ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚೆನ್ನೈ ಚಾಂಪಿಯನ್: ಹೈದರಾಬಾದ್ ವಿರುದ್ಧ 8 ವಿಕೆಟ್ ಭರ್ಜರಿ ಜಯ

IPL 2018 final:Super Kings continue to pluck wickets, Shakib, Hooda depart

ಮುಂಬೈ, ಮೇ 27:ಐಪಿಎಲ್ 11ನೇ ಆವೃತ್ತಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 8 ವಿಕೆಟ್ ಜಯ ಗಳಿಸುವ ಮೂಲಕ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ 3ನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಶೇನ್ ವಾಟ್ಸನ್ ಅಜೇಯ 117 (57) ರನ್ ನೆರವಿನೊಂದಿಗೆ ಚೆನ್ನೈ ಗೆಲುವಿನ ಗೆರೆ ದಾಟಿತು.

ಹೈದರಾಬಾದ್ ನೀಡಿದ್ದ 179 ರನ್ ಗುರಿಯನ್ನು ಬೆನ್ನಟ್ಟಿದ ಚೆನ್ನೈ 18.3 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 181 ಪೇರಿಸಿ ಗೆಲುವಿನ ಸಂಭ್ರಮಾಚರಿಸಿತು.

ಐಪಿಎಲ್ ಅಂತಿಮ ಹಣಾಹಣಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿದ್ದು, ಹೈದರಾಬಾದ್ ತಂಡ ಚೆನ್ನೈಗೆ 179ರನ್ ಗುರಿ ನೀಡಿದ್ದು, ಚೆನ್ನೈಪರ ವಾಟ್ಸನ್ ಬ್ಯಾಟಿಂಗ್ ಅಬ್ಬರಿಸಿದ್ದರು. 9 ಓವರ್ ಮುಕ್ತಾಯಕ್ಕೆ ಚೆನ್ನೈ 1 ವಿಕೆಟ್ ಕಳೆದುಕೊಂಡು 72 ರನ್ ಪೇರಿಸಿತ್ತು.

ಸ್ಕೋರ್ ಕಾರ್ಡ್

ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಸನ್ ರೈಸರ್ಸ್ ಹೈದರಾಬಾದ್ ತಂಡ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 178 ರನ್ ಪೇರಿಸಿ ಚೆನ್ನೈಗೆ 179 ರನ್ ಗುರಿ ನೀಡಿತ್ತು.

ಹೈದರಾಬಾದ್ ಪರ ನಾಯಕ ಕೇನ್ ವಿಲಿಯಮ್ಸನ್ 47 (36), ಶಿಖರ್ ಧವನ್ 26 (25), ಶಕೀಬ್ ಅಲ್ ಹಸನ್ 23 (15) ರನ್ ಗಳಿಸಿ ನಿರ್ಗಮಿಸಿದ್ದು ಹೈದರಾಬಾದ್ ರನ್ ಕದಿಯುವಿಕೆಗೆ ತಡೆಯೊಡ್ಡಿತು.

ಹೈದರಾಬಾದ್ ತಂಡಕ್ಕೆ ಕೊಂಚ ಬೆಂಬಲವಾಗಿ ನಿಂತವರೆಂದರೆ ಯೂಸೂಫ್ ಪಠಾಣ್ ಒಬ್ಬರೇ. 25 ಎಸೆತ ಎದುರಿಸಿದ ಪಠಾಣ್ 45 ರನ್ ಪೇರಿಸಿ ತಂಡದ ಮೊತ್ತ ಏರಿಸುವಲ್ಲಿ ನೆರವಾದರು.

ಪ್ರಥಮ ಇನ್ನಿಂಗ್ಸ್ ನಲ್ಲಿ ಚೆನ್ನೈ ಪರ ಎನ್ ಗಿಡಿ, ಶಾರ್ದೂಲ್ ಠಾಕೂರ್, ಕರ್ಣ್ ಶರ್ಮ, ಡ್ವೇನ್ ಬ್ರಾವೋ, ರವೀಂದ್ರ ಜಡೇಜಾ ತಲಾ ಒಂದೊಂದು ವಿಕೆಟ್ ಕಬಳಿಸಿದರು.

Story first published: Sunday, May 27, 2018, 23:00 [IST]
Other articles published on May 27, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X