155ಕ್ಕೆ ಪಂಜಾಬ್ ಆಲ್‌ಔಟ್, ಗೆಲ್ಲುವ ವಿಶ್ವಾಸದಲ್ಲಿ ಆರ್‌ಸಿಬಿ

Posted By:
ipl 2018 match 08 Royal chalengers Bengaluru Punjab Kings eleven

ಬೆಂಗಳೂರಿನಲ್ಲಿ ನಡೆಯುತ್ತಿರುವ ಮೊದಲ ಐಪಿಎಲ್‌ ಪಂದ್ಯದಲ್ಲಿ ಇಂದು ಆರ್‌ಸಿಬಿ ತಂಡವು ಪಂಜಾಬ್ ಕಿಂಗ್ಸ್ ಇಲೆವನ್‌ ಅನ್ನು ಎದುರಿಸುತ್ತಿದ್ದು, ಮೊದಲು ಬ್ಯಾಟ್ ಮಾಡಿದ ಪಂಜಾಬ್ 155 ರನ್‌ಗೆ ಆಲ್‌ಔಟ್ ಆಗಿದೆ.

ಸ್ಕೋರ್ ಕಾರ್ಡ್, ಕಾಮೆಂಟ್ರಿ

ಕೆ.ಎಲ್.ರಾಹುಲ್ ಅಬ್ಬರದ ಬ್ಯಾಟಿಂಗ್‌ನಿಂದ ಪಂಜಾಬ್ ತಂಡ ಉತ್ತಮ ಕಂಡರೂ ಸಹ ಅದನ್ನು ಮುಂದುವರೆಸಿಕೊಂಡು ಹೋಗಲಿಲ್ಲ, ಆರ್‌ಸಿಬಿ ಬೌಲರ್‌ಗಳು ಲಯಬದ್ಧವಾದ ಬೌಲಿಂಗ್‌ ಮುಂದೆ ಪಂಜಾಬ್‌ ಬ್ಯಾಟ್ಸ್‌ಮನ್‌ಗಳು ಹೆಚ್ಚು ಕಾಲ ನಿಲ್ಲಲಿಲ್ಲ. ಆರ್‌ಸಿಬಿ ಬೌಲರ್‌ಗಳ ಪಂಜಾಬ್‌ ಬ್ಯಾಟ್ಸ್ಮನ್‌ಗಳ ಅಬ್ಬರ ಸಾಗಲಿಲ್ಲ.

ಕಳೆದ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್‌ನಿಂದ ಮಿಂಚಿದ್ದ ಕರ್ನಾಟಕದ ಕೆ.ಎಲ್.ರಾಹುಲ್ ಇಂದು ಕೂಡಾ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಖಾತೆಯನ್ನು ಸತತ ಎರಡು ಸಿಕ್ಸರ್‌ನಿಂದಲೇ ತೆರೆದ ರಾಹುಲ್ 30 ಎಸೆತದಲ್ಲಿ 47 ರನ್ ಚಚ್ಚಿದರು. ಅವರ ಇನ್ನಿಂಗ್ಸ್‌ನಲ್ಲಿ 4 ಸಿಕ್ಸರ್ ಎರಡು ಬೌಂಡರಿ ಇದ್ದವು.

ಐಪಿಎಲ್ ವಿಶೇಷ ಪುಟ | ಪಂಜಾಬ್ ವೇಳಾಪಟ್ಟಿ | ಬೆಂಗಳೂರು ವೇಳಾಪಟ್ಟಿ

ಐಪಿಎಲ್‌ನಲ್ಲಿ ಮೊದಲ ಪಂದ್ಯ ಆಡಿದ ಫಿಂಚ್ ಮೊದಲ ಎಸೆತದಲ್ಲೇ ಯಾದವ್‌ರ ಎಲ್‌ಬಿಡಬ್ಲು ಬಲೆಗೆ ಬಿದ್ದರು. ಯುವರಾಜ್ ಸಿಂಗ್ ಸಹ ಫಿಂಚ್ ದಾರಿಯನ್ನೇ ಹಿಡಿದರು. ಆಗ ರಾಹುಲ್‌ಗೆ ಜೊತೆಯಾದ ಕರ್ನಾಟಕದ ಕರುಣ್ ನಾಯರ್ ತಂಡವನ್ನು ಕುಸಿತದಿಂದ ಪಾರು ಮಾಡಲು ಸಹಾಯ ಮಾಡಿದರು. ಆದರೆ 47 ರನ್ ಗಳಿಸಿ ರಾಹುಲ್ ಔಟ್ ಆಗುತ್ತಿದ್ದಂತೆ. ಕರುಣ್ ನಾಯರ್ 29 ರನ್‌ಗಳಿಗೆ ಔಟಾಗಿ ಪೆವಿಲಿಯನ್ ಸೇರಿದರು.

ಕೊನೆಯಲ್ಲಿ ಪಂಜಾಬ್ ನಾಯಕ ಆರ್.ಅಶ್ವಿನ್ ಉತ್ತಮ ಆಟ ಆಡಿ 21 ಎಸೆತಕ್ಕೆ 33 ರನ್ ಗಳಿಸಿ ತಂಡವನ್ನು 150 ರನ್ ಗಡಿ ದಾಟಿಸಿದರು.

ಬೆಂಗಳೂರು ತಂಡದ ಪರ ಅತ್ಯುತ್ತಮ ಬೌಲಿಂಗ್ ನಡೆಸಿದ ಉಮೇಶ್ ಯಾದವ್ 3 ವಿಕೆಟ್ ಗಳಿಸಿದರು. ವಾಷಿಂಗ್ಟನ್ ಸುಂದರ್ 4 ಓವರ್‌ನಲ್ಲಿ 22 ರನ್ ನೀಡಿ ಪ್ರಮುಖ 2 ವಿಕೆಟ್ ಕಬಳಿಸಿದರು. ಉಳಿದಂತೆ ಕ್ರಿಸ್ ಓಕ್ಸ್ 2, ಕುಲ್ವಂತ್ 2 ವಿಕೆಟ್ ಪಡೆದರೆ, ಯಜುವೇಂದ್ರ ಚಾಹಲ್ 1 ವಿಕೆಟ್ ಗಳಿಸಿದರು.

ಆರ್‌ಸಿಬಿ ತಂಡವು ಗೆಲ್ಲಲು 156 ರನ್ ಗಳಿಸಬೇಕಿದ್ದು, ಅತ್ಯುತ್ತಮ ಬ್ಯಾಟಿಂಗ್ ಹೊಂದಿರುವ ಆರ್‌ಸಿಬಿಗೆ ಈ ಮೊತ್ತ ಕಷ್ಟವೇನು ಆಗಲಿಕ್ಕಿಲ್ಲ.

ತಂಡಗಳು ಇಂತಿವೆ...
ಬೆಂಗಳೂರು
ವಿರಾಟ್ ಕೊಹ್ಲಿ (ನಾಯಕ), ಬ್ರೆಂಡನ್ ಮೆಕ್ಲಮ್, ಕ್ವಿಂಟನ್ ಡಿಕಾಕ್ (ಕೀಪರ್), ಎಬಿ ಡಿವಿಲಿಯರ್ಸ್, ಸರ್ಫರಾಜ್ ಖಾನ್, ಮಂದೀಪ್ ಸಿಂಗ್, ಕ್ರಿಸ್ ವೋಕ್ಸ್, ವಾಷಿಂಗ್ಟನ್ ಸುಂದರ್, ಕುಲ್ವಂತ್ ಕೆಜ್ರೊಲಿಯಾ, ಉಮೇಶ್ ಯಾದವ್, ಯಜುವೇಂದ್ರ ಚಾಹಲ್.

ಪಂಜಾಬ್‌
ರವಿಚಂದ್ರನ್ ಅಶ್ವಿನ್ (ನಾಯಕ), ಕೆ.ಎಲ್.ರಾಹುಲ್ (ಕೀಪರ್), ಮಯಾಂಕ್ ಅಗರ್ವಾಲ್, ಕರುಣ್ ನಾಯರ್, ಆರನ್ ಫಿಂಚ್, ಯುವರಾಜ್ ಸಿಂಗ್, ಮಾರ್ಕಸ್ ಸ್ಟೋನಿಸ್, ಅಕ್ಷರ್ ಪಟೇಲ್, ಆಂಡ್ರೆ ಟೈ, ಮೋಹಿತ್ ಶರ್ಮಾ, ಮುಜೀಬ್ ಉರ್ ರೆಹಮಾನ್.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Friday, April 13, 2018, 19:46 [IST]
Other articles published on Apr 13, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ