ಆರ್ ಸಿಬಿ ತಂಡಕ್ಕೆ ಉತ್ಸಾಹ ತುಂಬಿದ ಫ್ಯಾನ್ಸ್!

Posted By:
RCB fans

ಸರಿ ಸುಮಾರು 5.5 ಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಫ್ಯಾನ್ ಪೇಜ್ ನ ಸದಸ್ಯರು ಒಂದೆಡೆ ಸೇರಿದ್ದರು. ಐಪಿಎಲ್ 2018: ಆರ್ ಸಿಬಿ ಪಂದ್ಯಗಳ ವೇಳಾಪಟ್ಟಿ
IPL 2018 : RCB fans meetup Bengaluru

ನಮ್ಮ ಟೀಮ್ ಆರ್ ಸಿಬಿ ಫ್ಯಾನ್ ಪೇಜ್ ನ ಸದಸ್ಯರು, ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಆವರಣದಲ್ಲಿ ಸೇರಿಕೊಂಡು, ತಮ್ಮ ನೆಚ್ಚಿನ ತಂಡಕ್ಕೆ ಶುಭ ಹಾರೈಸಿದರು. 'ಈ ಸಲ ಕಪ್ ನಮ್ದೆ' ಎಂಬ ಮಂತ್ರ ಎಲ್ಲೆಡೆ ಮೊಳಗುತ್ತಿದೆ.

IPL 2018 : RCB fans meetup Bengaluru

ಆರ್ ಸಿಬಿಯ ಅಧಿಕೃತ ಜರ್ಸಿ ತೊಟ್ಟ ಯುವಕ, ಯುವತಿಯರು ಗೇಟ್ ನಂ 17ರ ಬಳಿ ಸೇರಿ ಆರ್ ಸಿಬಿ ಪರ ಘೋಷಣೆಗಳನ್ನು ಕೂಗಿದರು. ಇದು ಈ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 11) ಆರಂಭಕ್ಕೂ ಮುನ್ನ ಫ್ಯಾನ್ಸ್ ಮೀಟ್ ಇದಾಗಿದೆ.

IPL 2018 : RCB fans meetup Bengaluru

ಸೀಸನ್ ಶುರುವಾದಂತೆ, ಅಭಿಮಾನಿಗಳು ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಕೊಂಡು ಕ್ರಿಕೆಟ್ ಹಬ್ಬವನ್ನು ಆಚರಿಸುತ್ತೇವೆ ಎಂದು ಪೇಜ್ ನ ಅಡ್ಮಿನ್ ಗಳಲ್ಲಿ ಒಬ್ಬರಾದ ಪ್ರೀತಮ್ ಕರಿಗಾರ್ ಹೇಳಿದರು.

Preetham Karigar

ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಮೆಟ್ಟಿದರೆ ಚಿನ್ನಸ್ವಾಮಿ ಪಿಚ್ ಮೆಟ್ಟಬೇಕು ಎಂಬ ಆಶಯದೊಂದಿಗೆ ಮೊದಲ ಪ್ರೀ-ಸೀಸನ್ ಭೇಟಿ ಯಶಸ್ವಿಯಾಗಿದೆ. ಅಭಿಮಾನಿಗಳ ಭೇಟಿ ಚಿತ್ರಗಳು ನಿಮಗಾಗಿ ಇಲ್ಲಿವೆ

ಫ್ಯಾಂಟಸಿ ಲೀಗ್ ನಲ್ಲಿ ಆಡಲು ಇಲ್ಲಿ ಕ್ಲಿಕ್ ಮಾಡಿ

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Sunday, April 1, 2018, 20:45 [IST]
Other articles published on Apr 1, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ