ಐಪಿಎಲ್ 11ರ ವೇಳಾಪಟ್ಟಿ: ಚೆನ್ನೈ -ಮುಂಬೈ ಮೊದಲ ಪಂದ್ಯ

Posted By:
VIVO Indian Premier League 2018 schedule: Mumbai Indians to take on Chennai Super Kings in opener

ಬೆಂಗಳೂರು, ಫೆಬ್ರವರಿ 15: ಬಹು ನಿರೀಕ್ಷಿತ ಟಿ20 ಸಮರಕ್ಕೆ ಸಮಯ ನಿಗದಿಯಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 11) 2018ನೇ ಆವೃತ್ತಿಯು ಏಪ್ರಿಲ್ 7 ರಿಂದ ಆರಂಭವಾಗಲಿದ್ದು, ಫೈನಲ್ ಪಂದ್ಯ ಮೇ.27 ರಂದು ನಡೆಯಲಿದೆ.

ಐಪಿಎಲ್ ಆಡಳಿತ ಮಂಡಳಿ ಈ ವಿಷಯವನ್ನು ಪ್ರಕಟಿಸಿದ್ದು, ಉದ್ಘಾಟನಾ ಪಂದ್ಯ ಮತ್ತು ಫೈನಲ್ ಪಂದ್ಯಗಳು ಮುಂಬೈನ ವಾಂಖಡೆ ಕ್ರೀಡಾಂಗಣದಲ್ಲಿ ನಡೆಯಲಿದೆ.

ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಹಾಗೂ ಎರಡು ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಕಾದಾಡಲಿವೆ.

ಈ ಆವೃತಿಯಲ್ಲಿ ಪಂದ್ಯಗಳ ಪ್ರಾರಂಭ ಸಮಯವನ್ನು ಬದಲಾಯಿಸಲಾಗಿದ್ದು, ಪಂದ್ಯಗಳು ಸಂಜೆ 5.30 ಮತ್ತು 7 ಕ್ಕೆ ಪ್ರಾರಂಭ ಆಗಲಿವೆ. ಟಿವಿಗಳ ಬೇಡಿಕೆ ಮೇರೆಗೆ ಈ ಬದಲಾವಣೆ ಮಾಡಲಾಗಿದೆ ಎಂದು ಐಪಿಎಲ್ ಆಡಳಿತ ಮಂಡಳಿ ಹೇಳಿದೆ.

ನಿಷೇಧಕ್ಕೆ ಒಳಗಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಈ ಆವೃತ್ತಿಯಲ್ಲಿ ಪುನರ್‌ ಪ್ರವೇಶ ಪಡೆದುಕೊಂಡಿವೆ. ಪಂಜಾಬ್ ಸೂಪರ್ ಕಿಂಗ್ಸ್‌ ತಂಡವು ತನ್ನ ತವರು ನೆಲದ ಪಂದ್ಯಗಳಲ್ಲಿ ನಾಲ್ಕನ್ನು ಮೊಹಾಲಿಯಲ್ಲಿ ಮೂರು ಪಂದ್ಯವನ್ನು ಇಂದೋರ್‌ನಲ್ಲಿ ಆಡಲಿದೆ. ಒಟ್ಟು 9 ತಾಣಗಳಲ್ಲಿ 51 ದಿನಗಳ ಕಾಲ ಟಿ20 ಕ್ರಿಕೆಟ್ ಹಬ್ಬ ನಡೆಯಲಿದೆ.

ಕ್ವಾಲಿಫೈಯರ್ 1 ಹಾಗೂ ಕ್ವಾಲಿಫೈಯರ್ 2 ನಡುವಿನ ಪಂದ್ಯ ವಾಂಖೆಡೆ ಸ್ಟೇಡಿಯಂನಲ್ಲಿ ಭಾನುವಾರ(ಮೇ 27)ದಂದು ನಡೆಯಲಿದೆ. 12 ಪಂದ್ಯಗಳು ಸಂಜೆ 4/ 5.30ಕ್ಕೆ ಆರಂಭಗೊಂಡರೆ, 48 ಪಂದ್ಯಗಳು 8 IST ಗೆ ಆರಂಭವಾಗಲಿದೆ.

* ಲೀಗ್ ಪಂದ್ಯಗಳು : ಏಪ್ರಿಲ್ 7ರಿಂದ ಮೇ 20, 2018
* ಫೈನಲ್ : ಮೇ 27, 2018

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Thursday, February 15, 2018, 12:51 [IST]
Other articles published on Feb 15, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ