ರವರ್ತಿ.

ಶ್ರೀಲಂಕಾ ಪ್ರವಾಸಕ್ಕೆ ಭಾರತೀಯ ತಂಡ

ಶ್ರೀಲಂಕಾ ಪ್ರವಾಸಕ್ಕೆ ಭಾರತೀಯ ತಂಡ

ಶಿಖರ್ ಧವನ್ (ಕ್ಯಾಪ್ಟನ್), ಪೃಥ್ವಿ ಶಾ, ದೇವದತ್ ಪಡಿಕ್ಕಲ್, ಋತುರಾಜ್ ಗಾಯಕ್ವಾಡ್, ಸೂರ್ಯಕುಮಾರ್ ಯಾದವ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ನಿತೀಶ್ ರಾಣಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್-ಕೀಪರ್) ಯುಜುವೇಂದ್ರ ಚಾಹಲ್, ರಾಹುಲ್ ಚಾಹರ್, ಕೆ ಗೌತಮ್, ಕೃನಾಲ್ ಪಾಂಡ್ಯ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ಭುವನೇಶ್ವರ್ ಕುಮಾರ್ (ಉಪನಾಯಕ), ದೀಪಕ್ ಚಾಹರ್, ನವದೀಪ್ ಸೈನಿ, ಚೇತನ್ ಸಕರಿಯಾ.
ನೆಟ್ ಬೌಲರ್‌ಗಳು: ಇಶಾನ್ ಪೊರೆಲ್, ಸಂದೀಪ್ ವಾರಿಯರ್, ಅರ್ಷ್‌ದೀಪ್ ಸಿಂಗ್, ಸಾಯಿ ಕಿಶೋರ್, ಸಿಮಾರ್ಜೀತ್ ಸಿಂಗ್.

Story first published: Saturday, June 12, 2021, 12:37 [IST]
Other articles published on Jun 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X