ಐಪಿಎಲ್: ಮೊದಲ ದಿನದ ಹರಾಜಿನಲ್ಲಿ ಏನಾಯ್ತು, ಏನಿಲ್ಲ?

Posted By:
IPL 2018 auction first f=day highlights

ಬೆಂಗಳೂರು, ಜನವರಿ 27: ಐಪಿಎಲ್ 2018 ಆಟಗಾರರ ಹರಾಜಿನಲ್ಲಿ ಮೊದಲ ದಿನ ಸಾಕಷ್ಟು ವಿಶೇಷ ಘಟನೆಗಳು ನಡೆದವು. ಹಲವು ದೊಡ್ಡವರು ಬಿದ್ದರು, ಕಿರಿಯರು ನಕ್ಕರು.

ಮೊದಲ ದಿನ ಯಾರೂ ಊಹಿಸದ ರೀತಿ ಕ್ರಿಸ್‌ ಗೇಲ್, ಲಸಿತ್ ಮಲಿಂಗಾ, ಹಶೀಮ್ ಆಮ್ಲಾ ಮಾರಾಟವಾಗದೇ ಉಳಿದರು. ಅತಿ ಹೆಚ್ಚು ಮೊತ್ತಕ್ಕೆ ಹರಾಜಾಗಬಹುದು ಎಂದು ಕೊಂಡಿದ್ದ ರವಿಚಂದ್ರನ್ ಅಶ್ವಿನ್ ಅವರು 7.60 ಕೋಟಿಗೆ ಪಂಜಾಬ್‌ ತೆಕ್ಕೆಗೆ ಬಿದ್ದರು.

ಯಾರೂ ಊಹಿಸದ ರೀತಿ ಬೆನ್ ಸ್ಟೋಕ್ಸ್‌ 12.5 ಕೋಟಿಗೆ ಹರಾಜಾಗಿ ಅತಿ ಹೆಚ್ಚು ಮೊತ್ತಕ್ಕೆ ಹರಾಜಾದ ಆಟಗಾರ ಎನಿಸಿಕೊಂಡರು. 8.8 ಕೋಟಿಗೆ ಹರಾಜಾದ ದೇಸೀ ಆಟಗಾರ ಕುರ್ನಾಲ್ ಪಾಂಡ್ಯಾ ಇತಿಹಾಸ ನಿರ್ಮಿಸಿದರು.

ಐಪಿಎಲ್‌: ನಾಳೆ ಹರಾಜಿನಲ್ಲಿ ಏನಾಗಬಹುದು?

ಅಪ್ಘಾನಿಸ್ಥಾನದ ಸ್ಪಿನ್ನರ್ ರಹೀಮ್ ಖಾನ್ 9 ಕೋಟಿಗೆ ಹರಾಜಾಗಿ ಆಶ್ಚರ್ಯ ಮೂಡಿಸಿದರೆ. ಯುವರಾಜ್ ಸಿಂಗ್, ಗೌತಮ್ ಗಂಭೀರ್, ಹರ್ಭಜನ್ ಸಿಂಗ್ ಅವರುಗಳು ಅತಿ ಕಡಿಮೆ ಬೆಲೆಗೆ ಹರಾಜಾಗಿ ನಿರಾಸೆ ಮೂಡಿಸಿದರು.

ಮೊದಲ ದಿನ ಎಲ್ಲಾ ತಂಡಗಳು ಒಟ್ಟು 318.10 ಕೋಟಿ ಹಣವನ್ನು ಹರಾಜಿನಲ್ಲಿ ವಿನಿಯೋಗಿಸಿದವು. ಸಾಕಷ್ಟು ಅಂಡರ್‌ 19 ತಂಡದ ಯುವ ಪ್ರತಿಭೆಗಳಿಗೂ ಕೋಟಿಗೂ ಹೆಚ್ಚು ಹಣ ನೀಡಿ ತಂಡಗಳು ಖರೀದಿಸಿದ್ದು ವಿಶೇಷ.

ಐಪಿಎಲ್ ಆಟಗಾರರ ಹರಾಜು - ವಿಶೇಷ ಪುಟ

ಇಂದು ಮಾರಾಟವಾಗದೇ ಉಳಿದ ಕ್ರಿಸ್‌ ಗೇಲ್, ಹಶೀಮ್ ಆಮ್ಲಾ, ಲಸಿತ್ ಮಲಿಂಗಾ, ಇಶಾಂತ್ ಶರ್ಮಾ, ಟಿಮ್ ಸೌಥಿ ಅವರುಗಳಿಗೆ ನಾಳೆ ಡಿಮ್ಯಾಂಡ್ ಬರುವ ಸಾಧ್ಯತೆ ಇದೆ. ಅತಿ ಉತ್ಸಾಹದಿಂದ ಹರಾಜಿನಲ್ಲಿ ಪಾಲ್ಗೊಂಡ ಪಂಜಾಬ್‌ ತಂಡ ಖ್ಯಾತ ನಾಮ ಆಟಗಾರರನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತು.

Story first published: Saturday, January 27, 2018, 19:36 [IST]
Other articles published on Jan 27, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ