ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ ಕನ್ನಡತಿ ವನಿತಾ ವಿ ಆರ್

Indian Women Cricketer Vanitha VR announces retirement from all forms of cricket

ಮೂಲತಃ ಬೆಂಗಳೂರಿನವರಾದ ವೆಲ್ಲಸ್ವಾಮಿ ರಾಮು ವನಿತಾ ಭಾರತ ಅಂತರರಾಷ್ಟ್ರೀಯ ಮಹಿಳಾ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ ಆಟಗಾರ್ತಿಯಾಗಿದ್ದಾರೆ. ದೇಸಿ ಕ್ರಿಕೆಟ್ ಟೂರ್ನಿಗಳಲ್ಲಿಯೂ ಕೂಡ ತನ್ನನ್ನು ತಾನು ತೊಡಗಿಸಿಕೊಂಡಿದ್ದ ವನಿತಾ ವಿ ಆರ್ ಕರ್ನಾಟಕ ಮತ್ತು ಬೆಂಗಾಲ್ ತಂಡಗಳನ್ನು ಪ್ರತಿನಿಧಿಸಿದ್ದಾರೆ. ಹೀಗೆ ದೇಶೀಯ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ಆಡಿರುವ ಅನುಭವವನ್ನು ಹೊಂದಿರುವಂತಹ 31 ವರ್ಷದ ವನಿತಾ ವಿಆರ್ ಇಂದು ( ಫೆಬ್ರವರಿ 21 ) ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿನ ತನ್ನ ಅಧಿಕೃತ ಖಾತೆಗಳ ಮೂಲಕ ನಿವೃತ್ತಿಯನ್ನು ಘೋಷಿಸಿರುವ ವನಿತಾ ವಿ ಆರ್ ಅಂತಿಮವಾಗಿ ಪತ್ರವೊಂದನ್ನು ಬರೆಯುವುದರ ಮೂಲಕ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. ಸುಮಾರು 19 ವರ್ಷಗಳಿಂದ ತಾನು ಕ್ರಿಕೆಟ್ ಆಡುತ್ತಿದ್ದೇನೆಂದು ಬರೆದುಕೊಂಡಿರುವ ವನಿತಾ ವಿ ಆರ್ ಬಾಲ್ಯದಿಂದಲೂ ಕ್ರಿಕೆಟ್ ಪ್ರೀತಿಸುತ್ತಿರುವ ತಾನು ಇಂದಿಗೂ ಸಹ ಅದೇ ಪ್ರೀತಿಯನ್ನು ಹೊಂದಿದ್ದೇನೆ ಎಂದಿದ್ದಾರೆ. ಇಂದಿಗೂ ಸಹ ಕ್ರಿಕೆಟ್ ಮೇಲಿನ ತನ್ನ ಪ್ರೀತಿ ಹಾಗೆಯೇ ಇದ್ದು ಮನಸ್ಸು ಇಂದಿಗೂ ಕೂಡ ಕ್ರಿಕೆಟ್ ಆಡು ಎಂದು ಹೇಳುತ್ತದೆ ಆದರೆ ತನ್ನ ದೇಹ ಅದಕ್ಕೆ ಸ್ಪಂದಿಸುತ್ತಿಲ್ಲ, ಹೀಗಾಗಿ ತಾನು ರಾಜೀನಾಮೆಯನ್ನು ನೀಡುತ್ತಿದ್ದೇನೆ ಎಂದು ವನಿತಾ ವಿಆರ್ ಬರೆದುಕೊಂಡಿದ್ದಾರೆ.

ಒಂದು ದಿನ ಮುಂಚಿತವಾಗಿಯೇ ಶುರುವಾಗಲಿದೆ ಐಪಿಎಲ್ 2022: ಈ 2 ನಗರಗಳಲ್ಲಿ ಪಂದ್ಯಗಳ ಆಯೋಜನೆಒಂದು ದಿನ ಮುಂಚಿತವಾಗಿಯೇ ಶುರುವಾಗಲಿದೆ ಐಪಿಎಲ್ 2022: ಈ 2 ನಗರಗಳಲ್ಲಿ ಪಂದ್ಯಗಳ ಆಯೋಜನೆ

ಇನ್ನೂ ಮುಂದುವರೆದು ಈ ಪೋಸ್ಟ್ ಮೂಲಕ ತನ್ನ ಕ್ರಿಕೆಟ್ ಜೀವನದುದ್ದಕ್ಕೂ ಬೆಂಬಲವನ್ನು ನೀಡಿದ ಹಲವಾರು ವ್ಯಕ್ತಿಗಳನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ ವನಿತಾ ವಿ ಆರ್. ಹಾಗೂ ತನ್ನ ಕುಟುಂಬದ ಸದಸ್ಯರು ಮತ್ತು ಸ್ನೇಹಿತರಿಗೂ ಕೂಡ ಧನ್ಯವಾದಗಳನ್ನು ತಿಳಿಸಿರುವ ವನಿತಾ ವಿಆರ್ ಇರ್ಫಾನ್ ಪಠಾಣ್ ಮಾಡಿದ ಸಹಾಯವನ್ನು ಕೂಡ ಇದೇ ವೇಳೆ ನೆನೆದು ಕೃತಜ್ಞತೆ ಅರ್ಪಿಸಿದ್ದಾರೆ ಹಾಗೂ ಎಂದೆಂದಿಗೂ ಕೂಡ ಮಿಥಾಲಿ ರಾಜ್ ತನ್ನ ನಾಯಕಿಯಾಗಿರುತ್ತಾರೆ ಎಂಬುದನ್ನು ಕೂಡ ಇದೇ ವೇಳೆ ಉಲ್ಲೇಖಿಸಿ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

ತನ್ನ ಕ್ರಿಕೆಟ್ ವೃತ್ತಿಜೀವನ ಖುಷಿ, ಹೋರಾಟ, ಬೇಸರ, ಕಲಿಕೆ ಮತ್ತು ವೈಯಕ್ತಿಕ ಮೈಲುಗಲ್ಲುಗಳಿಂದ ಕೂಡಿತ್ತು ಎಂದಿರುವ ವನಿತಾ ವಿ ಆರ್ ತನಗೆ ಸಿಕ್ಕ ಅವಕಾಶಗಳ ಕುರಿತು ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಅದರಲ್ಲಿಯೂ ಭಾರತ ಅಂತರರಾಷ್ಟ್ರೀಯ ಮಹಿಳಾ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿದ್ದು ಅದ್ಬುತವಾದದ್ದು ಎಂದಿರುವ ವನಿತಾ ವಿಆರ್ ತಾನು ದೇಶೀಯ ಕ್ರಿಕೆಟ್ ಟೂರ್ನಿಗಳಲ್ಲಿ ಪ್ರತಿನಿಧಿಸಿದ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಮತ್ತು ಕ್ರಿಕೆಟ್ ಅಸೋಶಿಯೇಶನ್ ಬೆಂಗಾಲ್‌ಗೂ ಸಹ ಧನ್ಯವಾದ ತಿಳಿಸಿದ್ದಾರೆ. ಅಂತಿಮವಾಗಿ ತನ್ನ ಕರ್ನಾಟಕದ ಕ್ರಿಕೆಟ್ ಸಹಪಾಠಿಗಳಿಗೆ ವಿಶೇಷವಾಗಿ ಕೃತಜ್ಞತೆ ತಿಳಿಸಿರುವ ವನಿತಾ ವಿಆರ್ ಈ ರಾಜೀನಾಮೆಯ ನಂತರ ಹಲವಾರು ಕ್ರಿಕೆಟ್ ಪ್ರತಿಭೆಗಳನ್ನು ಬೆಳೆಸುವ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತೇನೆ ಎಂದಿದ್ದು, ಇದು ಹೊಸ ಸವಾಲಿನ ಆರಂಭವೆಂದು ಬರೆದುಕೊಂಡಿದ್ದಾರೆ.

ಸಿಎಸ್‌ಕೆಯ ಈ ಆಟಗಾರನನ್ನು ಖರೀದಿಸಲೇಬೇಕೆಂದು ದೊಡ್ಡ ಮೊತ್ತ ತೆಗೆದಿಟ್ಟಿತ್ತು ಆರ್‌ಸಿಬಿ ಫ್ರಾಂಚೈಸಿ!ಸಿಎಸ್‌ಕೆಯ ಈ ಆಟಗಾರನನ್ನು ಖರೀದಿಸಲೇಬೇಕೆಂದು ದೊಡ್ಡ ಮೊತ್ತ ತೆಗೆದಿಟ್ಟಿತ್ತು ಆರ್‌ಸಿಬಿ ಫ್ರಾಂಚೈಸಿ!

ವನಿತಾ ವಿಆರ್ ಕ್ರಿಕೆಟ್ ಅಂಕಿ ಅಂಶ:

2014ರಿಂದ 2016ರವರೆಗೆ ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಭಾಗವಹಿಸಿರುವ ವನಿತಾ ವಿ ಆರ್ ಭಾರತ ಅಂತರರಾಷ್ಟ್ರೀಯ ಮಹಿಳಾ ಕ್ರಿಕೆಟ್ ತಂಡದ ಪರ 16 ಏಕದಿನ ಪಂದ್ಯಗಳು ಮತ್ತು 6 ಟಿ ಟ್ವೆಂಟಿ ಪಂದ್ಯಗಳನ್ನು ‌ಅಡಿದ್ದಾರೆ. 16 ಏಕದಿನ ಪಂದ್ಯಗಳಲ್ಲಿ 216 ರನ್ ಬಾರಿಸಿರುವ ವನಿತಾ ವಿಆರ್ ಗಳಿಸಿರುವ ಅತ್ಯಧಿಕ ರನ್ 41 ಮತ್ತು 6 ಅಂತರರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯಗಳಲ್ಲಿ 85 ರನ್ ಬಾರಿಸಿರುವ ವನಿತಾ ವಿಆರ್ ಗಳಿಸಿರುವ ಅತ್ಯಧಿಕ ರನ್ 27. ಹೀಗೆ ಒಟ್ಟು 22 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾಗವಹಿಸಿರುವ ವನಿತಾ ವಿಆರ್ ಯಾವುದೇ ಪಂದ್ಯದಲ್ಲಿಯೂ ಕೂಡ ಅರ್ಧಶತಕ ಬಾರಿಸುವಲ್ಲಿ ಯಶಸ್ವಿಯಾಗಿಲ್ಲ.

ಇನ್ನು ಹೆಚ್ಚಾಗಿ ದೇಶೀಯ ಕ್ರಿಕೆಟ್ ಟೂರ್ನಿಗಳಲ್ಲಿ ಭಾಗವಹಿಸಿ ಮಿಂಚಿರುವ ವನಿತಾ ವಿ ಆರ್ 2021-22ರ ಹಿರಿಯ ಮಹಿಳಾ ಕ್ರಿಕೆಟ್ ಆಟಗಾರ್ತಿಯರ ಏಕದಿನ ಟ್ರೋಫಿಯಲ್ಲಿ ಬೆಂಗಾಲ್ ತಂಡದ ಪರ ಕಣಕ್ಕಿಳಿದು 225 ರನ್ ಬಾರಿಸಿದ್ದರು. ಈ ಟೂರ್ನಿಯಲ್ಲಿ ವನಿತಾ ವಿ ಆರ್ ಆಂಧ್ರಪ್ರದೇಶದ ವಿರುದ್ಧ 61 ರನ್ ಬಾರಿಸಿದ್ದರು ಮತ್ತು ಹೈದರಾಬಾದ್ ವಿರುದ್ಧ 71 ಎಸೆತಗಳಿಗೆ 107 ರನ್ ಬಾರಿಸಿ ಮಿಂಚಿದ್ದರು.

Story first published: Tuesday, February 22, 2022, 10:07 [IST]
Other articles published on Feb 22, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X