ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಭಿಮಾನಿಗಳ ಕಪ್ಪಿನಾಸೆಯನ್ನು ಜೀವಂತವಾಗಿರಿಸುವುದೇ ಬೆಂಗಳೂರು?

IPL 2018: CSK vs RCB Preview: who will win in pune?

ಪುಣೆ, ಮೇ 4: ಕಳೆದ ಪಂದ್ಯದಲ್ಲಿ ಬೆಂಗಳೂರು ತಂಡ ಹಾಲಿ ಚಾಂಪಿಯನ್ಸ್ ಮುಂಬೈ ವಿರುದ್ಧ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗೆದ್ದು ಬೀಗಿತ್ತು. ಐಪಿಎಲ್ 2018ರ 35ನೇ ಪಂದ್ಯವಾಗಿ ನಾಳೆ ಪುಣೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಂಲೆಂಜರ್ಸ್ ತಂಡಗಳು ಮುಖಾಮುಖಿಯಾಗಲಿವೆ.

ಸದ್ಯ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಚೆನ್ನೈ ಆಡಿರುವ 9 ಪಂದ್ಯಗಳಲ್ಲಿ 6ರಲ್ಲಿ ಜಯ ಸಾಧಿಸಿದೆ. 8 ಪಂದ್ಯಗಳಲ್ಲಿ 3ರಲ್ಲಷ್ಟೇ ಜಯ ಕಂಡಿರುವ ಬೆಂಗಳೂರು ತಂಡ 5ನೇ ಸ್ಥಾನದಲ್ಲಿದ್ದು ನಾಳಿನ ಪಂದ್ಯದಲ್ಲಿ ಗೆಲುವಿನ ನಿರೀಕ್ಷೆಯಲ್ಲಿದೆ.

ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಳ್ಳುವ ಜೋಶ್ ನಲ್ಲಿರುವ ಚೆನ್ನೈಗೂ ನಾಳಿನ ಪಂದ್ಯ ಗೆಲ್ಲವ ವಿಶ್ವಾಸದಲ್ಲಿದೆ. ಹಿಂದಿನ ಪಂದ್ಯಗಳಲ್ಲಿ ಹೆಚ್ಚು ಸೋಲು ಕಂಡಿರುವ ಬೆಂಗಳೂರು ಈ ಪಂದ್ಯವನ್ನು ಸೋತರೆ ಮತ್ತೆ ಪ್ರಶಸ್ತಿ ಸುತ್ತಿನಿಂದ ಹೊರ ಬೀಳುವ ಸಾಧ್ಯತೆಯಿರುವುದರಿಂದ ಆರ್ಸಿಬಿಗೆ ಪುಣೆ ಪಂದ್ಯದ ಗೆಲುವು ಮಹತ್ವದ್ದು.

ಮುಂಬೈ ಬಲಾಡ್ಯ ತಂಡವಾದರೂ ಒಂದು ರೀತಿಯ ಬೇಜಾವಾಬ್ದಾರಿಯ ಆಟದಿಂದಾಗಿ ಸದ್ಯ ಅಂಕಪಟ್ಟಿಯ ತಳ ಸೇರಿದೆ. ಹಿಂದಿನ ಪಂದ್ಯದಲ್ಲಿ ಮುಂಬೈ ತಂಡ ಬೆಂಗಳೂರು ವಿರುದ್ಧ ಸೋತು ಇನ್ನೆಲ್ಲಾ ಪಂದ್ಯವನ್ನು ಗೆಲ್ಲಲೇ ಬೇಕಾದ ಸಂಕಟಕ್ಕೀಡಾಗಿದೆ. ಆದರೆ ಮುಂಬೈಗೆ ಹೋಲಿಸಿದರೆ ಚೆನ್ನೈ ಹೆಚ್ಚು ಅಪಾಯಕಾರಿ ತಂಡ.

ಕೂಲ್ ಕ್ಯಾಪ್ಟನ್ ಖ್ಯಾತಿಯ ಧೋನಿ ನಾಯಕತ್ವದ ಚೆನ್ನೈ ಹೆಚ್ಚಿನ ಪಂದ್ಯಗಳನ್ನು ಕರಾರುವಕ್ಕಾಗಿ ಆಡಿರುವುದೇ ಈ ಐಪಿಎಲ್ ನಲ್ಲಿ ಅದರ ಯಶಸ್ಸಿನ ಗುಟ್ಟು. ಟೀಮ್ ಇಂಡಿಯಾ ಕ್ಯಾಪ್ಟನ್ ಕೊಹ್ಲಿ ಮುಂದಾಳತ್ವದ ಬೆಂಗಳೂರು ಸಣ್ಣ ಯಡವಟ್ಟುಗಳಿಂದಾಗಿ ಎಡವುತ್ತಾ ಆರ್ಸಿಬಿ ಅಭಿಮಾನಿಗಳ ಅಪಹಾಸ್ಯಕ್ಕೆ ಈಡಾಗುತ್ತಾ ಬಂದಿದೆ. ನಾಳಿನ ಪಂದ್ಯದಲ್ಲೂ ಗೆದ್ದು ಬೆಂಗಳೂರು ತಂಡ ಆರ್ಸಿಬಿ ಅಭಿಮಾನಿಗಳ ಕಪ್ಪಿನಾಸೆಯನ್ನು ಜೀವಂತವಾಗಿರಿಸುವುದೇ ಕಾದು ನೋಡಬೇಕಿದೆ.

Story first published: Friday, May 4, 2018, 17:34 [IST]
Other articles published on May 4, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X