ವಿಡಿಯೋ: ಆರ್ ಸಿಬಿಯ 13ನೇ ಆಟಗಾರ ಮಿ.ನಾಗ್ಸ್ ತರ್ಲೆ ಕೊಹ್ಲಿ ಕಿಡಿ!

Posted By:
IPL 2018 : Nagumentry Season 1 Episode 1 Nags want players to get Aadhaar Cards

ಬೆಂಗಳೂರು, ಏಪ್ರಿಲ್ 15: 2018ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲೂ ಆರ್ ಸಿಬಿಯ ಅನಧಿಕೃತ ಆಟಗಾರ, 13ನೇ ಆಟಗಾರ ಮಿ.ನಾಗ್ಸ್(ದಾನೀಶ್ ಸೇಠ್) ಅವರು ಆರ್ ಸಿಬಿ ಕ್ಯಾಂಪಿಗೆ ಎಂಟ್ರಿ ಕೊಟ್ಟು ಆಟಗಾರರನ್ನು ತಲೆ ತಿಂದ ಪ್ರಸಂಗವನ್ನು ನಾಗುಮೆಂಟರಿಯ ಮೊದಲ ಎಪಿಸೋಡಿನಲ್ಲಿ ಕಾಣಬಹುದಾಗಿದೆ.

ಆರ್ ಸಿಬಿ ತನ್ನ ತವರು ನೆಲದಲ್ಲಿ ಪಂದ್ಯಗಳನ್ನಾಡುತ್ತಿರುವುದರಿಂದ ತಂಡವನ್ನು ಹುರಿದುಂಬಿಸಲು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದಿದ್ದ ಮಿ. ನಾಗ್ಸ್ ಅವರು, ಆಟಗಾರರಿಗೆ ಆಧಾರ್ ಕಾರ್ಡ್ ಮಾಡಿಸಲು ಫೋಟೋ ಶೂಟ್ ಮಾಡಿಸುತ್ತಾರೆ. ನಂತರ ಆಧಾರ್ ಕಾರ್ಡ್ ಏಕೆ ಎಂದು ಪ್ರಶ್ನಿಸಿದರೆ, ಕರ್ನಾಟಕದಲ್ಲಿ ಈಗ ಎಲೆಕ್ಷನ್ ಟೈಮ್ ಹಾಗಾಗಿ ಆಧಾರ್ ಕಾರ್ಡ್ ಬೇಕು ನಂತರ ವೋಟರ್ ಐಡಿ ತೆಗೆದುಕೊಳ್ಳಬೇಕು ಎಂದು ನಾಗ್ಸ್ ಕಿಸಿಯುತ್ತಾನೆ.

IPL 2018 : Nagumentry Season 1 Episode 1 Nags want players to get Aadhaar Cards

ಐಪಿಎಲ್ 2018ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡವು ಭಾನುವಾರದಂದು ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಸೆಣೆಸುತ್ತಿದೆ. ಇದಕ್ಕೂ ಮೊದಲು ಅಭ್ಯಾಸ ನಡೆಸುವಾಗ ಮಿ. ನಾಗ್ಸ್ ತಮ್ಮ ನಾಗುಮೆಂಟ್ರಿ ತಂಡದೊಡನೆ ಪ್ರವೇಶಿಸಿ, ಆಧಾರ್ ಕಾರ್ಡ್, ವೋಟರ್ಸ್ ಐಡಿ ಮಾಡಿಸುವ ಯತ್ನದಲ್ಲಿರುತ್ತಾರೆ.

ಆದರೆ, ನಾಯಕ ವಿರಾಟ್ ಕೊಹ್ಲಿ ಅವರು, ನಾಗ್ಸ್ ಕಡೆ ತಿರುಗಿ ಪ್ರತಿವರ್ಷ ಯಾಕೆ ಎಲ್ಲರ ತಲೆ ತಿಂದು ಎಲ್ಲರ ಸಮಯ ವ್ಯರ್ಥ ಮಾಡುತ್ತೀಯಾ? ನಿನ್ನ ತಲೆ ಏರ್ ಬ್ಯಾಂಡ್ ಬದಲಾಗಿಲ್ಲ ಎಂದು ಗೇಲಿ ಮಾಡಿ ಹೋಗುತ್ತಾರೆ.

IPL 2018 : Nagumentry Season 1 Episode 1 Nags want players to get Aadhaar Cards

ಉಮೇಶ್ ಯಾದವ್, ಮನ್ದೀಪ್, ಯಜುವೇಂದ್ರ ಚಾಹಲ್ ಫೋಟೋ ಶೂಟ್ ಮಾಡುವ ನಾಗ್ಸ್, ಬ್ರೆಂಡನ್ ಕೂಡಾ ಆಧಾರ್ ಕಾರ್ಡ್ ಫೋಟೊ ಬೇಕು ಎನ್ನುತ್ತಾನೆ. ಈ ತಮಾಷೆ ವಿಡಿಯೋದ ಮೊದಲ ಎಪಿಸೋಡು ಯಾಕೋ ತುಂಬಾ ಸೀರಿಯಸ್ ಆಗಿದ್ದು, ಮಿ.ನಾಗ್ಸ್ ನ ಎಂದಿನ ಪಂಚಿಂಗ್ ಡೈಲಾಗ್ಸ್ ಅಷ್ಟಾಗಿ ಕಾಣಸಿಕ್ಕಿಲ್ಲ

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Sunday, April 15, 2018, 16:44 [IST]
Other articles published on Apr 15, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ