ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

RCB Playoff Chances 2022: ಡೆಲ್ಲಿ ಗೆಲುವಿನ ನಂತರ ಆರ್‌ಸಿಬಿಗೆ ಅಗ್ನಿ ಪರೀಕ್ಷೆ: ಪ್ಲೇಆಫ್ ಹಾದಿ ಹೇಗಿದೆ?

IPL 2022: After Delhi Capitals won against Punjab kings RCB playoff possibilities

ಈ ಬಾರಿಯ ಟೂರ್ನಿಯ ಮೊದಲಾರ್ಧದಲ್ಲಿ ಉತ್ತಮ ಪ್ರದರ್ಶನ ನೀಡಿ ಮಿಂಚುಹರಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ದ್ವಿತಿಯಾರ್ಧದ ಕೆಲ ನಿರ್ಣಾಯಕ ಪಂದ್ಯಗಳಲ್ಲಿ ಸೋಲು ಅನುಭವಿಸಿದ ಕಾರಣ ಪ್ಲೇಆಫ್ ಹಾದಿಯನ್ನು ದುರ್ಗಮಗೊಳಸಿದೆ. ಸೋಮವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆದ್ದ ಬಳಿಕ ಆರ್‌ಸಿಬಿ ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಕುಸಿದಿದೆ. ಇನ್ನೊಂದೇ ಪಂದ್ಯಗಳು ಬಾಕಿಯಿರುವ ಕಾರಣ ಆರ್‌ಸಿಬಿಗೆ ಮುಂದಿನ ಹಂತಕ್ಕೇರುವ ಹಾದು ಕಠಿಣವಾಗಿದೆ.

ಫಾಫ್ ಡು ಪ್ಲೆಸಿಸ್ ನೇತೃತ್ವದ ಆರ್‌ಸಿಬಿ 13 ಪಂದ್ಯಗಳನ್ನು ಆಡಿದ್ದು ಅದರಲ್ಲಿ 14 ಅಂಕಗಳನ್ನು ಗಳಿಸಿಕೊಂಡಿದೆ. ನೆಟ್‌ರನ್‌ರೇಟ್‌ನಲ್ಲಿ ಹಿಂದಿರುವ ಕಾರಣ ಇಷ್ಟೇ ಅಂಕಗಳನ್ನು ಹೊಂದಿರುವ ಡೆಲ್ಲಿ ಕ್ಯಾಪಿಟಲ್ಸ್‌ಗಿಂತ ಹಿಂದುಳಿದಿದೆ ಆರ್‌ಸಿಬಿ. ಈ ಅಗ್ನಿ ಪರೀಕ್ಷೆಯ ಹೊರತಾಗಿಯೂ ಆರ್‌ಸಿಬಿ ತಂಡ ಸತತ ಎರಡಬೇ ಬಾರಿಗೆ ಪ್ಲೇಆಫ್‌ಗೇರುವ ಅವಕಾಶವನ್ನು ಗಳಿಸಿಕೊಳ್ಳಳಿದೆಯೇ? ಅಥವಾ ಈ ಹಿಂದೆ ಕೆಲ ಬಾರಿ ಅನುಭವಿಸಿದಂತೆ ಅಂತಿಮ ಹಂತದಲ್ಲಿ ಮುಗ್ಗರಿಸಿ ಅವಕಾಶವನ್ನು ಕಳೆದುಕೊಳ್ಳಲಿದೆಯೇ? ಈ ಕುತೂಹಲ ಈಗ ಅಭಿಮಾನಿಗಳಲ್ಲಿದೆ.

MI vs SRH: ಪಂದ್ಯದಲ್ಲಿ ನಿಮ್ಮ ಡ್ರೀಮ್ ಟೀಮ್ ಗೆಲ್ಲಲು ತಂಡವನ್ನು ಹೀಗೆ ರಚಿಸಿ, ಈತನಿಗೆ ನಾಯಕತ್ವ ನೀಡಿMI vs SRH: ಪಂದ್ಯದಲ್ಲಿ ನಿಮ್ಮ ಡ್ರೀಮ್ ಟೀಮ್ ಗೆಲ್ಲಲು ತಂಡವನ್ನು ಹೀಗೆ ರಚಿಸಿ, ಈತನಿಗೆ ನಾಯಕತ್ವ ನೀಡಿ

ಹಾಗಾದರೆ ಆರ್‌ಸಿಬಿ ಪ್ಲೇಆಫ್‌ಗೇರಬೇಕಾದರೆ ಆ ಹಾದಿ ಹೇಗಿದೆ. ಮುಂದಿನ ಪ್ರತಿ ಪಂದ್ಯಗಳು ಆರ್‌ಸಿಬಿ ಪಾಲಿಗೆ ಹೇಗೆ ಮಹತ್ವದ್ದಾಗಿದೆ? ಮುಂದೆ ಓದಿ..

ಗುಜರಾತ್ ಟೈಟನ್ಸ್ ವಿರುದ್ಧ ಗೆಲ್ಲಲೇಬೇಕು

ಗುಜರಾತ್ ಟೈಟನ್ಸ್ ವಿರುದ್ಧ ಗೆಲ್ಲಲೇಬೇಕು

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ ಪ್ಲೇಆಫ್ ಹಂತಕ್ಕೇರಬೇಕಾದರೆ ಒಂದು ಅವಕಾಶ ಮಾತ್ರವೇ ಉಳಿದುಕೊಂಡಿದೆ. ಈ ಅವಕಾಶದಲ್ಲಿ ಆರ್‌ಸಿಬಿ ತಂಡ ಗೆಲ್ಲಲೇ ಬೇಕಿದೆ. ಹಾಗಿದ್ದಾಗ ಮಾತ್ರವೇ ಮುಂದಿನ ಹಂತಕ್ಕೇರುವ ಅವಕಾಶ ಉಳಿದುಕೊಳ್ಳಲಿದೆ. ಆದರೆ ಈ ಪಂದ್ಯ ಟೂರ್ನಿಯ ಅಗ್ರಸ್ಥಾನಿಯಾಗಿರುವ ಗುಜರಾತ್ ಟೈಟನ್ಸ್ ವಿರುದ್ಧ ನಡೆಯಲಿದೆ ಎಂಬುದು ಗಮನಾರ್ಹ. ಗುಜರಾತ್ ಟೈಟನ್ಸ್ ವಿರುದ್ಧಧ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಆರ್‌ಸಿಬಿ 16 ಅಂಕಗಳನ್ನು ಗಳಿಸಿಕೊಳ್ಳಲಿದೆ. ಈ ಮೂಲಕ ಅಗ್ರ ನಾಲ್ಕರಲ್ಲಿ ಸ್ಥಾನವನ್ನು ಪಡೆಯಲಿದೆ. ಆದರೆ ಮತ್ತೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ಕೂಡ 16 ಅಂಕಗಳನ್ನು ಗಳಿಸಿಕೊಳ್ಳುವ ಅವಕಾಶವಿದೆ. ಹಾಗಿದ್ದಾಗ ನೆಟ್‌ ರನ್‌ರೇಟ್‌ ಗಣನೆಗೆ ಬರಲಿದೆ. ಆರ್‌ಸಿಬಿ ತಂಡದ ನೆಟ್ ರನ್‌ರೆಟ್ ಟೂರ್ನಿಯಲ್ಲಿರುವ 10 ತಂಡಗಳ ಪೈಕಿ 8 ತಂಡಗಳಿಗಿಂತ ಕನಿಷ್ಠವಾಗಿದೆ. ಇದು ಈ ಹಂತದಲ್ಲಿ ಆರ್‌ಸಿಬಿಗೆ ಹಿನ್ನಡೆಯಾಗುವ ಸಾಧ್ಯತೆ ದಟ್ಟವಾಗಿದೆ.

ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಸೋತರೆ?

ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಸೋತರೆ?

ಪ್ರಸ್ತುತ ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ಅಂಕಗಳು ಸಮಾನವಾಗಿದ್ದು ಎರಡು ತಂಡಗಳ ಅಂತಿಮ ಪಂದ್ಯಗಳು ಬಹಳ ಮುಖ್ಯವಾಗಿದೆ. ಆರ್‌ಸಿಬಿ ತಂಡ ಗುಜರಾತ್ ಟೃಟನ್ಸ್ ವಿರುದ್ಧ ಗೆಲುವು ಸಾಧಿಸಿದರೆ ಆರ್‌ಸಿಬಿ ತಂಡದ ಪ್ಲೇಆಫ್ ಅವಕಾಶ ತೆರೆದುಕೊಂಡಿರುತ್ತದೆಯಷ್ಟೆ. ಆದರೆ ಅದು ಖಚಿತವಾಗುವುದಿಲ್ಲ. ಹೀಗಾಘಿ ಆರ್‌ಸಿಬಿಗೆ ಮುಂಬೈ ಇಮಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಗಳು ಕೂಡ ಬಹಳ ಮುಖ್ಯವಾಗಿದೆ. ಟೂರ್ನಿಯ ಅಂಕಪಟ್ಟಿಯಲ್ಲಿ ಅಂತಿಮ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ತಂಡವನ್ನು ಡೆಲ್ಲಿ ಕ್ಯಾಪಿಟಲ್ಸ್ ಅಂತಿಮ ಪಂದ್ಯದಲ್ಲಿ ಎದುರಿಸಲಿದ್ದು ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸೋಲು ಅನುಭವಿಸಿದರೆ ಆರ್‌ಸಿಬಿ ಪ್ಲೇಆಫ್ ಹಂತಕ್ಕೆ ಪ್ರವೇಶಿಸುವುದು ಖಚಿತವಾಗುತ್ತದೆ. ಆದರೆ ಇದಕ್ಕೆ ಈಗಾಗಲೇ ಹೇಳಿದಂತೆ ಗುಜರಾತ್ ಟೈಟನ್ಸ್ ವಿರುದ್ಧ ಆರ್‌ಸಿಬಿ ಗೆಲ್ಲಲೇ ಬೇಕು.

ಗುಜರಾತ್ ಟೈಟನ್ಸ್ ವಿರುದ್ಧ ಆರ್‌ಸಿಬಿ ಸೋತರೆ?

ಗುಜರಾತ್ ಟೈಟನ್ಸ್ ವಿರುದ್ಧ ಆರ್‌ಸಿಬಿ ಸೋತರೆ?

ಇನ್ನು ಗುಜರಾತ್ ಟೈಟನ್ಸ್ ವಿರುದ್ಧ ಆರ್‌ಸಿಬಿ ಸೋಲು ಅನುಭವಿಸಿದರೆ ತಂಡದ ಪ್ಲೇಆಫ್ ಹಾದಿ ಸಂಪೂರ್ಣವಾಗಿ ಮುಚ್ಚಿದಂತೆ. ಅಂಕಪಟ್ಟಿಯಲ್ಲಿ ಆರ್‌ಸಿಬಿ ಐದನೇ ಸ್ಥಾನದಲ್ಲಿಯೇ ಉಳಿದುಕೊಳ್ಳಲಿದ್ದು ನೆಟ್‌ ರನ್‌ರೇಟ್‌ ಆರ್‌ಸಿಬಿಯನ್ನು ಕಾಪಾಡಲು ಖಂಡಿತಾ ಸಾಧ್ಯವಿಲ್ಲ. ಹೀಗಾಗಿ ಅಗ್ರ ನಾಲ್ಕರಲ್ಲಿ ಸ್ಥಾನವನ್ನು ಪಡೆಯಲು ವಿಫಲವಾಗಿ ಆರ್‌ಸಿಬಿ ಪ್ಲೇಆಫ್‌ಗೇರಲು ಅಸಾಧ್ಯವಾಗಲಿದೆ.

ಪಂಜಾಬ್ ಕಿಂಗ್ಸ್ ವಿರುದ್ಧ ಜಯ ಸಾಧಿಸಿಕೊಂಡ ಪಂತ್ ! | Oneindia Kannada
ಅಂತಿಮ ಪಂದ್ಯಗಳಲ್ಲಿ ಆರ್‌ಸಿಬಿ ಹಾಗೂ ಡಿಸಿ ಎರಡೂ ಸೋತರೆ?

ಅಂತಿಮ ಪಂದ್ಯಗಳಲ್ಲಿ ಆರ್‌ಸಿಬಿ ಹಾಗೂ ಡಿಸಿ ಎರಡೂ ಸೋತರೆ?

ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಎರಡು ತಂಡಗಳಿಗೂ ಅಂತಿಮ ಪಂದ್ಯ ಅಗ್ನಿ ಪರೀಕ್ಷೆಯಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಗುಜರಾತ್ ಟೈಟನ್ಸ್ ತಂಡ ಅಂತಿಮ ಪಂದ್ಯದಲ್ಲಿ ಮುಖಾಮುಖಿಯಾದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮುಂಬೈ ಇಂಡಿಯನ್ಸ್ ತಂಡ ಎದುರಾಗಲಿದೆ. ಈ ಮುಖಾಮುಖಿಗಳಲ್ಲಿ ಎರಡೂ ತಂಡಗಳು ಕೂಡ ಸೋಲು ಅನುಭವಿಸಿದರೆ ಏನಾಗಲಿದೆ? ಆಗ ಎರಡು ತಂಡಗಳು ಕೂಡ 14 ಅಂಕಗಳೊಂದಿಗೆ ಟೂರ್ನಿಯನ್ನು ಅಂತ್ಯಗೊಳಿಸಲಿದೆ. ಮತ್ತೊಮ್ಮೆ ನೆಟ್‌ರನ್‌ರೇಟ್ ಇಲ್ಲಿ ಪ್ರಮುಖ ಪಾತ್ರವಹಿಸಲಿದೆ. ಆರ್‌ಸಿಬಿ ತಂಡದ ನೆಟ್ ರನ್‌ರೇಟ್ ಈಗಾಗಲೇ ಋಣಾತ್ಮಕವಾಗಿರುವ ಕಾರಣ ಡೆಲ್ಲಿ ಕ್ಯಾಪಿಟಲ್ಸ್ ಇಲ್ಲಿ ಮೇಲುಗೈ ಸಾಧಿಸುವುದು ಖಚಿತ.

ಇಂಥಾ ಸಂದರ್ಭದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್, ಪಂಜಾಬ್ ಕಿಂಗ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಕೂಡ 14 ಅಂಕಗಳನ್ನು ಗಳಿಸುವ ಅವಕಾಶವನ್ನು ಹೊಂದಿದ್ದು ಇವುಗಳ ಪೈಕಿ ಯಾರು 14 ಅಂಕಗಳ ಸಹಿತ ನೆಟ್‌ ರನ್‌ರೇಟ್‌ನಲ್ಲಿ ಮೇಲುಗೈ ಸಾಧಿಸುತ್ತಾರೋ ಆ ತಂಡ ಪ್ಲೇ ಆಫ್‌ಗೆ ನಾಲ್ಕನೇ ತಂಡವಾಗಿ ಅವಕಾಶ ಗಿಟ್ಟಿಸಿಕೊಳ್ಳಲಿದೆ.

Story first published: Tuesday, May 17, 2022, 10:18 [IST]
Other articles published on May 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X