ಐಪಿಎಲ್ 2021: ಆರ್‌ಸಿಬಿ vs ಡಿಸಿ, ಪ್ರಮುಖ ಮೈಲಿಗಲ್ಲುಗಳ ಸನಿಹದಲ್ಲಿ ಧವನ್, ಹರ್ಷಲ್, ಮ್ಯಾಕ್ಸ್‌ವೆಲ್

ಐಪಿಎಲ್ 14ನೇ ಆವೃತ್ತಿಯ ಕೊನೆಯ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿದೆ. ಎರಡು ತಂಡಗಳು ಕೂಡ ಪ್ಲೇಆಫ್‌ನಲ್ಲಿ ಈ ಮೊದಲೇ ಟಿಕೆಟ್ ಖಾತ್ರಿ ಪಡಿಸಿರುವ ಕಾರಣದಿಂದಾಗಿ ಈ ಪಂದ್ಯ ಎರಡು ತಂಡಗಳಿಗೂ ಯಾವುದೇ ಬದಲಾವಣೆ ಮಾಡುವುದಿಲ್ಲ. ಯಾವ ತಂಡ ಗೆದ್ದರೂ ಯಾವ ತಂಡ ಸೋತರೂ ಅಂಕಪಟ್ಟಿಲ್ಲಿ ಈಗ ಇರುವ ಸ್ಥಾನಗಳಿಮದ ಬದಲಾಗುವ ಸಾಧ್ಯತೆ ಬಹಳ ಕಡಿಮೆಯಿದೆ. ಅಸಾಧ್ಯ ಅಂತರದಿಂದ ಆರ್‌ಸಿಬಿ ಗೆಲುವು ಸಾಧಿಸಿದರೆ ಮಾತ್ರ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಿಂದ ಎರಡನೇ ಸ್ಥಾನಕ್ಕೇರುವ ಅವಕಾಶವನ್ನು ಆರ್‌ಸಿಬಿ ಮುಂದಿದೆ. ಹೀಗಾಗಿ ಎರಡು ತಂಡಗಳು ಕೂಡ ತಮ್ಮ ಈಗಿನ ಸ್ಥಾನದಲ್ಲಿಯೇ ಭದ್ರವಾಗಿದ್ದು ಪ್ಲೇಆಫ್‌ಗೇರಲಿದೆ.

ಡೆಲ್ಲಿ ವಿರುದ್ಧ ಕಣಕ್ಕಿಳಿಯಲಿದೆ ಈ ಬಲಿಷ್ಠ ಆರ್‌ಸಿಬಿ ತಂಡ; ಪಂದ್ಯದ ನಂತರ ಆರ್‌ಸಿಬಿಗೆ ಯಾವ ಸ್ಥಾನ ಸಿಗಲಿದೆ?ಡೆಲ್ಲಿ ವಿರುದ್ಧ ಕಣಕ್ಕಿಳಿಯಲಿದೆ ಈ ಬಲಿಷ್ಠ ಆರ್‌ಸಿಬಿ ತಂಡ; ಪಂದ್ಯದ ನಂತರ ಆರ್‌ಸಿಬಿಗೆ ಯಾವ ಸ್ಥಾನ ಸಿಗಲಿದೆ?

ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆಡಿದ 13 ಪಂದ್ಯಗಳಿಂದ 20 ಅಂಕಗಳನ್ನು ಸಂಪಾದಿಸಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಇನ್ನು ಆರ್‌ಸಿಬಿ ತಂಡಕ್ಕೆ ಕಳೆದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರುವ ಅತ್ಯುತ್ತಮ ಅವಕಾಶವಿತ್ತು. ಆದರೆ ಆ ಪಂದ್ಯವನ್ನು ಸೋಲುವ ಮೂಲಕ ಅವಕಾಶ ಆರ್‌ಸಿಬಿಯ ಕೈತಪ್ಪಿದ್ದು ಮೂರನೇ ಸ್ಥಾನವನ್ನು ಪಡದುಕೊಂಡಿದೆ. ಹೀಗಾಗಿ ಆರ್‌ಸಿಬಿ ಪ್ಲೇಆಫ್‌ನಲ್ಲಿ ಎಲಿಮಿನೇಟರ್ ಪಂದ್ಯವನ್ನು ಆಡಬೇಕಿದೆ.

ಇನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಎರಡು ತಂಡಗಳ ಆಟಗಾರರು ಕೂಡ ಕೆಲ ಪ್ರಮುಖ ಮೈಲಿಗಲ್ಲುಗಳನ್ನು ಪೂರೈಸುವ ಅವಕಾಶ ಹೊಂದಿದ್ದಾರೆ. ಆ ಬಗ್ಗೆ ಮಾಹಿತಿಗಾಗಿ ಮುಂದೆ ಓದಿ..

ಗ್ಲೆನ್ ಮ್ಯಾಕ್ಸ್‌ವೆಲ್: ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಅದ್ಭುತ ಫಾರ್ಮ್ ಪ್ರದರ್ಶಿಸಿರುವ ಗ್ಲೆನ್ ಮ್ಯಾಕ್ಸ್‌ವೆಲ್ ಆರ್‌ಸಿಬಿ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಈ ಆಲ್‌ರೌಂಡರ್ ಈ ಆವೃತ್ತಿಯಲ್ಲಿ ಈವರೆಗೆ 447 ರನ್‌ ಗಳಿಸಿದ್ದಾರೆ. ಐಪಿಎಲ್ ಮ್ಯಾಕ್ಸ್‌ವೆಲ್ 2000 ರನ್ ಪೂರೈಸಲು ಇನ್ನು ಕೇವಲ 48 ರನ್‌ಗಳ ಅಗತ್ಯವಿದೆ.

ಆರ್‌ಸಿಬಿಗೆ ಇನ್ನೂ ಇದೆ ದ್ವಿತೀಯ ಸ್ಥಾನ ಪಡೆಯುವ ಅವಕಾಶ!; ಹೀಗಾದರೆ ಮಾತ್ರಆರ್‌ಸಿಬಿಗೆ ಇನ್ನೂ ಇದೆ ದ್ವಿತೀಯ ಸ್ಥಾನ ಪಡೆಯುವ ಅವಕಾಶ!; ಹೀಗಾದರೆ ಮಾತ್ರ

ಹರ್ಷಲ್ ಪಟೇಲ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗದ ಬೌಲರ್ ಹರ್ಷಲ್ ಪಟೇಲ್ ಈ ಆವೃತ್ತಿಯಲ್ಲಿ ಅಮೋಘ ಫಾರ್ಮ್‌ನಲ್ಲಿದ್ದಾರೆ. ಈ ಬಾರಿ ಹರ್ಷಲ್ ಪಟೇಲ್ ದಾಖಲೆಯ ಪ್ರದರ್ಶನ ನೀಡುತ್ತಿದ್ದಾರೆ. ಈ ಬಾರಿ ಆಡಿದ 13 ಪಂದ್ಯಗಳಲ್ಲಿ ಹರ್ಷಲ್ 29 ವಿಕೆಟ್‌ ಪಡೆದಿದ್ದು ಪರ್ಪಲ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. ಈಗಾಗಲೇ ಒಂದು ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಎನಿಸಿರುವ ಹರ್ಷಲ್ ಪಟೇಲ್ ಮತ್ತೊಂದು ಮಹತ್ವದ ದಾಖಲೆ ಬರೆಯುವ ಸನಿಹದಲ್ಲಿದ್ದಾರೆ. ಒಂದೇ ಐಪಿಎಲ್ ಸೀಸನ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಡ್ವೇನ್ ಬ್ರಾವೊ (32) ಅವರನ್ನು ಹಿಂದಿಕ್ಕಲು ಹರ್ಷಲ್ ಕೇವಲ 4 ವಿಕೆಟ್ ದೂರದಲ್ಲಿದ್ದಾರೆ.

ಈ 5 ಅನ್‌ಕ್ಯಾಪ್‌ಡ್ ಆಟಗಾರರು ಮುಂದಿನ ಐಪಿಎಲ್‌ನಲ್ಲಿ ಬಾಚಿಕೊಳ್ಳಲಿದ್ದಾರೆ ಕೋಟಿ ಕೋಟಿ ದುಡ್ಡು!ಈ 5 ಅನ್‌ಕ್ಯಾಪ್‌ಡ್ ಆಟಗಾರರು ಮುಂದಿನ ಐಪಿಎಲ್‌ನಲ್ಲಿ ಬಾಚಿಕೊಳ್ಳಲಿದ್ದಾರೆ ಕೋಟಿ ಕೋಟಿ ದುಡ್ಡು!

ಮೊಹಮ್ಮದ್ ಸಿರಾಜ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ ಮೊಹಮ್ಮದ್ ಸಿರಾಜ್ ಕೂಡ ಮೈಲಿಗಲ್ಲೊಂದನ್ನು ದಾಟುವ ಸನಿಹದಲ್ಲಿದ್ದಾರೆ. ಐಪಿಎಲ್‌ನಲ್ಲಿ 50 ವಿಕೆಟ್‌ ಪಡೆದ ಆಟಗಾರರ ಪಟ್ಟಿಗೆ ಸೇರಲು ಸಿರಾಜ್‌ಗೆ ಇನ್ನು 4 ವಿಕೆಟ್‌ಗಳ ಅಗತ್ಯವಿದೆ.

ವಿರಾಟ್ ಕೊಹ್ಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ ಬೌಂಡರಿಗಳ ಮೈಲಿಗಲ್ಲೊಂದರ ಹತ್ತಿರದಲ್ಲಿದ್ದಾರೆ. ಟಿ20 ಮಾದರಿಯಲ್ಲಿ 900 ಬೌಂಡರಿ ಸಿಡಿಸಿದ ಸಾಧನೆ ಮಾಡಲು ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ 5 ಬೌಂಡರಿಗಳನ್ನು ಸಿಡಿಸಬೇಕಿದೆ.

ಧೋನಿ, ಜಡೇಜಾ, ರೈನಾ, ಬ್ರಾವೋ ಅಲ್ಲ; ಈತ ಸಿಎಸ್‌ಕೆ ತಂಡದ ಅತ್ಯುತ್ತಮ ಆಟಗಾರ ಎಂದ ಗಂಭೀರ್!ಧೋನಿ, ಜಡೇಜಾ, ರೈನಾ, ಬ್ರಾವೋ ಅಲ್ಲ; ಈತ ಸಿಎಸ್‌ಕೆ ತಂಡದ ಅತ್ಯುತ್ತಮ ಆಟಗಾರ ಎಂದ ಗಂಭೀರ್!

ಶಿಖರ್ ಧವನ್: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಆಟಗಾರ ಶಿಖರ್ ಧವನ್ ಡೆಲ್ಲಿ ಪ್ರಾಂಚೈಸಿ ಪರವಾಗಿ 2000 ರನ್ ಪೂರೈಸಲು 20 ರನ್‌ಗಳ ಅಗತ್ಯವಿದೆ. ಈ ಮೂಲಕ ಅವರು ವೀರೇಂದ್ರ ಸೆಹ್ವಾಗ್, ಶ್ರೇಯಸ್ ಅಯ್ಯರ್ ಮತ್ತು ರಿಷಬ್ ಪಂತ್ ನಂತರ ಈ ಸಾಧನೆ ಮಾಡಿದ ನಾಲ್ಕನೇ ಆಟಗಾರನಾಗಲಿದ್ದಾರೆ. ಐಪಿಎಲ್‌ನಲ್ಲಿ 650 ಬೌಂಡರಿಗಳ ಮೈಲಿಗಲ್ಲು ತಲುಪಲು ಈ ಅನುಭವಿ ಆಟಗಾರನಿಗೆ 1 ಬೌಂಡರಿಯ ಅಗತ್ಯವಿದೆ.

ಅಜಿಂಕ್ಯಾ ರಹಾನೆ: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅನುಭವಿ ಆಟಗಾರ ಅಜಿಂಕ್ಯ ರಹಾನೆ ಐಪಿಎಲ್‌ನಲ್ಲಿ 4000 ರನ್ ಪೂರೈಸಲು 59 ರನ್‌ಗಳ ಅಗತ್ಯವಿದೆ. ಇಂದಿನ ಪಂದ್ಯದಲ್ಲಿ ಆಡುವ ಬಳಗದಲ್ಲಿ ಅವಕಾಶ ಪಡೆದರೆ ರಹಾನೆಗೆ ಈ ಮೈಲಿಗಲ್ಲಿ ದಾಟುವ ಅವಕಾಶವಿದೆ.

ಅಕ್ಷರ್ ಪಟೇಲ್: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಲ್‌ರೌಂಡರ್ ಅಕ್ಷರ್ ಪಟೇಲ್‌ಗೆ ಐಪಿಎಲ್‌ನಲ್ಲಿ 1000 ರನ್ ಪೂರೈಸಲು 61 ರನ್‌ಗಳ ಅಗತ್ಯವಿದೆ. ಈ ಎಡಗೈ ಸ್ಪಿನ್ನರ್ ಐಪಿಎಲ್ ನಲ್ಲಿ 100 ವಿಕೆಟ್‌ಗಳ ಸನಿಹದಲ್ಲಿಯೂ ಇದ್ದು ಇದಕ್ಕಾಗಿ ಆರು ವಿಕೆಟ್‌ಗಳನ್ನು ಸಂಪಾದಿಸಬೇಕಿದೆ.

ಆರ್‌ಸಿಬಿ ತಂಡದ ಸಂಪೂರ್ಣ ಸ್ಕ್ವಾಡ್: ವಿರಾಟ್ ಕೊಹ್ಲಿ (ನಾಯಕ), ಶ್ರೀಕರ್ ಭಾರತ್ (ವಿಕೆಟ್ ಕೀಪರ್), ದೇವದತ್ ಪಡಿಕ್ಕಲ್, ಡೇನಿಯಲ್ ಕ್ರಿಶ್ಚಿಯನ್, ಗ್ಲೆನ್ ಮ್ಯಾಕ್ಸ್‌ವೆಲ್, ಎಬಿ ಡಿ ವಿಲಿಯರ್ಸ್, ಶಹಬಾಜ್ ಅಹ್ಮದ್, ಹರ್ಷಲ್ ಪಟೇಲ್, ಜಾರ್ಜ್ ಗಾರ್ಟನ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಾಹಲ್, ದುಷ್ಮಂತ ಚಮೀರಾ, ಸಚಿನ್ ಬೇಬಿ, ಕೈಲ್ ಜೇಮೀಸನ್, ಟಿಮ್ ಡೇವಿಡ್, ವಾನಿಂದು ಹಸರಂಗ, ನವದೀಪ್ ಸೈನಿ, ರಜತ್ ಪಾಟಿದಾರ್, ಮೊಹಮ್ಮದ್ ಅಜರುದ್ದೀನ್, ಸುಯಾಶ್ ಪ್ರಭುದೇಸಾಯಿ, ಆಕಾಶ್ ದೀಪ್, ಪವನ್ ದೇಶಪಾಂಡೆ

ಡೆಲ್ಲಿ ಕ್ಯಾಪಿಟಲ್ಸ್ ಸಂಪೂರ್ಣ ಸ್ಕ್ವಾಡ್: ರಿಷಬ್ ಪಂತ್ (ನಾಯಕ & ವಿಕೆಟ್ ಕೀಪರ್), ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಪಾಲ್ ಪಟೇಲ್, ರವಿಚಂದ್ರನ್ ಅಶ್ವಿನ್, ಶಿಮ್ರಾನ್ ಹೆಟ್ಮೀರ್, ಅಕ್ಷರ್ ಪಟೇಲ್, ಕಾಗಿಸೊ ರಬಾಡಾ, ಅವೇಶ್ ಖಾನ್, ಅನ್ರಿಚ್ ನಾರ್ಕಿಯಾ, ಇಶಾಂತ್ ಶರ್ಮಾ, ಸ್ಟೀವನ್ ಸ್ಮಿತ್, ಉಮೇಶ್ ಯಾದವ್, ಅಜಿಂಕ್ಯ ರಹಾನೆ, ಅಮಿತ್ ಮಿಶ್ರಾ, ಸ್ಯಾಮ್ ಬಿಲ್ಲಿಂಗ್ಸ್, ಮಾರ್ಕಸ್ ಸ್ಟೊಯಿನಿಸ್, ಟಾಮ್ ಕರನ್, ಬೆನ್ ಡ್ವಾರ್ಶುಯಿಸ್, ಲಲಿತ್ ಯಾದವ್, ಕುಲ್ವಂತ್ ಖೆಜ್ರೋಲಿಯಾ, ವಿಷ್ಣು ವಿನೋದ್, ಪ್ರವೀಣ್ ದುಬೆ, ಲುಕ್ಮಾನ್ ಮೇರಿವಾಲಾ

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 15 - October 24 2021, 03:30 PM
ಶ್ರೀಲಂಕಾ
ಬಾಂಗ್ಲಾದೇಶ್
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, October 8, 2021, 16:24 [IST]
Other articles published on Oct 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X