ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2018: ಪ್ಲೇ ಆಫ್ ಪಂದ್ಯಗಳು ಎಲ್ಲೆಲ್ಲಿ? ಪಂದ್ಯದ ಟೈಮಿಂಗ್ಸ್!

By Mahesh
IPL 2018 : ಪ್ಲೇ ಆಫ್ ಪಂದ್ಯಗಳು ಎಲ್ಲೆಲ್ಲಿ? ಪಂದ್ಯದ ಟೈಮಿಂಗ್ಸ್ | Oneindia Kannada
IPL 2018 Playoffs: Schedule, Teams List, Venue, Tickets, Timings,TV Channel & Live Streaming Details

ಬೆಂಗಳೂರು, ಮೇ 20: 11ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇದೀಗ ಪ್ಲೇ ಆಫ್ ಹಂತಕ್ಕೆ ಬಂದಿದೆ. ಸನ್ ರೈಸರ್ಸ್ ಹೈದರಾಬಾದ್ ತಂಡ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಅರ್ಹತೆ ಪಡೆದ ಮೊದಲೆರಡು ತಂಡಗಳೆನಿಸಿಕೊಂಡಿವೆ.

ಲೀಗ್ ಹಂತ ಮುಗಿಯುತ್ತಾ ಬಂದಿದ್ದು, ಶನಿವಾರದಂದು ಸನ್ ರೈಸರ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಜಯ ದಾಖಲಿಸುವ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ.

ಅಂಕಪಟ್ಟಿ | ಐಪಿಎಲ್ ವಿಶೇಷ ಪುಟ

ಸದ್ಯ ನಾಲ್ಕನೇ ಸ್ಥಾನದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು 14 ಪಂದ್ಯಗಳಿಂದ 14 ಅಂಕಗಳನ್ನು ಗಳಿಸಿದ್ದರೂ ಮುಂದಿನ ಹಂತಕ್ಕೇರುವ ಸಾಧ್ಯತೆ ಇನ್ನೂ ಇಲ್ಲ. ಪ್ಲೇ ಆಫ್ ಪಂದ್ಯಗಳು ಮೇ 22 ರಿಂದ 25ರ ತನಕ ನಡೆಯಲಿದೆ. ಮೇ 24ರಂದು ವಿಶ್ರಾಂತಿ ದಿನ ನಿಗದಿಯಾಗಿದೆ. ಮೇ 27ರಂದು ಅಂತಿಮ ಹಣಾಹಣಿ ನಡೆಯಲಿದ್ದು, ಮುಂಬೈನ ವಾಂಖೆಡೆ ಸ್ಟೇಡಿಯಂ ಸಜ್ಜಾಗಿದೆ. ಪ್ಲೇ ಆಫ್ ಪಂದ್ಯಗಳು ಕೋಲ್ಕತ್ತಾದ ಈಡೆನ್ ಗಾರ್ಡನ್ಸ್ ನಲ್ಲಿ ನಡೆಯಲಿದ್ದು, ಕೆಕೆಆರ್ ತಂಡಕ್ಕೆ ಲಾಭ ತರಬಹುದು.

ನಾಲ್ಕನೇ ಸ್ಥಾನಕ್ಕೆ ಮೂರು ತಂಡಗಳಿಂದ ಪೈಪೋಟಿ

ನಾಲ್ಕನೇ ಸ್ಥಾನಕ್ಕೆ ಮೂರು ತಂಡಗಳಿಂದ ಪೈಪೋಟಿ

ಭಾನುವಾರದಂದು ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ನಡುವೆ ಪಂದ್ಯದಲ್ಲಿ ಮುಂಬೈ ತಂಡ ಗೆದ್ದರೆ, ರಾಜಸ್ಥಾನ್ ರಾಯಲ್ಸ್ ಹಾಗೂ ಕಿಂಗ್ಸ್ ಎಲೆವನ್ ಪಂಜಾಬ್ ತಂಡಗಳು ಟೂರ್ನಮೆಂಟ್ ನಿಂದ ಔಟ್ ಆಗಲಿವೆ.
ಮತ್ತೊಂದು ಪಂದ್ಯದಲ್ಲಿ ಪಂಜಾಬ್ ತಂಡವು ಚೆನ್ನೈ ವಿರುದ್ಧ ಭಾರಿ ಅಂತರ(53 ಪ್ಲಸ್ ರನ್) ಅಥವಾ 13.5 ಓವರ್ ಗಳಲ್ಲಿ ಚೇಸ್ ಮಾಡಿದರೆ ಮಾತ್ರ ಮುಂದಿನ ಹಂತದ ಕನಸು ನನಸಾಗಲಿದೆ. ಅಕಸ್ಮಾತ್ ಮುಂಬೈ ಸೋತು, ಪಂಜಾಬ್ ಸೋತರೇ ರಾಜಸ್ಥಾನ್ ರಾಯಲ್ಸ್ ಸುಲಭವಾಗಿ ಮುಂದಿನ ಹಂತಕ್ಕೇರುತ್ತದೆ.

ಯಾವ ಟಿವಿಯಲ್ಲಿ ಪ್ರಸಾರ

ಯಾವ ಟಿವಿಯಲ್ಲಿ ಪ್ರಸಾರ

ಯಾವ ಟಿವಿಯಲ್ಲಿ ಪ್ರಸಾರ : ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಮೊಬೈಲ್ ನಲ್ಲಿ ಲೈವ್ : ಹಾಟ್ ಸ್ಟಾರ್.ಕಾಂ
ಪ್ರಸಾರದ ಅವಧಿ: ಪ್ಲೇ ಆಫ್ ನ ಎಲ್ಲಾ ಪಂದ್ಯಗಳು ಸಂಜೆ 7(IST) ಗಂಟೆಗೆ ಪ್ರಸಾರವಾಗಲಿದೆ, 6.30ಕ್ಕೆ ಟಾಸ್ ಆಗಲಿದೆ.
ಪ್ಲೇ ಆಫ್ ವೇಳಾಪಟ್ಟಿ:
* ಮೇ 22 (ಮಂಗಳವಾರ)- ಕ್ವಾಲಿಫೈಯರ್ 1 (7PM), ಮುಂಬೈ ವಾಂಖೆಡೆ ಸ್ಟೇಡಿಯಂ.
ಸನ್ ರೈಸರ್ಸ್ ಹೈದರಾಬಾದ್ (1) ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ (2)

ಈಡೆನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ಪ್ಲೇ ಆಫ್

ಈಡೆನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ಪ್ಲೇ ಆಫ್

ಮೇ 23 (ಬುಧವಾರ)- ಎಲಿಮಿನೇಟರ್ (7 PM)
ಕೋಲ್ಕತ್ತಾ (ಈಡೆನ್ ಗಾರ್ಡನ್ಸ್ ಸ್ಟೇಡಿಯಂ)
ಕೋಲ್ಕತ್ತಾ ನೈಟ್ ರೈಡರ್ಸ್ (3) ವಿರುದ್ಧ ರಾಜಸ್ಥಾನ್ ರಾಯಲ್ಸ್ (4)
***
ಮೇ 24 -ವಿಶ್ರಾಂತಿ ದಿನ
****
ಮೇ 25 (ಶುಕ್ರವಾರ) -ಕ್ವಾಲಿಫೈಯರ್ 2 (7 PM) -ಕೋಲ್ಕತ್ತಾ (ಈಡೆನ್ ಗಾರ್ಡನ್ಸ್ ಸ್ಟೇಡಿಯಂ)
ಕ್ವಾಲಿಫೈಯರ್ 1 ವಿರುದ್ಧ ಎಲಿಮಿನೇಟರ್ ನ ವಿಜೇತ ತಂಡ

ಫೈನಲ್ ಪಂದ್ಯ

ಫೈನಲ್ ಪಂದ್ಯ

ಫೈನಲ್ ಪಂದ್ಯ
ಮೇ 27 (ಭಾನುವಾರ) -7 PM IST
ಮುಂಬೈ -ವಾಂಖೆಡೆ ಸ್ಟೇಡಿಯಂ
ಕ್ವಾಲಿಫೈಯರ್ 1 ವಿರುದ್ಧ ಕ್ವಾಲಿಫೈಯರ್ ವಿನ್ನರ್ 2
***
ಮೇ 28 (ಸೋಮವಾರ)- ಕಾಯ್ದಿರಿಸಿದ ದಿನ
ಗಮನಿಸಿ : ಕ್ವಾಲಿಫೈಯರ್ಸ್ ಹಾಗೂ ಎಲಿಮಿನೇಟರ್ ಪಂದ್ಯಗಳಿಗೆ ರಿಸರ್ವ್ ಡೇಗಳಿಲ್ಲ.

Story first published: Monday, May 21, 2018, 16:29 [IST]
Other articles published on May 21, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X