ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಹೈದರಾಬಾದ್ ವಿರುದ್ಧ ಸಿಡಿದ ಸಂಜು; ಸವಾಲಿನ ಗುರಿ ನೀಡಿದ ರಾಜಸ್ಥಾನ್

IPL 2021, RR vs SRH match 40, Hyderabad need 165 runs to win

ಐಪಿಎಲ್ 14ನೇ ಆವೃತ್ತಿಯ 40ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಮಾಡಿರುವ ರಾಜಸ್ಥಾನ್ ರಾಯಲ್ಸ್ ತಂಡ ಹೈದರಾಬಾದ್‌ಗೆ ಸವಾಲಿನ ಗುರಿ ನೀಡಿದೆ. ನಿಗದಿತ 20 ಓವರ್‌ಗಳಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ 164 ರನ್‌ಗಳನ್ನು ಗಳಿಸಿದೆ.

ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಈ ಪಂದ್ಯದಲ್ಲಿಯೂ ಉತ್ತಮ ಆರಂಭವನ್ನು ನಿಡಿದರು. ಆದರೆ ಮತ್ತೋರ್ವ ಆರಂಭಿಕ ಆಟಗಾರ ಲೂಯಿಸ್ ಕೇವಲ 6 ರನ್‌ಗಳಿಸಿ ಔಟಾದರು. ಅದಾದ ನಂತರ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಕ್ರೀಸ್‌ಗೆ ಇಳಿದರು. ಆರಂಭದಲ್ಲಿ ಎಚ್ಚರಿಕೆಯ ಪ್ರದರ್ಶನ ನೀಡಿದ ಸಂಜು ನಂತರ ಅದ್ಭುತ ಅಬ್ಬರದ ಆಟವನ್ನು ಪ್ರದರ್ಶಿಸಿದ್ದಾರೆ. ಈ ಮೂಲಕ ಮತ್ತೊಂದು ಅದ್ಭುತ ಇನ್ನಿಂಗ್ಸ್ ನೀಡಿದ್ದಾರೆ ಸಂಜು ಸ್ಯಾಮ್ಸನ್.

ರೈನಾ ಹೊರಗಿಟ್ಟು ಈತನನ್ನೇ ಪ್ರಮುಖ ಬ್ಯಾಟರ್ ಆಗಿ ಕಣಕ್ಕಿಳಿಸಿ: ಮಂಜ್ರೇಕರ್ ಹೇಳಿದ ಅಚ್ಚರಿಯ ಹೆಸರು!ರೈನಾ ಹೊರಗಿಟ್ಟು ಈತನನ್ನೇ ಪ್ರಮುಖ ಬ್ಯಾಟರ್ ಆಗಿ ಕಣಕ್ಕಿಳಿಸಿ: ಮಂಜ್ರೇಕರ್ ಹೇಳಿದ ಅಚ್ಚರಿಯ ಹೆಸರು!

ಸಂಜು ಸ್ಯಾಮ್ಸನ್ ಈ ಪಂದ್ಯದಲ್ಲಿ 82 ರನ್‌ಗಳ ಕೊಡುಗೆಯನ್ನು ನೀಡಿದರು. ಆರಂದಲ್ಲಿ ನಿಧಾನಗತಿಯಲ್ಲಿ ಬ್ಯಾಟಿಂಗ್ ನಡೆಸಿದ ಸಂಜು ಬಳಿಕ ತಮ್ಮ ರನ್ ವೇಗವನ್ನು ಹೆಚ್ಚಿಸಿದರು. ಒಟ್ಟು 57 ಎಸೆತಗಳನ್ನು ಎದುರಿಸಿದ ಸಂಜು ಭರ್ಜರಿ 82 ರನ್ ಸಿಡಿಸಿದ್ದಾರೆ. ಇದರಲ್ಲಿ ಏಳು ಬೌಂಡರಿ ಹಾಗೂ 3 ಸಿಕ್ಸರ್ ಸೇರಿತ್ತು. 143.86ರ ಸ್ಟ್ರೈಕ್‌ರೇಟ್‌ನಲ್ಲಿ ಸಂಜು ಬ್ಯಾಟ್ ಬೀಸಿದ್ದಾರೆ.

ಉಳಿದಂತೆ 36 ರನ್‌ಗಳನ್ನು ಗಳಿದರೆ ಲಾಮ್ರರ್ 29 ರನ್ ಗಳಿಸಿದರು. ಉಳಿದ ಯಾವ ಬ್ಯಾಟ್ಸ್‌ಮನ್ ಕೀಡ ಮಿಂಚುವಲ್ಲಿ ವಿಫಲವಾಗಿದ್ದಾರೆ. ಅಂತಿಮವಾಗಿ ಐದು ವಿಕೆಟ್ ಕಳೆದುಕೊಂಡು ಸಂಜು ಸ್ಯಾಮ್ಸನ್ ಪಡೆ 164 ರನ್‌ಗಳಿಸಿದೆ. ಇನ್ನು ಹೈದರಾಬಾದ್ ಪರವಾಗಿ ಸಿದ್ಧಾರ್ಥ್ ಕೌಲ್ 2 ವಿಕೆಟ್ ಕಬಳಿಸಿದರೆ ಸಂದೀಪ್ ಶರ್ಮಾ, ಭುವನೇಶ್ವರ್ ಕುಮಾರ್ ಹಾಗೂ ರಶೀದ್ ತಲಾ ಒಂದೊಂದು ವಿಕೆಟ್ ಪಡೆದುಕೊಂಡಿದ್ದಾರೆ.

ಈ ಕೆಲಸ ಮಾಡಿದ್ರೆ ಧೋನಿ ಕಳಪೆ ಫಾರ್ಮ್‌ನಿಂದ ಹೊರಬಂದು ಹೆಚ್ಚು ರನ್ ಗಳಿಸಬಹುದು: ಗಂಭೀರ್ಈ ಕೆಲಸ ಮಾಡಿದ್ರೆ ಧೋನಿ ಕಳಪೆ ಫಾರ್ಮ್‌ನಿಂದ ಹೊರಬಂದು ಹೆಚ್ಚು ರನ್ ಗಳಿಸಬಹುದು: ಗಂಭೀರ್

ರಾಜಸ್ಥಾನ್ ರಾಯಲ್ಸ್ ಆಡುವ ಬಳಗ:
ಎವಿನ್ ಲೂಯಿಸ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ & ವಿಕೆಟ್ ಕೀಪರ್), ಲಿಯಾಮ್ ಲಿವಿಂಗ್‌ಸ್ಟೋನ್, ಮಹಿಪಾಲ್ ಲೊಮರ್, ರಿಯಾನ್ ಪರಾಗ್, ರಾಹುಲ್ ತೆವಾಟಿಯಾ, ಕ್ರಿಸ್ ಮೋರಿಸ್, ಚೇತನ್ ಸಕಾರಿಯಾ, ಜಯದೇವ್ ಉನಾದ್ಕಟ್, ಮುಸ್ತಫಿಜುರ್ ರೆಹಮಾನ್
ಬೆಂಚ್: ಕಾರ್ತಿಕ್ ತ್ಯಾಗಿ, ಮನನ್ ವೊಹ್ರಾ, ಶ್ರೇಯಸ್ ಗೋಪಾಲ್, ಕೆಸಿ ಕರಿಯಪ್ಪ, ಗ್ಲೆನ್ ಫಿಲಿಪ್ಸ್, ಶಿವಂ ದುಬೆ, ಓಶಾನೆ ಥಾಮಸ್, ಮಯಾಂಕ್ ಮಾರ್ಕಂಡೆ, ಅನುಜ್ ರಾವತ್, ಜೆರಾಲ್ಡ್ ಕೋಟ್ಜಿ, ಕುಲ್ದಿಪ್ ಯಾದವ್, ಆಕಾಶ್ ಸಿಂಗ್, ತಬ್ರೇಜ್ ಶಮ್ಸಿ, ಡೇವಿಡ್ ಮಿಲ್ಲರ್

ಅರ್ಧಶತಕಕ್ಕಾಗಿ ಚೆನ್ನೈ ವಿರುದ್ಧ ಬ್ಯಾಟ್ ಬೀಸಿದ್ರಾ ಕೊಹ್ಲಿ?; ಮಾಜಿ ಕ್ರಿಕೆಟಿಗನ ಅಸಮಾಧಾನಅರ್ಧಶತಕಕ್ಕಾಗಿ ಚೆನ್ನೈ ವಿರುದ್ಧ ಬ್ಯಾಟ್ ಬೀಸಿದ್ರಾ ಕೊಹ್ಲಿ?; ಮಾಜಿ ಕ್ರಿಕೆಟಿಗನ ಅಸಮಾಧಾನ

David Warner ಪರಿಸ್ಥಿತಿ ನೋಡಿ ನೊಂದ ಅಭಿಮಾನಿಗಳು | Oneindia Kannada

ಸನ್‌ರೈಸರ್ಸ್ ಹೈದರಾಬಾದ್ ಆಡುವ ಬಳಗ:
ಜೇಸನ್ ರಾಯ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಕೇನ್ ವಿಲಿಯಮ್ಸನ್ (ನಾಯಕ), ಪ್ರಿಯಂ ಗರ್ಗ್, ಅಭಿಷೇಕ್ ಶರ್ಮಾ, ಅಬ್ದುಲ್ ಸಮದ್, ಜೇಸನ್ ಹೋಲ್ಡರ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಿದ್ದಾರ್ಥ್ ಕೌಲ್, ಸಂದೀಪ್ ಶರ್ಮಾ
ಬೆಂಚ್: ಡೇವಿಡ್ ವಾರ್ನರ್, ಕೇದಾರ್ ಜಾಧವ್, ಖಲೀಲ್ ಅಹ್ಮದ್, ಶಹಬಾಜ್ ನದೀಮ್, ಮುಜೀಬ್ ಉರ್ ರಹಮಾನ್, ಶ್ರೀವಾತ್ ಗೋಸ್ವಾಮಿ, ಮೊಹಮ್ಮದ್ ನಬಿ, ವಿರಾಟ್ ಸಿಂಗ್, ತುಳಸಿ ತಂಪಿ, ಜಗದೀಶ ಸುಚಿತ್, ಉಮ್ರಾನ್ ಮಲಿಕ್, ಮನೀಶ್ ಪಾಂಡೆ

Story first published: Monday, September 27, 2021, 22:00 [IST]
Other articles published on Sep 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X