LIVE: ಐಪಿಎಲ್ 2018ಕ್ಕೆ ಚಾಲನೆ, ರಂಗು ತುಂಬಿದ ಬಿಟೌನ್ ಸ್ಟಾರ್‌ಗಳು

Posted By:
ipl-2018-inauguration-ceremony-live-wankhede-stadium-mumbai

ಮುಂಬೈ, ಏಪ್ರಿಲ್ 07: ಐಪಿಎಲ್ 2018 ಇಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಉದ್ಘಾಟನೆ ಕಾಣುತ್ತಿದೆ. ಉದ್ಘಾಟನಾ ಸಮಾರಂಭಕ್ಕೆ ರಂಗು ತುಂಬಲು ಬಾಲಿವುಡ್ ಸ್ಟಾರ್‌ಗಳು ಆಗಮಿಸಿದ್ದಾರೆ.

ಐಪಿಎಲ್ 11 ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಾಲಿವುಡ್ ಸ್ಟಾರ್‌ಗಳಾದ ಹೃತಿಕ್ ರೋಷನ್, ಪ್ರಭುದೇವಾ, ಜಾಕ್ವಿಲಿನ್ ಫರ್ನಾಂಡೀಸ್, ವರುಣ್ ಧವನ್, ತಮನ್ನಾ ಭಾಟಿಯಾ ಅವರುಗಳು ಕುಣಿದು ಕುಪ್ಪಳಿಸಲಿದ್ದಾರೆ.

ಐಪಿಎಲ್ ವಿಶೇಷ ಪುಟ | ಪೂರ್ಣವೇಳಾಪಟ್ಟಿ | ಆರ್ ಸಿಬಿ ವೇಳಾಪಟ್ಟಿ

90 ನಿಮಿಷ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದ ನಂತರ ಐಪಿಎಲ್‌ 2018 ರ ಮೊದಲ ಪಂದ್ಯ ಮುಂಬೈ ಇಂಡಿಯನ್ಸ್‌ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ನಡುವೆ ನಡೆಯಲಿದೆ.

* ಸಾಂಸ್ಕೃತಿಕ ಕಾರ್ಯಕ್ರಮ ಮುಕ್ತಾಯ, ಮುಂಬೈ-ಚೆನ್ನೈ ನಡುವೆ ಕೆಲವೇ ನಿಮಿಷಗಳಲ್ಲಿ ಪಂದ್ಯ ಆರಂಭಗೊಳ್ಳಲಿದೆ

* ಭಾರಿ ಕರತಾಡನ ಸೂಪರ್ ಸ್ಟಾರ್ ಹೃತಿಕ್ ರೋಷನ್ ಎಂಟ್ರಿ...

* ಜಾಕ್ವೆಲಿನ್ ಫರ್ನಾಂಡೀಸ್ ಕುಣಿತ, ಮಿಖ್ಖಾ ಸಿಂಗ್ ಹಾಡಿಗೆ ಕುಣಿದ ಕುಪ್ಪಳಿಸಿದ ಮುಂಬೈ ಕ್ರಿಕೆಟ್ ಪ್ರೇಮಿಗಳು

* ಬಾಹುಬಲಿ ಹಾಡಿನೊಂದಿಗೆ ವೇದಿಕೆ ಏರಿದ ಸೌಥ್ ಇಂಡಿಯಾ ಸ್ಟಾರ್ ನಟಿ ತಮ್ನನ್ನಾ ಭಾಟಿಯಾ

* ವರುಣ್ ಧವನ್ ನಂತರ ಕಿಂಗ್ ಆಫ್ ಡಾನ್ಸ್‌ ಪ್ರಭುದೇವಾ ಎಂಟ್ರಿ, 'ಊರ್ವಶಿ.. ಊರ್ವಶಿ' ಕುಣಿತಕ್ಕೆ ಸಿಳ್ಳೆ ಹಾಕಿದ ಕ್ರಿಕೆಟ್ ಅಭಿಮಾನಿಗಳು

* ಐಪಿಎಲ್ ಉದ್ಘಾಟನಾ ಪಂದ್ಯ ಸಂಸ್ಕೃತಿಕ ಕಾರ್ಯುಕ್ರಮಗಳಿಗೆ ಚಾಲನೆ, ಬಾಲಿವುಡ್ ಸ್ಟಾರ್ ವರುಣ್ ಧವನ್ ನಿಂದ ಡಾನ್ಸ್‌

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Saturday, April 7, 2018, 17:42 [IST]
Other articles published on Apr 7, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ